Author: admin

ಬಂಟ್ವಾಳ: ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸಂಘ ಮಂಗಳೂರು ಇದರ ಆಶ್ರಯದಲ್ಲಿ ಮಂಗಳೂರಿನ ಪುರಭವನದಲ್ಲಿ ನಡೆಯುವ ಪ್ರಪ್ರಥಮ ಉಭಯ ಜಿಲ್ಲೆಗಳ ಗ್ಯಾರೇಜ್ ಮಾಲಕರ ಹಾಗೂ ನೌಕರರ ಬೃಹತ್ ಮಹಾಸಮಾವೇಶದ ಪ್ರಯುಕ್ತ ಬಂಟ್ವಾಳ‌ ವಲಯ ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ಸೋಮವಾರ ಬೆಳಿಗ್ಗೆ ಬಿ.ಸಿ.ರೋಡಿನಿಂದ ಬೈಕ್ ರ್ಯಾಲಿ ಹಾಗೂ ವಾಹನ ಜಾಥ ನಡೆಯಿತು. ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ವಾಹನ ಜಾಥಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.ಈ ಸಂದರ್ಭ ಗ್ಯಾರೇಜ್ ಮಾಲಕರ ಸಂಘದ ಬಂಟ್ವಾಳ ವಲಯ ಅಧ್ಯಕ್ಷ ಜಗದೀಶ್ ರೈ, ಪ್ರಧಾನ ಕಾರ್ಯದರ್ಶಿ ರಾಜೇಶ್ ಸಾಲ್ಯಾನ್, ಕೋಶಾಧಿಕಾರಿ ಜನಾರ್ದನ ಕುಲಾಲ್, ಸಂಚಾಲಕ ಸುಧಾಕರ ಸಾಲ್ಯಾನ್, ಪ್ರಮುಖರಾದ ಗಣೇಶ್ ಸುವರ್ಣ ತುಂಬೆ, ಅಣ್ಣು ಪೂಜಾರಿ, ರಾಜೇಶ್, ರಮೇಶ್ ಗಣೇಶ್ ಟಯರ್ಸ್, ಸುಧೀರ್, ರಮೇಶ್ ಭಂಡಾರಿ, ಪ್ರಶಾಂತ ಭಂಡಾರ್ಕರ್ ಮೊದಲಾದವರು ಉಪಸ್ಥಿತರಿದ್ದರು. ಪೇಟ ಧರಿಸಿ ಗ್ಯಾರೇಜ್ ಮಾಲಕರ ಸಂಘದ ಸದಸ್ಯರು ಗಮನ ಸೆಳೆದರೆ, ಗ್ಯಾರೇಜ್ ಜೀವನ…

Read More

ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬಾ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶಾಭೀಷೇಕದ ಪ್ರಯುಕ್ತ ಜ.31 ಮತ್ತು ಫೆ. 3 ರಂದು ಪಣೋಲಿ ಬೈಲು ಕಲ್ಲುರ್ಟಿ ಕ್ಷೇತ್ರದಲ್ಲಿ ಅಗೇಲು ಸೇವೆ ಇರುವುದಿಲ್ಲ. ಫೆ. 5ರಂದು “ಅಗೇಲು ಸೇವೆ” ಇರಲಿದೆ. ನಂದಾವರ ಕ್ಷೇತ್ರದ ವಾರ್ಷಿಕ ಜಾತ್ರೆಯ ಪ್ರಯುಕ್ತ ಫೆ. 07 ರಂದು ಸದ್ರಿ ಕ್ಷೇತ್ರದಲ್ಲಿ ಅಗೇಲು ಸೇವೆ” ನಡೆಯುವುದಿಲ್ಲ. ನಂತರದ ದಿನಗಳಲ್ಲಿ ಎಂದಿನಂತೆ “ಅಗೇಲು ಸೇವೆ” ನಡೆಯುತ್ತದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ‌

Read More

ಬಂಟ್ವಾಳ: ಪ್ರತಿಯೊಂದು ಚರಾಚರ ವಸ್ತುವಿನಲ್ಲೂ ಜ್ಞಾನವಾಗಿ ದೇವರ ಅಸ್ಥಿತ್ವವಿದೆ. ದೇವರ ವಿರಾಟ್ ಸ್ವರೂಪವನ್ನು ಗ್ರಹಿಸುವ ಜ್ಞಾನ ನಮ್ಮಲ್ಲಿದ್ದಾಗ ದೇವರ ಸಾಕ್ಷತ್ಕಾರ ಪಡೆಯಲು ಸಾಧ್ಯವಿದೆ, ದೇವರನ್ನು ನಾವು ಉಪಾಸನೆ ಮಾಡಿದಾಗ ನಾವು ವಿಜ್ಞಾನಿಗಳಾಗುತ್ತೇವೆ ಎಂದು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಹೇಳಿದರು. ನಂದಾವರ ಶ್ರೀ ವಿನಾಯಕ‌ ಶಂಕರ ನಾರಾಯಣ ದುರ್ಗಾಂಬ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶಾಭಿಷೇಕ, ನೂತನ ರಥ ಸಮರ್ಪಣೆ ಹಾಗೂ ಜಾತ್ರಾಮಹೋತ್ಸವದ ಪ್ರಯುಕ್ತ ನಡೆದ ಮೊದಲ ದಿನದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.ಮುಗಿಯದಷ್ಟು ಸಂಶೋಧನೆ ಮಾಡಬಹುದಾದ ರಹಸ್ಯ ಈ ಭೂ ಮಂಡಲದಲ್ಲಿದೆ. ಪ್ರಕೃತಿಯೊಂದಿಗೆ ಈ ದೇಹವನ್ನು ಸಂಯೋಜಿಸಲಾಗಿದೆ. ಪಂಚಭೂತಗಳ ತತ್ವವು ನಮ್ಮ ದೇಹದಲ್ಲಿದೆ. ಸೃಷ್ಡಿಯನ್ನು ಸೃಷ್ಟಿಸಿದ ಚೈತನ್ಯ ನಮ್ಮ‌ ದೇಹದಲ್ಲೂ ಇದೆ. ದೇವಸ್ಥಾನ ಪಂಚ ಪ್ರಾಕಾರಗಳಿಂದ‌ ನಿರ್ಮಾಣವಾದರೆ ದೇಹವು ಪಂಚ ಕೋಶಗಳಿಂದ ರಚಿತವಾಗಿದೆ. ದೇಹ ಎನ್ನುವ ನಮ್ಮ ದೇವಸ್ಥಾನಕ್ಕೆ ತಂತ್ರಿಗಳು ನಾವೇ, ಅಲ್ಲಿಗೆ ಕಲಶಾಭಿಷೇಕ ಮಾಡ ಬೇಕಾದವರು ನಾವು. ಆದ್ದರಿಂದ ಉತ್ತಮವಾದ ಆಚಾರ ವಿಚಾರಗಳನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದರು.ಈ ಸಂದರ್ಭ…

Read More

ಬಂಟ್ವಾಳ: ತಾಲೂಕಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು ಮತ್ತು ಸ್ಥಳೀಯ ಭಕ್ತರು ಭಾನುವಾರ ಶ್ರಮದಾನ ನಡೆಸಿದರು. ಕ್ಷೇತ್ರದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ, ಉಪಾಧ್ಯಕ್ಷರಾದ ಎಂ.ಬೂಬ ಸಪಲ್ಯ, ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ಕೆ.ಬಾಬು ಸಪಲ್ಯ, ಪ್ರಧಾನ ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ, ಕೋಶಾಧಿಕಾರಿ ಅಭಿಷೇಕ್ ಪಿಲಿಂಗಾಲು, ಹರೀಶ ಪಿಲಿಂಗಾಲು, ಯೋಜನೆ ಮೇಲ್ವಿಚಾರಕಿ ರೇಖಾ ಕಾಡಬೆಟ್ಟು, ವಲಯಾಧ್ಯಕ್ಷ ಉಮೇಶ್ ಮತ್ತಿತರರು ಇದ್ದರು.

Read More

ಬಂಟ್ವಾಳ: ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ,ನೇತ್ರಾವತಿ ವಲಯ ಜಿಲ್ಲಾ ಸಮಿತಿ ವತಿಯಿಂದ ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ, ಬಂಟ್ವಾಳ ರಥ ಸಪ್ತಮಿ ಪ್ರಯುಕ್ತ ಭಾನುವಾರ ಮುಂಜಾನೆ ಸಾಮೂಹಿಕ 108 ಸೂರ್ಯ ನಮಸ್ಕಾರ ನಡೆಯಿತು.‌ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ,ಗ್ರಾಮಣಿ ವೆಂಕಟರಮಣ ಮುಚ್ಚಿನ್ನಯ ಕಳಿಮರ್ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು. ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯ ದಕ್ಷಿಣ ಕನ್ನಡ ಬಂಟ್ವಾಳ ತಾಲೂಕು ಪ್ರಾಂತ ಸಂಚಾಲಕ, ಸಂಘಟನ ವಿಭಾಗದ ಹರೀಶ, ಪ್ರಾಂತ ಪ್ರತಿನಿಧಿ ಶಿವಾನಂದ, ಜಿಲ್ಲಾ ಶಿಕ್ಷಣ ಪ್ರಮುಖ ಹರೀಶ್. ತಾಲೂಕು ಸಹ ಸಂಚಾಲಕಿ ನಯನ, ತಾಲೂಕು ವಿಸ್ತರಣ ಪ್ರಮುಖ್ ಕಿಶೋರ್ ಉಪಸ್ಥಿತರಿದ್ದರು.ರಥಸಪ್ತಮಿಯ ವಿಶೇಷತೆ ಬಗ್ಗೆ ಲೋಕಯ್ಯ ಬೌದ್ಧಿಕ್ ನೀಡಿದರು. ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಸುರೇಶ ವಂದಿಸಿದರು.

Read More

ಬಂಟ್ವಾಳ: ಇತಿಹಾಸ ಪ್ರಸಿದ್ದ ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ದೇವಸ್ಥಾನದ ಅಷ್ಡಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅದ್ದೂರಿ ಹೊರೆಕಾಣಿಕೆ ಮೆರವಣಿಗೆಗೆ ಮಾರ್ನಬೈಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಭಾನುವಾರ ಸಂಜೆ ಚಾಲನೆ ನೀಡಿದರು.ಮಾರ್ನಬೈಲು ಮುಖ್ಯ ರಸ್ತೆಯ ಮೂಲಕ ದೇವಸ್ಥಾನಕ್ಕೆ ಸಾಗಿ ಬಂದ ಮೆರವಣಿಗೆಗೆ ಗೊಂಬೆ ಕುಣಿತ, ಚೆಂಡೆ ವಾದನ, ಕೊಂಬು ವಾದ್ಯ ವಾದನ, ತಾಲೀಮ್ ತಂಡ, ಭಜನಾ ತಂಡ, ಪೂರ್ಣ ಕುಂಭ ಕಲಶ ಹೊತ್ತ ಮಹಿಳೆಯರ ತಂಡ , ಸುಡು ಮದ್ದು ಪ್ರದರ್ಶನ ವಿಶೇಷ ಮೆರುಗು ನೀಡಿತು.ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಶಾಸಕ ರಾಜೇಶ್ ನಾಯ್ಕ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ,ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಶ್ ಜಿ.ಶೆಟ್ಟಿ ದಳಂದಿಲ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿರಾಜ ರಾವ್ ನೂಯಿ, ಕಾರ್ಯಧ್ಯಕ್ಷ ಕೆ.‌ ವಿಶ್ವನಾಥ ಆಳ್ವ ಕಾಂತಾಡಿಗುತ್ತು, ಕಾರ್ಯನಿರ್ವಾಹಣಾಧಿಕಾರಿ ಜಯಮ್ಮ ಪಿ.,…

Read More

ಚಿತ್ರ: ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶಾಭಿಷೇಕ ಹಾಗೂ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಬಂಟ್ವಾಳ: ತಾಲೂಕಿನ ಬಿ.ಸಿ.ರೋಡ್ ಚಂಡಿಕಾನಗರದಲ್ಲಿರುವ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದ ಬ್ರಹ್ಮಕಲಶಾಭಿಷೇಕ ಮತ್ತು ಜಾತ್ರೋತ್ಸವ ಫೆ.22ರಿಂದ 28ರವರೆಗೆ ನಡೆಯುವ ಹಿನ್ನೆಲೆಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಭಾನುವಾರ ಕ್ಷೇತ್ರದಲ್ಲಿ ನಡೆಯಿತು. ಉದ್ಯಮಿ ರವಿ ಶೆಟ್ಟಿ ಕತಾರ್ ಬಿಡುಗಡೆಗೊಳಿಸಿ, ಶುಭ ಹಾರೈಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ, ಕೋಶಾಧಿಕಾರಿ ಐತಪ್ಪ ಆಳ್ವ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ಚರಣ್ ಜುಮಾದಿಗುಡ್ಡೆ, ಪ್ರದೀಪ್ ರಾವ್ ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ಬಿ.ರಾಮಚಂದ್ರ ರಾವ್, ಜೊತೆ ಕಾರ್ಯದರ್ಶಿ ಐತಪ್ಪ ಪೂಜಾರಿ, ಕೋಶಾಧಿಕಾರಿ ಸಂಕಪ್ಪ ಶೆಟ್ಟಿ ಸಹಿತ ವಿವಿಧ ಸಮಿತಿಗಳ ಪ್ರಮುಖರು ಹಾಜರಿದ್ದರು.

Read More

ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಕಾಪು ಶ್ರೀ ಉಮಾಮಹೇಶ್ವರ ದೇವಸ್ಥಾನದ ಪುನರ್ ನಿರ್ಮಾಣದ ಪ್ರಯುಕ್ತ ನೂತನ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ ಶುಕ್ರವಾರ ನಡೆಯಿತು. ಉಡುಪಿ ಅದಮಾರು ಮಠದ ಕಿರಿಯ ಯತಿವರ್ಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರು ಶಿಲಾನ್ಯಾಸ ನೆರವೇರಿಸಿದರು. ಬಳಿಕ ನಡೆದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಆಶೀರ್ವಚನ ನೀಡಿ ಮಾತನಾಡಿ, ಪ್ರಕೃತಿಯಲ್ಲಿ ದೇವರನ್ನು ಕಂಡ ಸಂಸ್ಕೃತಿ ನಮ್ಮದು. ಪ್ರಕೃತಿ ಆರಾಧನೆ ಮೂಲಕ ದೇವರನ್ನು ಕಾಣಬೇಕು.ಪ್ರಕೃತಿಗೆ ಹಾನಿಯಾಗದಂತೆ ದೇವಸ್ಥಾನ ನಿರ್ಮಾಣವಾಗುವ ಮೂಲಕ ಮಾದರಿ ಬ್ರಹ್ಮಕಲಶೋತ್ಸವ ನಡೆಯಬೇಕು ಎಂದು ನುಡಿದರು.ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಪ್ರ.ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಅವರು ಆಶೀರ್ವಚನ ನೀಡಿದರು. ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಅಧ್ಯಕ್ಷತೆ ವಹಿಸಿದ್ದರು.ಕ್ಷೇತ್ರದ ತಂತ್ರಿಗಳಾದ ಶ್ರೀಪಾದ ಪಾಂಗಣ್ಣಾಯ ಪ್ರಸ್ತಾವಿಸಿದರು. ಅಂಡಿಂಜೆ ಶ್ರೀ ಸುಽಂದ್ರ ವಿಷ್ಣುತೀರ್ಥ ಪ್ರಭು ಶ್ರೀ ಪಾದರು,ಶ್ರೀ ಕ್ಷೇ.ಧ.ಗ್ರಾ.ಯೋಜನೆ ಸಮುದಾಯ ಮತ್ತು ಅಭಿವೃದ್ಧಿ ವಿಭಾಗ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಇರ್ವತ್ತೂರು ಗ್ರಾ.ಪಂ.ಅಧ್ಯಕ್ಷ…

Read More