
ಬಂಟ್ವಾಳ: ದ. ಕ. ಶಾಮಿಯಾನ ಮಾಲಕರ ಸಂಘ ಬಂಟ್ವಾಳ ಘಟಕ ಇದರ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಘದ ಸ್ಥಾಪಕಧ್ಯಕ್ಷ, ಸ್ಪರ್ಶ ಕಲಾ ಮಂದಿರದ ಮಾಲಕ ಸುಭಾಶ್ಚಂದ್ರ ಜೈನ್ ಅವರಿಗೆ
ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.
ಸಂಘದ ಜಿಲ್ಲಾಧ್ಯಕ್ಷ ಬಾಬು ಕೆ. ವಿ ಮಾತನಾಡಿ ಸುಭಾಶ್ಚಂದ್ರ ಜೈನ್ ಅವರು ಶ್ರಮಜೀವಿ. ಲಾಭವನು ಹೆಚ್ಚು ಬಯಸದೆ ಸೇವೆಯ ರೂಪದಲ್ಲಿ ವ್ಯವಹಾರವನ್ನು ನಡೆಸಿಕೊಂಡು ಬಂದವರು. ಅವರೋರ್ವ ಅಜಾತ ಶತ್ರು ಎಂದು ತಿಳಿಸಿದರು. ಬಂಟ್ವಾಳ ಘಟಕದ ಅಧ್ಯಕ್ಷ ಐವನ್ ಡಿ ಸೋಜ ಅಧ್ಯಕ್ಷತೆ ವಹಿಸಿ ಮಾತನಾಡಿ ಸುಭಶ್ಚಂದ್ರ ಜೈನ್ ಅವರು ಪಾದರಸದಂತೆ ಕ್ರಿಯಾಶೀಲಾ ವ್ಯಕ್ತಿತ್ವ ಹೊಂದಿದ್ದು, ಎಲ್ಲ ಕ್ಷೇತ್ರಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ ಎಂದರು.

ಸುಭಶ್ಚಂದ್ರ ಜೈನ್ ಅವರು ಅಭಿನಂದನೆ ಸ್ವೀಕರಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಉದ್ಯಮಿ ಲತೀಫ್ ಎಂ ಎಸ್ ವಿ, ಸಂಘದ ವಿಟ್ಲ ಘಟಕದ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಮಂಗಳೂರು ಘಟಕದ ಅಧ್ಯಕ್ಷ ನಿಶಿತ್ ಪೂಜಾರಿ, ಬೆಳ್ತಂಗಡಿ ಘಟಕದ ಅಧ್ಯಕ್ಷ ಅರುಣ್ ಮೋರಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ನಿಕಟ ಪೂರ್ವಧ್ಯಕ್ಷ ಶ್ರೀನಿವಾಸ್ ಪೂಜಾರಿ ಮೆಲ್ಕಾರ್ ಪ್ರಾಸ್ತ್ರವಿಕ ಮಾತುಗಳೊಂದಿಗೆ ಸ್ವಾಗತಿಸಿದರು.
ಸುಧೀರ್ ನಿರ್ಮಲ್ ಸನ್ಮಾನ ಪತ್ರ ವಾಚಿಸಿದರು
ಕಾರ್ಯದರ್ಶಿ ಶಾಶ್ವತ್ ವಂದಿಸಿದರು. ಕಾರ್ಯಕ್ರಮ ನಿರೂಪಿಸಿದರು. ಪಿಯೂಸ್ ಮ್ಯಾಕ್ಸಿಮ್ ಸಿಕ್ವೆರ ಕಾರ್ಯಕ್ರಮ ನಿರೂಪಿಸಿದರು.
Advertisement







