ಬಂಟ್ವಾಳ: ದ.ಕ. ಜಿ.ಪಂ. ಹಿ. ಪ್ರಾ ಶಾಲೆ ಬಾಳ್ತಿಲ ಇಲ್ಲಿ ಶಾಲೆಯ ನೂತನ ೭ತರಗತಿ ಕೊಠಡಿ, ಬಯಲು ರಂಗ ಮಂದಿರ ಮತ್ತು ಶಾಲಾ ಉದ್ಯಾನವನದ ಉದ್ಘಾಟನೆ, ಸ್ಮಾರ್ಟ್ ಕ್ಲಾಸ್, ಕುಡಿಯುವ ನೀರಿನ ಘಟಕ, ಪೀಠೋಪಕರಣ ಹಸ್ತಾಂತರ, ಶಾಲಾ ವಾರ್ಷಿಕೋತ್ಸವ, ಆಯುರ್ವೇದ ವನ ಉದ್ಘಾಟನೆ, ಕೈ ತೊಳೆಯುವ ಘಟಕದ ಉದ್ಘಾಟನಾ ಸಮಾರಂಭ ಶುಕ್ರವಾರ ನಡೆಯಿತು.
ಬೆಳಿಗ್ಗೆ ಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ಅಣ್ಣು ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ಆ ಬಳಿಕ ಶಾಲೆಯಿಂದ ಶೈಕ್ಷಣಿಕ ಜಾಗೃತಿಯ ಆಕರ್ಷಕ ಮೆರವಣಿಗೆ ಹೊರಟು ನೀರಪಾದೆಯವರೆಗೆ ಸಾಗಿ ಶಾಲೆಗೆ ಮರಳಿತು. ಗೊಂಬೆ, ಬಣ್ಣದ ಕೊಡೆ, ಚೆಂಡೆ , ವಾದ್ಯ ಬ್ಯಾಂಡ್ ನ ಹಿಮ್ಮೇಳ ಮೆರವಣಿಗೆಗೆ ಮೆರುಗು ನೀಡಿತು.
ನೂತನ ಕೊಠಡಿಯನ್ನು ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ಸುಂದರ ವಾತವರಣದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಗೊಂಡಿರುವುದು ಊರಿಗೆ ಸಿಕ್ಕ ಗೌರವವಾಗಿದೆ. ಊರವರು ಹಾಗೂ ಅಧ್ಯಾಪಕ ವೃಂದದವರ ಶ್ರಮ ಇಲ್ಲಿ ಎದ್ದು ಕಾಣುತ್ತಿದೆ ಎಂದು ತಿಳಿಸಿದರು. ದಾನ ನೀಡಲು ಹೃದಯ ಶ್ರೀಮಂತಿಕೆ ಮುಖ್ಯ. ದಾನಿಗಳ ಸಹಕಾರದಿಂದ ಇಂತಹ ಶಾಲಾ ಕಟ್ಟಡ ನಿರ್ಮಾಣಗೊಂಡಿರುವುದೆ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದ್ದು ಇದು ಬೇರೆ ಶಾಲೆಗಳಿಗೆ ಮಾದರಿ ಎಂದರು. ಸರ್ಕಾರಿ ಶಾಲೆಗಳ ಮೇಲೆ ಊರಿನವರ ಜವಬ್ದಾರಿ ಇದೆ. ಶಿಕ್ಷಕ ವೃಂದ ಅಂತಹ ವಾತವರಣ ಸೃಷ್ಟಿಸಬೇಕು. ಕಾಲಚಕ್ರಕ್ಕೆ ಹೊಂದಿಕೊಂಡು ಸರಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದೊಂದಿಗೆ ಶಿಸ್ತು ಕಲಿಸುವ ಕಾರ್ಯ ಶಿಕ್ಷಣ ಸಂಸ್ಥೆಗಳಲ್ಲಿ ಆಗಬೇಕಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ
ಬಾಳ್ತಿಲ ಗ್ರಾಮದಲ್ಲಿ ಸರಸ್ವತಿಯ ಜಾತ್ರೆಯಾಗಿದೆ. ಮಕ್ಕಳ ಕೊರತೆ, ಆಂಗ್ಲ ಮಾಧ್ಯಮದ ಮೋಹದಿಂದ ಕನ್ನಡ ಶಾಲೆಗಳು ಮುಚ್ಚುತ್ತಿದೆ. ಶಾಲಾಭಿವೃದ್ದಿ ಸಮಿತಿಯವರು ಊರವರನ್ನು ಸೇರಿಸಿಕೊಂಡು ಒಟ್ಟಾಗಿ ಕೆಲಸ ಮಾಡಿದ ಪರಿಣಾಮ ಶಾಲೆಯ ಅಭಿವೃದ್ದಿ ಬಾಳ್ತಿಲ ಶಾಲೆಯಲ್ಲಿ ಆಗಿದ್ದು ಬಂಟ್ವಾಳ ತಾಲೂಕಲ್ಲಿ ಇತಿಹಾಸ ಸೃಷ್ಟಿಯಾಗಿದೆ ಎಂದರು.
ಪಂಚಾಯತಿ ಅಧ್ಯಕ್ಷ ಬಿ.ಕೆ. ಅಣ್ಣು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶಾಲೆಗೆ ನೂತನ ಕೊಠಡಿ ಒದಗಿಸಿದ ದಾನಿಗಳಾದ ಕೇಶವ ಹೊಳ್ಳ ಹಾಗೂ ಪ್ರೇಮ ಕುಮಾರಿ ಕೆ. ಅವರನ್ನು ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ., ಕ್ಷೇತ್ರ ಸಮನ್ವಯಾಧಿಕಾರಿ ರಾಘವೇಂದ್ರ ಬಳ್ಳಾಲ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನೋಣಯ್ಯ ನಾಯ್ಕ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಸರಕಾರಿ ನೌಕರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರವು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ನವೀನ್ ಪಿ.ಎಸ್., ನಿವೃತ್ತ ಶಿಕ್ಷಕಿ ಪ್ರೇಮ ಕುಮಾರಿ ಈಶ್ವರಿ ಶಾಸ್ತ್ರಿ ಪಡಾರು, ಆದಿತ್ಯ ಎಂ. ಕೊಲ್ಲಾಜೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ
ಪಂಚಾಯತಿ ಸದಸ್ಯ ಅಶೋಕ್, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಶೆಟ್ಟಿ
ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಎಸ್ಡಿಎಂಸಿ ಅಧ್ಯಕ್ಷ ರವಿಚಂದ್ರ ಕೋರ್ಯ , ಮುಖ್ಯ ಶಿಕ್ಷಕಿ ಜಯಶ್ರಿ ಎಸ್. ಔದಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೇವದಾಸ ಚೆಂಡೆ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ವಸಂತ ಸಾಲಿಯಾನ್
ವಾರ್ಷಿಕೋತ್ಸವ ಸಮಿತಿ ಉಪಾಧ್ಯಕ್ಷ ಶರತ್ ಸೇನೆರೆ ಕೋಡಿ, ಎಂಸಿಎಫ್ನ ಎಸ್ ಗಿರೀಶ್
ಮಾಧವ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕ ಸಂತೋಷ್ ಕುಮಾರ್ ತುಂಬೆ ಸ್ವಾಗತಿಸಿದರು, ನಿವೃತ್ತ ಮುಖ್ಯ ಶಿಕ್ಷಕ
ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.