ಬಂಟ್ವಾಳ: ಕರ್ನಾಟಕ ರಾಜ್ಯ ಕುಲಾಲ-ಕುಂಬಾರರ ಯುವವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಬಂಟ್ವಾಳ ವಿಧಾನಸಭಾ ಕ್ಷೇತ್ರ ಇದರ 2023-25 ನೇ ಪದ-ಪ್ರಧಾನ ಸಮಾರಂಭ ಮತ್ತು ಜಿಲ್ಲಾ ಮಟ್ಟದ ಕೆಸರುಗದ್ದೆ ಪಂದ್ಯಾಟ ಹಾಗೂ ನೂತನ ಕಛೇರಿ ಉದ್ಘಾಟನೆ ಕಾರ್ಯಕ್ರಮ ಅ.08 ರಂದು ಭಾನುವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದೆ.
ಬೆಳಗ್ಗೆ ಗಂಟೆ 8.30ಕ್ಕೆ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಮುಳಿಯ ಶ್ರೀ ವೈಷ್ಣವಿ ಆದಿಶಕ್ತಿ ಕ್ಷೇತ್ರದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ನಿತೀಶ್ ಕುಲಾಲ್ ಪಲ್ಲಿಕಂಡ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದಕ್ಷಿಣ ಭಾರತ ಕುಂಬಾರರ ಫೆಡರೇಶನ್ ಅಧ್ಯಕ್ಷ ಡಾ. ಶಿವಕುಮಾರ್ ಚೌಡಶೆಟ್ಟಿ, ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆಯ ಸ್ಥಾಪಕ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು, ನೇಪಾಳದ ಉಪರಾಷ್ಟ್ರಪತಿಗಳ ವಿಶೇಷ ಸಾಂಸ್ಕೃತಿಕ ಸಲಹೆಗಾರ ಡಾ.ಎಂ.ಪಿ. ವರ್ಷ, ಉದ್ಯಮಿಗಳಾದ ಕೇಶವ ಬಾಳೆಹಿತ್ಲು, ರಮೇಶ್ ಬಾಳೆಹಿತ್ಲು, ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ದ ರಾಜ್ಯಧ್ಯಕ್ಷ ಗಂಗಾಧರ್ ಬಂಜನ್, ವಿಭಾಗೀಯ ಕಾರ್ಯದರ್ಶಿ ಲ|ಅನಿಲ್ ದಾಸ್, ಕೋಲಾರ ಕುಲಾಲ ಕುಂಬಾರರ ಯುವ ವೇದಿಕೆ ರಾಜ್ಯ ಯುವ ಮುಖಂಡರಾದ ಡಾ. ನಾಗರಾಜ್ ಮಾಲೂರು, ಯುವ ವೇದಿಕೆ ಬೆಂಗಳೂರು ವಲಯ ಅಧ್ಯಕ್ಷ ಭರತ್ ಸೌಂದರ್ಯ, ಯುವ ವೇದಿಕೆ ಬೆಂಗಳೂರು ವಲಯ ಸಂಚಾಲಕ ರವಿ ಕುಲಾಲ್, ಶಿವಮೊಗ್ಗ ಕುಂಬಾರರ ಸಂಘದ ಜಿಲ್ಲಾಧ್ಯಕ್ಷ ಪದ್ಮನಾಭ, ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ದ.ಕ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ, ವೇಣೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಶ್ ಮರ್ತಾಜೆ, ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪೆರ್ಡೂರು ಅಧ್ಯಕ್ಷ ಸಂತೋಷ್ ಕುಲಾಲ್ ಪಕ್ಕಾಲು, ಕೊಡಗು ಜಿಲ್ಲಾ ಕುಲಾಲ-ಕುಂಬಾರ ಮಡಿಕೆ ತಯಾರಿಕಾ ಸಂಘದ ಅಧ್ಯಕ್ಷ ಎಂ.ಡಿ.ನೋಣಯ್ಯ, ಹಾಸನ ತಿಮ್ಮಪ್ಪ ಶೆಟ್ಟಿ, ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ದ.ಕ ಜಿಲ್ಲಾ ಕಾರ್ಯದರ್ಶಿ ಲೊಕೇಶ್ ಗುರುವಾಯನಕೆರೆ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸದಾಶಿವ ಬಂಗೇರ ವಗ್ಗ, ಮುತ್ತಪ್ಪ ಮೂಲ್ಯ ನೆಲ್ಲಿ, ನಾಗೇಶ್ ಕುಲಾಲ್, ತೇಜಸ್ವಿ ರಾಜ್, ಟಿ. ಶೇಷಪ್ಪ ಮೂಲ್ಯ ಅವರಿಗೆ ಸರ್ವಜ್ಞ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಬಳಿಕ ವಿವಿಧ ಪಂದ್ಯಾಟಗಳು ನಡೆಯಲಿರುವುದು.