ಬಂಟ್ವಾಳ: ಇಲ್ಲಿಯ ನಂದನಹಿತ್ಲು ಶ್ರೀ ವೈದ್ಯನಾಥ ಜುಮಾದಿಬಂಟ ದೈವಸ್ಥಾನಕ್ಕೆ
ನೂತನ ಧ್ವಜ ಸ್ತಂಭ( ಕೊಡಿಮರ) ಸಮರ್ಪಣೆಯ ಕುರಿತು ಪೂರ್ವಭಾವಿಸಭೆ ಹಾಗೂ ದೈವನರ್ತಕ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ
ಶೇಖರ ಪಂಬದ ಸಜೀಪಅವರಿ ಅಭಿನಂದನಾ ಕಾರ್ಯಕ್ರಮ ದೈವ ಸ್ಥಾನದ ವಠಾರದಲ್ಲಿ ಭಾನುವಾರ ನಡೆಯಿತು.
ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ
ಗಣೇಶ್ ಸುವರ್ಣ ತುಂಬೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,ದೈವ ಇಚ್ಚೆ ಮತ್ತು ದೈವನುಡಿಯಂತೆ ದೈವಸ್ಥಾನದ ಸಮೀಪವೇ ಧ್ವಜಸ್ತಂಭಕ್ಕೆ ಸೂಕ್ತವಾದ ಮರ ದೊರೆತಿದೆ. ಸಂಬಂಧಪಟ್ಟವರ ಜೊತೆ ಮಾತುಕತೆಯು ನಡೆಸಲಾಗಿದ್ದು,ದೈವಸ್ಥಾನಕ್ಕೆ ಮರ ಒದಗಿಸಲು ಒಪ್ಪಿಗೆಯನ್ನು ನೀಡಿದ್ದಾರೆ ಇದನ್ನು ಕ್ಷೇತ್ರಕ್ಜೆ ತರುವ ನಿಟ್ಟಿನಲ್ಲಿ ತಂತ್ರಿಯವರ ಮೂಲಕ ವೈಧಿಕವಿಧಿವಿಧಾನ ಕ್ಕಾಗಿ ಶೀಘ್ರವೇ ದಿನ ನಿಗದಿಪಡಿಸಲಾಗುವುದು 2024 ರ ಎಪ್ರಿಲ್ ಮೊದಲವಾರದಲ್ಲಿ ನಡೆಯುವ ಕ್ಷೇತ್ರದ ವಾರ್ಷಿಕ ಜಾತ್ರೆಗೆ ಮುನ್ನ ಧ್ವಜಸ್ತಂಭ ಸಮರ್ಪಣಾ ಕಾರ್ಯ ನಡೆಸಲಾಗುವುದು ಎಂದರು.
ಬಾಳಿಗಾ ಮನೆತನದ
ಬಿ. ಸುಧೀರ್ ಬಾಳಿಗಾ ಅವರು ಮಾತನಾಡಿ, ಸ್ಥಳೀಯ ಕಾಮತ್ ಎಂಬವರು ಕೊಡಿಮರವನ್ನು ದೈವಸ್ಥಾನಕ್ಕೆ ಉಚಿತವಾಗಿ ನೀಡಲಿದ್ದಾರೆ.ಮರವನ್ನು ಕ್ಷೇತ್ರಕ್ಕೆ ತಲುಪಿಸುವ ಮತ್ರು ಮುಂದಿನ ವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ಚರ್ಚಿಸುವುದು ಸೂಕ್ತ ಎಂದರಲ್ಲದೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೇಖರ ಪಂಬದ ಸಹಿತ ಅವರ ಹಿರಿಯರು ಕ್ಷೇತ್ರದಲ್ಲಿ ಮಾಡಿರುವ ಪ್ರಾಮಾಣಿಕ ಸೇವೆಯನ್ನು ಸ್ಮರಿಸಿದರು.ಯಾವುದೇ
ಪ್ರಶಸ್ತಿಗಳು ವ್ಯಕ್ತಿಯ ಸಾಧನೆಗೆ ಹುಡುಕಿಬರಬೇಕೇ ವಿನಹ ಸಾಧಕರು ಪ್ರಶಸ್ತಿಯ ಬೆನ್ನತಬಾರದು ಶೇಖರ ಪಂಬದ ಅವರ ದೈವಕಾರ್ಯದಲ್ಲಿ ಮಾಡಿರುವ ಸಾಧನೆಗೆ ಜಿಲ್ಲಾ ಪ್ರಶಸ್ತಿ ಆರ್ಹವಾಗಿಯೇ ದೊರೆತಿದೆ ಅವರಿಗೆ ಇನ್ನಷ್ಟು ಪ್ರಶಸ್ತಿಗಳು ಲಭಿಸಲಿ ಎಂದು ಹಾರೈಸಿದರು.
ಅತಿಥಿಯಾಗಿದ್ದ ಸುಜೀರು ವೈದ್ಯನಾಥ ದೈವಸ್ಥಾನದ ಆಡಳಿತ ಸಮಿತಿಸದಸ್ಯ ರವೀಂದ್ರಕಂಬಳಿ ಮಾತನಾಡಿ,ಯಾವುದೇ ಕ್ಷೇತ್ರದ ಧ್ವಜಸ್ತಂಭ ಆ ಗ್ರಾಮಕ್ಕೆ ಸುಭಿಕ್ಷೆಯನ್ನು ತರಲಿದೆ.ಈ ನಿಟ್ಟಿನಲ್ಲಿ ಮರ ಕಡಿಯುವುದರಿಂದ ಹಿಡಿದು ಸಮರ್ಪಣೆಯವರೆಗೂ ಅನುಸರಿಸಬೇಕಾದ ಎಲ್ಲಾ ವೈಧಿಕ ಕ್ರಮಗಳನ್ನು ಪೂರೈಸುವಂತೆ ಸಲಹೆನೀಡಿದರು.ದೈವ ನರ್ತನದ ಕೆಲಸ ತುಂಬಾ ಕಷ್ಟದ ಕೆಲಸ ಶೇಖರ ಪಂಬದ ಅವರು ತನ್ನ ಅಜ್ಜ,ತಂದೆ ಹಾಗೂ ಹಿರಿಯರು ಹಾಕಿಕೊಟ್ಟ ಹೆಜ್ಜೆಯಲ್ಲಿ ಸಾಗಿ ಪ್ರಾಮಾಣಿಕತೆ ನಿಷ್ಠೆ ಮತ್ತು ದಕ್ಷತೆಯಿಂದ ದೈವದ ನರ್ತನ ಸೇವೆ ಮಾಡಿದ್ದು,ಅವರಿಗೆ ಆರ್ಹವಾಗಿಯೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶೇಖರ ಪಂಬದ ಸಜೀಪ ಅವರು ನಂದನಹಿತ್ಲು ದೈವಸ್ಥಾನದಲ್ಲಿ ತನ್ನ ಹಿರಿಯರು ಕೂಡ ನರ್ತನಸೇವೆ ಮಾಡುತ್ತಾ ಬಂದಿದ್ದು,ಪ್ರಸ್ತುತ ತಾನು ಆಸೇವೆಯನ್ನು ಮುಂದುವರಿಸುತ್ತಿದ್ದೆನೆ.ದೈವ ಪ್ರೇರಣೆಯಿಂದಲೋ ತನ್ನ ಪ್ರಾಮಾಣಿಕ ಸೇವೆಗೆ ಈ ಪ್ರಶಸ್ತಿಲಭಿಸಿದ್ದು,ಮುಂದಿನದಿನದಲ್ಲು ಸೇಯಲ್ಲಿ ಯಾವುದೇ ಚ್ಯುತಿಬಾರದಂತೆ ಕಾರ್ಯನಿರ್ವಹಿಸುವುದಾಗಿ ನುಡಿದರು.
ದೈವಸ್ಥಾನಕ್ಕೆ ಸಂಬಂಧಪಟ್ಟ ಮನೆತನದ ವಿಶ್ವನಾಥ ಪೂಜಾರಿ ಪೊನ್ನಂಗಿಲಗುತ್ತು,ಸಂಜೀವಪೂಜಾರಿ ಪೆಲತ್ತಿಮಾರು, ಲೋಕೇಶ್ ಬಂಗೇರ ಗಾಣದಪಡ್ಪು,ಲೋಕನಾಥ ಪೂಜಾರಿ ಬಡಕೊಟ್ಟು, ಪ್ರಮುಖರಾದ ತುಂಬೆಗುತ್ತಿನ ಬಾಬುಶೆಟ್ಟಿ, ಶಿವರಾಮ್ ತುಂಬೆ,ಪ್ರವೀಣ್ ಶೆಣೈ, ದಿವಾಕರದಾಸಯ್ಯ,ಜಗನ್ನಾಥ ಕೆ.ತುಂಬೆ,ಶಿಲ್ಪಿ ಸದಾಶಿವ ಶೆಣೈ, ವಸಂತಪ್ರಭು,ಅಮ್ಮು ತುಂಬೆ, ದೇವದಾಸಶೆಟ್ಟಿ ಬಂಟ್ವಾಳ,ಸುದರ್ಶನ ಬಜ,ಉಮೇಶ್ ಅರಳ,ಜಯ ಸುವರ್ಣ ಶಿವಪ್ರಸಾದ್ ಕೊಟ್ಟಾರಿ ಮೊದಲಾದವರಿದ್ದರು.
ಪ್ರಕಾಶ್ ಅಂಚನ್ ಸ್ವಾಗತಿಸಿದರು.ವೆಂಕಟೇಶ್ ಬಂಟ್ವಾಳ ಸನ್ಮಾನಪತ್ರ ವಾಚಿಸಿದರು.