ಬಂಟ್ವಾಳ: ಪುದು ಗ್ರಾಮದ ಗೋವಿನ ತೋಟ ಬ್ರಹ್ಮಗಿರಿಯ ಶ್ರೀ ರಾಧಾ ಸುರಭಿ ಗೋಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ, ಗೋ ಸೇವಾ ಗತಿವಿಧಿ ಕರ್ನಾಟಕ ಇದರ ಸಂಯುಕ್ತ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥ ಸನಾತನ ಧರ್ಮದ ಉಳಿವಿಗಾಗಿ, ಭಕ್ತಜನರಲ್ಲಿ ಶ್ರೀಮಧ್ಭಾಗವತ ಮತ್ತು ಗೋವಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ದಕ್ಷಿಣ ಭಾರತದಲ್ಲಿಯೇ ಪ್ರಥಮ ಬಾರಿಗೆ ಬಂಟ್ವಾಳ ತಾಲೂಕಿನ ಶ್ರೀ ರಾಧಾ ಸುರಭಿ ಗೋಮಂದಿರದಲ್ಲಿ ಅಷ್ಟೋತ್ತರ ಶತ (108) ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಮಹಾಯಾಗ ಮತ್ತು ಗೋ ನವರಾತ್ರಿ ಉತ್ಸವ ಹಾಗೂ 1108 ನಾರಾಯಣ ಕವಚ ಯಾಗ ನ.14ರಿಂದ ನ.22ರವರೆಗೆ ಉಡುಪಿ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದಂಗಳವರ ಗೌರವ ಮಾರ್ಗದರ್ಶನದಲ್ಲಿ ಭಕ್ತಿಭೂಷಣದಾಸ ಪ್ರಭೂಜಿ ಹಾಗೂ ವೃಂದಾವನದ ಶ್ರೀ ರಮೇಶ ಗೋಸ್ವಾಮಿಯವರ ನೇತೃತ್ವದಲ್ಲಿ ನಡೆಯಲಿದೆ ಎಂದು ಅಷ್ಟೋತ್ತರ ಶತ ಶ್ರೀಂದ್ಭಾಗವತ ಕಥಾ ಪಾರಾಯಣ ಸಪ್ತಾಹ ಮಹಾಯಜ್ಞ ಸಮಿತಿ ಕಾರ್ಯಾಧ್ಯಕ್ಷ ತೇವು ತಾರಾನಾಥ ಕೊಟ್ಟಾರಿ ತಿಳಿಸಿದರು.
ನ.14 ಮಂಗಳವಾರ ತೋರಣ ಮುಹೂರ್ತ, ಗಣಪತಿ ಹವನ, ಸುಂದರ ಕಾಂಡ ಪಾರಾಯಣ, ಉಗ್ರಾಣ ಮುಹೂರ್ತ, ಬಳಿಗ್ಗೆ 11.30 ರಿಂದ ಗೋವರ್ಧನ ಪೂಜೆ, ಛಪ್ಪನ್ ಭೋಗ್, ಮಹಾಪ್ರಸಾದ ನಡೆಯಲಿದೆ. ಮಧ್ಯಾಹ್ನ 3ಗಂಟೆಗೆ ಫರಂಗಿಪೇಟೆ ಶ್ರೀ ವರದೇಶ್ವರ ದೇವಸ್ಥಾನದಿಂದ 108 ಶ್ರೀಮಧ್ಭಾಗವತ ಗ್ರಂಥ ಹಾಗೂ ಹಸಿರು ಹೊರೆಕಾಣಿಕೆ ಶೋಭಾಯಾತ್ರೆ ರಾಧ ಸುರಭಿಗೋ ಮಂದಿರಕ್ಕೆ ಆಗಮಿಸಲಿದೆ. ಸಂಜೆ 6.45ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ.
ನ.15ರಿಂದ ನ.21ರವರೆಗೆ ಪ್ರಾತಃಕಾಲ 4.30 ರಿಂದ 6.30ರವರೆಗೆ ಮಂಗಳಾರತಿ, ಹನುಮಾನ್ ಚಾಲೀಸ, ಗೋಪೂಜೆ, 7ರಿಂದ 11.30ರವರೆಗೆ 108 ಶ್ರೀಮದ್ಭಾಗವತ ಪಾರಾಯಣ, ಬೆಳಿಗ್ಗೆ ಗಂಟೆ 10 ರಿಂದ 12 ರವರೆಗೆ ಗವ್ಯ ಉತ್ಪನ್ನ ತಯಾರಿ ಪ್ರಶಿಕ್ಷಣ ವರ್ಗ, ಬೆಳಿಗ್ಗೆ ಗಂಟೆ 11.45ರಿಂದ 12.45ರವರೆಗೆ 1108ಶ್ರೀನಾರಾಯಣ ಕವಚ ಯಾಗ, ಮಧ್ಯಾಹ್ನ ಗಂಟೆ 1ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 2.30ರಿಂದ 3.30ರವರೆಗೆ ವೃಂದಾವನದ ಶ್ರೀ ಬ್ರಿಜೇಶ ಗೋಸ್ವಾಮಿ ಅವರಿಂದ ಶ್ರೀಮಧ್ಭಾಗವತ ಕಥಾ ಸಪ್ತಾಹ, ಸಂಜೆ 4ರಿಂದ 5ರವರೆಗೆ ಶೋಭಾ ಮಯ್ಯ ಮಂಗಳೂರು ಅವರಿಂದ ಶ್ರೀ ಭಗವದ್ಗೀತಾ ಕಥಾ ಸಪ್ತಾಹ, ಸಂಜೆ 5.15ರಿಂದ 5.45ರವರೆಗೆ ಸಂಕೀರ್ತನೆ, ಸಂಜೆ 6 ರಿಂದ 8ರವರೆಗೆ ಶ್ರೀ ಭಕ್ತಿ ಭೂಷಣದಾಸ ಪ್ರಭೂಜಿ ಅವರಿಂದ ಶ್ರೀಮದ್ಭಾಗವತಾ ಕಥಾ ಸಪ್ತಾಹ ನಡೆದು ಬಳಿಕ ಮಂಗಳಾರತಿ ಪ್ರಸಾದ ವಿತರಣೆ ನಡೆಯಲಿದೆ.
ನ.22ರಂದು ಬುಧವಾರ ಬೆಳಿಗ್ಗೆ 7.30ರಿಂದ ಶ್ರೀಮದ್ಭಾಗವತ ಯಾಗ, 1108 ನಾರಾಯಣ ಕವಚ ಯಾಗ, ಬೆಳಿಗ್ಗೆ 11ಕ್ಕೆ ಯಾಗದ ಪೂರ್ಣಾಹುತಿ, ಮಹಾಮಂಗಳಾರತಿ ಸಂಪ್ರೋಕ್ಷಣೆ, 11.30ಕ್ಕೆ ಸಮಾರೋಪ ಸಮಾರಂಭ 1ಕ್ಕೆ ಮಹಾಪ್ರಸಾದಸಂಜೆ 4ಕ್ಕೆ ಗುಳಿಗ ದೈವದ ನರ್ತನ ಸೇವೆ, ರಾತ್ರಿ 7ಕ್ಕೆ ಕೊರಗಜ್ಜ ದೈವದ ನರ್ತನ ಸೇವೆ ನಡೆಯಲಿದೆ ಎಂದು ಗೋವಿನತೋಟದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಶ್ರೀ ಭಕ್ತಿ ಭೂಷಣದಾಸ ಪ್ರಭೂಜಿ ಮಾತನಾಡಿ ಎಲ್ಲಾ ರೀತಿಯ ದೋಷಗಳಿಗೆ ಶ್ರೀಮದ್ಭಾಗವತ ಪಾರಾಯಣ ಪರಿಹಾರವಾಗಿದ್ದು ಇಲ್ಲಿ 108 ಶ್ರೀಮದ್ಭಾಗವತ ಪಾರಾಯಣ ನಡೆಯಲಿದೆ. ವಿಶ್ವಕ್ಕೆ ವ್ಯಾಪಿಸಿರುವ ಕಲ್ಮಷಗಳನ್ನು ದೂರ ಮಾಡಿ ವಿಶ್ವಗುರು ಭಾರತ ಮಾಡುವ ಉದ್ದೇಶದಿಂದ ನಾರಾಯಣ ಕವಚ ಯಜ್ಞ ನಡೆಯಲಿದೆ. ಗೋವಿನ ಕೃತ ಹಾಗೂ ಅಮೂಲ್ಯವಾದ ಗಿಡಮೂಲಿಕೆಗಳಿಂದ ಈ ಯಜ್ಞ ಸಂಪನ್ನಗೊಳ್ಳಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸುವಂತೆ ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಮಿತಿಯ ಅಧ್ಯಕ್ಷ ಕ್ಯಾ. ಬ್ರಿಜೇಶ್ ಚೌಟ, ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪುಂಚಮೆ, ಪ್ರಧಾನ ಕಾರ್ಯದರ್ಶಿ ದಾಮೋದರ ನೆತ್ತರಕೆರೆ, ಮಾತೃ ಸಮಿತಿ ಸಂಚಾಲಕಿ ಜಯಶ್ರೀ ಕರ್ಕೇರಾ ಅಬ್ಬೆಟ್ಟು, ಕಾರ್ಯಲಯ ಸಮಿತಿ ಸಂಚಾಲಕ ವಿನಯ್ ಕುಮಾರ್ ಕಡೆಗೋಳಿ, ಉಪಾಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಪ್ರಚಾರ ಸಮಿತಿ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ, ಸದಸ್ಯ ಸಂತೋಷ್ ಕುಲಾಲ್ ನೆತ್ತರೆಕೆರೆ ಉಪಸ್ಥಿತರಿದ್ದರು.