ಬಂಟ್ವಾಳ: ಕಾರ್ಮಿಕ ವಿದ್ಯಾರ್ಥಿ ವೇತನ ಪರಿಷ್ಕರಣೆ ಪ್ರಸ್ತಾಪ ಕೈಬಿಡುವಂತೆ ತಾ.ಒಂ. ಮಾಜಿ ಸದಸ್ಯ ಪ್ರಭಾಕರ ಪ್ರಭು ಕಾಂಇಕ ಸಚಿವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಕಾರ್ಮಿಕ ಇಲಾಖೆಯ ಅಡಿಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳನ್ನು ಹಲವಾರು ವರ್ಷಗಳಿಂದ ಸರಕಾರದಿಂದ ನೀಡಲಾಗುತ್ತಿತ್ತು. ಇದರಿಂದ ಕಾರ್ಮಿಕರ ಮಕ್ಕಳಿಗೆ ಉನ್ನತ ವ್ಯಾಸಂಗ ಸೇರಿದಂತೆ ಇಂಜಿನಿಯರಿಂಗ್, ವೈದ್ಯಕೀಯ ಹಾಗೂ ಇನ್ನಿತರ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ಬರುತ್ತಿರುವುದರಿಂದ ಆರ್ಥಿಕ ತೊಂದರೆ ಇರುವ ವಿದ್ಯಾರ್ಥಿಗಳಿಗೆ ತುಂಬಾ ಅನೂಕೂಲವಾಗುತ್ತಿತ್ತು .
ಆದರೆ ಸರಕಾರ ಅಭಿವೃದ್ದಿ ಯೋಜನೆ ಮತ್ತು ಗ್ಯಾರಂಟಿ ಪೂರೈಕೆಯ ನೆಪವೊಡ್ಡಿ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ ನಿಮಿತ್ತ ಸಿಗುವ ವಿದ್ಯಾರ್ಥಿ ವೇತನವನ್ನು ಭಾರಿ ಪ್ರಮಾಣದಲ್ಲಿ ಕಡಿತ ಮಾಡಲು ನಿರ್ಧರಿಸಿರುವುದು ಎಂದು ತಿಳಿದು ಬಂದಿರುತ್ತದೆ. ಈ ರೀತಿಯ ಸರಕಾರದ ನಿರ್ಧಾರವು ಅಕ್ಷಮ್ಯ ಅಪರಾಧದ ಪರಮಾವಧಿಯಾಗಿದೆ. ಆದುದರಿಂದ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ ನಿಮಿತ್ತ ನೀಡಲಾಗುತ್ತಿರುವ ವಿವಿಧ ಸ್ತರದ ವಿದ್ಯಾರ್ಥಿ ವೇತನಗಳನ್ನು ಈ ಹಿಂದಿನ ಪ್ರಮಾಣದಲ್ಲಿ ನೀಡಬೇಕು ಹಾಗೂ ಭಾರಿ ಕಡಿತ ಮಾಡಲು ಹೊರಡಿಸಿರುವ ಹೊಸ ಪ್ರಸ್ತಾವನೆಯನ್ನು ತಕ್ಷಣದಿಂದ ಕೈ ಬಿಡಬೇಕೇಂದು ಅವರು ಆಗ್ರಹಿಸಿದ್ದಾರೆ.