Author: admin

ಬಂಟ್ವಾಳ: ಬಂಟ್ವಾಳದಲ್ಲಿ ಸ್ವಂತ ಕಟ್ಟಡದಲ್ಲಿ ಕೇಂದ್ರ ಕಛೇರಿ ಹೊಂದಿರುವ ಸಮಾಜ ಸೇವಾ ಸಹಕಾರಿ ಸಂಘವು 2023-24ನೇ ಸಾಲಿನಲ್ಲಿ ರೂ. 982.54 ಕೋಟಿ ವ್ಯವಹಾರ ನಡೆಸಿದ್ದು ಸುಮಾರು ರೂ. 5.71ಕೋಟಿ (ತಾತ್ಕಲಿಕ) ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸುರೇಶ್‌ಕುಲಾಲ್ ತಿಳಿಸಿದ್ದಾರೆ.ಅವರು ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದ್ದು ಸ್ವಾತಂತ್ರ್ಯ ಹೋರಾಟಗಾರ ಸಮಾಜರತ್ನ ದಿ| ಡಾ| ಅಮ್ಮೆಂಬಳ ಬಾಳಪ್ಪರವರ ನೇತೃತ್ವದಲ್ಲಿ ಹಾಗೂ ಸಹಕಾರಿ ಧುರಿಣ ಬಿ. ಹೂವಯ್ಯ ಮೂಲ್ಯರವರ ಸಾರಥ್ಯದಲ್ಲಿ ಕೇವಲ 131 ಸದಸ್ಯರನ್ನೊಳಗೊಂಡು ರೂ. 22620 ಪಾಲು ಬಂಡವಾಳದೊಂದಿಗೆ ಸ್ಥಾಪಿಸಲ್ಪಟ್ಟ ಸಮಾಜ ಸೇವಾ ಸಹಕಾರಿ ಸಂಘವು ಪ್ರಸ್ತುತ16 ಶಾಖೆಗಳನ್ನು ಹೊಂದಿದ್ದು ದಕ್ಷಿಣಕನ್ನಡ ಮತ್ತುಉಡುಪಿ ಜಿಲ್ಲೆಕಾರ್ಯ ವ್ಯಾಪ್ತಿಯನ್ನು ಹೊಂದಿದೆ. ಸಂಘದ ಪುಂಜಾಲಕಟ್ಟೆ, ಮುಡಿಪು ಮತ್ತು ಉಪ್ಪಿನಂಗಡಿ ಶಾಖೆಯು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ ಎಂದು ತಿಳಿಸಿದ್ದಾರೆ. ಆರ್ಥಿಕ ವರ್ಷ2023-24 ಅಂತ್ಯಕ್ಕೆ ಸಂಘದಲ್ಲಿ 8660 ಎ ತರಗತಿ, 5097ಬಿ ತರಗತಿ ಸದಸ್ಯರಿದ್ದು ರೂ. 7.87ಕೋಟಿ ಪಾಲು ಬಂಡವಾಳ ಹೊಂದಿರುತ್ತದೆ. 15.68ಕೋಟಿರೂ. ನಿಧಿಗಳು, 59.77 ಕೋಟಿ ರೂ.…

Read More

ಬಂಟ್ವಾಳ: ನರಿಕೊಂಬು ಗ್ರಾಮದ ನವಜೀವನ ವ್ಯಾಯಾಮ ಶಾಲೆ ವತಿಯಿಂದ ರೂ 1 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ಹನುಮಾನ್ ಮಂದಿರ ಲೋಕಾರ್ಪಣೆ ಮತ್ತು ಶ್ರೀ ಆಂಜನೇಯ ಬಿಂಬ ಪುನರ್ ಪ್ರತಿಷ್ಠೆ ಕಾರ್ಯಕ್ರಮ ಎ. 21ರಂದು ಬೆಳಿಗ್ಗೆ ಗಂಟೆ 10.14ರ ಶುಭ ಮುಹೂರ್ತದಲ್ಲಿ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರಘು ಸಪಲ್ಯ ಹೇಳಿದರು.ನರಿಕೊಂಬು ಗ್ರಾಮದ ನವಜೀವನ ವ್ಯಾಯಾಮ ಶಾಲೆ ಬಳಿ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಮಾರು 108 ವರ್ಷಗಳ ಹಿಂದೆ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಸಂಘಟನೆ ಮತ್ತು ಆರೋಗ್ಯವಂತ ಬಲಿಷ್ಟ ಯುವಕರನ್ನು ಸಜ್ಜುಗೊಳಿಸಲು ಸ್ಥಳೀಯರು ಗೋದ ಶಾಲೆ ಆರಂಭಿಸಿ ಬಳಿಕ ನವಜೀವನ ವ್ಯಾಯಾಮ ಶಾಲೆಯಾಗಿ ರೂಪುಗೊಂಡಿದೆ ಎಂದರು. ಕಳೆದ 6 ವರ್ಷಗಳ ಹಿಂದೆ ನೂತನ ವ್ಯಾಯಾಮ ಶಾಲೆ ಮತ್ತು ಧ್ಯಾನಮಂದಿರ ಸಹಿತ ಹನುಮಾನ್ ಮಂದಿರ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ದಾನಿಗಳ ನೆರವು ಮತ್ತು ಸ್ಥಳೀಯರ ಶ್ರಮದಾನದಿಂದ ಕಾಮಗಾರಿ ಪೂರ್ಣಗೊಂಡಿದೆ. ಕಳೆದ ೪೫ ವರ್ಷಗಳಿಂದ ಇದೇ ಸಭಾಂಗಣ ಬಳಿ…

Read More

ಬಂಟ್ವಾಳ: ಪೇಟೆಯಲ್ಲಿರುವ ಶ್ರೀ ಸೀತಾರಾಮ ದೇವಸ್ಥಾನದಲ್ಲಿ ಶ್ರೀ ದೇವರ ವರ್ಧಂತಿ ಹಾಗೂ ಶ್ರೀ ರಾಮನವಮಿ ರಥೋತ್ಸವ ಸಮಾರಂಭವು ಎ. 12ರಂದು ಆರಂಭಗೊಂಡಿದ್ದು ಎ. 18ರವರೆಗೆ ನಡೆಯಲಿದೆ.ಬುಧವಾರ ಶ್ರೀರಾಮನವಮಿಯ ಪ್ರಯುಕ್ತ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಬಳಿಕ ಸೀಯಾಳಾಭಿಷೇಕ ನಡೆಯಿತು. ಬಳಿಕ ಯಜ್ಞಾರಂಭಗೊಂಡು ಯಜ್ಞ ಪೂರ್ಣಾಹುತಿ ನಡೆಜu ಶ್ರೀ ದೇವರ ರಥಾರೋಹಣ, ಸಂತರ್ಪಣೆ ಜರುಗಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ರಾತ್ರಿ ರಥೋತ್ಸವ, ವಸಂತ ಪೂಜೆ, ಅಷ್ಟಾವಧಾನ, ಪ್ರಸಾದ ವಿತರಣೆ ನಡೆಯಿತು.

Read More

ಬಂಟ್ವಾಳ : ಬಿ.ಸಿ ರೋಡಿನ ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜು ಸಿ.ಇ.ಟಿ ಪರೀಕ್ಷಾ ಕೇಂದ್ರವಾಗಿ ಆಯ್ಕೆಯಾಗಿದ್ದು ನಾಳೆಯಿಂದ ಸಿ.ಇ.ಟಿ ಪರೀಕ್ಷೆ ಆರಂಭವಾಗಲಿದೆ.ಗುರುವಾರದಂದು ಜೀವಶಾಸ್ತ್ರ ಮತ್ತು ಗಣಿತ ಹಾಗೂ ಶುಕ್ರವಾರದಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ.ಬಿ.ಮೂಡ ಪರೀಕ್ಷಾ ಕೇಂದ್ರದಲ್ಲಿ 240 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು ಕಾಲೇಜಿನ ಸಿ ಇ ಟಿ ಸಂಕೇತ ಸಂಖ್ಯೆ 750 ಆಗಿದೆ ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಾದ ಯೂಸುಫ್ ವಿಟ್ಲ ಮಾಹಿತಿ ನೀಡಿರುತ್ತಾರೆ.

Read More

ಬಂಟ್ವಾಳ: ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಬಂಟ್ವಾಳ ತಾಲೂಕು ಘಟಕ ಆಯೋಜಿಸಿರುವ “ಪತ್ತನಾಜೆ” ಕಾರ್ಯಕ್ರಮದ ಮನವಿ ಪತ್ರ ಬಿಡುಗಡೆ ಬ್ರಹ್ಮರಕೂಟ್ಲು ಭಜನಾಮಂದಿರದಲ್ಲಿ ನಡೆಯಿತು. ಗೌರವ ಸಲಹೆಗಾರ ಅನಿಲ್ ಪಂಡಿತ್ ಮನವಿ ಪತ್ರವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ತಾಲೂಕು ಘಟಕದ ಅಧ್ಯಕ್ಷೆ ಪ್ರಮೀಳ ಮಾಣೂರು( ಸಾಯಿಪ್ರಿಯ) ಮಾತನಾಡಿ ಮೇ.19ರಂದು ಬಿ.ಸಿ.ರೋಡಿನ ಲಯನ್ಸ್ ಮಂದಿರದಲ್ಲಿ ಪತ್ತನಾಜೆ ಎಂಬ ವಿಶೇಷ ಜಾನಪದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಆಹಾರ ಮೇಳ, ಕಲಾಮೇಳ, ವಸ್ತುಪ್ರದರ್ಶನ, ಸಾಧಕರಿಗೆ ಸನ್ಮಾನ, ಕ್ರೀಡಾಕೂಟ, ಪತ್ತನಾಜೆಯ ಬಗ್ಗೆ ಮಾಹಿತಿ ಇತ್ಯಾದಿಗಳನ್ನು ಅಳವಡಿಸಲಾಗಿದೆ. ಕಾರ್ಯಕ್ರಮದ ಯಶಸ್ವಿಗೆ ಸರ್ವರೂ ಸಹಕರಿಸುವಂತೆ ವಿನಂತಿಸಿದರು ಗೌರವ ಸಲಹೆಗಾರರಾದ ಸದಾಶಿವ ಡಿ. ತುಂಬೆ, ಗೋಪಾಲ ಅಂಚನ್, ಉಪಾಧ್ಯಕ್ಷೆ ಪ್ರತಿಭಾ ಪಿ.ಶೆಟ್ಟಿ, ಸಂಚಾಲಕರಾದ ಮನೋಜ್ ಕನಪಾಡಿ, ಪ್ರಶಾಂತ್ ಕನಪಾಡಿ, ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ಕಡೆಗೋಳಿ, ಪ್ರಮುಖರಾದ ಅಕ್ಬರ್ ಅಲಿ, ಜಲಜಾಕ್ಷಿ, ಯೋಗೀಶ್ ದರಿಬಾಗಿಲು, ಶ್ರೀಕಾಂತ್, ಬೇಬಿ ತನ್ವಿ ಉಪಸ್ಥಿತರಿದ್ದರು.

Read More

ಬಂಟ್ವಾಳ :ಮೊಡಂಕಾಪಿನಲ್ಲಿರುವ ಇನ್ಫೆಂಟ್‌ ಜೀಸಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ದಿನ ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205 ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಳಸಲಾಗುವ ಮತಯಂತ್ರಗಳ ಕಮಿಷನಿಂಗ್‌ ಕಾರ್ಯವು ನಡೆಯಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ರವರು ಕಮಿಷನಿಂಗ್‌ ಕಾರ್ಯ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದರು. ಪೂರ್ವಾಹ್ನ 6.00 ಗಂಟೆಯಿಂದಲೇ ಕರ್ತವ್ಯ ನಿರತರಾಗಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತಾವೇ ಸ್ವತಃ ಮಧ್ಯಾಹ್ನದ ಊಟವನ್ನು ಬಡಿಸಿ, ಪ್ರಶಂಸೆ ವ್ಯಕ್ತಪಡಿಸಿದರು. 205-ಬಂಟ್ವಾಳದ ಸಹಾಯಕ ಚುನಾವಣಾಧಿಕಾರಿ ಡಾ. ಉದಯ ಶೆಟ್ಟಿ, ಚುನಾವಣಾನೋಡಲ್ ಅಧಿಕಾರಿ ರಾಜು ಮೋಗವೀರ,ತಹಶೀಲ್ದಾರ್‌ ಅರ್ಚನಾ ಭಟ್‌,ಸೆಕ್ಟರ್ ಅಧಿಕಾರಿಗಳುಚುನಾವಣಾ ಉಪತಹಶೀಲ್ದಾರ್‌ನವೀನ್‌ ಕುಮಾರ್‌ ಬೆಂಜನಪದವು, ಉಪತಹಸೀಲ್ದಾರ್ ದಿವಾಕರ ಮುಗಳಿಯ,ವಿಷಯ ನಿರ್ವಾಹಕ ಮಂಜುನಾಥ ಕೆ ಹೆಚ್‌, ಕಂದಾಯ ನಿರೀಕ್ಷಕರು, ತಾಲೂಕು ಕಚೇರಿ ಸಿಬ್ಬಂದಿ ವರ್ಗ,ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮಸಹಾಯಕರು, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ಬಂಟ್ವಾಳ: ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಇದರ ವತಿಯಿಂದ, ಸುನ್ನೀ ಮಹಲ್ ಎಜುಕೇಶನ್ ಸೆಂಟರ್ ಕಯ್ಯೂರು, ಮಂಚಿ ಇದರ ದಶಮಾನೋತ್ಸವದ ಪ್ರಯುಕ್ತ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ, ಅವರ ಸಹಾಯಕರಿಗೆ ಮತ್ತು ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೆ ಈದ್ ಉಲ್ ಫಿತ್ರ್ ಹಬ್ಬದ ಪ್ರಯುಕ್ತ ಬುಧವಾರ ಈದ್ ಆಹಾರ ವಿತರಣೆ ಕಾರ್ಯಕ್ರಮ ನಡೆಯಿತು.ಸುನ್ನೀ ಮಹಲ್ ಎಜುಕೇಶನ್ ಸೆಂಟರ್‌ನ ಸಂಸ್ಥಾಪಕ ಸಿ.ಎಂ. ಅಬೂಬಕ್ಕರ್ ಲತೀಫಿ ರೋಗಿಗಳಿಗೆ ಈದ್ ಆಹಾರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಲ್ಲದೆ ದುವಾ ಪ್ರಾರ್ಥನೆ ನೆರವೇರಿಸಿ ಎಲ್ಲಾ ರೋಗಿಗಳು ರೋಗ ಮುಕ್ತರಾಗುವಂತೆ ಪ್ರಾರ್ಥಿಸಿದರು.ಅಕ್ಷಯ ಚಾರಿಟೇಬಲ್ ಟ್ರಸ್ಟ್‌ನ ಸಂಚಾಲಕ ಇಬ್ರಾಹಿಂ ಕರೀಂ ಮಾತನಾಡಿ ಅಕ್ಷಯ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಪ್ರತೀ ವರ್ಷ ಈದ್ ಪುಡ್ ವಿತರಿಸುವ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಕಳೆದ ಮೂರು ವರ್ಷಗಳಿಂದ ಟ್ರಸ್ಟ್ ಮೂಲಕ ರಕ್ತದಾನ ಶಿಬಿರ, ವೈದ್ಯಕೀಯ ಶಿಬಿರ, ಹಾಗೂ ಅಸಹಯಕರಿಗೆ ನೆರವಾಗುವ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದ್ದು ಈ ದೇಶದಲ್ಲಿ ಶಾಂತಿ ಸಹಬಾಳ್ವೆ, ಸೌಹಾರ್ಧತೆಯನ್ನು…

Read More

ಬಂಟ್ವಾಳ: ಜಿಲ್ಲೆಯ ಕಾರಣಿಕ ಪ್ರಸಿದ್ಧ ದೈವಸ್ಥಾನ ಸಜೀಪಮೂಡ ಗ್ರಾಮದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಸಜೀಪ ಮಾಗಣೆಯ ಮಿತ್ತಮಜಲು ಕ್ಷೇತ್ರದ ವಾರ್ಷಿಕ ವಿಸು ಜಾತ್ರೆಯ ಪ್ರಯುಕ್ತ ಎಪ್ರಿಲ್ 12, 14, 16 ರಂದು ಆಗೇಲು ಸೇವೆ ಇರುವುದಿಲ್ಲ. ಎ.19 ರಿಂದ ಅಗೇಲು ಸೇವೆ ನಡೆಯುತ್ತದೆ ಹಾಗೂ ಎ.21ರಂದು ಆಗೇಲು ಸೇವೆ ಇರುವುದಿಲ್ಲ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.

Read More

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ರಿಕ್ಷಾವೊಂದು ರಸ್ತೆ ಪಕ್ಕ ಇಳಿಜಾರಿನಲ್ಲಿ ಜಾರಿಬಿದ್ದ ಘಟನೆ ಸಜೀಪಮೂಡ ಗ್ರಾಮದ ಪೆಲತ್ತಕಟ್ಟೆಯಲ್ಲಿ ನಡೆದಿದೆ. ಗುಜುರಿ ಸಾಗಾಟದ ವಾಹನ ಇದಾಗಿದ್ದು ಇಳಿಜಾರಿನಲ್ಲಿದ್ದ ಮರಕ್ಕೆ ಡಿಕ್ಕಿಯಾಗಿ ನಿಂತಿದೆ. ಘಟನೆಯಲ್ಲಿ ಚಾಲಕನಿಗೆ ಗಾಯವಾಗಿದೆ. ಟೆಂಪೋ ರಿಕ್ಷಾದ ಮುಂಭಾಗ ನುಜ್ಜುಗುಜ್ಜಾಗಿದೆ.

Read More

ರಾಯಿ ಬಳಿ ಬೆಂಕಿಗೆ ಸುಟ್ಟು ಕರಕಲಾದ ಕಾರು ಬಂಟ್ವಾಳ: ಚಲಿಸುತ್ತಿದ್ದ ಕಾರೊಂದು ಆಕಸ್ಮಿಕವಾಗಿ ಬೆಂಕಿ ಹೊತ್ತಿ ಉರಿದ ಘಟನೆ ರಾಯಿ- ಕುದ್ಕೊಳಿಯ ಮಧ್ಯೆ ನಡೆದಿದ್ದು ಡಸ್ಟರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಅಪಾಯದಿಂದ ಪಾರಾಗಿದ್ದಾರೆ.‌ ಬೆಂಕಿಯ ಕೆನ್ನಲಿಗೆಗೆ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ. ರಾಯಿ ಬ ಳಿ ಬೆಂಕಿಗೆ ಸುಟ್ಟು ಕರಕಲಾದ ಕಾರು

Read More