
ಬಂಟ್ವಾಳ: ರೋಟರಿ ಜಿಲ್ಲೆ 3181 ಇದರ ಮಹಿಳಾ ಸಬಲೀಕರಣ ಯೋಜನೆ ಸಖಿ ಇದರ 2026-27 ಸಾಲಿನ ಯೋಜನೇಯಾಗಿ ಮಹಿಳಾ ಫಲಾನುಭವಿಗೆ ರೋಟರಿ ಕ್ಲಬ್ ಲೋರೇಟ್ಟೋ ಹಿಲ್ಸ್ ವತಿಯಿಂದ ಪಿಂಕ್ ಆಟೋ ರಿಕ್ಷಾ ಹಸ್ತತರ ಕಾರ್ಯಕ್ರಮ ಕ್ಲಬ್ ನ ಸಭಾಂಗಣದ ಆವರಣದಲ್ಲಿ ನಡೆಯಿತು.
ರೋಟರಿ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ಫಲನುಭವಿಗೆ ಆಟೋ ರಿಕ್ಷಾದ ಕೀಲಿ ಕೈ ಹಸ್ತತಂರಿಸಿದರು. ಈ ಸಂಧರ್ಭ ಮಾತನಾಡಿದ ಅವರು ರೋಟರಿ ಕ್ಲಬ್ ವತಿಯಿಂದ ಸಖಿ, ಸಹೇಲಿ ಕಾರ್ಯಕ್ರಮದಂಗವಾಗಿ ಮಹಿಳಾ ಸಬಲೀಕರಣದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ 16 ಮಂದಿ ಮಹಿಳಾ ಫಲನುಭವಿಗಳಿಗೆ ಪಿಂಕ್ ಆಟೋ ರಿಕ್ಷಾ ವಿತರಿಸಲಾಗಿದೆ. ಮಹಿಳೆಯರು ಸ್ವಾವಲಂಬಿಗಳಾಗುವುದರ ಜೊತೆಗೆ ಆರ್ಥಿಕವಾಗಿ ಸದೃಢರಾಗಬೇಕು ಎನ್ನುವುದು ಈ ಯೋಜನೆಯ ಆಶಾಯವಾಗಿದೆ ಎಂದರು.


ಸಹಾಯಕ ಗವರ್ನರ್, ಶ್ರುತಿ ಮಾಡ್ತಾ ಮಾತನಾಡಿ ಇದೊಂದು ಕನಸಿನ ಯೋಜನೆ, ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ತಮ್ಮ ಸ್ವ ಸಾಮರ್ಥ್ಯದಿಂದ ಪ್ರಗತಿ ಹೊಂದಿ ಮುಂದೆ ಮತ್ತೊಬ್ಬ ಮಹಿಳೆಗೆ ಪ್ರೇರಣೆಯಗುವ ಉದ್ದೇಶದಿಂದ ಪಿಂಕ್ ಆಟೋ ರಿಕ್ಷಾವನ್ನು ನೀಡಲಾಗುತ್ತಿದೆ ಎಂದರು.ಬಳಿಕ ರೋಟರಿ ಕ್ಲಬ್ ಲೋರೇಟ್ಟೋ ಹಿಲ್ಸ್ ನ
9ನೇ ವರ್ಷದ ಸ್ಥಾಪಕರ ದಿನಾಚರಣೆ ಆಚರಿಸಲಾಯಿತು.ಜಿಲ್ಲಾ ಗವರ್ನರ್
ಸತೀಶ್ ಬೋಳಾರ್ ಮಾತನಾಡಿ ಇಡೀ ರೋಟರಿ ಜಗತಿನಲ್ಲಿ ಕ್ಲಬ್ ಸ್ಥಾಪನ ದಿನದಂದೆ ತಮ್ಮ ಸ್ವಂತ ಸಭಾ ಭಾವನಕ್ಕೆ ಕೆಸರು ಕಲ್ಲು ಹಾಕಿದ ಕ್ಲಬ್ ರೋಟರಿ ಕ್ಲಬ್ ಲೋರೇಟ್ಟೋ ಹಿಲ್ಸ್. ಮುಂದಿನ ದಿನಗಳ್ಳಲಿ ಒಂದು ಗ್ಲೋಬಲ್ ಪ್ರಾಜೆಕ್ಟ್ ಬಗ್ಗೆ ಕಾರ್ಯಾನ್ ಮುಖ ರಾಗುವಂತೆ ತಿಳಿಸಿದ ಅವರು ನಮಗೆ ಬೇಕಾದ ಯೋಜನೆ ಮಾಡುವುದು ಅಲ್ಲ ಸಮಾಜಕ್ಕೆ ಬೇಕಾದ ಪ್ರಾಜೆಕ್ಟ್ ಮಾಡಬೇಕು ಎಂದರು.
ನಮಗೆ ಬೇಕಾದ ಯೋಜನೆ ಮಾಡುವುದು ಅಲ್ಲ ಸಮಾಜಕ್ಕೆ ಬೇಕಾದ ಪ್ರಾಜೆಕ್ಟ್ ಮಾಡಬೇಕು ಎಂದರು.ಕ್ಲಬ್ ಅಧ್ಯಕ್ಷೆ ಗೀತಾ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು.
ಸಹಾಯಕ ಗವರ್ನರ್ ಶ್ರುತಿ ಮಾಡ್ತಾ, ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ರವಿಚಂದ್ರ ಬಂಟ್ವಾಳ, ರೋಟರಿ ಕ್ಲಬ್ಮಡಂತ್ಯಾರ್ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಶುಭ ಹಾರೈಸಿದರು.
ವಲಯ ಸೇನಾನಿ ಗಣೇಶ್ ಶೆಟ್ಟಿ, ಸ್ಥಾಪಕಧ್ಯಕ್ಷ ಅವಿಲ್ ಮಿನೆಜಸ್, ನಿಕಟ ಪೂರ್ವ ಅಧ್ಯಕ್ಷ ವಿಜಯ್ ಫೆರ್ನಾಂಡಿಸ್
ವಿಜಯ್ ಫೆರ್ನಾಂಡಿಸ್ಉಸ್ಥಿತರಿದ್ದರು. ಕ್ಲಬ್ ಅಧ್ಯಕ್ಷೆ ಗೀತಾ ಬಲ್ಲಾಳ್ ಸ್ವಾಗತಿಸಿ, ಕಾರ್ಯದರ್ಶಿ ರೂಪವಾಣಿ ವಂದಿಸಿದರು.ಸದಸ್ಯರಾದ ರಾಘವೇಂದ್ರ ಭಟ್, ರಮೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
Advertisement







