ಬಂಟ್ವಾಳ: ತೆಂಗಿನ ಗೆರಟೆಯ ಮೂಲಕ ಕಲಾಕೃತಿಗಳನ್ನು ತಯಾರಿಸುವ ಇರಾ ಗ್ರಾಮದ ಸಚ್ಚೀಂದ್ರ ಅವರು ದಸರಾ ಹಬ್ಬದ ಸುಸಂದರ್ಭದಲ್ಲಿ ಗೆರಟೆಯಿಂದಲೇ ಆಕರ್ಷಕ ಹುಲಿ ಮುಖವರ್ಣಿಕೆಯನ್ನು ರಚಿಸಿದ್ದಾರೆ.
Advertisement
ತೆಂಗಿನ ಗೆರಟೆ, ಗೆರಟೆ ಹುಡಿ, ಅಂಟು ಬಳಸಿ ಹುಲಿ ಮುಖವಾಡ ರಚಿಸಿದ್ದಾರೆ. ಸುಮಾರು 17 ದಿನಗಳ ಪರಿಶ್ರಮದಿಂದ ಸುಂದರವಾದ ಘರ್ಜಿಸುವ ಹುಲಿ ಮುಖ ಸಿದ್ದಗೊಂಡಿದೆ.
ವ್ಯರ್ಥ ವಾಗಿ ಹೋಗುವ ತೆಂಗಿನ ಗೆರಟೆಳನ್ನು ಬಳಸಿಕೊಂಡು ಆಕರ್ಷಕ ಕಲಾಕೃತಿಗಳನ್ನು ಸಚ್ಚೀಂದ್ರ ಅವರು ರಚಿಸುವ ಬಗ್ಗೆ ಇತ್ತೀಚೆಗೆ ವಿಜಯವಾಣಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಇದೀಗ ಸಚ್ಚೀಂದ್ರ ಅವರ ಕೈಚಳಕದಲ್ಲಿ ಪ್ರಥಮ ಬಾರಿಗೆ ಹುಲಿ ಮುಖವರ್ಣಿಕೆ ತಯಾರಾಗಿದ್ದು, ಜನರನ್ನು ತನ್ನತ್ತ ಸೆಳೆಯುತ್ತಿದೆ.
Advertisement