ಬಂಟ್ವಾಳ: ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಪಾಣೆಮಂಗಳೂರಿನ ಹಳೆ ಉಕ್ಕಿನ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.
Advertisement
ಸ್ಥಳೀಯರೊಬ್ಬರು ಭಾನುವಾರ ರಾತ್ರಿ ಸೇತುವೆಯಲ್ಲಿ ಬಿರುಕನ್ನು ಗಮನಿಸಿ ಕಂದಾಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ತಕ್ಷಣ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಘನ ವಾಹನಗಳು ಸೇತುವೆಯಲ್ಲಿ ಸಂಚರಿಸದಂತೆ ನಿರ್ಭಂದ ವಿಧಿಸಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪಾಣೆಮಂಗಳೂರಿನ ಹಳೆಯ ಉಕ್ಕಿನಸೇತುವೆ 1914 ರಲ್ಲಿ ನಿರ್ಮಾಣಗೊಂಡಿದ್ದು ಶತಮಾನ ಪೂರೈಸಿದೆ. ಅವಿಭಜಿತ ದ.ಕ. ಜಿಲ್ಲೆಯ ಮೊದಲ ಸಂಪರ್ಕ ಕೊಂಡಿ ಎನ್ನುವ ಹೆಗ್ಗಲಿಕೆಯೂ ಈ ಸೇತುವೆಗಿದೆ.
Advertisement