ಬಂಟ್ವಾಳ: ವಿಶ್ವಕಪ್ ಕ್ರಿಕೆಟ್ ನಲ್ಲಿ ಸೆಮಿಫೈನಲ್ಸ್ ಅನ್ನು ಜಯಗಳಿಸಿ, ಭಾರತ ಫೈನಲ್ಸ್ ನತ್ತ ಮುನ್ನುಗ್ಗಿದ್ದು, ಈ ಸಂತಸದ ಕ್ಷಣದಲ್ಲಿ ಬಂಟ್ವಾಳದ ಬಸ್ತಿಪಡ್ಪುವಿನಲ್ಲಿರುವ ಭದ್ರಾ ಹೋಂ ಅಪ್ಲೈಯನ್ಸಸ್ ಗ್ರಾಹಕರಿಗೆ ‘ವಿಜಯೀಭವ’ ಹೆಸರಲ್ಲಿ ಭರ್ಜರಿ ಆಫರ್ ನೀಡಿದೆ. ಗ್ರಾಹಕರು 32 ಇಂಚು ಮೇಲ್ಪಟ್ಟು ಖರೀದಿಸುವ ಟಿ.ವಿ.ಗಳಿಗೆ ಖರೀದಿಯ ಸಂದರ್ಭ ಹೇಗೂ ರಿಯಾಯತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ, ಜತೆಗೆ ಭದ್ರಾ ವಾರ್ಷಿಕೋತ್ಸವದ ಆಕರ್ಷಕ ಬಹುಮಾನಗಳು ಇರುತ್ತವೆ. ವಿಶ್ವಕಪ್ ಫೈನಲ್ ಪಂದ್ಯಾಟವನ್ನೂ ಭಾರತ ಗೆದ್ದರೆ, ನವೆಂಬರ್ 16ರಿಂದ 19ರವರೆಗೆ ಯಾರೆಲ್ಲಾ ಎಲ್.ಇ.ಡಿ. ಟಿವಿಯನ್ನು ಭದ್ರಾದಲ್ಲಿ ಖರೀದಿ ಮಾಡುತ್ತಾರೋ ಅವರಿಗೆಲ್ಲಾ ಎಕ್ಸ್ ಟ್ರಾ ಆಫರ್ ನೀಡಲಾಗುತ್ತದೆ.
ವಿಶ್ವಕಪ್ ವಿಜಯದ ಖುಷಿಗಾಗಿ 1500 ರೂಗಳ ಎಕ್ಸ್ಟ್ರಾ ಕ್ಯಾಷ್ ಬ್ಯಾಕ್ ನೀಡಲಾಗುತ್ತದೆ ಎಂದು ಭದ್ರಾದ ಪ್ರವರ್ತಕ ಮಂಜುನಾಥ ಆಚಾರ್ಯ ತಿಳಿಸಿದ್ದಾರೆ. ವಿಶ್ವಕಪ್ ಗೆಲ್ಲುವ ಖುಷಿಗಾಗಿ ಇದು ನಮ್ಮ ಕೊಡುಗೆ ಹಾಗೂ ಸಂಭ್ರಮಾಚರಣೆಯಾಗಿದೆ ಎಂದು ಹೇಳಿರುವ ಅವರು ಈ ಮೂಲಕ ಗ್ರಾಹಕರ ಖರೀದಿ ಖುಷಿಯ ಜೊತೆಗೆ ನಾವೂ ವಿಶ್ವಕಪ್ ಗೆಲುವಿನ ಹಾರೈಕೆಯಲ್ಲಿರುತ್ತೇವೆ ಎಂದಿದ್ದಾರೆ.