
ಪುಂಜಾಲಕಟ್ಟೆ : ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಇದರ ೩೯ನೇ ವರ್ಷದ ಪ್ರಯುಕ್ತ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಮಂಜು ವಿಟ್ಲ ವೇದಿಕೆಯಲ್ಲಿ ಎರಡು ದಿನಗಳ ಕಾಲ ನಡೆಯುವ ಸ್ವಸ್ತಿಕ್ ಪ್ರೊ ಕಬಡ್ಡಿ ಉತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಗುತ್ತಿಗೆದಾರ ಮೋಹನ್ ಶೆಟ್ಟಿ ನರ್ವಲ್ದಡ್ಡ ಹಾಗೂ ಪ್ರಗತಿಪರ ಕೃಷಿಕ ಜಯಚಂದ್ರ ಬೊಳ್ಮಾರು ಅವರು ಕ್ರೀಡಾ ಜ್ಯೋತಿ ಪ್ರಜ್ವಲನಗೊಳಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಪುಂಜಾಲಕಟ್ಟೆ ಘಟಕದ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ ಅವರು ಸಭಾಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ಸ್ಥಾಪಕರಾದ ತುಂಗಪ್ಪ ಬಂಗೇರ ,ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಅವರ ನೇತೃತ್ವದಲ್ಲಿ ನಡೆಯವ ಸಮಾಜಮುಖಿ ಚಟುವಟಿಕೆಗಳು, ಕಬಡ್ಡಿ ಪಂದ್ಯಾಟ,ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುತ್ತಿರುವುದು ಅಭಿನಂದನೀಯವಾಗಿದೆ ಎಂದು ಹೇಳಿದರು.

ಕ್ಲಬ್ ಸ್ಥಾಪಕಾಧ್ಯಕ್ಷ, ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಮಾತನಾಡಿ, ದೇಶೀಯ ಮಣ್ಣಿನ ಕ್ರೀಡೆ ಕಬಡ್ಡಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ಲಬ್ ವತಿಯಿಂದ ದಾನಿಗಳ ಸಹಕಾರದಿಂದ ೩೯ ವರ್ಷದಿಂದ ನಿರಂತರವಾಗಿ ಕಬಡ್ಡಿ ಪಂದ್ಯಾಟ ನಡೆಸುತ್ತಾ ಬಂದಿದ್ದೇವೆ. ಮುಂದಿನ ವರ್ಷ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟ ಆಯೋಜಿಸಲಾಗುವುದು ಎಂದು ಹೇಳಿದರು.

ಪಂದ್ಯಾಟದ ಪೋಷಕ ಸುಂದರ್ ರಾಜ್ ಹೆಗ್ಡೆ ಮುಂಬ, ಪಿಲಾತಬೆಟ್ಟು ಬ್ರಹ್ಮಶ್ರೀ ನಾರಾಯಣ ಗುರು ವಸತಿ ಶಾಲೆಯ ಪ್ರಾಂಶುಪಾಲ ಸಂತೋಷ್ ಕುಮಾರ್, ಪುಂಜಾಲಕಟ್ಟೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಚಿದಾನಂದ ಮಾಣಿಂಜ, ಕಜೆಕೋಡಿ ಶ್ರೀ ಉಮಾಮಹೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರ್, ಪಿಲಾತಬೆಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ ,ಉಪಾಧ್ಯಕ್ಷ ಯೋಗೇಂದ್ರ ಕುಮಂಗಿಲ,ಯಕ್ಷಗಾನ ಸಮಿತಿ ಅಧ್ಯಕ್ಷ ಪ್ರಕಾಶ್ ಪ್ರಭು, ಶ್ರೀ ರಾಮ ಭಜನ ಮಂದಿರದ ದೀಕ್ಷಿತ್,ಮಂಜಲಪಲ್ಕೆ ಹನುಮಾನ್ ಭಜನ ಮಂದಿರದ ಅಧ್ಯಕ್ಷ ಆದರ್ಶ ಗೌಡ ಹಟತ್ತೋಡಿ, ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲ ಪಿ., ಪದಾಽಕಾರಿಗಳಾದ ಜಯರಾಜ್ ಅತ್ತಾಜೆ , ಅಬ್ದುಲ್ ಹಮೀದ್ ಮಲ್ಪೆ, ಮಾಧವ ಬಂಗೇರ, ಸತೀಶ್ ಶೆಟ್ಟು ಕುರ್ಡುಮೆ, ರಫೀಕ್, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಭಾಕರ ಪಿ.ಎಂ. ಅವರು ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ರಾಜೇಶ್ ಪಿ.ಪುಂಜಾಲಕಟ್ಟೆ ಅವರು ವಂದಿಸಿದರು. ವಕೀಲ ಗಝಲ್ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಜಯರಾಜ್ ಜೈನ್ ಪಂದ್ಯಾಟ ನಿರೂಪಿಸಿದರು.
ಕ್ರೀಡಾ ಜ್ಯೋತಿ ಮೆರವಣಿಗೆ: ಉದ್ಘಾಟನೆಗೆ ಮುನ್ನ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಮಂಜಲಪಲ್ಕೆ ಭಜನ ಮಂದಿರ ಹಾಗೂ ನಾರಾಯಣ ಗುರು ವಸತಿ ಶಾಲೆ ಬಳಿಯಿಂದ ಕ್ರೀಡಾ ಜ್ಯೋತಿಯ ಆಕರ್ಷಕ ಮೆರವಣಿಗೆ ನಡೆಯಿತು.