Author: admin
ಬಂಟ್ವಾಳ: ತಾಲೂಕಿನ ಅಮ್ಮುಂಜೆ ಗ್ರಾಮದ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಭಾನುವಾರ ಬ್ರಹ್ಮ ಶ್ರೀ ಸುಬ್ರಹ್ಮಣ್ಯ ತಂತ್ರಿ ಹಾಗೂ ವೆಂಕಟೇಶ್ ತಂತ್ರಿ ಅವರ ನೇತೃತ್ವದಲ್ಲಿ ಶ್ರೀ ದೇವರಿಗೆ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವವು ನೆರವೇರಿತು. ಬೆಳಿಗ್ಗೆ ೧೦.೦೫ರ ಮೀನ ಲಗ್ನ ಸುಮೂಹೂರ್ತದಲ್ಲಿ ಅಪಾರ ಸಂಖ್ಯೆಯ ಭಕ್ತರ ಉಪಸ್ಥಿತಿಯಲ್ಲಿ ಬ್ರಹ್ಮಕಲಶಾಭಿಷೇಕ ನಡೆದು ಧಾರ್ಮಿಕ ಸಭೆ ನಡೆಯಿತು. ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ, ಸಂಸದ ನಳೀನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ.ರಮಾನಾಥ ರೈ ಮತ್ತಿತರ ಗಣ್ಯರು ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಕೊಂಜಾಲುಗುತ್ತು ದಿವಾಕರ ಶೆಟ್ಟಿ, ಅಮುಂಜೆಗುತ್ತು ಯಶೋಧ ಡಿ.ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ಕೃಷ್ಣಕುಮಾರ ಪೂಂಜ, ಸಂತೋಷ್ ಶೆಟ್ಟಿ, ರಂಗನಾಥ್ ಶೆಟ್ಟಿ, ರವೀಂದ್ರ ಶೆಟ್ಟಿ, ಲಕ್ಷ್ಮೀಪ್ರಸಾದ್ ಶೆಟ್ಟಿ, ಡಾ. ಮಂಜಯ್ಯ ಶೆಟ್ಟಿ, ಸತ್ಯಪ್ರಸಾದ್ ಶೆಟ್ಟಿ ಅಮುಂಜೆಗುತ್ತು, ದಕ್ಷರಾಜ್ ಶೆಟ್ಟಿ, ಸುದೇಶ್ ರೈ ಬಾರಿಂಜೆ, ಸಂಪತ್ ಕುಮಾರ್ ಶೆಟ್ಟಿ, ದೇವದಾಸ್ ಹೆಗ್ಡೆ ಅಮುಂಜೆಗುತ್ತು, ನಿಕ್ಷಾ ನಾಯ್ಕ್ , ಪ್ರಫುಲ್ಲ ವಿ. ಶೆಟ್ಟಿ, ಜ್ಯೋತಿ…
ಬಂಟ್ವಾಳ: ಶಾಲಾ ಬಾಲಕಿಯೊಬ್ಬಳು ತನ್ನ ಕೂದಲನ್ನು ಕ್ಯಾನ್ಸರ್ ಪೀಡಿತರಿಗಾಗಿ ದಾನ ಮಾಡಿ ಗಮನ ಸೆಳೆದಿದ್ದಾಳೆ.ತಾಲೂಕಿನ ಕಣಿಯೂರು ಸರಕಾರಿ ಪ್ರಾಥಮಿಕ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ ಹರ್ಷಿಕ ಕೇಶ ದಾನ ಮಾಡಿದ ವಿದ್ಯಾರ್ಥಿನಿಯಾಗಿದ್ದು ಕಣಿಯೂರಿನ ಲೋಕೇಶ್ ಮತ್ತು ರೇಣುಕಾ ಅವರ ಪುತ್ರಿಯಾಗಿದ್ದಾಳೆ.ತಾಯಿ ರೇಣುಕಾ ಕಾಣಿಯೂರು ಶಿಕ್ಷಕಿಯಾಗಿದ್ದು, ತನ್ನ ಮಗಳು 1ನೇ ತರಗತಿಯಲ್ಲಿ ಇರುವಾಗ ಶಾಲೆಯಲ್ಲಿ ತನ್ನ ಸಹಪಾಠಿಗಳು ಕೂದಲು ಕತ್ತರಿಸಿರುವುದನ್ನು ನೋಡಿ ಮನೆಗೆ ಬಂದು ತನ್ನ ಅಮ್ಮನಲ್ಲಿ ತನ್ನ ಕೂದಲನ್ನು ಕತ್ತರಿಸುವಂತೆ ಹೇಳಿದಾಗ ಬೇಡ ಎಂದಿದ್ದರು. ಕೂದಲು ಉದ್ದ ಬಂದ ಮೇಲೆ ಕತ್ತರಿಸಿದರೆ ಕೂದಲು ಇಲ್ಲದ ಅದೆಷ್ಟೋ ಮಂದಿಗೆ ನಮ್ಮ ಕೂದಲು ನೀಡಿ ಅವರು ಸುಂದರವಾಗಿ ಕಾಣುವಂತೆ ಮಾಡಬಹುದು ಎಂದು ಹೇಳಿ ಕೂದಲು ಇಲ್ಲದ ಕ್ಯಾನ್ಸರ್ ಪೀಡಿತರ ಫೋಟೋ ತೋರಿಸಿದರು, ಆ ದಿನದಿಂದ ಮಗು ಕೂದಲು ಬೆಳೆಸವ ಯೋಚನೆಯಲ್ಲಿ ಇತ್ತು, ಪೋಷಕರು ಮರೆತರು ಮಗು ಈ ವಿಚಾರ ಮರೆತಿರಲಿಲ್ಲ. ಪ್ರತಿ ವಾರ ತನ್ನ ಕೂದಲನ್ನು ಅಳತೆ ಮಾಡುತ್ತಿದ್ದ ಹರ್ಷಿತಾ ಇತ್ತೀಚೆಗೆ ಅಮ್ಮ ನನ್ನ…
ಲೊರೆಟ್ಟೊ: ಬೆಂಕಿ ಅವಘಡ, ಅಗ್ನಿಗೆ ಬಲಿಯಾದ ದಂಪತಿ ಬಂಟ್ವಾಳ: ಬೆಂಕಿ ಅವಘಡಕ್ಕೆ ಸಿಕ್ಕಿ ದಂಪತಿ ಸುಟ್ಟು ಮೃತಪಟ್ಟ ಘಟನೆ ಬಂಟ್ವಾಳದ ಅಮ್ಟಾಡಿ ಗ್ರಾ.ಪಂ. ವ್ಯಾಪ್ತಿಯ ತುಂಡು ಪದವು ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಗಿಲ್ಬರ್ಟ್ ಕಾರ್ಲೋ ( 78) ಹಾಗೂ ಕ್ರಿಸ್ಟಿನಾ ಕಾರ್ಲೋ ಕಾರ್ಲೊ ( 70) ಮೃತಪಟ್ಟ ದುರ್ದೈವಿಗಳು.ಮನೆಯ ಪಕ್ಕ ಕಸ ಕಡ್ಡಿಗೆ ಹಾಕಿದ ಬೆಂಕಿ ವ್ಯಾಪಿಸಿ ಮನೆಯ ಸಮೀಪದ ಕಾಡನ್ನು ಆವರಿಸಿದ ವೇಳೆ ಅದನ್ನು ನಂದಿಸಲು ತೆರಳಿದ ವೃದ್ದ ದಂಪತಿಗಳು ಬೆಂಕಿಗೆ ಸಿಕ್ಕಿ ಸುಟ್ಟು ಹೋಗಿದ್ದಾರೆ. ಮೃತರಿಗೆ 3 ಮಕ್ಕಳಿದ್ದು ಇಬ್ಬರು ವಿದೇಶದಲ್ಲಿ ಇನ್ನೊಬ್ಬಕೆ ಮಂಗಳೂರಿನಲ್ಲಿ ನೆಲೆಸಿದ್ದು ಮನೆಯಲ್ಲಿ ಇಬ್ಬರು ದಂಪತಿಗಳು ಮಾತ್ರ ವಾಸವಿದ್ದರು ಎಂದು ತಿಳಿದು ಬಂದಿದೆ. ಭಾನುವಾರ ಮಧ್ಯಾಹ್ದದ ವೇಳೆಗೆ ಘಟನೆ ನಡೆದಿದೆ. Advertisement
ಬಂಟ್ವಾಳ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ ವತಿಯಿಂದ ೧೬ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಮಾ.೨೪ ರಂದು ಆದಿತ್ಯವಾರ ೧೧.೨೧ ರ ವೃಷಭ ಲಗ್ನದ ಸುಮುಹೂರ್ತದಲ್ಲಿ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ, ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ತಿಳಿಸಿದರು.ಮುಂಬಯಿ ಉದ್ಯಮಿ ಕಕ್ಯಪದವು ನಾರಾಯಣ ಶೆಟ್ಟಿ ಯವರ ಸಾರಥ್ಯದಲ್ಲಿ ೧೬ನೇ ವರ್ಷದ ಸಾಮೂಹಿಕ ವಿವಾಹ ನಡೆಯಲಿದ್ದು ನಡೆಯಲಿದ್ದು ವಿವಾಹ ಅಪೇಕ್ಷಿತ ವಧು ವರರು ಫೆ. ೨೦ ರ ಒಳಗಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಅವರು ಸುದ್ದಿಗೋಷ್ಟಿಯ ಮೂಲಕ ಮನವಿ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ರಾಜೇಶ್ ನಾಕ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಮಾ.೧೭ ರಂದು ವಿವಾಹದ ಪೂರ್ವಭಾವಿಯಾಗಿ ನೊಂದಾಯಿತ ಜೋಡಿಗಳಿಗೆ ಅದ್ದೂರಿಯಾಗಿ ನಿಶ್ಚಿತಾರ್ಥ ನಡೆಯಲಿದೆ ಎಂದ ಅವರು ಮೊದಲ ವರ್ಷ ೭೯ ಜೋಡಿ ಸಾಮೂಹಿಕ ವಿವಾಹದಲ್ಲಿ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದು…
ಬಂಟ್ವಾಳ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ 75ನೇ ವರ್ಷದ ಗಣರಾಜ್ಯೋತ್ಸವವನ್ನು ಬಂಟ್ವಾಳ ತಾಲೂಕಾಡಳಿತದ ವತಿಯಿಂದ ಬಿ.ಸಿ.ರೋಡಿನಲ್ಲಿ ಆಚರಿಸಲಾಯಿತು.ತಾಲೂಕು ಆಡಳಿತ ಸೌಧದ ಮುಂಭಾಗ ತಹಶೀಲ್ದಾರ್ ಎಸ್.ಬಿ. ಕೂಡಲಗಿ ಧ್ವಜಾರೋಹಣ ನೆರವೇರಿಸಿದರು. ಶಾಸಕ ರಾಜೇಶ್ ನಾಕ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು ವಿವಿಧ ತುಕುಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.ಬಳಿಕ ಬಿ.ಸಿ.ರೋಡಿನ ಅಂಬೇಡ್ಕರ್ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಕ್ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ತಹಶೀಲ್ದಾರ್ ಎಸ್.ಬಿ. ಕೂಡಲಗಿ ಗಣರಾಜ್ಯೋತ್ಸವ ಸಂದೇಶ ನೀಡಿ ಇಂದು ಭಾರತೀಯರಾದ ನಾವು ಹೆಮ್ಮೆ ಪಡುವ ದಿನ. ವಿಶ್ವದಲ್ಲಿಯೇ ಮಾದರಿಯಾದ ಸಂವಿಧಾನ ಭಾರತದ್ದಾಗಿದ್ದು ಸಂವಿಧಾನದಡಿಯಲ್ಲಿ ಎಲ್ಲಾ ನಾಗರಿಕರು ಸಮಾನವಾದ ಜೀವನ ಮಾಡುವ ಅವಕಾಶ ಸಿಕ್ಕಿದೆ ಎಂದು ತಿಳಿಸಿದರು. ಶಿಕ್ಷಣ ಸಂಯೋಜಕಿ ಸುಜಾತ ಕುಮಾರಿ ಪ್ರಧಾನ ಭಾಷಣ ಮಾಡಿ ಆಚರಣೆಗಳು ನಮ್ಮನ್ನು ಬೆಸೆಯುವ ಕೊಂಡಿಯಾಗಿದೆ. ಎಲ್ಲಾ ದೇಶಗಳ ಸಂವಿಧಾನವನ್ನು ಕ್ರೋಡಿಕರಿಸಿ ಅದರ ಮುಖ್ಯ ಅಂಶಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.ತೋಟಗಾರಿಕಾ ಇಲಾಖಾ ಹಿರಿಯ ಸಹಾಯಕ ನಿರ್ದೇಶಕ ಜೋ…
ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ಗುರುವಾರ ಪ್ರಾತಃ ಗಂಟೆ 8ರಿಂದ 8.17ರ ಮಕರ ಲಗ್ನದ ಶುಭ ಮುಹೂರ್ತದಲ್ಲಿ ಸಪರಿವಾರ ಶ್ರೀ ಶರಭೇಶ್ವರ ದೇವರಿಗೆ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕವು ವೇ|ಮೂ| ದಿನೇಶಕೃಷ್ಣ ತಂತ್ರಿಗಳ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.ಕಾರ್ಯಕ್ರಮದಲ್ಲಿ ಪುಣ್ಯಾಹ, ಗಣಪತಿ ಹವನ, ಕವಾಟೋದ್ಘಾಟನೆ, ನೀರಾಂಜನ ದರ್ಶನ, ತೈಲಾಭಿಷೇಕ, ಪಂಚಾಮೃತಾಭಿಷೇಕ, ಪ್ರಾಯಶ್ಚಿತ ಹೋಮಗಳ ಕಲಶಾಭಿಷೇಕ, ತತ್ವ ಕಲಶಾಭಿಷೇಕ, ಶ್ರೀ ಗಣಪತಿ, ಮಹಿಷಮರ್ಧಿನಿ, ವೀರಾಂಜನೇಯ ದೇವರಿಗೆ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಶ್ರೀ ರುದ್ರ ಯಾಗ, ಪ್ರಸನ್ನ ಪೂಜೆ, ಅವಸೃತ ಬಲಿ, ಪಲ್ಲ ಪೂಜೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ, ಮಂತ್ರಾಕ್ಷತೆ ನೆರವೇರಿತು.ದೇವಸ್ಥಾನದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ, ಅರ್ಚಕ ಜಯರಾಮ ಕಾರಂತ, ಪುರೋಹಿತ ವಿಜಯಕೃಷ್ಣ ಐತಾಳ್ ಪೂಂಜೂರು ಹಾಗೂ ವೈದಿಕ ವೃಂದ ಧಾರ್ಮಿಕ ವಿಧಿ ನೆರವೇರಿಸಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಂ.ಎಸ್.ಶೆಟ್ಟಿ ಸರಪಾಡಿ, ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಪ್ರಧಾನ ಕಾರ್ಯದರ್ಶಿ ನಾರಾಯಣ ಶೆಟ್ಟಿ ಹೊಳ್ಳರಗುತ್ತು, ಕಾರ್ಯದರ್ಶಿ…
ಕೂರಿಯಾಳ: ಅಯೋಧ್ಯೆ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ಶ್ರೀ ಓಂಕಾರೇಶ್ವರಿ ದೇವಿ ಭಜನಾ ಮಂದಿರ ದುರ್ಗಾನಗರದಲ್ಲಿ ರಾಮತಾರಕ ಜಪ,ಭಜನಾ ಸಂಕೀರ್ತನೆ ಹಾಗೂ ವಿಶೇಷ ಪೂಜೆ ನಡೆಯಿತು. ರಾತ್ರಿ ಮಂದಿರದ ಸುತ್ತ ಹಣತೆಗಳನ್ನು ಹಚ್ಚಲಾಯಿತು.
ಬಂಟ್ವಾಳ : ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ಗ ಸಮೀಪದ ಮೇನಾಡು ಎಂಬಲ್ಲಿ ಜ. 11 ರಂದು ಮುಂಜಾನೆ ನಡೆದ ಚಿನ್ನಾಭರಣಗಳನ್ನು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳನ್ನು ಕಾರ್ಕಳ ತಾಲೂಕಿನ ಮಾಳ ಗ್ರಾಮದ ಗಣೇಶ ನಾಯ್ಕ (26), ದಿನೇಶ್ ನಾಯ್ಕ (22), ಸಾಗರ್ ಶೆಟ್ಟಿ (21) ಮಂಗಳೂರು, ಐಕಳ ಗ್ರಾಮದ ರಾಕೇಶ್ ಎಲ್. ಪಿಂಟೋ (29), ಕಡಬ ಬೆಳಂದೂರು ಗ್ರಾಮದ ಎಂ.ಸೀತಾರಾಮ ಯಾನೆ ಪ್ರವೀಣ್ (36), ಸುಧೀರ್ (29) ಹಾಗೂ ದರೋಡೆಗೈದ ಚಿನ್ನಾಭರಣವನ್ನು ಸ್ವೀಕರಿಸಿದ ಮೂಲತ: ಬಂಟ್ವಾಳ ತಾಲೂಕಿನ, ಇರಾ ಗ್ರಾಮದವನಾದ ಪ್ರಸ್ತುತ ಗೌರಿ ಕಾಲುವೆ, ಚಿಕ್ಕಮಗಳೂರು ಜಿಲ್ಲೆ ವಾಸಿ ಮಹಮ್ಮದ್ ಹನೀಫ್ (49) ಎಬವರುಗಳನ್ನು ಬಂಧಿಸಲಾಗಿದ್ದು ಆರೋಪಿಗಳಿಂದ ರೂ.3.15 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ದರೋಡೆಗೆ ಬಳಸಿದ ಅಂದಾಜು ರೂ. 8 ಲಕ್ಷ ಮೌಲ್ಯದ ಇನ್ನೋವಾ ಕಾರು ಹಾಗು ಅಂದಾಜು ರೂ. 2 ಲಕ್ಷ ಮೌಲ್ಯದ ಟಾಟಾ ಇಂಡಿಕಾ ಕಾರು ವಶಪಡಿಸಿಕೊಂಡಿದ್ದಾರೆ.ಮನೆಯಲ್ಲಿ ಇಬ್ಬರು ಮಹಿಳೆಯರು ಇರುವುದನ್ನು ಖಾತ್ರಿಪಡಿಸಿ…
ಬಂಟ್ವಾಳ : ಕುಲಾಲ ಸಮುದಾಯ ಸಾಂಸ್ಕೃತಿಕವಾಗಿ ಬೆಳೆದಿದ್ದು ಪ್ರಸ್ತುತ ಶೈಕ್ಷಣಿಕವಾಗಿ, ಆರ್ಥಿಕವಾಗಿಯೂ ಬೆಳೆಯುತ್ತಿದೆ. ಕುಲಾಲರಿಗೆ ಅರ್ಹತೆಯ ಆಧಾರದ ಮೇಲೆ ಗೌರವಗಳು ಸಿಗುತ್ತಿದೆ. ಕುಲಾಲರ ಸ್ವಾಭಿಮಾನದ ಸಂಕೇತವಾಗಿರುವ ವೀರನಾರಾಯಣ ದೇವಸ್ಥಾನ ಪುನರ್ ನಿರ್ಮಾಣಗೊಂಡಿರವುದೇ ಇದಕ್ಕೆಲ್ಲಾ ಕಾರಣ ಎಂದು ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಹೇಳಿದರು. ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿ ಭಾನುವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆದ ಅವಿಭಜಿತ ಜಿಲ್ಲೆಯ ಕುಲಾಲ ಸಂಘಗಳ ಸಾಂಸ್ಕೃತಿಕ ಕಾರ್ಯಕ್ರಮ ಕಲಾವಳಿಗೆ-೨೦೨೪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಗುಣಮಟ್ಟವನ್ನು ಕಾಯ್ದುಕೊಂಡು ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ತೆರೆದಿಡುವ ಕಾರ್ಯವನ್ನು ಕಲಾವಳಿ ಮಾಡಿದೆ. ಮುಂದಿನ ವರ್ಷ ಮುಂಬೈ ಕುಲಾಲ ಸಂಘದ ಸಹಕಾರದೊಂದಿಗೆ ಜಿಲ್ಲಾ ಮಾತೃ ಸಂಘ ಕಲಾವಳಿ ಆಯೋಜಿಸಲಿದೆ ಎಂದು ಘೋಷಿಸಿದರು. ಮುಂಬಯಿ ಕುಲಾಲ ಸಂಘದ ಅಧ್ಯಕ್ಷ ರಘು ಎ. ಮೂಲ್ಯ ಮಾತನಾಡಿ ಬಂಟ್ವಾಳ ಕುಲಾಲ ಸಂಘ ರಾಧಕೃಷ್ಣ ಬಂಟ್ವಾಳ ಅವರ ನೇತೃತ್ವದಲ್ಲಿ ಅತ್ಯುತ್ತಮವಾದ ಕಾರ್ಯವನ್ನು ಮಾಡಿದೆ.…
ಬಂಟ್ವಾಳ: ಇಲ್ಲಿನ ಬಂಟ್ವಾಳ ಪೇಟೆಯ ನಂದನಹಿತ್ತಲುಶ್ರೀ ವೈದ್ಯನಾಥ, ಅರಸು ಜುಮಾದಿ ಬಂಟ ದೈವಸ್ಥಾನಕ್ಕೆ ನೂತನ ಧ್ವಜಸ್ತಂಭ ತರುವ ಬಗ್ಗೆ ಹಾಗೂ ಧ್ವಜಸ್ತಂಭವನ್ನು ತೈಲಾಧಿವಾಸ ಮಾಡುವ ಬಗ್ಗೆ ಪೂರ್ವಭಾವಿ ಸಮಾಲೋಚನ ಸಭೆ ದೈವಸ್ಥಾನದಲ್ಲಿ ಭಾನುವಾರ ನಡೆಯಿತು.ಈ ಸಂದರ್ಭ ಪೊಳಲಿ ಗಿರಿಪ್ರಕಾಶ್ ತಂತ್ರಿಯವರು ಮಾರ್ಗದರ್ಶನ ಮಾಡಿದರು. ಫೆಬ್ರವರಿ 4 ರಂದು 12.44 ರ ಒಳಗಾಗಿ ವೃಷಭ ಲಗ್ನ ಸುಮುಹೂರ್ತದಲ್ಲಿ ವೈಭವದ ಮೆರವಣಿಗೆಯಲ್ಲಿ ದೈವಸ್ಥಾನಕ್ಕೆ ಕೊಡಿಮರ ತರುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ಕೊಡಿಮರ ತರುವ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭ ರಾಮದಾಸ್ ಬಂಟ್ವಾಳ ಮಾತನಾಡಿ ಇದು ಗ್ರಾಮಸ್ಥರಿಗೆ ಸಿಕ್ಕ ಪೂರ್ವ ಜನ್ಮದ ಸುಕೃತ. ಈ ಅವಕಾಶವನ್ನು ಬಳಸಿಕೊಂಡು ಶುದ್ದಾಚಾರದಲ್ಲಿದ್ದುಕೊಂಡು ಗ್ರಾಮದ ಪ್ರತಿಯೊಬ್ಬರು ಕೈ ಸೇರಿಸಿ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು.ಬಾಳಿಗ ಮನೆತನದ ಸುಧೀರ್ ಬಾಳಿಗ ಕೊಡಿಮರಕ್ಕೆ ಬೆಳ್ಳಿಯ ಗರುಡ ನೀಡುವುದಾಗಿ ಘೋಷಿಸಿದರು. ಅವಿನಾಶ್ ಕಾಮತ್, ವಿವಿಧ ಮನೆತನದ ಸಂಜೀವ ಪೂಜಾರಿ ಪೆಲತ್ತಿಮಾರು, ವಿಶ್ವನಾಥ ಪೂಜಾರಿ…








