
ಬಂಟ್ವಾಳ: ಬೈಂದೂರಿನ ಜೆಎನ್ಆರ್ ಕಲಾಮಂದಿರದಲ್ಲಿ ಭಾನುವಾರ ನಡೆದ ಜೆಸಿಐ ವಲಯ 15ರ ಲೇಡಿ ಜೇಸಿ ಮತ್ತು ಜೂನಿಯರ್ ಜೇಸಿ ಸಮ್ಮೇಳನದಲ್ಲಿ ವಲಯದ ಟಾಪ್ 10 ಲೇಡಿ ಜೇಸಿ ತಂಡಗಳ ಪೈಕಿ ಬಂಟ್ವಾಳ ಲೇಡಿ ಜೇಸಿ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ವಲಯ ವಿಭಾಗದಲ್ಲಿ 13 ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಮೂಲಕ ಟಾಪ್ 1 ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಲೇಡಿ ಜೇಸಿ ತಂಡಕ್ಕೆ ಫೆಮಿ ಸರ್ಚ್ ಪ್ರಶಸ್ತಿ, ಪ್ರಯಾಸ್ ಡೇ ಅವಾರ್ಡ್, ಪ್ರಾಗ್ನೆನ್ಸ್ ಆಫ್ ಲವ್ ಅವಾರ್ಡ್, ತಾಯಿ ಮತು ನಾನು ಪೊಟೋ ಪ್ರಶಸ್ತಿ, ಜೋಡಿ ನಂ. 1 ಪ್ರಶಸ್ತಿ, ಸೆರೋಸ್ ಡೇ ಪ್ರಶಸ್ತಿ, ಜೂನಿಯರ್ ಜೇಸಿ ವಿಭಾಗದಲ್ಲಿ ಜೆಜೆಸಿ ಸಿಕ್ಸರ್ ಅವಾರ್ಡ್, ದ್ವಿತೀಯ ರನ್ನರ್ ಅಪ್ ಅವಾರ್ಡ್, ಯುವ ಪುರಸ್ಕಾರ ಅವಾರ್ಡ್, ಜೆಸಿಐ ಘಟಕಕ್ಕೆ ಗೋಲ್ಡನ್ ಎಲ್ಓ ಪ್ರೆಸಿಡೆಂಟ್, ಸಿಲ್ವರ್ ಡೋನರ್ ಪ್ರೆಸಿಡೆಂಟ್ ಅವಾರ್ಡ್, ಚಾಂಪಿಯನ್ ಎಲ್ಓ ಅವಾರ್ಡ್ ಲಭಿಸಿದೆ.
ಲೇಡಿ ಜೇಸಿ ಮತ್ತು ಜೂನಿಯರ್ ಜೇಸಿ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು. ಬಂಟ್ವಾಳ ಘಟಕದ ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ, ಲೇಡಿ ಜೇಸಿ ಸಂಯೋಜಕಿ ಅನುಷಾ ಕಿಶೋರ್, ಲೇಡಿ ಜೇಸಿ ವಲಯ ನಿರ್ದೇಶಕಿ ಗಾಯತ್ರಿ ಲೋಕೇಶ್, ವಲಯ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ ಹಾಗೂ ಜೆಸಿಐ ಬಂಟ್ವಾಳದ ಸದಸ್ಯರು, ಲೇಡಿ ಜೇಸಿ ಸದಸ್ಯರು, ಜೂನಿಯರ್ ಜೇಸಿ ಸದಸ್ಯರು ಉಪಸ್ಥಿತರಿದ್ದರು.


Advertisement







