Author: admin

ಬಂಟ್ವಾಳ: ದೇವ ದೇವತೆಗಳ ಜತೆಯಲ್ಲಿ ತನ್ನ ಅಳಿಲ ಸೇವೆ ಗೈದ ಎಲ್ಲಾ ಪುರಾಣ ಕಾಲದಲ್ಲೂ ಪ್ರಾಮಾಣಿಕ ಸೇವೆಗೈದವರು ಕುಂಬಾರ ಕುಲಾಲ ಸಮುದಾಯದ ಜನರು ಎಂದು ಚಿತ್ರದುರ್ಗ ಕುಂಬಾರ ಗುಂಡಯ್ಯ ಮಹಾ ಸಂಸ್ಥಾನ ಕುಂಬಾರ ಗುರುಪೀಠದ ಶ್ರೀ ಬಸವಮೂರ್ತಿ ಕುಂಭಾರ ಗುಂಡಯ್ಯ ಸ್ವಾಮೀಜಿ ಹೇಳಿದರು. ಇತ್ತೀಚೆಗೆ ಬಿ.ಸಿ.ರೋಡಿನ ಕುಲಾಲ ಭವನದಲ್ಲಿ ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಇದರ ಮಹಾಸಭೆ ಹಾಗೂ ಮರಿಯಾಲದ ನೆಂಪು- ಹಿರಿಯರ ಸಮ್ಮಿಲನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಬೆಳಿಗ್ಗೆ ಮಹಾಸಭೆಯನ್ನು ಛಾಯಾಗ್ರಾಹಕ ದಯಾನಂದ ಬಂಟ್ವಾಳ ಉದ್ಘಾಟಿಸಿ ಶುಭ ಹಾರೈಸಿದರು. ಚುನಾವಣಾ ಅಧಿಕಾರಿಯಾಗಿ ಮಹಾಬಲ ಮಾಸ್ಟರ್ ಸಹಕರಿಸಿದರು. ವೇದಿಕೆಯಲ್ಲಿ ಜಿಲ್ಲಾ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ದಿನಕರ್ ನೀರುಮಾರ್ಗ, ಅಧ್ಯಕ್ಷ ಸಂತೋಷ್ ಮರ್ತಾಜೆ. ಕಾರ್ಯದರ್ಶಿ ನಿತೇಶ್ ಪಲ್ಲಿಕಂಡ, ಗೌರವಾಧ್ಯಕ್ಷ ಮಾಧವ ಬಿ.ಸಿ.ರೋಡ್ ಉಪಸ್ಥಿತರಿದ್ದರು. ಅಧ್ಯಕ್ಷ ಸಂತೋಷ್ ಮರ್ತಾಜೆ ಸ್ವಾಗತಿಸಿ, ಗತ ವರ್ಷಗಳ ವರದಿ ಮತ್ತು ಲೆಕ್ಕಪತ್ರವನ್ನು ಕಾರ್ಯದರ್ಶಿ ನಿತೀಶ್ ಪಲ್ಲಿಕಂಡ ಮತ್ತು ಕಾರ್ತಿಕ್ ಮಯ್ಯರಬೈಲು ವಾಚಿಸಿದರು.…

Read More

ಬಂಟ್ವಾಳ: ಹಿರಿಯ ರಂಗಕರ್ಮಿ ನಟ ನಿರ್ದೇಶಕ, ಕಾರ್ಯಕ್ರಮ ನಿರೂಪಕ ಮಂಜು ವಿಟ್ಲ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನಲ್ಲಿರುವ ಪುತ್ರಿ ಮನೆಯಲ್ಲಿ ಸೆ.6 ರಂದು ನಿಧನರಾದರು. Advertisement ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಲಾ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಹಿರಿಯ ತರಬೇತುದಾರರಾಗಿ, ಚಿತ್ರಕಲಾವಿದರಾಗಿ, ಕಾರ್ಯಕ್ರಮ ನಿರೂಪಕನಾಗಿ ,ರಂಗ ನಟ ನಿರ್ದೇಶಕರಾಗಿ,ಸಂಪನ್ಮೂಲ ವ್ಯಕ್ತಿಯಾಗಿ ಅಪಾರ ಜನಮನ್ನಣೆ ಗಳಿಸಿದ್ದರು. ಮೃತರು ಪತ್ನಿ, ಪುತ್ರಿ, ಸಹೋದರ, ಸಹೋದರಿ ಯರು ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Read More

ಬಂಟ್ವಾಳ: ನಿಕ್ಷಯಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನವು ಬದ್ದತೆ ಹಾಗೂ ದೀಕ್ಷೆ ತೊಟ್ಟಂತೆ ಅರ್ಹ ಕ್ಷಯ ರೋಗಿಗಳಿಗೆ ಒಂದು ವರ್ಷದಿಂದ ಪೌಷ್ಠಿಕ ಆಹಾರದ ಕಿಟ್ ವಿತರಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನೀಯ ಎಂದು ನಿಕಟಪೂರ್ವ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಹೇಳಿದರು.ಫರಂಗಿಪೇಟೆ ಸೇವಾಂಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಸೇವಾಂಜಲಿ ಸಭಾಗ್ರಹದಲ್ಲಿ ನಡೆದ ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಆಹಾರ ದವಸ ಧಾನ್ಯ ವಿತರಿಸಿ ಮಾತನಾಡಿದರು. ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಸರಕಾರ, ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಕೃಷ್ಣ ಕುಮಾರ್ ಪೂಂಜ ಅವರ ನೇತೃತ್ವದಲ್ಲಿ ಸೇವಾಂಜಲಿ ಪ್ರತಿಷ್ಠಾನ ನಿರಂತರವಾಗಿ ಮಾಡುತ್ತಿದೆ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ ಸೇವಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ಇತರ ಸಂಘ ಸಂಸ್ಥೆಗಳಿಗೆ ಆದರ್ಶ ಎಂದು ತಿಳಿಸಿದರು. Advertisement ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್‌ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಕ್ಷಯರೋಗಿಗಳಿಗೆ ನೀಡುವ ಆಹಾರವನ್ನು ಅವರೇ ಸೇವಿಸಿ ಆರೋಗ್ಯವನ್ನು ಉತ್ತಮಗೊಳಿಸಬೇಕು ಎಂದು ತಿಳಿಸಿದರು. ವೇದಿಕೆಯಲ್ಲಿ ಪ್ರಮುಖರಾದ ಸುಕೇಶ್ ಶೆಟ್ಟಿ…

Read More

ತಲಪಾಡಿಯಲ್ಲಿ ರಸ್ತೆಗೆ ಉರುಳಿದ ಗೂಡ್ಸ್ ಟೆಂಪೊ ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಟೆಂಪೊವೊಂದು ರಸ್ತೆಗೆ ಉರುಳಿ ಬಿದ್ದ ಘಟನೆ ಬಿ.ಸಿ.ರೋಡಿನ ತಲಪಾಡಿ ಬಳಿ ನಡೆದಿದೆ. ಬೆಳಗ್ಗೆ ಸುರಿದ ಭಾರಿ ಮಳೆಯಿಂದಾಗಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ಚಾಲಕನಿಗೆ ತರಚಿದ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಹೊತ್ತು ಟ್ರಾಫಿಕ್ ಜಾಂ ಉಂಟಾಯಿತು.

Read More

ಪ್ರಗತಿಪರ ಕೃಷಿಕ ಹರಿನಾಥ ಭಂಡಾರಿ ನಿಧನ ಬಂಟ್ವಾಳ: ತುಂಬೆಯ ಹರಿನಾಥ್ ಭಂಡಾರಿ ವಳವೂರುಗುತ್ತು(೯೦) ಸೆ. ೪ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಸಾಮಾಜಿಕ ಮುಂದಾಳುವಾಗಿ, ಪ್ರಗತಿಪರ ಕೃಷಿಕರಾಗಿದ್ದ ಅವರು ತುಂಬೆ ಶ್ರೀ ಶಾರದಾ ಮಹೋತ್ಸವ ಸಮಿತಿಯ ಸ್ಥಾಪಕಾಧ್ಯಕ್ಷರಾಗಿದ್ದರು. ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ತಮ್ಮ ಗುತ್ತಿಗೆ ಸಂಬಂಧಪಟ್ಟ ದೈವಸ್ಥಾನಗಳ ಧಾರ್ಮಿಕ ಕಾರ್ಯಗಳಲ್ಲಿ ಸಕ್ರೀಯರಾಗಿದ್ದರು. ಕೊಡುಗೈ ದಾನಿಯಾಗಿದ್ದರು. ಮೃತರು ಪತ್ನಿ, ಪುತ್ರಿ, ಅಳಿಯ, ಪುತ್ರ, ಸೊಸೆ, ನಾಲ್ಕು ಮಂದಿ ಮೊಮ್ಮಕ್ಕಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ Advertisement

Read More

ಬಂಟ್ವಾಳ: ಬಂಟ್ವಾಳ ತಾಲೂಕಿನ ಬೊಳ್ಳಾಯಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 12 ನೇ ಶಾಖೆಯು ಕಂಬಳಬೆಟ್ಟು ದರ್ಬಾರ್ ಕಾಂಪ್ಲೆಕ್ಸ್ ನಲ್ಲಿ ರವಿವಾರ ಶುಭಾರಂಭಗೊಂಡಿತು. ಮಾಜಿ ಸಚಿವ ಬಿ. ರಮಾನಾಥ ರೈ ಅವರು ನೂತನ ಶಾಖೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಆಶಯದಂತೆ ಗ್ರಾಮೀಣ ಜನರ ಆರ್ಥಿಕ ಸಬಲೀಕರಣಕ್ಕೆ ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಪೂರಕವಾಗಿದೆ. ಮೂವತ್ತು ವರ್ಷಗಳ ಹಿಂದೆ ಮೂರ್ತೆದಾರರ ಆರ್ಥಿಕತೆಯ ಉದ್ದೀಪನದ ಬೀಜವನ್ನು ಬಿತ್ತಿದ್ದ ಸಂಘದ ಅಧ್ಯಕ್ಷ ಸಂಜೀವ ಪೂಜಾರಿಯವರ ಅಂದಿನ ಕನಸು ಇಂದು ನನಸಾಗಿದೆ ಎಂದರು. ಸಂಘ ಎಲ್ಲ ಜನ ಸಮುದಾಯದ ಸಹಕಾರದಿಂದಾಗಿ ಅತ್ಯಂತ ವೇಗವಾಗಿ ಮತ್ತು ಜನಪರವಾದ ಸಹಕಾರಿ ಸಂಘವಾಗಿ ಬೆಳೆದಿದೆ ಎಂದರು. ಸಂಘ ಇನ್ನಷ್ಟು ಶಾಖೆಗಳನ್ನು ತೆರೆಯುವ ಮೂಲಕ ಯಶಸ್ವಿಯಾಗಲಿ ಎಂದು ಹಾರೈಸಿದರು. Advertisement ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು…

Read More

ಜೆಸಿಐ ಬಂಟ್ವಾಳದ ವತಿಯಿಂದ ಆನ್‌ಲೈನ್‌ನಲ್ಲಿ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ಬಂಟ್ವಾಳ: ಜೆಸಿಐ ಬಂಟ್ವಾಳ ವತಿಯಿಂದ ಬಂಟ್ವಾಳ ತಾಲೂಕಿನ ಮಕ್ಕಳಿಗಾಗಿ ಆನ್‌ಲೈನ್ ಗಣೇಶ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. Advertisement Advertisement 1ರಿಂದ 4ನೇ ತರಗತಿ ಮಕ್ಕಳಿಗೆ ಬಾಲಗಣೇಶ, 5ರಿಂದ7 ತರಗತಿ ಮಕ್ಕಳಿಗೆ ಮೂರ್ತಿ ಗಣೇಶ, 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಚೌತಿಯ ಸಂಭ್ರಮದ ಚಿತ್ರವನ್ನು ಬಿಡಿಸಬೇಕಾಗಿದ್ದು ಎ4 ಅಳತೆಯ ಬಿಳಿ ಹಾಳೆಯಲ್ಲಿ ಚಿತ್ರ ಬಿಡಿಸಿ ಚಿತ್ರದ ಕೆಳಗೆ ಮೊಬೈಲ್ ಸಂಖ್ಯೆ ನಮೂದಿಸಬೇಕು, ಪ್ರತೀ ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಾಗೂ ಪ್ರಶಸ್ತಿ ಪತ್ರ ಇದ್ದು ಬಿಡಿಸಿದ ಚಿತ್ರವನ್ನು ಸೆ. 10 ರ ಒಳಗಾಗಿ 9164977096 ಈ ದೂರವಾಣಿಯ ವಾಟ್ಸಫ್ ಗೆ ಕಳುಹಿಸುವಂತೆ ಕೋರಲಾಗಿದೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು ವಿಜೇತರಿಗೆ ಸೆ. 15ರಂದು ನಡೆಯುವ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಬಹುಮಾನ ನೀಡಲಾಗುವುದು, ಹಾಗೂ ಅದೇ ಚಿತ್ರ ವಿಜೇತ ಮಕ್ಕಳ ಚಿತ್ರವನ್ನು ಪ್ರದರ್ಶಿಸಲಾಗುವುದು ಹೆಚ್ಚಿನ ಮಾಹಿತಿಗಾಗಿ 9449167316, 9008041979…

Read More

ಸೆ. 17: ಪೊಸಳ್ಳಿ ಕುಲಾಲ ಭವನದಲ್ಲಿಬಂಟ್ವಾಳ ಕುಲಾಲ ಸೇವಾದಳದ ವತಿಯಿಂದಕೃಷ್ಣ ಕೃಷ್ಣ ಶ್ರೀಕೃಷ್ಣಾ – ಕೃಷ್ಣ ವೇಷ ಸ್ಪರ್ಧೆ ಬಂಟ್ವಾಳ : ತಾಲೂಕು ಕುಲಾಲ ಸುಧಾರಕ ಸಂಘ ರಿ. ಇದರ ಆಶ್ರಯದಲ್ಲಿರುವ ಕುಲಾಲ ಸೇವಾದಳದ ವತಿಯಿಂದ ಸೆಪ್ಟಂಬರ್ 17ರಂದು ಬಿ.ಸಿ.ರೋಡಿನ ಪೊಸಳ್ಳಿ ಬಳಿಯ ಕುಲಾಲ ಸಮುದಾಯ ಭವನದಲ್ಲಿ ಕೃಷ್ಣ ಕೃಷ್ಣ ಶ್ರೀಕೃಷ್ಣ – ಎಂಬ ಕುಲಾಲ ಬಾಂಧವರಿಗಾಗಿ ಕೃಷ್ಣ ವೇಷ ಸ್ಪರ್ಧೆ, ನನ್ನ ಕನಸಿನ ಕೃಷ್ಣ- ಚಿತ್ರಕಲಾ ಸ್ಪರ್ಧೆ ಮತ್ತು ಕುಸಾಲ್ ಪಾತೆರದ ಬಿರ್ಸೆರ್ – ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ.6 ತಿಂಗಳಿನಿಂದ 5 ವರ್ಷದೊಳಗಿನ ಮಕ್ಕಳಿಗೆ ಮುದ್ದು ಕೃಷ್ಣ ವೇಷ, 5ರಿಂದ ಮೇಲ್ಪಟ್ಟು 10 ವರ್ಷದೊಳಗಿನ ಮಕ್ಕಳಿಗೆ ಬಾಲಕೃಷ್ಣ, ರಾಧಾಕೃಷ್ಣ ಮತ್ತು ಯಶೋಧಾ ಕೃಷ್ಣ ಸ್ಪರ್ಧೆಗೆ ಯಾವುದೇ ವಯೋಮಿತಿ ಇರುವುದಿಲ್ಲ. ಚಿತ್ರಕಲೆಯಲ್ಲಿ ಕಿರಿಯ ಮತ್ತು ಹಿರಿಯ ವಿಭಾಗಗಳಿರುತ್ತದೆ. ಕುಸಾಲ್ ಪಾತೆರದ ಬಿರ್ಸೆರ್ ಸ್ಪರ್ಧೆಯಲ್ಲಿ ಯಾವುದೇ ವಯೋಮಿತಿ ಇರುವುದಿಲ್ಲ. ಆದರೆ ಹಾಸ್ಯದಲ್ಲಿ ರಾಜಕೀಯ, ಜಾತಿನಿಂದನೆ ಮತ್ತು ಅಶ್ಲೀಲ ಮಾತುಗಳನ್ಙು ಬಳಸುವಂತಿಲ್ಲ. Advertisement ವೇದಿಕೆಯಲ್ಲಿ…

Read More

ಮಂಗಳೂರು: ಸಂಬಳಗ್ ತುಳುಟ್ಟು ದಾದ ಪನ್ಪೆರ್…?, ನವೀನ್ ಡಿ.ಪಡೀಲ್ ನಡುಬೈಲ್ ನಾರಾಯಣೆ ಪಾತ್ರ ಮಲ್ತಿನ ನಾಟಕ ಒವು..?, ಅಜಬಿರು ಪಂಡ ಎಂಚಿನ…? ಕ್ಯಾವಂಡೀಸ್ ಪರ್‌ಂದ್‌ನ್ ದಕ್ಷಿಣ ಕನ್ನಡ ಜಿಲ್ಲೆಗ್ ಪರಿಚಯ ಮಲ್ದಿನ ಕೃಷಿಕೆರ್ ಏರ್…?ಹೀಗೆ ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರ, ಭಾಷೆ, ಸಾಧಕರ ಬಗ್ಗೆ ಬೆಳಕು ಚೆಲ್ಲುವ ತುಳು ಪ್ರಶ್ನಾವಳಿ ಮಂಗಳೂರಿನಲ್ಲಿ ಹರಿದಾಡುತ್ತಿದೆ. ಕಾವೂರಿನ ಶಾಂತಿನಗರದ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ನಡೆಯುವ ಗಣೇಶೋತ್ಸವ ಪ್ರಯುಕ್ತ 100 ಪ್ರಶ್ನೆಗಳ ರಸಪ್ರಶ್ನೆ ತಯಾರಿಸಲಾಗಿದ್ದು, ತುಳುನಾಡಿನ ಸಮಗ್ರ ವಿಷಯದ ಬಗ್ಗೆ ಬೆಳಕು ಚೆಲ್ಲುತ್ತಿದೆ. ಕೃಷಿ, ತುಳುನಾಡಿನ ಸಾಧಕರು, ಒಗಟುಗಳು, ತುಳುನಾಡಿನ ದೇವಸ್ಥಾನ, ದೈವಸ್ಥಾನಗಳು, ನಾಟಕ, ಯಕ್ಷಗಾನ, ಕಂಬಳ, ಸಿನಿಮಾ ಇತ್ಯಾದಿ ಹಲವು ವಿಷಯಗಳ ಬಗ್ಗೆ ಪ್ರಶ್ನೆ ಸಿದ್ಧಪಡಿಸಲಾಗಿದೆ. Advertisement ಮಣಿಮೇಖಲೆ, ರತ್ನಕಂಕಣ ಪ್ರಸಂಗ ಬರೆದವರು ಯಾರು?, ರಂಗಾಯಣ ರಘು ಅಭಿನಯಿಸಿದ ತುಳುವಿನ ಸಿನಿಮಾ ಯಾವುದು?, ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಅಭಿಯಾನ ಮಲ್ತೊಂದುಪ್ಪುನ ತುಳುನಾಡ್ದ ಸಂಸ್ಥೆ ಒವು…..?ಹೀಗೆ ಮರೆತು ಹೋಗಿರುವ ತುಳು ಭಾಷೆಯ ಶಬ್ದಗಳ ಬಗ್ಗೆಯೂ…

Read More

ಬಂಟ್ವಾಳ: ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿ 352 ನೇ ಆರಾಧನಾ ಮಹೋತ್ಸವ ಶುಕ್ರವಾರ ನಡೆಯಿತು.ಕ್ಷೇತ್ರದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ಮಾರ್ಗದರ್ಶನ ದಲ್ಲಿ ಗುರುಪೂಜೆ ಸಹಿತ ವಿಶೇಷ ಪೂಜೆ ಮತ್ತು ಮಂತ್ರಾಕ್ಷತೆ ನೆರವೇರಿತು. ಇದೇ ವೇಳೆ ಶ್ರೀ ಮಹಾಗಣಪತಿ, ಗಾಯತ್ರೀ ದೇವಿ ಮತ್ತು ನಾಗದೇವರಿಗೆ ವಿಶೇಷ ಪೂಜೆ ನಡೆಯಿತು. Advertisement ಪಿಲಿಂಗಾಲು: ಶ್ರೀ ಗಾಯತ್ರಿ ದೇವಿ ದೇವಸ್ಥಾನಶ್ರೀ ಗುರು ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ಕಾರಿಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯಎಂ.ತುಂಗಪ್ಪ ಬಂಗೇರ, ಪ್ರಮುಖರಾದ ಬಿ.ರಘು ಸಪಲ್ಯ ಪಾಣೆಮಂಗಳೂರು, ನಾಗೇಶ ಕಲ್ಲಡ್ಕ, ಉಮೇಶ ಬೋಳಂತೂರು, ಜಯಪ್ರಕಾಶ್ ತುಂಬೆ, ಎಂ.ಬೂಬ ಸಪಲ್ಯ ಮುಂಡಬೈಲು, ನವೀನ ಕೋಟ್ಯಾನ್ ಬಿ.ಸಿ.ರೋಡು, ಕೆ.ಬಾಬು ಸಪಲ್ಯ ವಗ್ಗ, ಮೋಹನ್ ಕೆ.ಶ್ರೀಯಾನ್ ರಾಯಿ, ಜಗದೀಶ ಕುಂದರ್ ಭಂಡಾರಿಬೆಟ್ಟು,ಕೆ.ಟಿ.ಸುಧಾಕರ್ ಇರಾ, ಸೀತಾರಾಮ ಅಗೋಳಿಬೆಟ್ಟು, ಚಂದ್ರಶೇಖರ ಶೆಟ್ಟಿ…

Read More