ಬಂಟ್ಚಾಳ: ಲಯನ್ಸ್ ಕ್ಲಬ್ ಕೊಳ್ನಾಡು – ಸಾಲೆತ್ತೂರು ಇಲ್ಲಿಗೆ ಲಯನ್ಸ್ ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿ ಅವರ ಅಧಿಕೃತ ಭೇಟಿ ಕಾರ್ಯಕ್ರಮ ನಡೆಯಿತು.
ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿ ಕಾನೂನು ಹಾಗೂ ಶಿಸ್ತಿನ ಮೂಲಕ ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತದೆ. ನಾವೆಲ್ಲರೂ ಲಯನ್ಸ್ ನ ಒಂದೊಂದು ಬಿಂದುಗಳು. ಲಯನ್ಸ್ ಮೂಲಕ ನಮ್ಮ ಪ್ರಯತ್ನಗಳು, ಸೇವಾ ಕಾರ್ಯಗಳು ಸಾಗಲಿ ಇದರಿಂದ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಪ್ರಯೋಜನವಾಗುತ್ತದೆ ಎಂದು ತಿಳಿಸಿದರು.
ಉತ್ತಮ ನಾಯಕರು ನಮ್ಮ ಕ್ಲಬ್ ನಲ್ಲಿದ್ದಾರೆ. ಪ್ರಾಮಾಣಿಕರಾಗಿ ಕ್ಲಬ್ ನ ಬೆಳವಣಿಗೆಗೆ ಸಹಕರಿಸುವವರಿದ್ದಾರೆ, ಇಂತಹ ಕ್ಲಬ್ ನ ಸದಸ್ಯನಾದ ನಾನು ಪ್ರಾಂತೀಯ ಅಧ್ಯಕ್ಷನಾಗಿರುವುದು ನನಗೆ ಹೆಮ್ಮೆ ಎಂದರು. ಇದೇ ಸಂದರ್ಭ ಪ್ರಾಂತೀಯ ಅಧ್ಯಕ್ಷ ರಮನಾಂದ ನೂಜಿಪ್ಪಾಡಿ ದಂಪತಿಯನ್ನು ಸನ್ಮಾನಿಸಲಾಯಿತು.
ಪ್ರಾಂತೀಯ ರಾಯಭಾರಿ ದಾಮೋದರ ಬಿ.ಎಂ. ಮಾತನಾಡಿ ಲಯನ್ಸ್ ಕ್ಲಬ್ ಕೊಳ್ನಾಡು – ಸಾಲೆತ್ತೂರು ಕಾಐವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಪ್ರಾಂತೀಯ ಪ್ರಥಮ ಮಹಿಳೆ ಸಂಧ್ಯಾ ರಮಾನಂದ, ಪ್ರಾಂತೀಯ ಸಂಯೋಜಕ ವಿಜಯ ರೈ ಕೆ, ಎರಡನೇ ವಲಯಾಧ್ಯಕ್ಷ ಡೊನಾಲ್ಡ್ ಬಂಟ್ವಾಳ
ಅಮ್ಟೂರು ಲಯನ್ಸ್ ಕ್ಲಬ್ ಅಧ್ಯಕ್ಷ ನೋಯಲ್ ಲೋಬೋ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಕೋಟ್ಯಾನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಕೊಳ್ನಾಡು – ಸಾಲೆತ್ತೂರು ಇದರ ಅಧ್ಯಕ್ಷೆ ರಮಾ ಜಿ. ಆಚಾರ್ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು.
ಕಾರ್ಯದರ್ಶಿ ರಾಜಲಕ್ಷ್ಮಿ ಮನೋಂರಂಜನ್ ವರದಿ ವಾಚಿಸಿದರು. ಖಜಾಂಚಿ ಶರ್ಮಿಳ ವಿಠಲ ಕುಮಾರ್ ಶೆಟ್ಟಿ ವಂದಿಸಿದರು. ಸದಸ್ಯ ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.