Author: admin
ಬಂಟ್ವಾಳ: ಸಾರ್ವಜನಿಕರಿಗೆ ಅತ್ಯಾವಶ್ಯಕವಾಗುವ ಕಂದಾಯ ಇಲಾಖೆಯ ಕೆಲಸ ಕಾರ್ಯಗಳು ತುಂಬಾ ವಿಳಂಬವಾಗುತ್ತಿದ್ದು, ಜನಸಾಮಾನ್ಯರು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಮೇಲೆ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದು, ನೊಂದವರು ಜಿಲ್ಲಾಡಳಿತ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ತಾ.ಪಂ. ಮಾಜಿ ಸದಸ್ಯ ಪ್ರಭಾರಕ ಪ್ರಭು ಆರೋಪಿಸಿದರು.ಅವರು ಶನಿವಾರ ಸಂಜೆ ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸಾರ್ವಜನಿಕರಕುಂದು ಕೊರತೆ ನಿವಾರಿಸುವಲ್ಲಿ ಕಂದಾಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಸರಕಾರಿ ಜಮೀನು ದಾರ್ಖಾಸು ಮಂಜೂರಾತಿದಾರರು ತಮ್ಮ ಜಮೀನಿನ ಪ್ಲೋಟಿಂಗ್ ಬಗ್ಗೆ 1-5 ಅರ್ಜಿ ಸಲ್ಲಿಸಿ ಹತ್ತು ವರ್ಷಗಳಾದರೂ ಸಹ ಇನ್ನೂ ಮುಕ್ಕಿ ಸಿಕ್ಕಿಲ್ಲ. ಅಂಕಿ ಅಂಶಗಳ ಪ್ರಕಾರ ಬಂಟ್ವಾಳ ತಾಲೂಕಿನಲ್ಲಿ 2013 ರಿಂದ 2023 ರವರೆಗೆ 1-5 ಪ್ಲೋಟಿಂಗ್ ಮಾಡುವ 371 ಪ್ರಕರಣಗಳು ಬಾಕಿ ಉಳಿದು ಗೆದ್ದಲು ತಿನ್ನುತ್ತಿದೆ. 2014ರಲ್ಲಿ ಸಲ್ಲಿಸಿದ 45 ಪ್ರಕರಣಗಳು ಬಾಕಿ ಇದೆ. ೨೦೧೫ ರಲ್ಲಿ ೫೯ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ಬಾಕಿ ಇವೆ. ಈ ಬಾಕಿ ಪ್ರಕರಣಗಳಿಗೆ ಬಂಟ್ವಾಳ ತಾಲೂಕಿನಲ್ಲಿ ಸೇವೆ ಸಲ್ಲಿಸಿದ ತಹಶೀಲ್ದಾರರು,…
ಬಂಟ್ವಾಳ: ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳುವ ಸಂಸ್ಕಾರ ನಮ್ಮದಾಗಬೇಕು,ಭಜನೆಯಿಂದ ಮನ ಮತ್ತು ಮನೆ ಎರಡೂ ಪರಿವರ್ತನೆ ಯಾಗುತ್ತದೆ. ಮನ ಪರಿವರ್ತನೆ ಯಾದಾಗ ವ್ಯಕ್ತಿ ಧೀಶಕ್ತಿ ಪಡೆಯುತ್ತಾನೆ ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಹೇಳಿದರು. ಅವರು ಶ್ರೀ ಮೂಕಾಂಬಿಕಾ ಕೃಪಾ ಭಜನಾ ಮಂದಿರ (ರಿ)ಬ್ರಹ್ಮರಕೂಟ್ಲು ಇಲ್ಲಿ ಶುಕ್ರವಾರ ನಡೆದ ೫೨ನೇ ಏಕಾಹ ಭಜನಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ದೇವರ ನಾಮಸ್ಮರಣೆಯಲ್ಲಿ ಶಕ್ತಿ ಇದೆ. ಅದರಿಂದ ನಮ್ಮ ಪಾಪ ಪರಿಹಾರ ವಾಗುತ್ತದೆ. ಪ್ರೀತಿ ಹಾಗೂ ಭಕ್ತಿಯನ್ನು ಜೀವನದಲ್ಲಿ ಮೈಗೂಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ. ಹೃದಯ ಕಮಲದಲ್ಲಿ ಶ್ರೀ ರಾಮನನ್ನು ಪ್ರತಿಷ್ಠಾಪಿಸಿ ಭಕ್ತಿಯ ರಸವನ್ನು ದೇವರಿಗೆ ಸಮರ್ಪಿಸಬೇಕು ಎಂದು ತಿಳಿಸಿದರು. . ಜವಳಿ ಉದ್ಯಮಿ ಎಂ.ಪಿ.ದಿನೇಶ್ ಮಾತನಾಡಿ ನಮ್ಮಲ್ಲಿ ಭಾವ ಭಕ್ತಿ ಇಲ್ಲದಿರುರುವುದರಿಂದ ನಮ್ಮ ಪುಣ್ಯ ಕ್ಷೇತ್ರಗಳ ಪ್ರಾಮುಖ್ಯತೆ ಗೊತ್ತಾಗುವುದಿಲ್ಲ. ಸನಾತನ ಧರ್ಮದ ಬಗ್ಗೆ ಹೆಚ್ಚೆಚ್ಚು ಅರ್ಥೈಸಿಕೊಂಡು ನಮ್ಮ ಧರ್ಮಕ್ಕೆ ಏನು ಕೊಡಲು ಸಾಧ್ಯ ಎನ್ನುವುದನ್ನು ತಿಳಿದು ಕೊಳ್ಳಬೇಕು.…
ಬಂಟ್ವಾಳ: ಭವತಿ ಬಿಕ್ಷಾಂ ದೇಹಿ ಬಡವರ ಬಂಧು ಸೇವಾ ತಂಡ ಕುಕ್ಕಿಪಾಡಿ ಇದರ ಪ್ರಥಮ ವಾರ್ಷಿಕೋತ್ಸವ ಹಾಗೂ 10ನೇ ಸೇವಾ ಯೋಜನೆಯ ಪ್ರಯುಕ್ತ ತುಳುನಾಡ ರಕ್ಷಣಾ ವೇದಿಕೆ (ರಿ.) ವಾಮದಪದವು ಘಟಕ, ಸೂಕ್ತ ನ್ಯೂಸ್, ಸಿದ್ದಕಟ್ಟೆ ಬಂಟ್ವಾಳ, ಟೀಮ್ ಒಳಿತು ಮಾಡು ಮನುಷ ಸೇವಾ ತಂಡ ಪುತ್ತೂರು, ತೆಲಿಕೆದ ಕಲಾವಿದೆರ್ ಕೊಯಿಲ ಇವರ ಸಂಯುಕ್ತ ಆಶ್ರಯದಲ್ಲಿ ಅನಾರೋಗ್ಯ ಪೀಡಿತರ ಚಿಕಿತ್ಸಾ ವೆಚ್ಚ, ಆಶ್ರಮವಾಸಿಗಳಿಗೆ ಅನ್ನದಾನ ಸಹಾಯಾರ್ಥವಾಗಿ ಬಡವರ ಬಂಧು ಸಹಾಯ ನಿಧಿ ಕಾರ್ಯಕ್ರಮ ಜನವರಿ 7ರ ಆದಿತ್ಯವಾರ ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ಮಾವಿನಕಟ್ಟೆ ಕೇಂದ್ರ ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಹಾಗೂ ಆಯ್ದ ಬಡ ಕುಟುಂಬಕ್ಕೆ ಅಕ್ಕಿ ವಿತರಣಾ ಕಾರ್ಯಕ್ರಮ ನಡೆಯಲಿದೆ. 10ನೇ ಸೇವಾ ಯೋಜನೆಯ ಫಲಾನುಭವಿಗಳ ಸಹಾಯಾರ್ಥವಾಗಿ ಟಿಕೆಟ್ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಬಂಟ್ವಾಳ: ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರ ಪುತ್ತೂರು ಅರ್ಪಿಸುವ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ನೃತ್ಯಧಾರ ಮತ್ತು ಕಲಾನಯನ ಪ್ರಶಸ್ತಿ ಪ್ರದಾನ ಸಮಾರಂಭ ಜ.7ರಂದು ಭಾನುವಾರ ಸಂಜೆ 4 ಗಂಟೆಗೆ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿದೆ. ಸಂಜೆ 6.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಇದರ ನಿರ್ದೇಶಕ ವಿದ್ವಾನ್ ಕೆ. ಚಂದ್ರಶೇಖರ ನಾವಡ ವಹಿಸುವರು. ಮುಖ್ಯ ಅತಿಥಿಗಳಾಗಿ ತುಳುವೆರೆ ಜನಪದ ಕೂಟ ಕೊಡಗು ಇದರ ಜಿಲ್ಲಾ ಖಜಾಂಚಿ ಪ್ರಭು ರೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಭಾಗವಹಿಸುವರು. ಖ್ಯಾತ ಚರ್ಮವಾದ್ಯ ತಯಾರಕ ಮತ್ತು ಕೊಳಲು ವಾದಕರಾಗಿರುವ ಪಿ. ರಾಜರತ್ನಂ ದೇವಾಡಿಗ ಅವರಿಗೆ ಕಲಾನಯನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಹಾಗೂ ಖ್ಯಾತ ವಸ್ತ್ರ ವಿನ್ಯಾಸಕಾರ ಮತ್ತು ಮುಖವರ್ಣಿಕೆ ಕಲಾವಿದ ಸುನೀಲ್ ಉಚ್ಚಿಲ ಅವರನ್ನು ಸನ್ಮಾನಿಸುವುದಾಗಿ ಸಂಚಾಲಕ ಉದಯ್ ವೆಂಕಟೇಶ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಜೆ…
ಬಂಟ್ವಾಳ: ಪ್ರಧಾನಿಯವರ ಕಲ್ಪನೆಯಾದ ಕ್ಷಯ ಮುಕ್ತ ಭಾರತ ನಿರ್ಮಣ ಮಾಡುವಲ್ಲಿ ಸೇವಾ ಸಂಸ್ಥೆಯಾಗಿರುವ ಸೇವಾಂಜಲಿಯ ಕಾರ್ಯ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಸಂಸದ ನಳಿನ್ ಕುಮಾರ್ ಹೇಳಿದರು.ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಕ್ಷಯ ರೋಗಿಗಳಿಗೆ ಆಹಾರಧಾನ್ಯದ ಕಿಟ್ ವಿತರಿಸಿ ಮಾತನಾಡಿದರು. ದೇಶದ ಸಾಮಾನ್ಯ ಜನರ ಆರೋಗ್ಯ ಕಾಳಜಿಯನ್ನು ವಹಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಆಯುಷ್ಮಾನ್ ಭಾರತ್, ಜನೌಷಧಿ ಕೇಂದ್ರ ಮೊದಲಾದ ಯೋಜನೆಗಳನ್ನು ಜಾರಿಗೊಳಿಸಿದ್ದು ಇಂದು ಅನೇಕ ಮಂದಿ ರೋಗಿಗಳ ಬಾಳಿಗೆ ಆಶಾಕಿರಣವಾಗಿದ್ದಾರೆ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ನಮ್ಮ ಆರೋಗ್ಯ ಸ್ಥಿರವಾಗಿರಬೇಕಾದರೆ ದುರಾಭ್ಯಾಸಗಳಿಂದ ದೂರ ಇರಬೇಕು. ದೇಹವೇ ದೇವಾಲಯ ಎನ್ನುವಂತೆದೇಹ ಸುಸ್ಥಿತಿಯಲ್ಲಿದ್ದಾಗ ಕಾಯಿಲೆಗಳು ನಮ್ಮನ್ನು ಭಾದಿಸುವುದಿಲ್ಲ. ಸೇವಾಂಜಲಿ ಸಂಸ್ಥೆ ನಿರಂತರವಾಗಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ಜನಸೇವೆ ಮಾಡುತ್ತಿರುವುದು ಅಭಿನಂದನೀಯ ಎಂದರು.ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿದರು.…
ಬಂಟ್ವಾಳ: ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ನ್ಯಾಯವಾದಿ ಸುರೇಶ್ ಕುಮಾರ್ ನಾವೂರು ಅವರನ್ನು ಸರಕಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ. ಬಿ.ಸಿ.ರೋಡಿನಲ್ಲಿ ನೋಟರಿ, ನ್ಯಾಯವಾದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಶ್ ಕುಮಾರ್ ನಾವೂರು ಅವರು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಕಟ್ಟಡ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಜೆಸಿಐ ಬಂಟ್ವಾಳದ ಪೂರ್ವಾಧ್ಯಕ್ಷರು, ರೋಟರಿ ಕ್ಲಬ್ ಬಂಟ್ವಾಳ ಟೌನ್, ವಕೀಲರ ಸಂಘ ಸಹಿತ ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಬಂಟ್ವಾಳ: ಸರಕಾರಿ ಜಾಗದಲ್ಲಿ ಅಕ್ರಮ ವಾಸ್ತವ್ಯ ಹೊಂದಿರುವವರಿಗೆ ೯೪ಸಿ ಅರ್ಜಿ ಸ್ವೀಕಾರಿಸಲು ಅಧಿಕಾರಿಗಳಿಗೆ ಆದೇಶ ನೀಡುವಂತೆ ಕಂದಾಯ ಸಚಿವರಿಗೆ ತಾ.ಪಂ. ಮಾಜಿ ಸದಸ್ಯ ಪ್ರಭಾಕರ ಪ್ರಭು ಪತ್ರ ಬರೆದಿದ್ದಾರೆ.ಕರಾವಳಿ ಸೇರಿದಂತೆ ದ.ಕ ಜಿಲ್ಲೆಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಸರಕಾರಿ ಭೂಮಿ ಹಾಗೂ ಕುಮ್ಕಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸ್ತವ್ಯ ಇರುವವರು ಹಕ್ಕು ಪತ್ರ ಪಡೆಯಲು ೯೪ಸಿ ಅಡಿಯಲ್ಲಿ ಅರ್ಜಿ ನೀಡಲು ಸಾಧ್ಯವಾಗದೇ ಕೆಲವು ಕುಟುಂಬಗಳು ಬಾಕಿ ಉಳಿದಿವೆ. ಇಂತಹ ಕುಟುಂಬಗಳಿಗೆ ಮನೆ ನಂಬರ್ ಇಲ್ಲದೆ ಸರಕಾರದ ವಿವಿಧ ಯೋಜನೆಗಳಿಗೆ ಅವಶ್ಯಕವಾಗಿ ಪಡೆಯುವ ಪಡಿತರ ಚೀಟಿ,ವಸತಿ ಯೋಜನೆ,ವಿವಿಧ ಪಿಂಚಣಿ ಸೇರಿದಂತೆ ಹಲವು ಯೋಜನೆಗಳಿಂದ ವಂಚಿತರಾಗಿದ್ದಾರೆ.ಆದುದರಿಂದ ಸರಕಾರಿ ಭೂಮಿ ಹಾಗೂ ಕುಮ್ಕಿ ಜಮೀನಿನಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡು ವಾಸ್ತವ್ಯ ಇರುವವರಿಗೆ ಹಕ್ಕು ಪತ್ರ ನೀಡುವಂತಾಗಲು ೯೪ಸಿ ಅಡಿಯಲ್ಲಿ ಅರ್ಜಿಗಳನ್ನು ಸ್ವೀಕರಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಸೂಕ್ತ ಆದೇಶ ಹೊರಡಿಸುವಂತೆ ಅವರು ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಬಂಟ್ವಾಳ :ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ರೂಡಿಸಿಕೊಂಡಲ್ಲಿ ಯಶಸ್ಸಿನ ಗುರಿ ತಲುಪಲು ಸಾಧ್ಯ, ಬಾಲ್ಯದಲ್ಲಿಯೇ ಸದ್ವಿಚಾರ ಹಾಗೂ ಸದ್ಗುಣಗಳನ್ನು ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಗುರುತಿಸಿ, ಎಂದು ಕೋಸ್ಟಲ್ ಬುಲೆಟಿನ್ ಸುದ್ದಿ ಮಾಧ್ಯಮದ ಪ್ರವರ್ತಕ ಸಂತೋಷ್ ಕುಲಾಲ್ ನೆತ್ತರಕೆರೆ ಹೇಳಿದರು. ಅವರು ತುಂಬೆ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹಳೇ ವಿದ್ಯಾರ್ಥಿಗಳ ನೆರವಿನೊಂದಿಗೆ ನಿರ್ಮಾಣವಾದ ಬಿಸಿಯೂಟ ಸೇವನೆಯ ಉಪಹಾರ ಗೃಹದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಬ್ದುಲ್ ಸಲಾಂ ಮಾತನಾಡಿ, ವಿದ್ಯಾರ್ಥಿಗಳು ಶಾಲೆಯಲ್ಲಿ ಸಿಗುವ ಸೌಲಭ್ಯ ಹಾಗೂ ಅವಕಾಶಗಳನ್ನು ಸದ್ಭಳಕೆ ಮಾಡಿ ಉತ್ತಮ ವಿದ್ಯಾರ್ಥಿಗಳಾಗಿ ಶಾಲೆಗೆ ಹಾಗೂ ಸಮಾಜಕ್ಕೆ ಹೆಸರು ತನ್ನಿ ಎಂದು ಹೇಳಿದರು. ನಿವೃತ್ತ ಮುಖ್ಯೋಪಾಧ್ಯಾಯ ಶ್ರೀನಿವಾಸ ಕೆದಿಲ ಶಾಲಾ ಆಡಳಿತ ಮಂಡಳಿ ಹಾಗೂ ಹಳೇ ವಿದ್ಯಾರ್ಥಿಗಳ ಸಹಕಾರದಿಂದ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಶುಭ ಹಾರೈಸಿದರು.ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನಿಸಾರ್ ಅಹಮದ್ ವಳವೂರು…
ಬಂಟ್ವಾಳ: ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ ಇದರ 28ನೇ ವಾರ್ಷಿಕ ಸಹಮಿಲನ ಕಾರ್ಯಕ್ರಮ ಹಾಗೂ ನೂತನವಾಗಿ ನಿರ್ಮಿಸಿದ ಡಾ. ಎನ್. ನರಸಿಂಹ ಹೊಳ್ಳ ಕಲಾ ವೇದಿಕೆಯ ಉದ್ಘಾಟನಾ ಸಮಾರಂಭ ನಡೆಯಿತು.ನಾಗರಿಕ ಕ್ರಿಯಾ ಸಮಿತಿ ಗೌರವಾಧ್ಯಕ್ಷ ಎನ್. ನರಸಿಂಹರಾಜ್ ಹೊಳ್ಳ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ಥಾಪಕಾಧ್ಯಕ್ಷ ಪ್ರೊ ಶಂಕರ್ ಭಟ್ ದೀಪ ಪ್ರಜ್ವಲಿಸಿ ಮಾತನಾಡಿಸ್ಥಾಪಕಾಧ್ಯಕ್ಷ ಪ್ರೊ ಶಂಕರ್ ಭಟ್ ದೀಪ ಪ್ರಜ್ವಲಿಸಿ ಮಾತನಾಡಿ ಯಾವುದೋ ಊರಿನವರು, ಯಾವುದೋ ಉದ್ಯೋಗದವರು ಈ ಪ್ರದೇಶದಲ್ಲಿ ವಾಸ್ತವ್ಯ ಹೂಡಿ ಈ ಪ್ರದೇಶ ಸಂಚಯಗಿರಿ ಯಾಯಿತು. ಒಂದು ಮುಖ್ಯ ರಸ್ತೆ ಇದ್ದ ಈ ಪ್ರದೇಶದಲ್ಲಿ ಇಂದು 4 ಮುಖ್ಯ ರಸ್ತೆ, ಉಪರಸ್ತೆಗಳು ನಿರ್ಮಾಣಗೊಂಡಿತು. ಸಂಚಯಗಿರಿಯಲ್ಲಿ ವಾಸಿಸಲು ಪುಣ್ಯ ಬೇಕು. ನಾವು ಅನಿವಾರ್ಯವಾಗಿ ಬೇರೆ ಊರಿಗೆ ಹೋದರು ನಮ್ಮ ಮೂಲ ಬೇರು ಇಲ್ಲೇ ಇದೆ ಎಂದ ಅವರು ನಾಗರಿಕ ಕ್ರಿಯಾ ಸಮಿತಿಯು ಔನತ್ಯಕ್ಕೆ ಬೆಳೆಯುತ್ತಿರಲಿ ಎಂದು ಶುಭ ಹಾರೈಸಿದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ…
ಬಂಟ್ವಾಳ: ನಾಟಕ ಕಲಾವಿದನೋರ್ವ ಮರಕ್ಕೆ ಬೈಕ್ ಡಿಕ್ಕಿಯಾಗಿ ಮೃತಪಟ್ಟ ಘಟನೆ ದೇವಸ್ಯ ಪಡೂರು ಗ್ರಾಮದ ಮರಾಯಿದೊಟ್ಟು ಕೊಡ್ಯಮಲೆ ಎಂಬಲ್ಲಿ ಇಂದು ಮುಂಜಾನೆ ನಡೆದಿದೆ.ಕೊಡ್ಯಮಲೆ ನಿವಾಸಿ ಗೌತಮ್ (27) ಮೃತಪಟ್ಟ ದುರ್ದೈವಿ. ನಾಟಕ ಕಲಾವಿದನಾಗಿರುವ ಈತ ಬೆಳುವಾಯಿಯಲ್ಲಿ ನಡೆದ ಕದಂಬ ನಾಟಕದಲ್ಲಿ ಭಾಗವಹಿಸಿ ಹಿಂತಿರುಗುವ ವೇಳೆ ಈ ದುರ್ಘಟನೆ ನಡೆದಿದೆ. ಸರಪಾಡಿ ನಿವಾಸಿ ಪ್ರವೀಣ್ ಕುಮಾರ್ ಎಂಬವರು ತನ್ನ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಯಾರೋ ವ್ಯಕ್ತಿ ಬೈಕ್ ಗೆ ಡಿಕ್ಕಿಯಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಹತ್ತಿರ ಹೋಗಿ ನೋಡಿದಾಗ ತನ್ನ ಪರಿಚಯದ ಗೌತಮ್ ಎಂಬುದು ಗೊತ್ತಾಗಿದೆ. ತಕ್ಷಣ ಅವರ ಮನೆಯವರಿಗೆ ವಿಷಯ ತಿಳಿಸಿ ಆಂಬ್ಯುಲೆನ್ಸ್ ಮೂಲಕ ಬಂಟ್ವಾಳದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರನ್ನು ಪರೀಕ್ಷಿಸಿದ ವೈದ್ಯರು ಮೃತ ಪಟ್ಟಿರಯವುದಾಗಿ ತಿಳಿಸಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








