Author: admin
ಬಂಟ್ವಾಳ: 75 ವರ್ಷಗಳ ಹಿಂದೆ ಬಿ.ಕೃಷ್ಣ ರೈ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ ಪ್ರಗತಿಯ ಪಥದಲ್ಲಿದ್ದು, ಎಂಟು ಗ್ರಾಮಗಳಲ್ಲಿ ತೃಪ್ತಿಕರ ಸೇವೆ ನೀಡುತ್ತಿದೆ. 2022-23ನೇ ಸಾಲಿನ ವರ್ಷಾಂತ್ಯಕ್ಕೆ 46.04 ಕೋಟಿ ರೂ ಠೇವಣಿ ಇದ್ದು, ಸಾಲ ಹೊರಬಾಕಿ 81.74 ಕೋಟಿ ರೂ, ದುಡಿಯುವ ಬಂಡವಾಳ 173.35 ಕೋಟಿ ರೂ, ಹೂಡಿಕೆ 14.12 ಕೋಟಿ ರೂ, ಸಂಘದ ಒಟ್ಟು ವ್ಯವಹಾರ 376.85 ಕೋಟಿ ರೂ ಆಗಿದ್ದು, 1.5 ಕೋಟಿ ರೂ ನಿವ್ವಳ ಲಾಭ ಗಳಿಸಿದೆ, ಶೇ.99ರಷ್ಟು ಸಾಲ ವಸೂಲಾತಿ ಮಾಡಲಾಗಿದೆ ಎಂದು ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದ್ದಾರೆ. ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ , ಅವರು ಹವಾಮಾನ ಆಧರಿತ ಬೆಳೆ ವಿಮೆ ಸಾಲ 1166 ರೈತರ 1551 ಎಕರೆ 40 ಲಕ್ಷಕ್ಕೂ ಹೆಚ್ಚು ಪ್ರೀಮಿಯಂ ಪಾವತಿಸಲಾಗಿದೆ. 23ರಂದು ಶನಿವಾರ ಮಹಾಸಭೆ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿಯುಸಿ ಸಾಧಕ ಮಕ್ಕಳ ಪುರಸ್ಕಾರ ನಡೆಯಲಿದೆ. 486 ಕುಟುಂಬಗಳು ಯಶಸ್ವಿನಿ ಯೋಜನೆಗೆ ನೋಂದಣಿಯಾಗಿದೆ ಎಂದರು. ಶನಿವಾರ…
ಬಂಟ್ವಾಳ: ವಿಜಯಪುರ ಜಿಲ್ಲಾ ಥಾಂಗ ತಾ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ನಾಲ್ಕನೆಯ ರಾಜ್ಯಮಟ್ಟದ ಥಾಂಗ ತಾ (ಮಣಿಪುರ ಕಳರಿ ಫೈಟ್) ಕ್ರೀಡಾ ಕೂಟದಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾ ಸಂಸ್ಥೆ ಹಾಗೂ ಪೊಳಲಿ ರಾಮಕೃಷ್ಣ ತಪೋವನದಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಪದಕ ಗೆದ್ದುಕೊಂಡಿದ್ದಾರೆ Advertisement ಪೊಳಲಿ ರಾಮಕೃಷ್ಣ ತಪೋವನದಲ್ಲಿ ತರಬೇತಿ ಪಡೆಯುತ್ತಿರುವ ಗೀತಾ, ಕಲ್ಲಡ್ಕ ಶ್ರೀ ರಾಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾ ಶಶಿರಾಜ್, ಹಾಗೂ ಯತೀಶ್ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶೀರಾಮ ವಿದ್ಯಾ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಆಶಿಶ್, ಪೊಳಲಿ ರಾಮಕೃಷ್ಣ ತಪೋವನದಲ್ಲಿ ತರಬೇತಿ ಪಡೆಯುತ್ತಿರುವ ಪೊಳಲಿ ಸರಕಾರಿ ಪ್ರೌಢ ಶಾಲೆಯ ಸಂದೀಪ್, ಸಾತ್ವಿಕ, ಜತೀನ್, ಚೇತನ್, ವಿದ್ಯಾವಿಲಾಸ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಭಿರಾಮಕಷ್ಣ ರಾವ್, ಆಳ್ವಾಸ್ ತನ್ಮಯ್ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಗೆದ್ದು ಕೊಂಡಿದ್ದಾರೆ. ಇವರಿಗೆ ಮಾರ್ಷಲ್ ಆರ್ಟ್ ತರಬೇತುದಾರ ರಾಜೇಶ್ ಬ್ರಹ್ಮರಕೂಟ್ಲು ತರಬೇತಿ ನೀಡುತ್ತಿದ್ದು ರಾಷ್ಟಮಟ್ಟದ ಸ್ಪರ್ಧೆ ಜಾರ್ಕಾಂಡ್…
ದಲಿತ ವಿರೋಧಿ ಸಚಿವ ಡಿ.ಸುಧಾಕರ್ ರಾಜೀನಾಮೆ ನೀಡಲಿ: ದಿನೇಶ್ ಅಮ್ಟೂರು ಬಂಟ್ವಾಳ: ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿರುವ ಸಚಿವ ಡಿ ಸುಧಾಕರ್ ರವರಿಂದ ದಲಿತ ಕುಟುಂಬ ಪ್ರಾಣಭಯದಿಂದ ಬದುಕುತ್ತಿದೆ. ಇದು ಇಡೀ ರಾಜ್ಯದಲ್ಲಿ ಇಂದಿನ ದಲಿತರ ಸ್ಥಿತಿಯ ಚಿತ್ರಣವಾಗಿದೆ. ಡಿ ಸುಧಾಕರ್ ರವರ ವಿರುದ್ಧ ದಲಿತರ ಮೇಲೆ ದೌರ್ಜನ್ಯ ಮತ್ತು ಜಾತಿ ನಿಂದನೆ ಪ್ರಕರಣದಡಿ ಎಫ್‌ಐಆರ್ ದಾಖಲಾಗಿದ್ದರೂ ಇದುವರೆಗೂ ಅವರ ರಾಜೀನಾಮೆ ಪಡೆಯದೆ ಇರುವುದು ಸರ್ಕಾರದ ಇಬ್ಬಂದಿ ನೀತಿಯನ್ನು ತೋರುತ್ತದೆ. ಮತ್ತು ಈ ಸರ್ಕಾರದಲ್ಲಿ ದಲಿತರ ಪ್ರಾಣ, ಮಾನಗಳಿಗೆ ಬೆಲೆ ಇಲ್ಲವೆಂಬುದು ಖಚಿತವಾಗಿದೆ. ಎಂದು ಬಂಟ್ವಾಳ ತಾಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ದಿನೇಶ್ ಅಮ್ಟೂರು ಹೇಳಿದ್ದಾರೆ.ಸೆವೆನ್ ಹಿಲ್ಸ್ ಕಂಪನಿಯ ಪಾಲುದಾರರಾದ ಡಿ ಸುಧಾಕರ್ ರವರು ಮೋಸದಿಂದ ಯಲಹಂಕ ಗ್ರಾಮದ ಸುಬ್ಬಮ್ಮ ರವರಿಗೆ ಸೇರಿದ 108/1 ಸರ್ವೆ ನಂಬರ್ ಜಮೀನನ್ನು ಕಬಳಿಕೆ ಮಾಡಿರುವುದು ಸ್ಪಷ್ಟವಾಗಿ ದಾಖಲೆ ಸಮೇತ ತಿಳಿಯುತ್ತಿದೆ. ಈ ಜಮೀನಿನ ವಿವಾದವು ನ್ಯಾಯಾಲಯದಲ್ಲಿ ಇರುವಾಗಲೇ ಡಿ.…
ಬಂಟ್ವಾಳ: ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ದಕ್ಷಿಣ ಕನ್ನಡ ಜಿಲ್ಲಾ ಸಂಘಟನೆಯ ವತಿಯಿಂದ ಕರ್ನಾಟಕ ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವಂತ ದೈವಸ್ಥಾನಗಳು ದೇವಸ್ಥಾನಗಳು ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಹಾಗೂ ವರ್ಷಂಪ್ರತಿ ನಡೆಯುತ್ತಿರುವಂತ ಜಾತ್ರಾ ಮಹೋತ್ಸವಗಳು ಬ್ರಹ್ಮಕಲಶೋತ್ಸವಗಳು ನೇಮೋತ್ಸವಗಳು ಹಾಗೂ ಸನಾತನ ಹಿಂದೂ ಧರ್ಮದ ಯಾವುದೇ ಉತ್ಸವದ ಕಾರ್ಯಕ್ರಮಗಳಲ್ಲಿ ಅನ್ಯಧರ್ಮಿಯರಿಗೆ ಅವಕಾಶ ನೀಡದೆ ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಎಲ್ಲಾ ಬಡ ವ್ಯಾಪಾರಸ್ಥರಿಗೆ ಬೀದಿ ವ್ಯಾಪಾರಸ್ಥರಿಗೆ ಅವಕಾಶ ಮಾಡಿಕೊಡಬೇಕಾಗಿ ವಿನಂತಿಸಿ ಅದಲ್ಲದೆ ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ಮಧ್ಯವರ್ತಿಗಳನ್ನ ಬಳಸಿಕೊಳ್ಳದೆ ನೇರ ಆಡಳಿತ ಮಂಡಳಿಯವರು ಹಾಗೂ ಧಾರ್ಮಿಕ ಇಲಾಖೆಯ ಅಧಿಕಾರಿಗಳು ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕಡಿಮೆ ದರದಲ್ಲಿ ಸನಾತನ ಹಿಂದೂ ಜಾತ್ರಾ ಬಡ ವ್ಯಾಪಾರಸ್ಥರಿಗೆ ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿ ಹಾಗು ಕಾರ್ಯಕ್ರಮಗಳು ಮುಗಿದ ನಂತರ ಶುಚಿತ್ವವನ್ನು ಕಾಪಾಡುವಂತ ದೃಷ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರ ಆಶಯದಂತೆ ಸ್ವಚ್ಛ ಭಾರತ್ ಕಲ್ಪನೆಯೊಂದಿಗೆ ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಸದಸ್ಯರೆಲ್ಲರೂ ಈ…
ಸಜೀಪಮೂಡದಲ್ಲಿ ಬಂಟ್ವಾಳ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ ಬಂಟ್ವಾಳ: ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ ಸಜೀಪಮೂಡ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಪೆರ್ವ ಪಂದ್ಯಾಟ ಉದ್ಘಾಟಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಎಸ್‌ಡಿಎಂಸಿ ಸದಸ್ಯರಾದ ದಿನಕರ, ಸೀತಾರಾಮ ಶೆಟ್ಟಿ ಅಗೊಳಿಬೆಟ್ಟು ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ಸಜೀಪಮೂಡ ಗಾ,.ಪಂ. ಅಧ್ಯಕ್ಷೆ ಶೋಭಾಶೆಟ್ಟಿ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷೆ ರತ್ನಾವತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ನವೀನ್ ಪಿ.ಎಸ್., ಕೋಶಾಧಿಕಾರಿ ಜಯಪ್ರಕಾಶ್, ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ರೈ ಉಪಸ್ಥಿತರಿದ್ದರು. ಸಜೀಪಮೂಡದಲ್ಲಿ ಬಂಟ್ವಾಳ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ ಉಪಪ್ರಾಂಶುಪಾಲೆ ಆಲಿಸ್ ಪಾಯಿಸ್ ಸ್ವಾಗತಿಸಿದರು, ಕ್ರೀಡಾ ಪರಿವೀಕ್ಷಣಾಧಿಕಾರಿ ವಿಷ್ಣುನಾರಾಯಣ ಹೆಬ್ಬಾರ್ ಪ್ರಾಸ್ತವಿಕವಾಗಿ ಮಾತನಾಡಿದರು, ಶಿಕ್ಷಕರಾದ ಬಾಲಕೃಷ್ಣ ಶೆಟ್ಟಿ ವಂದಿಸಿದರು, ಗಣೇಶ್ ಬಿ. ನಿರೂಪಿಸಿದರು.ಬಾಲಕರ ವಿಭಾಗದಲ್ಲಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಮಾಣಿ ಪ್ರಥಮ, ಸರಕಾರಿ…
ಬಂಟ್ವಾಳ: ಮೂರ್ತೆದಾರರ ಸೇವಾ ಸಹಕಾರಿ ಸಂಘ ಶಂಭೂರು ಇದರ ೨೦೨೨-೨೩ನೇ ವಾರ್ಷಿಕ ಮಹಾಸಭೆಯಲ್ಲಿ ನರಿಕೊಂಬು ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾದ ಸಂತೋಷ್ ಕುಮಾರ್ ಅಡ್ಡದಪಾದೆ ಹಾಗೂ ಬಿರುವೆರ್ ಸೇವಾ ಟ್ರಸ್ಟ್ ಇದರ ನೂತನ ಅಧ್ಯಕ್ಷರಾದ ಸೀತಾರಾಮ ಪೂಜಾರಿ ಬೋಳಂತೂರು ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ನ ನಿರ್ದೇಶಕ ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ಸಂಘದ ಉಪಾಧ್ಯಕ್ಷ ಮಾಧವ ಕೆ.ಕರ್ಬೆಟ್ಟು, ನಿರ್ದೇಶಕರಾದ ಮೋನಪ್ಪ ಪೂಜಾರಿ ಬೊಂಡಾಲ, ಆಶೋಕ್ ಆರ್., ನಾರಾಯಣ ಪೂಜಾರಿ ಕೇದಿಗೆ, ಕೃಷ್ಣಪ್ಪ ಪೂಜಾರಿ ಬಾಳ್ತಿಲ, ವಿಜಯ ತುಕರಾಮ, ಜಯಂತಿ ಈಶ್ವರ ಪೂಜಾರಿ, ರಾಜೇಶ್ ಶೇಡಿಗುರಿ, ಬಿರುವೆರ್ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ಹರೀಶ್ ಪೂಜಾರಿ ಮರ್ದೋಳಿ, ಕೋಶಾಧಿಕಾರಿ ಉಮೇಶ್ ನೆಲ್ಲಿಗುಡ್ಡೆ, ಪ್ರಧಾನ ಕಾರ್ಯದರ್ಶಿ ಮನೋಜ್ ನಿರ್ಮಲ್, ಮಾಜಿ ಕಾರ್ಯದರ್ಶಿ ಸಂಜೀವ ಪೂಜಾರಿ ನಾಟಿ, ಗ್ರಾ.ಪಂ. ಸದಸ್ಯ ರವಿ ಅಂಚನ್ ಅಬೆರೊಟ್ಟು, ಹಿರಿಯ ಮೂರ್ತೆದಾರ ಸದಸ್ಯರಾದ ಚಂದು ಪೂಜಾರಿ ಕೇದಿಗೆ, ಮೋಹನ ಪೂಜಾರಿ ಬೊಂಡಾಲ, ಪದ್ಮನಾಭ…
ಬಂಟ್ವಾಳ: ಲಯನ್ಸ್ ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿ ಅವರು ಲಯನ್ಸ್ ಕ್ಲಬ್ ಬಂಟ್ವಾಳಕ್ಕೆ ಅಧಿಕೃತ ಭೇಟಿ ಕಾರ್ಯಕ್ರಮ ನಡೆಯಿತು.ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ಪ್ರಶಾಂತ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಪ್ರಥಮ ಮಹಿಳೆ ಸಂಧ್ಯಾ ವಲಯಾಧ್ಯಕ್ಷ ಡೋನಾಲ್ಡ್ ಬಂಟ್ವಾಳ, ಪ್ರಾಂತೀಯ ರಾಯಬಾರಿ ದಾಮೋದರ ಬಿ.ಎಂ., ಕೋಶಾಧಿಕಾರಿ ಕೇಶವ ಆಚಾರ್, ವಿಜಯ್ ರೈ ಹಾಗೂ ವಿವಿಧ ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಬಂಟ್ವಾಳ ತಾಲೂಕಿನ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಕಿರಣ್ ಕುಮಾರ್, ರೀಟಾ ತಾವ್ರೋ. ಉಮರಗಿ ಶರಣಪ್ಪ, ಹೇಮಾವತಿ, ವಲಯಾಧ್ಯಕ್ಷ ರಮಾನಂದ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಬಂಟ್ವಾಳದ ಸದಸ್ಯರಾಗಿರುವ ಶಿಕ್ಷಕರನ್ನು ಗೌರವಿಸಲಾಯಿತು.ಕಾರ್ಯದರ್ಶಿ ಸುನೀಲ್ ಬಿ. ವರದಿ ವಾಚಿಸಿದರು. ತಪೋದನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ಆಚಾರ್ಯ ವಂದಿಸಿದರು.
ಬಂಟ್ವಾಳ: ಹಿರಿಯ ರಂಗಕರ್ಮಿ ಮಂಜು ವಿಟ್ಲ ನಿಧನ ಹೊಂದಿದ ಹಿನ್ನೆಯಲ್ಲಿ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಬುಧವಾರ ಶ್ರದ್ಧಾಂಜಲಿ ಸಭೆ ನಡೆಯಿತು.ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ ಮಂಜುವಿಟ್ಲ ಪ್ರೀತಿಯ ಸದ್ಗುಣವನ್ನು ಬೆಳೆಸಿಕೊಂಡವರು, ಮಾಣಿಲವೆಂಬ ಕುಗ್ರಾಮವನ್ನು ಪರಿವರ್ತಿಸಲು ಮಂಜು ವಿಟ್ಲ ಅವರು ನಗುನಗುತ್ತಾ ಸಮಾಜವನ್ನು ಎದುರಿಸಿದ ರೀತಿ ಮಾದರಿಯಾಗಿತ್ತು ಎಂದರು. ಪ್ರೀತಿಯೇ ದೇವರು ಎಂಬ ತತ್ವವನ್ನು ಅವರು ಅನೂಚಾನವಾಗಿ ಪಾಲಿಸುತ್ತಿದ್ದರು, ಕ್ಷೇತ್ರದಲ್ಲಿ ನಡೆಯುವ ಪ್ರತಿಷ್ಟಾ ವರ್ಧಂತಿ ಕಾರ್ಯಕ್ರಮದ ವೇದಿಕೆಗೆ ಅವರ ಹೆಸರಿಡಲಾಗುವುದು ಹಾಗೂ ಮಂಜಿ ವಿಟ್ಲ ಅವರ ನೆನೆಪಿಗಾಗಿ ಕಲಾವಿದರಿಗೆ ಯೋಜನೆ ಹಾಕಿಕೊಳ್ಳಲಾಗುವುದು ಎಂದು ತಿಳಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ ಮಂಜು ವಿಟ್ಲ ಯಾರನ್ನೂ ದ್ವೇಷ ಮಾಡುವ ವ್ಯಕ್ತಿತ್ವದವರಲ್ಲ. ಲವಲವಿಕೆಯಿಂದ ತೊಡಗಿಸಿಕೊಳ್ಳುತ್ತಿದ್ದ ಅವರ ಮನುಷ್ಯ ಪ್ರೀತಿ, ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು ಎಂದರು. ಹಿರಿಯ ರಂಗಕರ್ಮಿ ಮಹಾಬಲೇಶ್ವರ ಹೆಬ್ಬಾರ್ ಪಾಸ್ತವಿಕವಾಗಿ ಮಾತನಾಡಿ ರಂಗಭೂಮಿಯ ಸೆಳೆತಕ್ಕೊಳಗಾದ ಮಂಜು ವಿಟ್ಲ ನಾನಾ ವಿಭಾಗಗಳಲ್ಲಿ ದುಡಿದವರು ಎಂದರು.ಹಿರಿಯರಾದ ಕೈಯೂರು ನಾರಾಯಣ…
ಜೆಸಿಐ ಬಂಟ್ವಾಳದಿಂದ ಗುಂಡೂರಿ ಸೇವಾಶ್ರಮಕ್ಕೆ ಆಹಾರದ ಕಿಟ್ ವಿತರಣೆ ಬಂಟ್ವಾಳ: ಜೆಸಿಐ ಬಂಟ್ವಾಳದ ಜೇಸಿ ಸಪ್ತಾಹದ ಅಂಗವಾಗಿ ಗುಂಡೂರಿ ಸೇವಾಶ್ರಮ ಕ್ಕೆ ಆಹಾರ ದಾನ ಹಾಗೂ ಆಹಾರ ಕಿಟ್ ವಿತರಣೆ ಮಾಡಲಾಯಿತು.ಈ ಸಂದರ್ಭ ವಲಯ ಉಪಾಧ್ಯಕ್ಷ ಭರತ್ ಶೆಟ್ಟಿ, ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ. ನಿಕಟಪೂರ್ವಾಧ್ಯಕ್ಷ ರೋಷನ್ ರೈ, ಕಾರ್ಯದರ್ಶಿ ರಶ್ಮಿ ಶೆಟ್ಟಿ, ಸದಸ್ಯರಾದ ಸಂತೋಷ್ ಜೈನ್, ವಚನ್ ಶೆಟ್ಟಿ, ಆಶಾಮಣಿ ರೈ, ಪ್ರಸಾದ್, ಸುಧಾಕರ್, ದೀಪ್ತಿ ರೈ ಉಪಸ್ಥಿತರಿದ್ದರು.
ಬಂಟ್ವಾಳ: ಜೆಸಿಐ ಜೋಡುಮಾರ್ಗ ನೇತ್ರಾವತಿ ಅತ್ಯುತ್ತಮವಾದ ಕಾರ್ಯಕ್ರಮವನ್ನು ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮದ ವೇಳೆ ನೀಡಿರುವುದು ಅಭಿನಂದನೀಯ. ಮೂರು ಶಾಲೆಗಳಿಗೆ ನೀಡಿದ ಯೋಜನೆಗಳು ಹೆಚ್ಚು ಪ್ರಯೋಜನಕಾರಿಯಾಗಿದ್ದು ನನಗೆ ಹೆಚ್ಚು ಖುಷಿ ನೀಡಿದೆ, ಕೊಡಬೇಕಲ್ಲ ಎಂದು ಕೊಡುವ ಬದಲು ಅಗತ್ಯ ಇರುವಲ್ಲಿಗೆ ಅಗತ್ಯ ಇರುವ ವಸ್ತುಗಳನ್ನು ನೀಡುವುದು ಹೆಚ್ಚು ಅರ್ಥಪೂರ್ಣ. ಆ ನಿಟ್ಟಿನಲ್ಲಿ ಘಟಕ ಹೆಚ್ಚು ಉಪಯುಕ್ತ ಯೋಜನೆಗಳನ್ನು ವಲಯಾಧ್ಯಕ್ಷರ ಭೇಟಿ ವೇಳೆ ನೀಡಿದೆ ಎಂದು ಜೇಸಿ ವಲಯ 15ರ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಹೇಳಿದರು. ಜೆಸಿಐ ಜೋಡುಮಾರ್ಗ ನೇತ್ರಾವತಿ ಇಲ್ಲಿಗೆ ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ ವೇ ಜೆಸಿಐ ಜೋಡುಮಾರ್ಗ ನೇತ್ರಾವತಿ ವತಿಯಿಂದ ಒಟ್ಟು 6 ಲಕ್ಷ ರೂಪಾಯಿ ವೆಚ್ಚದ ವಿವಿಧ ಶಾಶ್ವತ ಯೋಜನೆಗಳನ್ನು ಹಸ್ತಾಂತರಿಸಿ ಸಂಜೆ ಬಿ.ಸಿ.ರೋಡಿನ ಪ್ರೀತಿ ಕಾಂಪ್ಲೆಕ್ಸ್ ಸಭಾಭವನದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.ಕಾಯರ್ ಪಲ್ಕೆಯ ಹೆಗ್ಡೆಸ್ ಆಂಗ್ಲಮಾಧ್ಯಮ ಶಾಲೆಗೆ ಕೊಡುಗೆಯಾಗಿ ನೀಡಿದ ಜೇಸಿ ಕಿಂಡರ್ ಪ್ಲೇ ಯಾರ್ಡ್ ಅನ್ನು ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಉದ್ಘಾಟಿಸಿದರು. ಬಳಿಕ ನಡೆದ…








