Author: admin

ಬಂಟ್ವಾಳ: ಸರಕಾರಿ ಶಾಲೆಗಳಲ್ಲಿ ಓದಿದ ಮಕ್ಕಳೇ ಇಂದು ವಿಜ್ಞಾನ, ಆಡಳಿತ ಸಹಿತ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದು, ತಾವು ಕಲಿತ ಶಾಲಾಭಿವೃದ್ಧಿಯಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಹೇಳಿದರು.ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿ.ಮೂಡದ ವಾರ್ಷಿಕೋತ್ಸವ, ದಾನಿಗಳ ನೆರವಿನಿಂದ ಆರಂಭಗೊಂಡ ಉಚಿತ ಕಂಪ್ಯೂಟರ್ ತರಗತಿ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು. ಸೈನಿಕರು ಮತ್ತು ಶಿಕ್ಷಕರೊಂದಿಗೆ ಗೌರವಪೂರ್ವಕವಾಗಿ ಸಮಾಜ ನಡೆಸಿಕೊಳ್ಳಬೇಕು ಎಂದ ಅವರು, ಶಾಲೆಗಳನ್ನು ದೇವಾಲಯದ ರೂಪದಲ್ಲಿ ನಾವು ಕಾಣಬೇಕು. ಬಂಟ್ವಾಳ ತಾಲೂಕಿನಲ್ಲಿ ಶಾಲಾಭಿವೃದ್ಧಿಗೆ ಸಮಾಜದ ಕೊಡುಗೆ ಅಪಾರವಾಗಿದೆ. ಹಿರಿಯ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ, ಶಾಲೆಯನ್ನು ಸುಂದರವಾಗಿ ರೂಪಿಸಬಹುದು ಎಂದು ಬಂಟ್ವಾಳ ತಾಲೂಕಿನ ಹಲವು ಶಾಲೆಗಳನ್ನು ಗಮನಿಸಿದಾಗ ಗೊತ್ತಾಗುತ್ತದೆ. ಇಂಥ ಶಾಲಾಪ್ರೀತಿ ನಮ್ಮ ನಿಮ್ಮಲ್ಲಿರಲಿ, ಇದು ನಿಜವಾದ ಮಾನವೀಯ ಧರ್ಮ ಎಂದರು. ನಿಮ್ಮ ಮಕ್ಕಳನ್ನು ಅತಿಯಾಗಿ ಪ್ರೀತಿಸುವುದು ಒಳ್ಳೆಯದಲ್ಲ. ಪ್ರೀತಿಸುವುದರ ಜೊತೆಗೆ ಧೈರ್ಯವನ್ನು ತುಂಬಿ ಎಂದು ಅವರು…

Read More

ಬಂಟ್ವಾಳ: ತುಳುನಾಡು ಸತ್ಯ, ಧರ್ಮ, ನ್ಯಾಯ, ನೀತಿಗಳ ನೆಲೆಬೀಡು. ಈ ನಾಡೇ ಆರಾಧನಾಲಯಗಳ ತವರೂರು. ಅದೆಷ್ಟೋ ದೈವಸ್ಥಾನಗಳು, ದೇವಸ್ಥಾನಗಳು, ಮಠ, ಮಂದಿರ, ಗುಡಿ, ಗರಡಿಗಳು, ಮಾಡಗಳು, ಬನಗಳು ತನ್ನ ಕಲೆ ಕಾರ್ಣಿಕ ಮೆರೆಯುತ್ತಾ ತುಳುನಾಡಿನ ಧಾರ್ಮಿಕ ಪರಂಪರೆಗೆ ಕೀರ್ತಿ ತಂದಿದೆ. ಇಂತಹ ಧಾರ್ಮಿಕ ಶ್ರದ್ಧಾಕೇಂದ್ರಗಳ ಪೈಕಿ ತುಳುನಾಡಿನಲ್ಲಿ ಪುರಾಣ ಕಾಲಘಟ್ಟದಲ್ಲಿ ಮತ್ತು ಇತಿಹಾಸದಲ್ಲಿ ವೈಭವದಿಂದ ಮೆರೆದ ಸಾನಿಧ್ಯವೊಂದು ಬಂಟ್ವಾಳ ತಾಲೂಕಿನ ಅಗ್ರಾರ್ ಸಮೀಪ ದ ದರ್ಬೆಯಲ್ಲಿದ್ದು ಭಕ್ತಸಮುದಾಯದ ಆಕರ್ಷಣೆಗೆ ಪಾತ್ರವಾಗಿದೆ.ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಅಗ್ರಾರ್ ದರ್ಬೆ ದೇವಿ ಪುರ ಎಂಬಲ್ಲಿನ ನಿಸರ್ಗದ ಮಡಿಲಿನ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿರುವ ಶ್ರೀ ಆದಿಶಕ್ತಿ ರಾಜ ಚಾಮುಂಡೇಶ್ವರೀ ಕ್ಷೇತ್ರವನ್ನು ಇದೀಗ ಪುನರ್ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು ಪುನುರುತ್ಥಾನದೊಂದಿಗೆ ಗತವೈಭವ ಸಾರಲು ಸಜ್ಜಾಗುತ್ತಿದೆ.ಪೌರಾಣಿಕ ಹಿನ್ನೆಲೆಯೊಂದಿಗೆ ಇತಿಹಾಸದಲ್ಲಿ ವೈಭವದಿಂದ ಮೆರೆದ ತುಳುನಾಡಿನಲ್ಲೇ ಅತ್ಯಂತ ಅಪರೂಪದ ಈ ದೈವೀ ಸಾನಿಧ್ಯವನ್ನು ಅಂದಾಜು ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ಷೇತ್ರವಾಗಿ ಪುನರ್ ನಿರ್ಮಿಸಲು ಚಿಂತನೆ ನಡೆಸಲಾಗಿದ್ದು ಮುಂದಿನ ದಿನಗಳಲ್ಲಿ…

Read More

ಬಂಟ್ವಾಳ: ಬೆಂಜನಪದವಿನ ಶುಭಲಜ್ಷ ಸಭಾಂಗಣದಲ್ಲಿ ನಡೆದ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ 36ನೇ ಸಮಾವೇಶದಲ್ಲಿ ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿಯಮಿತಕ್ಕೆ ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಕ. ಸಂಜೀವ ಪೂಜಾರಿ ಪ್ರಶಸ್ತಿ ಸ್ವೀಕರಿಸಿದರು. ಗೋಕರ್ಣಥ ಕ್ಷೇತ್ರ ಕುದ್ರೋಳಿ ಇದರ ಕೋಶಾಧಿಕಾರಿಯಾಗಿ ಆರ್ ಪದ್ಮರಾಜ್, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರಾಜೇಶ್ ಬಿ. ಗಣ್ಯರಾದ ನಾರ್ದನ್ ಸ್ಕೈ ಪ್ರಾಪರ್ಟೀಸ್ ನಿರ್ದೇಶಕರಾದ ಕೃತಿನ್ ಅಮೀನ್, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಂ ಪೂಜಾರಿ ಮುಖ್ಯ ಮಂತ್ರಿಗಳ ಮಾಜಿ ಆಪ್ತ ಸಹಾಯಕ ನಿರ್ಮಲ್ ಜಗನ್ನಾಥ್ ಬಂಗೇರ, ಉದ್ಯಮಿಗಳಾದ ನಟೇಶ್ ಪೂಜಾರಿ ಬೆಂಗಳೂರು ಲೋಕೇಶ್ ಪೂಜಾರಿ ಕಲ್ಲಡ್ಕ ವಾರ್ಷಿಕ ಸಮಾವೇಶದ ನಿರ್ದೇಶಕ ಭುವನೇಶ್ ಪಚ್ಚಿನಡ್ಕ, ದಿನಕರ್ ಬಂಗೇರ, ಜಗದೀಶ್ ಚಂದ್ರ ಡಿ.ಕೆ. ಬಂಟ್ವಾಳ ಘಟಕದ ಅಧ್ಯಕ್ಷ ಹರೀಶ್ ಕೋಟ್ಯಾನ್ ಕುದನೆ ಉದಯ್ ಅಮೀನ್ ಮಟ್ಟ,‌ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಕುಸುಮಾಕರ ಕುಂಪಲ…

Read More

ಬಂಟ್ವಾಳ: ರಾರಾಸಂ ಫೌಂಡೇಷನ್ ಬಂಟ್ವಾಳ ಇದರ ಆಶ್ರಯದಲ್ಲಿ 13ನೇ ವರ್ಷದ ಸಾಂಸ್ಕೃತಿಕ ಕಲರವ ರಾರಾಸಂಭ್ರಮ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಅತಿಥಿಗಳಾಗಿ ಎಸ್‌ವಿಎಸ್ ಅನುದಾನಿತ ಹಿ. ಪ್ರಾ. ಶಾಲೆ ಪಾಣೆಮಂಗಳೂರು ಇಲ್ಲಿನ ಮುಖ್ಯ ಶಿಕ್ಷಕ ವಿನೋದ್ ಎನ್., ಜೆಸಿಐ ಬಂಟ್ವಾಳದ ನಿಯೋಜಿತ ಅಧ್ಯಕ್ಷೆ ರಶ್ಮಿ ಶೆಟ್ಟಿ, ಉದ್ಯಮಿ ಸೋಮನಾಥ ಸಾಲಿಯಾನ್ ಉಪಸ್ಥಿತರಿದರು. ಸಂಜೆ ಯೂನಿಯನ್ ಬ್ಯಾಂಕ್ ಪೊಳಲಿ ಶಾಖೆಯ ಪ್ರಬಂಧಕ ಪ್ರಸಾದ್ ಕುಮಾರ್ ಮಾರ್ನಬೈಲು ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಅತಿಥಿಗಳಾಗಿ ನಿವೃತ್ತ ಮುಖ್ಯ ಶಿಕ್ಷಕ ಬಿ. ರಾಮಚಂದ್ರ ರಾವ್, ರೋಟರಿ ಕ್ಲಬ್ ಬೈಕಂಪಾಡಿಯ ಅಧ್ಯಕ್ಷ ಸುಧಾಕರ ಸಾಲ್ಯಾನ್, ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ಪ್ರಶಾಂತ್ ಕೋಟ್ಯಾನ್, ಜೆಸಿಐ ಮಡಂತ್ಯಾರಿನ ನಿಯೋಜಿತ ಅಧ್ಯಕ್ಷ ವಿಕೇಶ್ ಮಾನ್ಯ ಭಾಗವಹಿಸಿದ್ದರು. ಬಹುಮುಖ ಪ್ರತಿಭೆ ಶ್ರೀನಿಧಿ ಪಿ.ಎಸ್. ಅವರಿಗೆ ರಾರಾಸಂ ಪುರಸ್ಕಾರ ನೀಡಿ ಗೌರವಿಸಲಾಯಿತು.ರಾರಸಂ ಫೌಂಡೇಷನ್‌ನ ಅಧ್ಯಕ್ಷ…

Read More

ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘದ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡದ ಕಾಮಗಾರಿಗೆ ಅನುದಾನ ಕೋರಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರಿಗೆ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ ಸುರೇಶ್ ಕುಮಾರ್ ನಾವೂರು ಇವರ ಮುಂದಾಳತ್ವದಲ್ಲಿ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಕಟ್ಟಡ ಸಮಿತಿಯ ಕಾರ್ಯದರ್ಶಿ ಸುಕುಮಾರ್ ಬಂಟ್ವಾಳ, ಸಂಘದ ನಿಕಟ ಪೂರ್ವ ಅಧ್ಯಕ್ಷ ನಾರಾಯಣ್ ಸಿ.ಪೆರ್ನೆ, ಮಾಜಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕುಲಾಲ್ ಅಗ್ರಬೈಲು, ಮನೋಹರ ನೇರಂಬೋಳು, ಸಂಘದ ಸದಸ್ಯರಾದ ರಮೇಶ್ ಕುಲಾಲ್ ಪನೋಲಿ ಬೈಲು ವಕೀಲ ಉಮಾಕರ್ ಉಪಸ್ಥಿತರಿದ್ದರು —

Read More

ಬಂಟ್ವಾಳ: ನಾವು ಮಾಡುವ ಕರ್ಮವನ್ನು ನಿಷ್ಠೆ, ಶ್ರದ್ಧೆಯಿಂದ ಮಾಡಿದರೆ ಭಗವಂತ ಒಲಿಯುತ್ತಾನೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ವೆಂಕಟರಮಣ ಅಸ್ರಣ್ಣ ಹೇಳಿದರು.ಮೊಡಂಕಾಪುವಿನ ಶಮ್ಯಾಪ್ರಾಸ ಮನೆಯಲ್ಲಿ ನಡೆದ ಸರಿದಂತರ ಗೌರ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಕೀಲ ಮಹೇಶ್ ಕಜೆ ಅವರು ಬದುಕು ಭಾಗ್ಯ- ಜೀವನ ಸುಗಮ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿ ನಮ್ಮಲ್ಲಿ ಹೃದಯ ವೈಶಾಲ್ಯತೆ ಇದ್ದಾಗ ರಸವತ್ತಾಗಿ ಹಾಗೂ ಸುಗಮವಾಗಿ ಬದುಕಲು ಸಾಧ್ಯವಿದೆ. ಹಣವಿಲ್ಲದಿರುವುದು ಬಡತನವಲ್ಲ ಬದಲಾಗಿ ಪ್ರೀತಿ ಒಲುಮೆಯಿಲ್ಲದಿರುವುದೇ ಬಡತನ ಎಂದು ವ್ಯಾಖ್ಯಾನಿಸಿದ ಅವರು ಬದುಕು ಭಾಗ್ಯ ಆಗಬೇಕಾದರೆ ನಮ್ಮಲ್ಲಿ ಪ್ರಯತ್ನ ಬೇಕು ಎಂದರು.ಬಂಟ್ವಾಳದ ಉದ್ಯಮಿ ಬಿ. ಲಕ್ಷ್ಮಣ ಅಚ್ಯುತ ಬಾಳಿಗ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ವೈದ್ಯೆ, ಸಮಾಜಸೇವಕಿ ಡಾ. ಗೌರಿ ಪೈ ಅವರಿಗೆ ಸರಿದಂತರ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಚಾಲಕ ಪ್ರೊ. ರಾಜಮಣಿ ರಾಮಕುಂಜ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.ಭಾರತೀ ರಾಜಮಣಿ ಸನ್ಮಾನಿತರ ಅಭಿನಂದನಾ ಪತ್ರ ವಾಚಿಸಿದರು. ಮೇಘನ ರಾವ್ ದೇಶಭಕ್ತಿ…

Read More

ಬಂಟ್ವಾಳ: ಕುರಿಯಾಳ ಗ್ರಾಮದ ದುರ್ಗಾನಗರದಲ್ಲಿರುವ ಶ್ರೀ ಓಂಕಾರೇಶ್ವರೀ ದೇವಿ ಭಜನಾ ಮಂದಿರದ ವಾರ್ಷಿಕೋತ್ಸವ ಮಂಗಳವಾರ ನಡೆಯಿತು. ವಾರ್ಷಿಕೋತ್ಸವದ ಪ್ರಯುಕ್ತ ಗಣಹೋಮ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ನಾಗತಂಬಿಲ, ಶ್ರೀದೇವಿಗೆ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನೆರವೇರಿತು

Read More

ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂ ನಿಂದ ನೀರು ಹರಿದು ಬರುವ ರಭಸಕ್ಕೆ ಕೆಳಭಾಗದ ಬಲ ಪಾರ್ಶ್ವ ದಲ್ಲಿರುವ ಕೃಷಿ ಭೂಮಿ ಕೊಚ್ಚಿ ಹೋಗಿ ರೈತರು ನಷ್ಟ ಅನುಭವಿಸಿದ್ದು ಸೂಕ್ತ ಪರಿಹಾರ ಹಾಗೂ ಪರ್ಯಾಯ ವ್ಯವಸ್ಥೆ ಒದಗಿಸಿಕೊಡಿ ಎಂದು ಆಗ್ರಹಿಸಿ ರೈತ ಸಂಘ ಹಸಿರು ಸೇನೆಯ ನೇತೃತ್ವದಲ್ಲಿ ರೈತರು ತುಂಬೆ ವೆಂಟೆಡ್ ಡ್ಯಾಂಗೆ ಮುತ್ತಿಗೆ ಹಾಕಿದರು.ಡ್ಯಾಂನ ಪ್ರವೇಶ ಗೇಟ್ ಗೆ ಬೀಗ ಜಡಿದು ಪ್ರತಿಭಟನೆ ನಡೆಸಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಸ್ಥಳಕ್ಕೆ ಬಾರದೆ ಇಲ್ಲಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದ ರೈತರು ಸ್ಥಳದಲ್ಲೇ ಅಡಿಗೆ ತಯಾರಿಸಲು ಆರಂಭಿಸಿದರು. ಸ್ಥಳಕ್ಕೆ ಮನಪಾ ಇಂಜಿನಿಯರ್ ನರೇಶ್ ಶಣೈ, ತಹಶೀಲ್ದಾರ್ ಎಸ್ ಬಿ. ಕೂಡಲಗಿ ಮತ್ತಿತರು ಭೇಟಿ ನೀಡಿ ರೈತರ ಮನವೊಲಿಸುವ ಪ್ರಯತ್ನ ನಡೆಸಿದರೂ ಜಗ್ಗದೆ ಪ್ರತಿಭಟನೆ ಮುಂದುವರೆಸಿರು. ರೈತ ಸಂಘದ ಮನೋಹರ ಶೆಟ್ಟಿ, ಶ್ರೀದರ ಶೆಟ್ಟಿ, ಸುಬ್ರಹ್ಮಣ್ಯ ಭಟ್, ಮುರುವ ಮಹಾಬಲ ಭಟ್, ಇದಿನಬ್ಬ ಸುದೇಶ್ ಮಯ್ಯ, ಭಾಸ್ಕರ, ಆಮ್ ಆದ್ಮಿ ಪಕ್ಷದ ವಿಷುಕುಮಾರ್…

Read More

ಬಂಟ್ವಾಳ: ಇತ್ತೀಚೆಗೆ ಬಿ.ಸಿ.ರೋಡಿನ ಕೈಕಂಬದಲ್ಲಿ ಸರಣಿ ಕಳವು ನಡೆದು ಜನತೆ ಆತಂಕದಲ್ಲಿರುವ ಮಧ್ಯೆಯೇ ಇದೀಗ ಬಿ.ಸಿ.ರೋಡಿನ ಹೃದಯ ಭಾಗದಲ್ಲಿ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಅಂಗಡಿ, ಹೊಟೇಲ್ ಗಳಿಗೆ ಕಳ್ಳರು ನುಗ್ಗಿ ಸರಣಿ ಕಳವು ನಡೆಸಿದ್ದಾರೆ. ಬಿ.ಸಿ.ರೋಡಿನ ಹೃದಯ ಭಾಗದಲ್ಲಿರುವ ಹಾಗೂ ಬಂಟ್ವಾಳ ನಗರ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿರುವ ಹೊಟೇಲ್ ಆನಿಯಾ ದರ್ಬಾರ್ ಹಾಗೂ ಅದರ ಸುತ್ತಮುತ್ತಲಿನ ಕೆಲ ಅಂಗಡಿಗಳ ಶಟರ್ ಬೀಗ ಮುರಿದು ನಗದು ಕಳ್ಳತನ ನಡೆಸಿರುವುದು ಸೋಮವಾರ ಬೆಳಕಿದೆ ಬಂದಿದೆ. ಅಂಗಡಿ, ಹೊಟೇಲ್ ಗಳನ್ನೇ ಕಳ್ಳರು ಟಾರ್ಗೆಟ್ ಮಾಡುತ್ತಿರುವುದು ವ್ಯಾಪರಿಗಳ ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ಬಿ.ಸಿ.ರೋಡು ಪರಿಸರದಲ್ಲಿ ಕಳ್ಳತನ, ಚಿನ್ನಾಭರಣ ದೋಚುವ ಘಟನೆ ನಡೆಯುತ್ತಿದ್ದು ಜನರಲ್ಲಿ ಭಯ ಹುಟ್ಟಿಸಿದೆ. ಕಳ್ಳತನ‌ ನಡೆಸುವ ಸಿಸಿ ಟಿವಿ ದೃಶ್ಯ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.

Read More

ಬಂಟ್ವಾಳ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಸಜೀಪ ಮೂಡ ಗ್ರಾಮದ ಶೇಖರ ಪಂಬದ ಅವರಿಗೆ ಅಮ್ಟಾಡಿ ಗ್ರಾಮದ ಮಂಗ್ಲಿಮಾರು ಶ್ರೀ ಅಣ್ಣಪ್ಪ ಸ್ವಾಮಿ ಜುಮಾದಿ ಬಂಟ ಪರಿವಾರ ದೈವಗಳ ದೈವಸ್ಥಾನದ ಆಡಳಿತ ಮಂಡಳಿ ಮೊಕ್ತೇಸರ ರವಿಶಂಕರ ಶೆಟ್ಟಿ ಬಡಾಜೆಗುತ್ತು ಅವರ ನೇತೃತ್ವದಲ್ಲಿ ಸಮಿತಿ ವತಿಯಿಂದ ಅಭಿನಂದನ ಕಾರ್ಯಕ್ರಮ ರವಿವಾರ ಮಂಗ್ಲಿಮಾರು ದೈವಸ್ಥಾನದ ಆವರಣದಲ್ಲಿ ನಡೆಯಿತು.ಬಿ.ಸಿ. ರೋಡ್ ಶ್ರೀ ಚಂಡಿಕಾಪರಮೇಶ್ವರೀ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಲೋಕನಾಥ ಶೆಟ್ಟಿ ಅವರು ಅಭಿನಂದನ ಭಾಷಣ ಮಾಡಿ, ತುಳುನಾಡು ದೈವಾರಾಧನೆಯ ಬೀಡಾಗಿದ್ದು, ಶ್ರದ್ಧೆ , ಭಕ್ತಿ, ನಿಷ್ಠೆಯಿಂದ ದೈವದ ಚಾಕರಿ ಮಾಡುವ ಶೇಖರ ಪಂಬದರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿರುವುದು ದೈವಾರಾಧನೆಗೆ ಸಂದ ಗೌರವವಾಗಿದೆ. ಅವರಿಗೆ ಮತ್ತಷ್ಟು ಪ್ರಶಸ್ತಿಗಳು ಲಭಿಸಲಿ ಎಂದರು. ಜಿ.ಪಂ. ಮಾಜಿ ಸದಸ್ಯ ರವೀಂದ್ರ ಕಂಬಳಿ ಅವರು ಮಾತನಾಡಿ, ತಾಲೂಕಿನಾದ್ಯಂತ ದೈವ ನರ್ತನ ಸೇವೆ ಸಲ್ಲಿಸುವ ಶೇಖರ ಪಂಬದರನ್ನು ಮಂಗ್ಲಿಮಾರುನಲ್ಲಿ ಅಭಿನಂದಿಸುವ ಮೂಲಕ ರವಿಶಂಕರ ಶೆಟ್ಟಿ ಅವರು ಉತ್ತಮ ಕಾರ್ಯ…

Read More