Author: admin
ಬಂಟ್ವಾಳ: ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಕನ್ನಡ ಭಾಷೆ ಕಲಿಕೆಗೆ ಹೆಚ್ಚಿನ ಮಹತ್ವ ನೀಡಬೇಕು. ಜ್ಞಾನ ಸಂಪಾದಿಸಲು ಪ್ರಶ್ನೆ ಕೇಳುವ ಧೈರ್ಯವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಪಠ್ಯಶಿಕ್ಷಣ ಸಂಪನ್ಮೂಲ ರಾಜ್ಯ ತರಬೇತುದಾರ ಜಯಾನಂದ ಪೆರಾಜೆ ಹೇಳಿದರು.ಅವರು ದ.ಕ.ಜಿ.ಪ.ಮಾ.ಹಿರಿಯ ಪ್ರಾಥಮಿಕ ಶಾಲೆ ಮಾಣಿಯಲ್ಲಿ ಶಿಕ್ಷಕರಿಗೆ ಏರ್ಪಡಿಸಲಾದ ಭಾಷಾ ಬೋಧನೆಯ ತರಬೇತು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ನಲಿ-ಕಲಿ ಶಿಕ್ಷಕರು ಚಟುವಟಿಕೆಯೊಂದಿಗೆ ಪರಿಣಾಮಕಾರಿಯಾಗಿ ಕನ್ನಡ ಭಾಷಾ ಕಲಿಕೆಯಲ್ಲಿ ಉಚ್ಚಾರ ಮತ್ತು ಅಕ್ಷರ ದೋಷಗಳನ್ನು ತಿದ್ದುವ ಬಗ್ಗೆ ಚರ್ಚಿಸಲಾಯಿತು. ಮಮತಾ ಕಿರಣ್ ಬಂಟ್ರಿAಜ , ಶಾಂತಿ ಪಾಯಸ್ ಸತ್ತಿಕಲ್ಲು, ಚೇತನಾ ಬಾಲ್ತಿಲ ಕಂಠಿಕ, ಶೀಲಾವತಿ ಮಾಣಿ ಅನಿಸಿಕೆ ವ್ಯಕ್ತಪಡಿಸಿದರು. ಸಮಾಲೋಚನಾ ಸಭೆಯಲ್ಲಿ ಮಾಣಿ ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಾವತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾಣಿ ವಲಯ ಸಿಆರ್‌ಪಿ ಸತೀಶ್ ಸ್ವಾಗತಿಸಿದರು. ಶಿಕ್ಷಕ ನಾಗೇಶ್ ಮಾಣಿ ವಂದಿಸಿದರು. ಕೆದಿಲ ಸಿಆರ್‌ಪಿ ಸುಧಾಕರ ಭಟ್ , ಕಾರ್ಲ ಶಾಲೆಯ ಮುಖ್ಯ ಶಿಕ್ಷಕಿ ಜಾನಕಿ, ಶಿಕ್ಷಣ ಸಂಯೋಜಕಿ ಪ್ರತಿಮಾ ವೈ. ಶುಭ ಹಾರೈಸಿದರು.
ಬಂಟ್ವಾಳ: ಸ್ವಚ್ಚತೆ ಹಾಗೂ ಕಸ ವಿಲೇವಾರಿಯ ಬಗ್ಗೆ ಅರಿವು ಮೂಡಿಸುವ ಕಸ ಪ್ರಸಂಗ ವಿಶೇಷ ಜಾಗೃತಿ ಕಾರ್ಯಕ್ರಮ ಬಂಟ್ವಾಳ ಪುರಸಭೆ ಹಾಗೂ ಕಾರ್ಮೆಲ್ ಕಾಲೇಜು ಮೊಡಂಕಾಪು ಇದರ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ಮಂಗಳವಾರ ಮೊಡಂಕಾಪುವಿನ ಕಾರ್ಮೆಲ್ ಪದವಿ ಕಾಲೇಜಿನಲ್ಲಿ ನಡೆಯಿತು. ಮಂಗಳೂರಿನ ಹಸಿರು ದಳದ ಸಂಯೋಜಕ ನಾಗರಾಜ್ ಬಜಾಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ನಮ್ಮ ಮನಸ್ಥಿತಿಯನ್ನು ಮೊದಲು ಬದಲಾಯಿಸಿಕೊಂಡು ಪರಿಸರದ ಸ್ವಚ್ಚತೆಗೆ ಆದ್ಯತೆ ನೀಡಬೇಕು. ನಮ್ಮಿಂದ ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿದಾಗ ಮಾತ್ರ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸಲು ಸಾಧ್ಯ ಎಂದರು.ಮುಖ್ಯ ಅತಿಥಿಗಳಾಗಿ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಆರೋಗ್ಯ ನಿರೀಕ್ಷಕ ರತ್ನಪ್ರಸಾದ್, ಪತ್ರಕರ್ತ ಸಂದೀಪ್ ಸಾಲ್ಯಾನ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಭ. ಡಾ. ಲತಾ ಫೆರ್ನಾಂಡೀಸ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ವಿಜೇತ ಕುಲಾಲ್ ವೇದಿಕೆಯಲ್ಲಿ ಹಾಜರಿದ್ದರು. ವಿದ್ಯಾರ್ಥಿಗಳಾದ ಜೋಸ್ವಿಟಾ ಸ್ವಾಗತಿಸಿದರು, ಇಮ್ದಾದ್ ವಂದಿಸಿದರು, ಪ್ರೇಕ್ಷಾ ಕಾರ್ಯಕ್ರಮ ನಿರೂಪಿಸಿದರು.
ಬಂಟ್ವಾಳ: ಇಲ್ಲಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ಸಂಭ್ರಮ ಸಡಗರದಿಂದ ಸೋಮವಾರ ನಡೆಯಿತು.ಕ್ಷೇತ್ರದ ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯರ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಕೆ.ಸುಂದರ ರಾವ್ ಮತ್ತು ಅರ್ಚಕ ನಾಗೇಶ ರಾವ್ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.ಇದೇ ವೇಳೆ ದೇವರ ಬಲಿ, ನೃತ್ಯ ಭಜನೆ ಸಹಿತ ಪಲ್ಲಕಿ ಉತ್ಸವ, ಸಾಮೂಹಿಕ ಆಶ್ಲೇಷ ಬಲಿ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು. ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ, ಸದಸ್ಯರಾದ ರಾಜೇಶ ಗೋವಿಂದಬೆಟ್ಟು, ಶರತ್ ಕುಮಾರ್ ಕೊಯಿಲ, ಆನಂದ ಬುರಾಲು, ಲೋಕೇಶ ಕೈತ್ರೋಡಿ, ನಳಿನಿ ಬದನಡಿ, ಯಮುನಾ ಕೈತ್ರೋಡಿ, ವಾಸ್ತುಶಿಲ್ಪಿ ಮೋನಪ್ಪ ಆಚಾರ್ಯ ಬೈದಗುತ್ತು, ರಾಯಿ ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ಮಾಜಿ ಅಧ್ಯಕ್ಷರಾದ ಬಿ.ದಯಾನಂದ ಸಪಲ್ಯ, ಹರೀಶ ಆಚಾರ್ಯ ರಾಯಿ,…
ಬಂಟ್ವಾಳ: ನೇತ್ರಾವತಿ ನದಿ ತೀರದಲ್ಲಿರುವ, ಸಜೀಪಮುನ್ನೂರು ಗ್ರಾಮದ ಮುಗುಳ್ಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಸೋಮವಾರ ಶ್ರೀಕ್ಷೇತ್ರದಲ್ಲಿ ನಡೆಯಿತು. ಕ್ಷೇತ್ರದ ನಾಗರ ಕಟ್ಟೆಯಲ್ಲಿ ನಾಗತಂಬಿಲ ನಡೆಯಿತು ಬಳಿಕ ಆಶ್ಲೇಷ ಬಲಿ ಹೋಮ, ಆಶ್ಲೇಷ ಬಲಿ ಪೂಜೆ, ಸಾನಿಧ್ಯ ಕಲಶಾಭಿಷೇಕ, ಗಣಯಾಗ ಹಾಗೂ ವಿಶೇಷ ಮಹಾಪೂಜೆ ನೆರವೇರಿತು. ಸಜೀಪಮಾಗಣೆಯ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.
ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ವರ್ಣಾಂಜಲಿ ಡಿ.24ರಂದು ಭಾನುವಾರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 9.30ಕ್ಕೆ ಏರ್ಯ ಆಳ್ವ ಫೌಂಢೇಷನ್‌ನ ಏರ್ಯ ಬಾಲಕೃಷ್ಣ ಹೆಗ್ಡೆ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ ಬಿ. ರಾಮಚಂದ್ರ ರಾವ್, ಕರಣ್ ಕೆಟರರ್‍ಸ್‌ನ ಕೆ.ಜಿ.ವಿಠಲ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ. ಕೃಷ್ಣಕುಮಾರ್ ಪೂಂಜ ತಿಳಿಸಿದ್ದಾರೆ.
ಬಂಟ್ವಾಳ: ನೀರಿನ ಅಂತರ್ಜಲ ಕೊರತೆಯ ಬಗ್ಗೆ ಸಂವಾದ ಕಾರ್ಯಕ್ರಮ ಬಿ.ಸಿ.ರೋಡಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ನೇತ್ರಾವತಿ ಕೃಷಿಕರ ಅಭಿವೃದ್ಧಿ ಸಂಘದ ಒಕ್ಕೂಟ ಬಂಟ್ವಾಳ ಇದರ ಅಧ್ಯಕ್ಷ ಚಂದಪ್ಪ ಮೂಲ್ಯ ಅಧ್ಯಕ್ಷತೆ ವಹಿಸಿದರು, ತಾಲೂಕು ಪಂಚಾಯತ್ ಸಹಾಯಕ ಲೆಕ್ಕಾಧಿಕಾರಿ ಹಾಗೂ ವ್ಯವಸ್ಥಾಪಕಿ ಶಾಂಭವಿ.ಎಸ್.ರಾವ್ , ತಾಲೂಕು ಪಂಚಾಯತ್ ಜಲ್ ಜೀವನ್ ಮಿಷನ್ ಕೇಸ್ ವರ್ಕರ್ ಬಾಲಕೃಷ್ಣ ಮೂಲ್ಯ, ದಿಶಾ ಸಂಸ್ಥೆ ಕೈಕಂಬ ಮಂಗಳೂರು ಇದರ ಯೋಜನಾ ನಿರ್ದೇಶಕ ಸಿಲ್ವೆಸ್ಟರ್ ಡಿ, ಸೋಜಾ, ನೇತ್ರಾವತಿ ಕೃಷಿಕರ ಅಭಿವೃದ್ಧಿ ಸಂಘಗಳ ಒಕ್ಕೂಟ ಬಂಟ್ವಾಳ ಇದರ ಕಾರ್ಯದರ್ಶಿ ದೇವಪ್ಪ ಕುಲಾಲ್, ಮೀನುಗಾರಿಕಾ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ|ರಾಮಚಂದ್ರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಂಭಕಂಠಿಣಿ ಸಂಘದ ಅಧ್ಯಕ್ಷ ರಾಮಕೃಷ್ಣ ನಾಯಕ್ ಸ್ವಾಗತಿಸಿದರು. ಸಿಲ್ವೆಸ್ಟರ್ ಡಿ ಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಪ್ಪ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು, ದಿಶಾ ಸಂಸ್ಥೆಯ ಯೋಜನಾ ಸಂಯೋಜಕ ನಿಹಾಲ್ ಮಚಾದೊ ರವರು ವಂದಿಸಿದರು.ಬಂಟ್ಟಾಳ ತಾಲೂಕಿನ 10 ಪಂಚಾಯತ್ ವ್ಯಾಪ್ತಿಯಲ್ಲಿ ರುವ 40 ಕೃಷಿಕರ ಅಭಿವೃದ್ಧಿ ಸಂಘದ…
ಶ್ರೀ ಮಹಿಷ ಮರ್ದಿನಿ ಕಂಬಳ ಸಮಿತಿ ಹೊಕ್ಕಾಡಿಗೋಳಿ ಇದರ ವತಿಯಿಂದ 2024 ಮಾರ್ಚ್ 16 ರಂದು ನಡೆಯುವ ಇತಿಹಾಸ ಪ್ರಸಿದ್ಧ ಶ್ರೀ ವೀರ ವಿಕ್ರಮ ಜೋಡುಕರೆ ಬಯಲು ಕಂಬಳ ಹೊಕ್ಕಾ ಡಿಗೋಳಿ ಕಂಬಳದ ಕರೆ ಮುಹೂರ್ತವು ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಕೃಷ್ಣ ಪ್ರಸಾದ್ ಅಸ್ರ ಣ್ಣರ ದಿವ್ಯ ಹಸ್ತದಿಂದ ಶುಭ ಮುಹೂರ್ತದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಹೊಕ್ಕಾಡಿಗೋಳಿ ಕಂಬಳ ಸಮಿತಿಯ ಅಧ್ಯಕ್ಷರಾದ ಶ್ರೀ ರಶ್ಮಿತ್ ಶೆಟ್ಟಿ ಕೈತ್ರೋಡಿ ನೊಣಲ್ ಗುತ್ತು, ಗೌರವ ಅಧ್ಯಕ್ಷರಾದ ಶ್ರೀ ಸಂಜೀವ ಶೆಟ್ಟಿ ಗುಂಡ್ಯಾರು,ಪ್ರದಾನ ಕಾರ್ಯದರ್ಶಿ ಪ್ರಭಾಕರ್ ಎಚ್ ಹುಲಿಮೇರು,ಕಾಯದರ್ಶಿ ಪುಷ್ಪರಾಜ್ ಜೈನ್.ಪೂಂಜ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ರತ್ನಕುಮಾರ್ ಚೌಟ, ಹಿರಿಯ ಕಂಬಳ ಸಂಘಟಕರಾದ ಜಗತ್ಪಾಲ್ ಶೆಟ್ಟಿ ಉಮನೊಟ್ಟು,ಕುಟ್ಟಿ ಶೆಟ್ಟಿ ಹಕ್ಕೇರಿ,ಆನಂದ್ ಶೆಟ್ಟಿ ಹಕ್ಕೇರಿ, ಸುರೇಶ್ ಕೆ ಶೆಟ್ಟಿ ಹಕ್ಕೇರಿ, ಸಚಿನ್ ಶೆಟ್ಟಿ ಹಕ್ಕೇರಿ,ಜಯಂತ್ ಶೆಟ್ಟಿ ಹಕ್ಕೇರಿ, ಸಂತೋಷ್ ಶೆಟ್ಟಿ ಕೊನೆರೊಟ್ಟು, ರಾಜೇಶ್ ಶೆಟ್ಟಿ ಸಿದ್ದಕಟ್ಟೆ ಸ್ಥಳ ದಾನಿಗಳಾದ: ರಾಜು ಶೆಟ್ಟಿ ಮತ್ತು…
ಬಂಟ್ವಾಳ: ಕಳೆದ ಜೂನ್ ಅಂತ್ಯದವರೆಗೂ ಮಳೆಯಿಲ್ಲದೆ ಬರಗಾಲ ಎದುರಾಗಿ ಕಣ್ಣೆದುರೇ ತಾವು ಬೆಳೆಸಿದ ಕೃಷಿ ನಾಶವಾಗುವುತ್ತಿರುವ ಸಂಕಷ್ಟವನ್ನು ಜಿಲ್ಲೆಯ ಅನೇಕ ರೈತರು ಅನುಭವಿಸಿದ್ದರು. ಇದರಿಂದ ಎಚ್ಚೆತ್ತುಕೊಂಡಿರುವ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮಸ್ಥರು ಈ ಭಾರಿ ಮಳೆ ಮುಗಿಯುತ್ತಿದ್ದಂತೆಯೇ ತಮ್ಮ ಗ್ರಾಮಗಳಲ್ಲಿ ಹರಿಯುವ ತೊರೆಗಳ ಚೆಕ್ ಡ್ಯಾಂಗಳಿಗೆ ಶ್ರಮದಾನದ ಮೂಲಕ ಒಡ್ಡುಗಳನ್ನು ನಿರ್ಮಿಸಿ ವ್ಯರ್ಥವಾಗಿ ಹರಿದು ನದಿ ಸೇರುತ್ತಿದ್ದ ನೀರನ್ನು ಸಂರಕ್ಷಿಸಿ ಜಲಕ್ರಾಂತಿ ಮಾಡಿದ್ದಾರೆ. ಇದರಿಂದಾಗಿ ಇಡೀ ಅಮ್ಟಾಡಿ ಗ್ರಾಮ ಪರಿಸರದ ತೊರೆ, ಬಾವಿ ಕೆರೆಗಳು ಹಾಗೂ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಿ ಜಲಸಮೃದ್ಧಗೊಂಡಿದೆ. ಕಳೆದ ಬೇಸಿಗೆಯಲ್ಲಿನ ನೀರಿನ ಸಮಸ್ಯೆ ಅನೇಕ ಕೃಷಿಕರನ್ನು ಕಂಗೆಡಿಸಿದೆ. ಅಮ್ಟಾಡಿ ಪರಿಸರದಲ್ಲಿ ದೊಡ್ಡ ತೊರೆಗಳಿದ್ದು ಅದಕ್ಕೆ ಚೆಕ್ ಡ್ಯಾಂಗಳಿದ್ದರೂ ಸಕಾಲದಲ್ಲಿ ಹಲಗೆಯಾಕದ ಕಾರಣ ಹಾಗೂ ಒಡ್ಡು ನಿರ್ಮಿಸಿದ ಕಾರಣ ನೀರು ನದಿ ಸೇರುತ್ತಿತ್ತು. ಮೊಡಂಕಾಫು ಇನ್ಪೆಂಟ್ ಜೀಸಸ್ ಚರ್ಚ್‌ನ ಧರ್ಮಗರುಗಳಾದ ವಂದನೀಯ ವಲೇರಿಯನ್ ಡಿಸೋಜಾ ಅವರ ಮಾರ್ಗದರ್ಶನಂತೆ ಅಮ್ಟಾಡಿ ಗ್ರಾಮದ ತೊರೆಗಳಲ್ಲಿರುವ ಚೆಕ್‌ಡ್ಯಾಂಗಳಿಗೆ ಒಡ್ಡುಕಟ್ಟಿ ನೀರು ನಿಲ್ಲಿಸುವ…
ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿ ನಡೆಯಲಿರುವ ಕಲಾವಳಿ-2024 ಕಾರ್ಯಕ್ರಮದ ಲಾಂಛನ ಬಿಡುಗಡೆ ಕಾರ್ಯಕ್ರಮ ಇತ್ತೀಚಿಗೆ ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ವಾರ್ಷಿಕ ಮಹಾ ಸಭೆ ಕಾರ್ಯಕ್ರಮದಲ್ಲಿ ನಡೆಯಿತು. ಜಿಲ್ಲಾ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಮತ್ತು ಜಿಲ್ಲಾ ಸಂಘದ ಪದಾಧಿಕಾರಿಗಳು ಲಾಛಂನ ಬಿಡುಗಡೆ ಗೊಳಿಸಿದರು. ಬಂಟ್ವಾಳ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ, ಉಪಾಧ್ಯಕ್ಷ ಸುಕುಮಾರ್ ಬಂಟ್ವಾಳ, ಕೋಶಾಧಿಕಾರಿ ರಮೇಶ್ ಸಾಲಿಯಾನ್ , ಸಮಿತಿ ಸದಸ್ಯರಾದ ಮಚೇಂದ್ರ ಸಾಲಿಯಾನ್, ಸುರೇಶ ಕುಲಾಲ್, ರಮೇಶ್ ಸಾಲಿಯಾನ್ ಸಂಚಯಗಿರಿ, ನಾರಾಯಣ ಸಿ.ಪೆರ್ನೆ, ಆಶಾ , ಜಲಜಾಕ್ಷಿ ಕುಲಾಲ್ ಹಾಗೂ ಜಿಲ್ಲೆಯ ಪ್ರಮುಖ ಕುಲಾಲ ಸಂಘದ ಅಧ್ಯಕ್ಷರುಗಳು, ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು
ಬಂಟ್ವಾಳ: ಫರಂಗಿಪೇಟೆ ಬೀದಿಯಲ್ಲಿ ಅನಾಥನಾಗಿ ಬಿದ್ದುಕೊಂಡಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿ ಸಕಾಲದಲ್ಲಿ ಸಿಕ್ಕ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖನಾಗಿದ್ದಾನೆ. ಮಾತ್ರವಲ್ಲದೆ, ಕಳೆದ 12 ವರ್ಷಗಳಿಂದ ಕುಟುಂಬ ಬಂಧುಗಳಿಂದ ದೂರವಾಗಿ ಉಳಿದಿದ್ದ ಈತ ಇದೀಗ ತನ್ನ ಕುಟುಂಬ ಬಂಧುಗಳನ್ನು ಮರಳಿ ಪಡೆದಿದ್ದಾನೆ.ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಅವರ ಸಕಾಲಿಕ ಸೇವೆ ಮಾನಸಿಕ ಅಸ್ವಸ್ಥ ವ್ಯಕ್ತಿಯ ಜೀವನದಲ್ಲಿ ಮಹತ್ತರವಾದ ಬದಲಾವಣೆ ತಂದಿದೆ. ಕಳೆದ ನವೆಂಬರ್ 15 ರಂದು ಫರಂಗಿಪೇಟೆಯ ಶ್ರೀರಾಮ ವಿದ್ಯಾಸಂಸ್ಥೆಯ ಬಳಿ ಮರಳಿನಲ್ಲಿ ಮಾನಸಿಕ ಅಸ್ವಸ್ಥ ಉಮಾಮಹೇಶ್ವರ ಹೊರಳಾಡಿಕೊಂಡಿದ್ದಾಗ ಗಮನಿಸಿದ ಕೃಷ್ಣ ಕುಮಾರ್ ಪೂಂಜ ಊಟ, ಉಪಹಾರ, ಬಟ್ಟೆ ನೀಡಿ ಸೇವಾಂಜಲಿಯ ಬಂಧುಗಳ ಸಹಕಾರ ಪಡೆದು ಅಂದೇ, ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮನೋವೈದ್ಯ ಡಾ. ಶ್ರೀನಿವಾಸ್ ಭಟ್ ಅವರ ಒಂದು ತಿಂಗಳ ಚಿಕಿತ್ಸೆಯ ಬಳಿಕ ಮಾನಸಿಕ ಅಸ್ವಸ್ಥನಾಗಿದ್ದ ಉಮಾಮಹೇಶ್ವರ ಗುಣ ಮುಖನಾಗಿದ್ದಾನೆ. ಈ ಸಂದರ್ಭ ಕೃಷ್ಣ ಕುಮಾರ್…








