ಉಳ್ಳಾಲ: ತಾಲೂಕಿನ ಪಾವೂರು, ಹರೆಕಳ, ಅಂಬ್ಲಮೊಗರು, ಗ್ರಾಮ ವ್ಯಾಪ್ತಿಗೊಳಪಟ್ಟ ಸಂಪಿಗೆದಡಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ವಿಜ್ರಂಭಣೆಯಿಂದ ನಡೆಯುತ್ತಿದ್ದು ಹರೇಕಳ ಸಂಪಿಗೆದಡಿ ಮನೆತನದವರಿಂದ ಶ್ರೀ ದೇವರಿಗೆ ಸರ್ವಾಲಂಕರ ಪೂಜೆ ನಡೆಯಿತು.
ಬೆಳಿಗ್ಗೆ 7.30ಕ್ಕೆ ದೇವರಿಗೆ ನಿತ್ಯ ಪೂಜೆ ನಡೆಯಿತು. 8.30ರಿಂದ ಗಣಹೋಮ, ನಾಗದೇವರಿಗೆ ತಂಬಿಲ ಸೇವೆ, ಪರಿವಾರ ದೈವಗಳಿಗೆ ಪಂಚಪರ್ವ ನಡೆಯಿತು. ಬಳಿಕ ಕ್ಷೇತ್ರದ ಮಹಿಳಾ ಭಕ್ತರಿಂದ ಲಲತಾ ಸಹಸ್ರನಾಮ ಪಠಣ ನೆರವೇರಿತು. ಮಧ್ಯಾಹ್ನ 12.15ಕ್ಕೆ ಸಂಪಿಗೆದಡಿ ಮನೆತನದವರಿಂದ ಸರ್ವಾಲಂಕರ ಪೂಜೆ ಹಾಗೂ ಮಹಾಪೂಜೆ ನಡೆದು ಪ್ರಸಾದ ವಿತರಿಸಲಾಯಿತು. ಈ ಸಂದರ್ಭ ದೇವಸ್ಥಾನದ ಆಡಳಿತ ಮೋಕ್ತೇಸರ ಮೋಹನದಾಸ ರೈ, ಗೌರವಾಧ್ಯಕ್ಷ ರಾಜೀವ ಆಳ್ವ, ಭಾಸ್ಕರ ರೈ ಸಹಿತ ಸಂಪಿಗೆದಡಿ ಮನೆತನದ ಕುಟುಂಬಿಕರು, ಗ್ರಾಮಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದರು. ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ 6 ಗಂಟೆಯಿಂದ ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ, ರಾತ್ರಿ ಭಜನಾ ಸಂಕೀರ್ತನೆ, ಬಳಿಕ ಟಿ. ಆರ್ ಪೂಂಜ ಮತ್ತು ಕುಟುಂಬಸ್ಥರಿಂದ ಶ್ರೀ ದೇವರಿಗೆ ರಂಗಪೂಜೆ ಹಾಗೂ ಮಹಾಪೂಜೆ ನಡೆದು ಅನ್ನದಾನ ನಡೆಯಿತು.