Author: admin

ಬಂಟ್ವಾಳ: ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಸಂಭ್ರಮದಲ್ಲಿರುವ ಶ್ರೀ ನಂದಾವರ ದೇವಸ್ಥಾನಕ್ಕೆ ದೇವಾಡಿಗ ಸಮಾಜ ಶ್ರೀ ನಂದಾವರ ದೇವಸ್ಥಾನ ರಥ ಸಮರ್ಪಣಾ ಸಮಿತಿ ನೂತನ ರಥವನ್ನು ಸಮರ್ಪಿಸಿದ್ದು ಶುಕ್ರವಾರ ರಾತ್ರಿ ಮೊದಲ ರಥೋತ್ಸವ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ರಥೋತ್ಸವ ಕಣ್ತುಂಬಿಕೊಂಡರು. https://youtu.be/2ogTs77uY-s ದೇವಾಡಿಗ ಸಮಾಜದಿಂದ ನಂದಾವರ ಕ್ಷೇತ್ರಕ್ಕೆ ಅರ್ಪಣೆಯಾದ ನೂತನ ರಥದಲ್ಲಿ ಮೊದಲ ರಥೋತ್ಸವ ಹೇಗಿತ್ತು? ಲಿಂಕ್ಕ್ಲಕ್ ಮಾಡಿ ಬಾನಂಗಳದಲ್ಲಿ ಬಣ್ಣ ಬಣ್ಣ ಚಿತ್ತಾರದ ಸುಡುಮದ್ದು ಪ್ರದರ್ಶನ ರಥೋತ್ಸವಕ್ಕೆ ವಿಶೇಷ ಮೆರುಗು ನೀಡಿತು. ಫೆ. 5 ರಿಂದ ಕ್ಷೇತ್ರದ ವರ್ಷಾವಧಿ ಜಾತ್ರಾಮಹೋತ್ಸವ ನಡೆಯಲಿದ್ದು ಫೆ. 8 ರಂದು ಶ್ರೀ ದೇವರಿಗೆ ಮತ್ತೊಮ್ಮೆ ಮಹಾರಥೋತ್ಸವ ನಡೆಯಲಿದೆ.

Read More

ಬಂಟ್ವಾಳ: ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿ ಶ್ರೀವಿಷ್ಣುಮೂರ್ತಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಹಾಗೂ ವರ್ಷಾವಧಿ ಜಾತ್ರೆಯು ವಿವಿಧ ವೈದಿಕ,ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಫೆ.6ರಿಂದ ಫೆ.8ರವರೆಗೆ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ರಾಮಕೃಷ್ಣ ಎಸ್.ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.ಫೆ.6 ರಂದು ಬೆಳಗ್ಗೆ ತೋರಣ ಮುಹೂರ್ತ, ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ಪಡು ಸವಾರಿ, ಕಟ್ಟೆ ಪೂಜೆ, ನಾಟ್ಯ ವೈಭವ, ಯಕ್ಷಗಾನ ಶಿವ ಪಂಚಾಕ್ಷರಿ ಮಹಿಮೆ ಪ್ರದರ್ಶನ ನಡೆಯಲಿದೆ.ಫೆ.7ರಂದು ದರ್ಶನೋತ್ಸವ, ಸಂಜೆ ಮೂಡು ಸವಾರಿ, ದೇವರ ಉತ್ಸವ, ಪರಿಮಳ ಕಾಲೊನಿ ತುಳು ನಾಟಕ ಪ್ರದರ್ಶನವಿದೆ. ಫೆ.8 ರಂದು ದಿವ್ಯ ದರ್ಶನ, ತುಲಾಭಾರ ಸೇವೆ, ರಾತ್ರಿ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಉದ್ಯಮಿ ಯಾದವ ಕೋಟ್ಯಾನ್ ಪೆರ್ಮುದೆ ಅವರಿಗೆ ವಿಷ್ಣುಪ್ರಸಾದ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಬಳಿಕ ದೈವ-ದೇವರು ಭೇಟಿ, ಗಗ್ಗರ ಸೇವೆ, ಮಹಿಳಾ ಮಂಡಳಿ ಸದಸ್ಯೆಯರಿಂದ ತುಳು ನಾಟಕ ಒರ‍್ಯೊರಿ ಒಂಜೊಂಜಿ ತರ ಪ್ರದರ್ಶನವಿದೆ.ಫೆ.9ರಂದು ಸಂಪ್ರೋಕ್ಷಣೆ,…

Read More

ಬಂಟ್ವಾಳ: ಸನಾತನ ಹಿಂದೂ ಧರ್ಮಕ್ಕೆ ದೇವಸ್ಥಾನ, ಮಠ, ಭಜನಾಮಂದಿರ, ಗೋಶಾಲೆಗಳು ರಕ್ಷಣೆಯ ಕೋಟೆಗಳು. ಇವು ಭದ್ರವಾಗಿದ್ದರೆ ನಮ್ಮ ಧರ್ಮವು ಭದ್ರವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಶ್ರದ್ಧಾಕೇಂದ್ರಗಳ ಬಗ್ಗೆ ಜನರಲ್ಲಿ ಆಸ್ಥೆ ಬರುತ್ತಿರುವುದು ಸುದೈವ ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಭಿನಂದನಾ ಸಭೆಯಲ್ಲಿ ಆಶೀರ್ವಚನ ನೀಡಿದರು.ಧರ್ಮ ಎಂಬುದು ದೇವಸ್ಥಾನ, ಮಠ, ಮಂದಿರಗಳಿಗಷ್ಟೇ ಸೀಮಿತವಾಗಿರಬಾರದು, ಮನೆಯೊಳಗೂ ಆಚರಣೆಯಾಗಬೇಕು. ದೇವರ ಪ್ರಸಾದದ ಜೊತೆಗೆ ಧರ್ಮವನ್ನು ಮನೆಗೆ ಕೊಂಡು ಹೋಗಿ ಮನೆ ಧರ್ಮಸ್ಥಾನವಾಗಬೇಕು ಎಂದರು. ಇಲ್ಲಿ ಶಂಕರ- ನಾರಾಯಣರು ಒಂದೇ ಬಿಂಬದಲ್ಲಿರುವಾಗ ನಾವ್ಯಾಕೇ ಒಂದೇ ಆಗಬಾರದು ಎಂದ ಶ್ರೀಗಳು ಬ್ರಹ್ಮಕಲಶ ಮೂಲಕ ನಾವು ಒಗ್ಗಟ್ಟಿನ ಪಾಠ ಕಲಿತು ನಮ್ಮ ಸಂಸ್ಕೃತಿ, ನಮ್ಮ ಧರ್ಮ ರಕ್ಷಣೆಯ ಕಾರ್ಯ ಮಾಡೋಣ ಎಂದರು.ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ಜಗತ್ತು ವಿನಾಶದ ಕಡೆಗೆ ಹೋಗದಂತೆ ಬದುಕು ಹಸನಾಗಲು ಹಿಂದು…

Read More

ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಶುಕ್ರವಾರ ಬೆಳಿಗ್ಗೆ 9.18 ರ ಮೀನ ಲಗ್ನ ಸುಮುಹೂರ್ತದಲ್ಲಿ ನಡೆಯಿತು.ಬೆಳಿಗ್ಗೆ ಗಣಪತಿ ಹೋಮ ನಡೆದು ಶ್ರೀ ವಿನಾಯಕ, ಶ್ರೀ ಶಂಕರನಾರಾಯಣ, ಶ್ರೀ ದುರ್ಗಾಂಬಾ ಸಾನಿಧ್ಯದಲ್ಲಿ ಅಷ್ಟಬಂಧ ಲೇಪನ ನಡೆದು ಶಿಖರ ಪ್ರತಿಷ್ಠೆ, ಪರಿಕಲಶಾಭಿಷೇಕ ಹಾಗೂ ಬ್ರಹ್ಮಕಲಶಾಭಿಷೇಕ ನಡೆಯಿತು. https://youtu.be/QCR1acW5BN4 ಮಧ್ಯಾಹ್ನ ರಥಕ್ಕೆ ಕಲಶಾಭಿಷೇಕ, ಮಹಾಪೂಜೆ, ಪಲ್ಲಪೂಜೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಶಾಸಕ ರಾಜೇಶ್ ನಾಯ್ಜ್, ಅಧ್ಯಕ್ಷ ಸಂತೋಷ್ ಶೆಟ್ಟಿ ದಲಂದಿಲ, ಕಾರ್ಯಧ್ಯಕ್ಷ ಕೆ. ವಿಶ್ವನಾಥ ಆಳ್ವ ಕಾಂತಾಡಿಗುತ್ತು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿರಾಜ ರಾವ್ ನೂಯಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅರವಿಂದ ಭಟ್,ಕಾರ್ಯನಿರ್ವಾಹಣಾಧಿಕಾರಿ ಜಯಮ್ಮ ಪಿ., ಉದ್ಯಮಿ ವಿನಯ್ ಸಿಂಗ್, ಪ್ರಧಾನ ಅರ್ಚಕ ಮಹೇಶ್ ಭಟ್, ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಮಾಜಿ ಶಾಸಕ ರುಕ್ಮಯ ಪೂಜಾರಿ, ವ್ಯವಸ್ಥಾಪನ ಸಮಿತಿ…

Read More

ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಅಪರಿಚಿತ ಶವ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ. ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕ ಮಧ್ಯ ವಯಸ್ಸಿನ ಗಂಡಸಿನ ಮೃತದೇಹ ಕಂಡು ಬಂದಿದ್ದು, ಕಪ್ಪು ಮೈ ಬಣ್ಣ, ಪಂಚೆ ತೊಟ್ಟ ಸ್ಥಿತಿಯಲ್ಲಿ ರಸ್ತೆ ಬದಿ ಶವ ಬಿದ್ದುಕೊಂಡಿದೆ. ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…

Read More

ಬಂಟ್ವಾಳ: ಕೆಲಿಂಜದ ಕಲ್ಮಲೆಯ ರಕ್ಷಿತಾ ಅರಣ್ಯದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿ ಅರಣ್ಯದಲ್ಲಿ ವ್ಯಾಪಿಸಿ ಕೆಲ ಹೊತ್ತು ಆತಂಕದ ಸ್ಥಿತಿ ನಿರ್ಮಾಣಗೊಂಡಿತು. ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ… https://youtu.be/zUevT-AtlOY ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಸಾದ್ ಶೆಟ್ಟಿ, ಸಂದೀಪ್, ಅರಣ್ಯ ಇಲಾಖೆಯ ಉಪ ವಲಯ ಅರಣ್ಯಧಿಕಾರಿಗಳಾದ ಪ್ರೀತಮ್ ಎಸ್ ಮತ್ತು ರಂಜಿತಾ. ಗಸ್ತು ಅರಣ್ಯ ಪಾಲಕರದ ದಯಾನಂದ ಎನ್. ಶೋಭಿತ್, ಅನಿತಾ, ಹಾಗೂ ಕಲ್ಮಲೆ ಗ್ರಾಮಸ್ಥರು ಬೆಂಕಿ ನಂದಿಸಲು ಸಹಕರಿಸಿದರು.

Read More

ಬಂಟ್ವಾಳ: ಬಂಟ್ವಾಳದ ಬಿ.ಸಿ.ರೋಡ್ ಬೈಪಾಸ್ ನಲ್ಲಿರುವ ಆರಾಧನಾ ಫ್ರೆಂಡ್ಸ್ ಸರ್ಕಲ್ ವತಿಯಿಂದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸನ್ಮಾನ ಸಮಾರಂಭ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು. ಈ ಸಂದರ್ಭ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ವತಿಯಿಂದ ದಮಯಂತಿ ಪುನಃ ಸ್ವಯಂವರ ಗದಾಯುದ್ಧ ರಕ್ತರಾತ್ರಿ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಿತು. ನಿವೃತ್ತ ಕನ್ನಡ ಶಿಕ್ಷಕ ಕೆ.ಗೋವಿಂದ ಭಟ್ ಅವರಿಗೆ ಆರಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದೇ ವೇಳೆ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ಸ್ಥಳೀಯ ಭಂಡಾರಿಬೆಟ್ಟು ನಿವಾಸಿ ಚಿರಂತನ್ ಹೊಳ್ಳ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಾಜಿ ಸಚಿವ ಬಿ.ರಮಾನಾಥ ರೈ ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು. ಈ ಸಂದರ್ಭ, ಸಮಿತಿಯ ಗಣಪತಿ ಸೋಮಯಾಜಿ, ಅಶೋಕ್ ಕುಮಾರ್, ನರೇಶ್ ಹೊಳ್ಳ, ಸುರೇಶ್ ಹೊಳ್ಳ, ಗಣೇಶ್ ಪೂಂಜರಕೋಡಿ, ರಾಮಚಂದ್ರ ಮಯ್ಯ, ಸಂಜೀವ ಕೊಟ್ಟಾರಿ, ಪ್ರಕಾಶ್ ಪೂಂಜರಕೋಡಿ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಪರಮೇಶ್ವರ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

Read More

ಬಂಟ್ವಾಳ: ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ಸಜೀಪ ಮೂಡ ಇಲ್ಲಿನ ಶ್ರೀ ಮಹಾಶಿವರಾತ್ರಿ ಪೂಜಾ ಮಹೋತ್ಸವ ಹಾಗೂವಾರ್ಷಿಕ ಜಾತ್ರಾ ಮಹೋತ್ಸವ ಆಮಂತ್ರಣ ಪತ್ರವನ್ನು ಬ್ರಹ್ಮಶ್ರೀ ನೀಲೇಶ್ವರ ಕೆ.ಯು. ಪದ್ಮನಾಭ ತಂತ್ರಿಗಳು ಬುಧವಾರದಂದು ಶ್ರೀ ಕ್ಷೇತ್ರ ನಂದಾವರ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಿದರು ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ಜಯ ಶಂಕರ ಬಾಸ್ರಿತ್ತಾಯ. ಮುಳ್ಳಂಜ ವೆಂಕಟೇಶ್ವರ ಭಟ್. ದೇವಿಪ್ರಸಾದ್ ಪೂಂಜ, ಪ್ರಮುಖರಾದ ವೇದಮೂರ್ತಿ ಮಹೇಶ್ ಭಟ್, ಸಂತೋಷಕುಮಾರ್ ಜಿ ಶೆಟ್ಟಿ ದಲಂದಿಲ, ಶ್ವೇತ ಎಸ್ .ಶೆಟ್ಟಿ, ರವೀಂದ್ರನಾಥ ಭಂಡಾರಿ ಪುಣ್ಕೆ ಮಜಲು. ಎಸ್. ಶ್ರೀಕಾಂತ್ ಶೆಟ್ಟಿ. ರಾಮ್ ಪ್ರಸಾದ್ ಪೂಂಜ ಬರಂಗರೆ, ಕೆ ಸಂಜೀವ ಪೂಜಾರಿ, ಯಶವಂತ ದೇರಾಜೆ ಗುತ್ತು, ಜಯಪ್ರಕಾಶ್, ಬಾಲಕೃಷ್ಣ, ರಾಕೇಶ್ ಶೆಟ್ಟಿ, ಸುರೇಶ್ ಬಂಗೇರ, ವಸಂತ ಪೆರಾಜೆ ಮೊದಲಾದವರು ಉಪಸ್ಥಿತರಿದ್ದರು

Read More

ಬಂಟ್ವಾಳ: ಕರೋನಾ ಮಹಾಮಾರಿಯಿಂದಾಗಿ ಮಕ್ಕಳ ಕಲಿಕೆಯಲ್ಲಿ ಉಂಟಾದ ಅಡೆತಡೆಗಳಿಗೆ ಪರಿಹಾರವಾಗಿ ಜಾರಿಗೊಳಿಸಿದ ಕಲಿಕಾ ಚೇತರಿಕೆಗೆ ಪೂರಕವಾಗಿ ರಾಜ್ಯಾದ್ಯಂತ ಕಲಿಕಾ ಹಬ್ಬವನ್ನು ಜಾರಿಗೊಳಿಸಲಾಗಿದೆ ಎಂದು ಸಮಗ್ರ ಶಿಕ್ಷಣ ಕರ್ನಾಟಕ ದ ದಕ್ಷಿಣ ಕನ್ನಡ ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಮಂಜುಳಾ ಹೇಳಿದರು. ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಮಗ್ರ ಶಿಕ್ಷಣ ಕರ್ನಾಟಕ -ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ,ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ಸಮೂಹ ಸಂಪನ್ಮೂಲ ಕೇಂದ್ರ ಬಾಳ್ತಿಲ ಇವುಗಳ ಆಶ್ರಯದಲ್ಲಿ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಇಲ್ಲಿ ನಡೆದ ಬಾಳ್ತಿಲ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.ಕಾರ್ಯಕ್ರಮದಲ್ಲಿಮುಖ್ಯ ಅತಿಥಿಗಳಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ರವರು ಮಕ್ಕಳು ಆಸಕ್ತಿಯಿಂದ ಸ್ವ ಪ್ರೇರಣೆಯಿಂದ ಕಲಿಕೆಯಲ್ಲಿ ತೊಡಗಲು ಕಲಿಕಾ ಹಬ್ಬ ಹಮ್ಮಿಕೊಳ್ಳಲಾಗಿದೆ ಎಂದರು. ಕಾರ್ಯಕ್ರಮದ ಅಂಗವಾಗಿ ನಡೆದ ಮೆರಣಿಗೆಗೆ ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಹಿರಣ್ಮಯಿ ಮತ್ತು ನರಿಕೊಂಬು ಪಂಚಾಯತ್ ಸದಸ್ಯ ಸಂತೋಷ್ ಚಾಲನೆ ನೀಡಿ ಶುಭ ಹಾರೈಸಿದರು.…

Read More

ಬಂಟ್ವಾಳ: ಬಿ.ಸಿ.ರೋಡ್ ನ ಹೃದಯಭಾಗದಲ್ಲಿರುವ ಪ್ರಿಯಾ ಎಲೆಕ್ಟ್ರಾನಿಕ್ಸ್ ಫರ್ನೀಚರ್ಸ್ ಮತ್ತು ಕೊಮಾಕಿ ಎಲೆಕ್ಟ್ರಿಕ್ ವೈಕಲ್ ಡಿವಿಜನ್ ನ ಮಳಿಗೆಯ ಮಾಳಿಗೆಯಲ್ಲಿ ಗುರುವಾರ ಬೆಳಗ್ಗೆ ದಟ್ಟವಾದ ಹೊಗೆಯೊಂದಿಗೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕದಳ ಬೆಂಕಿಯನ್ನು ನಂದಿಸುವಲ್ಲಿ ಹರಸಾಹಸ ಮಾಡುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳು ಇರುವ ಜಾಗದಲ್ಲಿ ಬೆಂಕಿ ದಟ್ಟವಾಗಿದ್ದು, ವ್ಯಾಪಕವಾಗಿ ಹರಡುತ್ತಿರುವುದು ಕಂಡುಬಂದಿದ್ದು, ಸ್ಥಳದಲ್ಲಿ ಹಲವಾರು ಜನ ಜಮಾವಣೆಗೊಂಡಿದ್ದು, ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. https://youtu.be/oaM6nhN5g7U ಎಲೆಕ್ಟ್ರಾನಿಕ್ಸ್ ಜೊತೆಗೆ ಕೊಮಾಕಿ ಕಂಪೆನಿಗೆ ಸೇರಿದ ದ್ವಿಚಕ್ರವಾಹನಗಳ ದಾಸ್ತಾನು ಇರಿಸಲಾಗಿರುವ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸಂಶಯಿಸಲಾಗಿದೆ. ಕೊಮಾಕಿ ಕಂಪೆನಿಯ ಬ್ಯಾಟರಿ ಚಾಲಿತ ಸ್ಕೂಟರ್ ಗಳು ಇಲ್ಲಿದ್ದು, ಇದರ ಬ್ಯಾಟರಿ ಸ್ಪೋಟಗೊಂಡು ಬೆಂಕಿ ಹಚ್ಚಿಕೊಂಡಿರಬಹುದು ಎನ್ನಲಾಗುತ್ತಿದೆ. ಸ್ಥಳೀಯ ವಿಜಯಲಕ್ಷ್ಮೀ ಸ್ಟೀಲ್ಸ್ ನ ರಾಘವೇಂದ್ರ ಸಹಿತ ಸಿಬ್ಬಂದಿ ವರ್ಗ, ಸ್ಥಳೀಯರೊಂದಿಗೆ ಸೇರಿಕೊಂಡು ಬೆಂಕಿ ನಂದಿಸುವಲ್ಲಿ ಸಹಕರಿಸುತ್ತಿದ್ದಾರೆ.

Read More