Author: admin

ಬಂಟ್ವಾಳ: ಬೆಂಗಳೂರಿನ ದೇವನಹಳ್ಳಿಯ ವಿಜಯಪುರದ ಅನ್ನಪೂರ್ಣ ಕನ್ವೇನ್ಶನ್ ಸಭಾಂಗಣದಲ್ಲಿ ಆ.12 ಮತ್ತು 13 ರಂದು ನಡೆಯುತ್ತಿರುವ ಪ್ರಥಮ ಮುಕ್ತ ರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್‌ಶಿಪ್ ವಾರಿಯರ್‍ಸ್ ಕಪ್-2023 ಸ್ಪರ್ಧೆಯ ಕಟಾ ವಿಭಾಗದಲ್ಲಿ ದ.ಕ. ಜಿಲ್ಲೆಯ ಇಬ್ಬರು ಪ್ರತಿಭೆಗಳು ಚಿನ್ನದ ಪದಕ ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ಮಂಗಳೂರಿನ ನಂದಾದೀಪಾ ಅಪಾರ್ಟ್‌ಮೆಂಟ್‌ನ ನಿವಾಸಿಗಳಾದ ನಕುಲ್ ತಿಲಕ್ ಹಾಗೂ ಸುರಶ್ರೀ ಅವರ ಪುತ್ರ, ಮಂಗಳೂರಿನ ಸಂತ ಅಲೋಷಿಯಸ್ ಗೋನ್ಞಾಗ ವಿದ್ಯಾಸಂಸ್ಥೆಯ ಯುಕೆಜಿ ವಿದ್ಯಾರ್ಥಿ ಶ್ರೀಹಾನ್ ಕಟಾ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಫೈಟ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾನೆ. ಈತ ನಂದಾದೀಪಾ ಅಪಾರ್ಟ್‌ಮೆಂಟ್‌ನಲ್ಲಿ ಮಾರ್ಷಲ್‌ಆರ್ಟ್ ತರಬೇತುದಾರರಾದ ರಾಜೇಶ್ ಬ್ರಹ್ಮರಕೂಟ್ಲು ಹಾಗೂ ವೆನ್ನಿಲ್ಲಾ ಮಣಿಕಂಠ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾನೆ. Advertisement Advertisement ನೆತ್ತರಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಹಂಸಿಕಾ ವೈಯಕ್ತಿಕ ವಿಭಾಗದ ಕಟಾದಲ್ಲಿ ಚಿನ್ನದ ಪದಕ ಹಾಗೂ ಫೈಟ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಈಕೆ ರಾಜೇಶ್ ಹಾಗೂ ಶೋಭಾ ದಂಪತಿಯ ಪುತ್ರಿಯಾಗಿದ್ದು ಪೊಳಲಿ…

Read More

ಸಜೀಪಮೂಡ : ಮಾ.10 ರಿಂದ ಮಾ.30ರವರೆಗೆ ಉಚಿತ ಪೂಟ್ ಫಲ್ಸ್ ಥೆರಪಿ Advertisement ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಸುಭಾಷ್‌ನಗರ ಸಜೀಪಮೂಡ ಇದರ ಆಶ್ರಯದಲ್ಲಿ ಕಂಪಾನಿಯೋ ಮಂಗಳೂರು ಇವರ ಸಹಯೋಗದೊಂದಿಗೆ ಗುರು ಜಯಂತಿಯ ಪ್ರಯುಕ್ತ ಆ.10 ರಿಂದ ಆ.30ರವರೆಗೆ ನಡೆಯಲಿರುವ ಉಚಿತ ಪೂಟ್ ಫಲ್ಸ್ ಥೆರಪಿಗೆ ಸಜೀಪಮೂಡ ಶ್ರೀ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಚಾಲನೆ ನೀಡಲಾಯಿತು. Advertisement Advertisement ಸಜೀಪಮುನ್ನೂರು ಮೂರ್ತೇದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ದೀಪ ಪ್ರಜ್ವಲಿಸಿದರು, ಸಜೀಪಮೂಡ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ ಉಪಾಧ್ಯಕ್ಷ ಮೋಹನದಾಸ್ ಪೂಜಾರಿ ಬೊಳ್ಳಾಯಿ ಲೆಕ್ಕ ಪರಿಶೋಧಕ ರಮೇಶ್ ಅನ್ನಪ್ಪಾಡಿ ಪ್ರಮುಖರಾದ ಶ್ರೀಧರ ಪೂಜಾರಿ, ಜಯಶಂಕರ್ ಕಾಂಸಲೆ ಶೈಲೇಶ್ ಪೂಜಾರಿ , ಲೋಕೇಶ್ ಪೂಜಾರಿ, ಅಶ್ವಿನ್ ಪೂಜಾರಿ ಕಾರಜೆ, ಸತೀಶ್ ಪೂಜಾರಿ ಸೌಜನ್ಯಾ ಹಾಗೂ ಸುನೀತ ಉಪಸ್ಥಿತರಿದ್ದರು.

Read More

ಸಂಘದ ವಿರುದ್ಧ ಅವಹೇಳನ ಮಾಡುತ್ತಿರುವ 5 ಮಂದಿ ನೌಕರರ ವಿರುದ್ಧ ಸರ್ಕಾರಿ ನೌಕರರ ಸಂಘದಿಂದ ಸರ್ಕಾರಕ್ಕೆ ಮನವಿ ಸಲ್ಲಿಕೆ ಬಂಟ್ವಾಳ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಇದರ 5 ಮಂದಿ ನೌಕರರು ಸ್ವಾರ್ಥ ಸಾಧನೆಗಾಗಿ ಸಂಘದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿಕೊಂಡು ಸಂಘ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಲ್ಲದೆ, ಸಾಮಾಜಿಕ ಜಾಲಾತಾಣಗಳಲ್ಲಿ ಸಂಘದ ಬಗ್ಗೆ ಅವಹೇಳನ ಮಾಡುತ್ತಿದ್ದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲು ಸುಳ್ಳು ದೂರು ನೀಡಿರುವ ಇವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಶಾಖೆಯ ವತಿಯಿಂದ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಂಘದ ವಿರುದ್ಧ ಅವಹೇಳನ ಮಾಡುತ್ತಿರುವ 5 ಮಂದಿ ನೌಕರರ ವಿರುದ್ಧ ಸರ್ಕಾರಿ ನೌಕರರ ಸಂಘದಿಂದ ಸರ್ಕಾರಕ್ಕೆ ಮನವಿ ಸಲ್ಲಿಕೆ ಸಂಘದ ಬಂಟ್ವಾಳ ಶಾಖೆಯ ಅಧ್ಯಕ್ಷ ಉಮನಾಥ ರೈ ಮೇರಾವು ಮಾತನಾಡಿ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘ ದೇಶದಲ್ಲಿಯೇ ಮಾದರಿ…

Read More

ಸೌಜನ್ಯ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗಾಗಿ ಕಾರಿಂಜ ಕ್ಷೇತ್ರದಲ್ಲಿ ಸಾಮಾಹಿಕ ಪ್ರಾರ್ಥನೆ Advertisement ಬಂಟ್ವಾಳ: ಸೌಜನ್ಯಳನ್ನು ಕ್ರೂರವಾಗಿ ಅತ್ಯಾಚಾರ ಮಾಡಿ ಕೊಲೆಗೈದ ನೈಜ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಬಂಟ್ವಾಳ ಪ್ರಖಂಡದ ವತಿಯಿಂದ ಕಾರಿಂಜೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಈ ಸಂದರ್ಭ ಭಜರಂಗದಳದ ಜಿಲ್ಲಾ ಹಾಗೂ ಬಂಟ್ವಾಳ ಪ್ರಖಂಡದ ಪ್ರಮುಖರು ಹಾಜರಿದ್ದರು. Advertisement Advertisement

Read More

ಸಜೀಪಮುನ್ನೂರು ಮೂರ್ತೇದಾರರ ಸೇವಾ ಸಹಕಾರಿ ಸಂಘದ ಕಂಬಳ ಬೆಟ್ಟು ಶಾಖೆಯ ಉದ್ಘಾಟನೆ ಆಮಂತ್ರಣ ಪತ್ರಿಕೆ ಬಿಡುಗಡೆ ಬಂಟ್ವಾಳ: ಸಜೀಪಮುನ್ನೂರು ಮೂರ್ತೇದಾರರ ಸೇವಾ ಸಹಕಾರಿ ಸಂಘ ಇದರ 12ನೇ ಕಂಬಳ ಬೆಟ್ಟು ಶಾಖೆಯ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಕುಚ್ಚಿಗುಡ್ಡೆ ಬಿಡುಗಡೆಗೊಳಿಸಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನ ಪಾಲು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಮತಾ ಜಿ, ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು. Advertisement Advertisement ಕಂಬಳಬೆಟ್ಟು ಶಾಖೆ ಸೆ. 3ರಂದು ಭಾನುವಾರ ಕಂಬಳಬೆಟ್ಟುವಿನ ದರ್ಬಾರ್ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆಗೊಳ್ಳಲಿದೆ. ಕಲ್ಬುರ್ಗಿಯ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠಾಧಿಪತಿ ಶ್ರೀ ಡಾ. ಪ್ರಣವಾನಂದ ರಾಮ್ ಸ್ವಾಮೀಜಿ ಉದ್ಘಾಟಿಸುವರು. ಪುತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಚಿವ ಬಿ. ರಮನಾಥ ರೈ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. Advertisement

Read More

ಸಜೀಪಮೂಡ ಸರಕಾರಿ ಪ್ರೌಢಶಾಲೆಯಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ Advertisement ಬಂಟ್ವಾಳ: ಸಜೀಪಮೂಡ ಸರಕಾರಿ ಪದವಿಪೂರ್ವ ಕಾಲೇಜು ಇಲ್ಲಿನ ಪ್ರೌಢಶಾಲಾ ವಿಭಾಗದ ಆಶ್ರಯದಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ ಶನಿವಾರ ಶಾಲೆಯ ಜ್ಞಾನಜ್ಯೋತಿ ರಂಗ ಮಂದಿರದಲ್ಲಿ ನಡೆಯಿತು.ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಪೆರ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್‌ಡಿಎಂಸಿ ಸದಸ್ಯರಾದ ಸೀತಾರಾಮ ಅಗೋಳಿಬೆಟ್ಟು ಹಾಗೂ ನಳಿನಾಕ್ಷಿ ಭಾಗವಹಿಸಿದ್ದರು. ಚಿತ್ರಕಲಾ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಆಟಿ ತಿಂಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕಿ ಆಲಿಸ್ ಪಾಸ್ ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿಯರಾದ ಸಮೀಕ್ಷ ನಿರೂಪಿಸಿ, ಶಿವಾನಿ ವಂದಿಸಿದರು. ಸಜೀಪಮೂಡ ಸರಕಾರಿ ಪ್ರೌಢಶಾಲೆಯಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ Advertisement Advertisement

Read More

ಸಂಭ್ರಮ ಎಲೆಕ್ಟ್ರಾನಿಕ್ಸ್ ವಾರ್ಷಿಕೋತ್ಸವ: ಆಗಸ್ಟ್ 7ರಿಂದ 15ರವರೆಗೆ ವಿಶೇಷ ಆಫರ್ ಗಳ ಮಾರಾಟ ಬಂಟ್ವಾಳ: ಕಲ್ಲಡ್ಕ, ಬಿ.ಸಿ ರೋಡ್ , ಮಾಣಿಯಲ್ಲಿ ಮಳಿಗೆಗಳನ್ನು ಹೊಂದಿರುವ ಸಂಭ್ರಮ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ನಲ್ಲಿ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಆಗಸ್ಟ್ 7ರಿಂದ 15ರವರೆಗೆ ವಿಶೇಷ ಆಫರ್ ಗಳ ಮಾರಾಟ ಇರಲಿದೆ ಎಂದು ಮಾಲೀಕರಾದ ಗಿರೀಶ್ ನೆಟ್ಲ ತಿಳಿಸಿದ್ದಾರೆ.ಈ ಸಂದರ್ಭ ವಿಶೇಷ ಆಫರ್ ಗಳಿವೆ. ಖರೀದಿಗೆ ಗಿಫ್ಟ್ ಗ್ಯಾರಂಟಿ. ಮಹಿಳೆಯರಿಗೆ JACKPOT ಗೆಲ್ಲುವ ಅವಕಾಶ. ಶಾಪಿಂಗ್ ಮಾಡಿ ಒಂದು ಟೂರ್ ಪ್ಯಾಕೇಜ್ ಅನ್ನೇ ಪಡೆಯಬಹುದು. ಸ್ಪಾಟ್ ನಲ್ಲೇ ಇ.ಎಂ.ಐ. ಸಾಲ ಸೌಲಭ್ಯವೂ ದೊರಕುತ್ತದೆ. ಅಲ್ಲದೆ, ಆಕರ್ಷಕ ಉಡುಗೊರೆಗಳು ಸಿದ್ಧವಾಗಿದೆ. ENTER & WIN ಎಂಬ ಆಫರ್ ಇದ್ದು, ಇಲ್ಲಿ ನೀವು ಶಾಪ್ ಮಾಡದೆಯೇ ಬೋನಸ್ ಪಡೆಯುವ ಅವಕಾಶವಿದೆ. ಮಳಿಗೆಗಳಿಗೆ ಭೇಟಿ ನೀಡಿ, ನೀವು ಬನ್ನಿ ನಿಮ್ಮವರನ್ನು ಕರೆತನ್ನಿ ಎಂದು ಸಂಭ್ರಮ ಎಲೆಕ್ಟ್ರಾನಿಕ್ಸ್ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಗಿರೀಶ್ ನೆಟ್ಲ ತಿಳಿಸಿದ್ದಾರೆ. ವಿಶೇಷ ಆಫರ್, ಖರೀದಿ ಸಂದರ್ಭ ಗಿಫ್ಟ್ ಅಲ್ಲದೆ,…

Read More

ನರಿಕೊಂಬು ಬಿರುವೆರ್ ಸೇವಾ ಟ್ರಸ್ಟ್ ವತಿಯಿಂದ ಬಿಲ್ಲವರ ಸೌಹಾರ್ದ ಕುಟುಂಬ ಮಿಲನ ಕಾರ್ಯಕ್ರಮ Advertisement ಬಂಟ್ವಾಳ: ಬಿರುವೆರ್ ಸೇವಾ ಟ್ರಸ್ಟ್ ನರಿಕೊಂಬು ಬಂಟ್ವಾಳ ಇದರ ಆಶ್ರಯದಲ್ಲಿ ಭಾನುವಾರ ಬಿಲ್ಲವರ ಸೌಹಾರ್ದ ಕುಟುಂಬ ಮಿಲನ 2023 ಕಾರ್ಯಕ್ರಮ ನರಿಕೊಂಬುವಿನಲ್ಲಿ ನಡೆಯಿತು. Advertisement ನರಿಕೊಂಬು ಬಿರುವೆರ್ ಸೇವಾ ಟ್ರಸ್ಟ್ ವತಿಯಿಂದ ಬಿಲ್ಲವರ ಸೌಹಾರ್ದ ಕುಟುಂಬ ಮಿಲನ ಕಾರ್ಯಕ್ರಮ ಕಾರ್ಯಕ್ರಮವನ್ನು ಪುರೋಹಿತರಾದ ಕೇಶವ ಶಾಂತಿ ಹಾಗೂ ವೆಂಕಟೇಶ್ ಶಾಂತಿ ಉದ್ಘಾಟಿಸಿದರು. ಈ ಸಂದರ್ಭ ಶಾಸಕ ರಾಜೇಶ್ ನಾಕ್, ಮಾಜಿ ಸಚಿವ ಬಿ. ರಮಾನಾಥ ರೈ ಟ್ರಸ್ಟ್‌ನ ಅಧ್ಯಕ್ಷ ಸೀತಾರಾಮ ಪೂಜಾರಿ ಸಹಿತ ವಿವಿಧ ಬಿಲ್ಲವ ಸಂಘಟನೆಗಳ ಅಧ್ಯಕ್ಷರು, ಉದ್ಯಮಿಗಳು, ಟ್ರಸ್ಟ್‌ನ ಪದಾಧಿಕಾರಿಗಳು, ಸದಸ್ಯರು ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದಂಗವಾಗಿ ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಾಕೂಟಗಳು ನಡೆಯಿತು. Advertisement

Read More

ಬಿ.ಸಿ.ರೋಡಿನಲ್ಲಿ ನ್ಯೂ ಚೆನ್ನೈ ಶಾಪಿಂಗ್‌ನಿಂದ ವಸ್ತ್ರಗಳ ಮಾರಾಟ ಮೇಳ ಆರಂಭ Advertisement ಬಂಟ್ವಾಳ: ನ್ಯೂ ಚೆನ್ನೈ ಶಾಪಿಂಗ್ ಸಂಸ್ಥೆಯ ವತಿಯಿಂದ ವೈವಿಧ್ಯಮಯ ಹಾಗೂ ಆಕರ್ಷಕ ಶೈಲಿಯ ವಸ್ತ್ರಗಳ ಮಾರಾಟ ಮೇಳ ಸೋಮವಾರ ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ಆರಂಭಗೊಂಡಿದ್ದು ಮೊದಲ ದಿನವೇ ಅಪಾರ ಸಂಖ್ಯೆಯಲ್ಲಿ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. Advertisement Advertisement ಬಿ.ಸಿ.ರೋಡು ಪರಿಸರದಲ್ಲಿ ನ್ಯೂ ಚೆನ್ನೈ ಶಾಂಪಿಂಗ್ ಸಂಸ್ಥೆಯ ವತಿಯಿಂದ ಮೂರನೇ ಬಾರಿಗೆ ಬೃಹತ್ ಬಟ್ಟೆಗಳ ಮಾರಾಟ ಮೇಳ ಆರಂಭಗೊಂಡಿದ್ದು ಗ್ರಾಹಕರು ಖರೀದಿಸುವ ಪ್ರತಿಯೊಂದು ಬಟ್ಟೆಯ ಬೆಲೆ ಕೇವಲ 199 ಆಗಿದ್ದು ಗುಣಮಟ್ಟದ ಹಾಗೂ ಎಲ್ಲಾ ವಯೋಮಾನದ ಜನರಿಗೆ ಬೇಕಾಗುವ ಬಟ್ಟೆಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ದೊರಕುವ ಕಾರಣ ಗ್ರಾಹಕರು ಬಟ್ಟೆಗಳನ್ನು ಖರೀದಿಸಲು ಮುಗಿ ಬೀಳುತ್ತಿದ್ದಾರೆ.ಎಲ್ಲಾ ಬಗೆಯ ಸೀರೆಗಳು, ಫ್ರಾಕ್, ವೆಸ್ಟರ್ನ್ ಡ್ರೆಸ್, ಚೂಡಿದಾರ್, ಮಿಡಿ, ಟಾಪ್‌ಗಳು, ಲೆಗ್ಗಿನ್ಸ್, ಫ್ಲಾಝಾ ಫ್ಯಾಂಟ್‌ಗಳು, ಶರ್ಟ್, ಜೀನ್ಸ್ ಪ್ಯಾಂಟ್, ನೈಟಿ, ಜೆರ್‍ಕಿನ್, ಬಾಬಾಸೂಟ್, ಚಪ್ಪಲಿಗಳು, ಬ್ಯಾಗ್‌ಗಳು ಇಲ್ಲಿ ಮಾರಾಟಕ್ಕಿವೆ. ಆ.7 ರಂದು ಆರಂಭಗೊಂಡಿರುವ…

Read More

Advertisement ಜೆಸಿಐ ಬಂಟ್ವಾಳದ ಜೂನಿಯರ್ ಜೇಸಿ ವಿಭಾಗದಿಂದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಗಾರ ಬಂಟ್ವಾಳ: ಜೆಸಿಐ ಬಂಟ್ವಾಳ ಇದರ ಜೂನಿಯರ್ ಜೇಸಿ ವಿಭಾಗದಿಂದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಗಾರ ಸರಕಾರಿ ಪದವಿ ಪೂರ್ವ ಕಾಲೇಜು ಬಿ.ಮೂಡ ಇಲ್ಲಿ ನಡೆಯಿತು.ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ. ಮಾತನಾಡಿ ಯುವ ಸಮುದಾಯವನ್ನು ಸಶಕ್ತಗೊಳಿಸಿ ಉತ್ತಮ ನಾಗರಿಕ ಸಮುದಾಯವನ್ನು ನಿರ್ಮಿಸುವ ಉದ್ದೇಶದಿಂದ ಜೆಸಿಐ ಬಂಟ್ವಾಳ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ನಾಯಕತ್ವ, ಸಭಾ ನಿರ್ವಹಣೆ, ಮಾನವೀಯ ಸಂಬಂಧ, ಜೀವನ ಮೌಲ್ಯಗಳ ಬಗ್ಗೆ ತರಬೇತಿಯನ್ನು ನೀಡುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು. Advertisement ಕಾಲೇಜಿನ ಪ್ರಾಂಶುಪಾಲ ಯುಸೂಫ್ ವಿಟ್ಲ ತರಬೇತಿ ಕಾರ್ಯಗಾರಕ್ಕೆ ಶುಭ ಕೋರಿದರು. ಜೆಜೆಸಿ ಅಧ್ಯಕ್ಷ ಜಯರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೆಸಿಐ ವಲಯ ತರಬೇತುದಾರರಾದ ಸ್ವಾತಿ ಜಗನ್ನಾಥ ರೈ ತರಬೇತಿ ನೀಡಿದರು. Advertisement ಅಬ್ದುಲ್ ರಝಾಕ್ ಸ್ವಾಗತಿಸಿದರು, ಪೂರ್ವಾಧ್ಯಕ್ಷ ಸದಾನಂದ ಬಂಗೇರ ವಂದಿಸಿದರು, ಕಾರ್ಯದರ್ಶಿ ರಶ್ಮಿ ಶೆಟ್ಟಿ ತರಬೇತುದಾರರನ್ನು ಪರಿಚಯಿಸಿದರು.

Read More