Author: admin
ಬಂಟ್ವಾಳ: ಸಜೀಪಮೂಡ ಗ್ರಾಮದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಫೆ.9 ಶುಕ್ರವಾರದಂದು ಅಮಾವಾಸ್ಯೆಯ ಪ್ರಯುಕ್ತ ಅಗೇಲು ಸೇವೆ ಇರುವುದಿಲ್ಲ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.
ಬಂಟ್ವಾಳ: ಸಿದ್ದಕಟ್ಟೆ ಸಹಕಾರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ 3ನೇ ಮಾವಿನ ಕಟ್ಟೆ ಶಾಖೆಯ ಉದ್ಘಾಟನಾ ಸಮಾರಂಭ ಎಲಿಯನಡುಗೋಡು ಗ್ರಾಮದ ಮಾವಿನಕಟ್ಟೆಯಲ್ಲಿರುವ ಶ್ರೀ ಚಾಮುಂಡೇಶ್ವರೀ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.ನೂತನ ಶಾಖೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿಪ್ರಾಮಾಣಿಕತೆ, ವಿಶ್ವಾಸದ ಆಧಾರದಲ್ಲಿ ನಡೆಯುತ್ತಿರುವ ಅತೀ ದೊಡ್ಡ ಆರ್ಥಿಕ ಸಂಸ್ಥೆ ಸಹಕಾರಿ ಸಂಘಗಳಾಗಿದೆ. ಬ್ಯಾಂಕಿಗಳಿಗಿಂತ ಸುಲಭವಾಗಿ ಹಣಕಾಸಿನ ಸಹಕಾರ ಸಹಕಾರಿ ಸಂಘದ ಮೂಲಕ ಸಿಗುತ್ತದೆ. ದೇಹಕ್ಕೆ ಅಂಗಗಳು ಹೇಗೆ ಪೂರಕವಾಗಿದೆಯೋ ಅದೆ ರೀತಿ ಸಹಕಾರಿ ಸಂಘ ಸಮಾಜದ ಬೆಳವಣಿಗೆಗೂ ಪೂರಕವಾಗಿದೆ. ಕಷ್ಟದಲ್ಲಿದ್ದವನಿಗೆ ಸಹಕಾರಿ ಸಂಘ ಸಹಾಯವನ್ನು ಮಾಡುತ್ತದೆ. ಈ ಸಹಕಾರಿ ಸಂಘ ಇನ್ನಷ್ಟು ಶಾಖೆಗಳನ್ನು ತೆರೆದು ಅಭಿವೃದ್ದಿಯಾಗುವುದರ ಜೊತೆಗೆ ಸಮಾಜದ ಜನರಿಗೂ ಸಹಕರಿಸುವ ಸಂಸ್ಥೆಯಾಗಲಿ ಎಂದು ಶುಭಹಾರೈಸಿದರು. ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿ ಪ್ರತೀ ಗ್ರಾಮ ಪಂಚಾಯತಿನಲ್ಲಿ ಸಹಕಾರಿ ಸಂಘಗಳನ್ನು ತೆರೆದು…
ಬಂಟ್ವಾಳ: ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲೆ 317 ಡಿ ಲಯನ್ಸ್ ಪ್ರಾಂತ್ಯ 5ರ ಪ್ರಾಂತೀಯ ಸಮ್ಮಿಲನ ‘ಸಂಧ್ಯಾ’ ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿಯವರ ನೇತೃತ್ವದಲ್ಲಿ, ಸಮ್ಮಿಲನ ಸಮಿತಿ ಅಧ್ಯಕ್ಷ ದಾಮೋದರ ಬಿ. ಎಂ. ಇವರ ಸಾರಥ್ಯದಲ್ಲಿ ಲಯನ್ಸ್ ಕ್ಲಬ್ ಕೊಳ್ಳಾಡು ಸಾಲೆತ್ತೂರು ಇದರ ಆತಿಥ್ಯದಲ್ಲಿ ಫೆಬ್ರವರಿ 11ರಂದು ಇರಾ ಬಂಟರ ಭವನದ ಬಿ. ವಿ. ಕಾರಂತ ವೇದಿಕೆಯಲ್ಲಿ ನಡೆಯಲಿದೆ. ಪ್ರಾಂತ್ಯ 5ರ ಕ್ಲಬ್‌ಗಳಾದ ಕೊಳ್ಳಾಡು ಸಾಲೆತ್ತೂರು, ಬಂಟ್ವಾಳ, ಮಂಗಳಗಂಗೋತ್ರಿ, ಚೋಟಮಂಗಳೂರು, ಲೊರೆಟ್ಟೋ ಅಗ್ರಾರ್, ಮುಡಿಪು ಕುರ್ನಾಡು, ವಾಮದಪದವು ಪ್ರಕೃತಿ, ವಿಟ್ಲ ಸಿಟಿ, ರಾಯಿ ಸಿದ್ಧಕಟ್ಟೆ ಹಾಗೂ ಅಮ್ಟೂರು ಒಳಗೊಂಡಂತೆ ಈ 10 ಕ್ಲಬ್‌ಗಳ ಪ್ರಾಂತೀಯ ಸಮ್ಮಿಲನವು ಸೇವಾ ಸಾರ್ಥಕ್ಯದ ಹೊಂಗಿರಣ ಶೀರ್ಷಿಕೆಯೊಂದಿಗೆ ವಿಶೇಷವಾಗಿ ಮಂಚಿ, ಇರಾ, ಕೊಳ್ಳಾಡು ಗ್ರಾಮದ ಸರಕಾರಿ ಶಾಲೆಗಳ ವಿಶೇಷ ಅಗತ್ಯಕ್ಕೆ ನೆರವಿನ ಸೇವಾ ಕಾರ್ಯಕ್ರಮದೊಂದಿಗೆ ನಡೆಯಲಿದೆ ಎಂದು ಪ್ರಾಂತ್ಯ 5ರ ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಪ್ರಾಂತೀಯ ಸಮ್ಮಿಲನ ಸಮಿತಿಯ ಅಧ್ಯಕ್ಷ ದಾಮೋದರ ಬಿ.ಎಂ. ಮಾತನಾಡಿ…
ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂನ ನೀರು ಹರಿದುಹೋಗುವ ರಭಸಕ್ಕೆ ಕೆಳಭಾಗದ ಕೃಷಿ ಭೂಮಿ ಕೊಚ್ಚಿ ಹೋದ ಸ್ಥಳಕ್ಕೆ ಒಂದೆಡೆ ಕಲ್ಲು ಹಾಕಿ ತಡೆಗೋಡೆ ನಿರ್ಮಿಸುವ ಕಾರ್ಯ ನಡೆಯುತ್ತಿದ್ದರೆ ಇನ್ನೊಂದೆಡೆ ಮತ್ತೆ ಮಣ್ಣು ಕುಸಿದು ಕೃಷಿ ಭೂಮಿ ನದಿಪಾಲಾಗುತ್ತಿದೆ. ಜಮೀನನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎನ್ನುವ ಸಂತ್ರಸ್ತ ರೈತರಲ್ಲಿ ಭೂ ಕುಸಿತ ಮತ್ತೆ ಆತಂಕ ಹುಟ್ಟಿಸಿದೆ. ತುಂಬೆ ಡ್ಯಾಂನಿಂದ ನೀರು ಹರಿದು ಹೋಗುವ ರಭಸಕ್ಕೆ ಡ್ಯಾಂನ ಕೆಳ ಭಾಗದ ಬಲ ಪಾರ್ಶದಲ್ಲಿ ಸುಮಾರು ೯ ಮಂದಿ ರೈತರಿಗೆ ಸೇರಿದ ಕೃಷಿ ಭೂಮಿ ಕೊಚ್ಚಿಹೋಗಿ ರೈತರು ಸಂಕಷ್ಟ ಅನುಭವಿಸಿದ್ದಾರೆ. ತಮ್ಮ ಕಣ್ಣೆದುರೇ ತಾವು ಬೆಳೆದ ಅಪಾರ ಪ್ರಮಾಣದ ಅಡಿಕೆ ಹಾಗೂ ತೆಂಗಿನ ಮರ ನದಿಗೆ ಆಹುತಿಯಾಗಿದೆ. ಇತ್ತೀಚಿಗೆ ರೈತ ಸಂಘ ಹಸಿರು ಸೇನೆಯ ನೇತೃತ್ವದಲ್ಲಿ ಸ್ಥಳೀಯ ರೈತರು ತುಂಬೆ ವೆಂಟೆಡ್ ಡ್ಯಾಂಗೆ ಮುತ್ತಿಗೆ ಹಾಕಿ ಕೃಷಿ ಭೂಮಿ ಕಳಕೊಂಡ ರೈತರಿಗೆ ಪರಿಹಾರ ಹಾಗೂ ಪರ್ಯಯ ವ್ಯವಸ್ಥೆ ಒದಗಿಸುವಂತೆ ಆಗ್ರಹಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಮನಪಾ…
ಬಂಟ್ವಾಳ: ವೆಲಂಕಣಿ ಆರೋಗ್ಯ ಮಾತೆ ದೇವಾಲಯ ಫರ್ಲಾ, ಇಲ್ಲಿಯ ಸ್ತ್ರೀ ಸಂಘಟನೆಯ ರಜತ ಮಹೋತ್ಸವವು ಭಾನುವಾರ ನಡೆಯಿತು. ದಿವ್ಯ ಬಲಿ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ಸಭಾ ಕಾರ್ಯಕ್ರಮ ನೆರವೇರಿತು. ಚರ್ಚಿನ ಧರ್ಮಗುರು ವಂ. ಜೋನ್ ಪ್ರಕಾಶ್ ಪಿರೇರಾ ಮಾತನಾಡಿ ಕುಟುಂಬ, ಸಮಾಜ ಮತ್ತು ಪ್ರತಿಯೊಂದು ಕ್ಷೇತ್ರದಲ್ಲಿ ಸ್ತ್ರೀಯರ ಪಾತ್ರ ಮಹತ್ವದ್ದಾಗಿದ್ದು, ೨೫ ವರ್ಷಗಳ ಅವಧಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಎಲ್ಲಾ ಸ್ತ್ರೀಯರನ್ನು ಸ್ಮರಿಸಿದರು. ಧರ್ಮ ಪ್ರಾಂತ್ಯದ ಸ್ತ್ರೀ ಸಂಘಟನೆಯ ನಿರ್ದೇಶಕರಾದ ವಂ ಫ್ರಾನ್ಸಿಸ್ ಡಿಸೋಜರವರು ಮಾತನಾಡಿದರು. ವೇದಿಕೆಯಲ್ಲಿ ಪ್ರಥಮ ಅಧ್ಯಕ್ಷೆ ಐರಿನ್ ಮಸ್ಕರೇನ್ಹಸ್, ವಂ.ಅರುಣ್ ರೊಡ್ರಿಗಸ್, ಪ್ರಾಂತೀಯ ಅಧ್ಯಕ್ಷೆ ಗ್ರೇಟ್ಟಾ ಪಿಂಟೋ, ವಲಯ ಅಧ್ಯಕ್ಷೆ ಗ್ರೇಟ್ಟಾ ಫೆರ್ನಾಂಡಿಸ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರು, ಕಾರ್ಯದರ್ಶಿ ಮತ್ತಿತರರು ಉಪಸ್ಥಿತರಿದ್ದರು. ಈವರೆಗೆ ಸೇವೆ ಸಲ್ಲಿಸಿದ ಪದಾಧಿಕಾರಿಗಳನ್ನು ಹಾಗೂ ವಿಶೇಷ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು.ವಿವಿಧ ಸಂಘಟನೆಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು. ಅಧ್ಯಕ್ಷೆ ಐರಿನ್ ಡಿಸೋಜ ಸ್ವಾಗತಿಸಿ, ವಂದಿಸಿದರು. ಕಾರ್ಯದರ್ಶಿ ಜೊಯ್ಸ್ ಡಿಸೋಜರವರು ವರದಿ ವಾಚಿಸಿದರು.ಝೀಟಾ ಮಿನೇಜಸ್…
ಬಂಟ್ವಾಳ: ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ದವಸಧಾನ್ಯ ವಿತರಣ ಕಾರ್ಯಕ್ರಮ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಆಶ್ರಯದಲ್ಲಿ ಬ್ಯಾಂಕ್ ಆಫ್ ಬರೋಡ ಇದರ ಸಹಕಾರದೊಂದಿಗೆ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಸೋಮವಾರ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸ್ ನಿರೀಕ್ಷಕ ಶಿವಕುಮಾರ್ ಪಿ. ಮಾತನಾಡಿ ಕೆ. ಎಸ್.ಹೆಗ್ಡೆ ಆಸ್ಪತ್ರೆಯವರೊಂದಿಗೆ ಕೈ ಜೋಡಿಸಿಕೊಂಡು ಕೃಷ್ಣಕುಮಾರ್ ಪೂಂಜ ಅವರು ಕಳೆದ ೪೦ ವರ್ಷಗಳಿಂದ ಸೇವಾ ಕಾರ್ಯಕಮವನ್ನು ನಡೆಸಿಕೊಂಡು ಬಂದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ, ಕ್ಷಯ ರೋಗಿಗಳು ಇಲ್ಲಿ ನೀಡುವ ಪೌಷ್ಟಿಕ ಆಹಾರವನ್ನು ಸೇವಿಸಿಕೊಂಡು ರೋಗ ಮುಕ್ತರಾಗಿ ಆರೋಗ್ಯವಂತ ಜೀವನ ನಡೆಸಬೇಕೆಂದು ತಿಳಿಸಿದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ೧೭ ತಿಂಗಳಿನಿಂದ ಈ ಕಾರ್ಯಕ್ರಮವನ್ನು ದಾನಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ನಡಸಿಕೊಂಡು ಬರುತ್ತಿದ್ದೇವೆ. ಸುಮಾರು ೬ ಲಕ್ಷ ರೂಪಾಯಿಯನ್ನು ಖರ್ಚು ಮಾಡಲಾಗಿದ್ದು ಈವರೆಗೆ ಸುಮಾರು ೯೮ ಕ್ಷಯ ರೋಗಿಗಳನ್ನು ಗುರುತಿಸಿ ಅವರಿಗೆ ಆಹಾರದ…
ಬಂಟ್ವಾಳ: ನೇತ್ರಾವತಿ ನದಿಯಲ್ಲಿ ನೀರು ಸಮೃದ್ದವಾಗಿದ್ದು, ೧೬೦ ಎಂಎಲ್‌ಡಿ ನೀರು ಮಂಗಳೂರಿಗೆ ಸರಬರಾಜಾಗುತ್ತಿದೆ. ಉಳ್ಳಾಲ, ಮೂಲ್ಕಿಯ ಜೊತೆಗೆ ಸುತ್ತಲಿನ ಗ್ರಾಮೀಣ ಪ್ರದೇಶದ ಜನತೆಗೆ ಕುಡಿಯುವ ನೀರು ಒದಗಿಸುವ ಜೀವನದಿ ನೇತ್ರಾವತಿ ಫೆಬ್ರವರಿ ತಿಂಗಳಿನಲ್ಲಿಯೂ ಪೂರ್ಣವಾಗಿ ತುಂಬಿಕೊಂಡು ಡ್ಯಾಂನ ಒಂದು ಗೇಟ್ ಮೂಲಕ ಹೆಚ್ಚುವರಿ ನೀರನ್ನು ಹೊರಗೆ ಹರಿಯಲು ಬಿಡುತ್ತಿದ್ದೇವೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು. ಅವರು ತುಂಬೆ ವೆಂಟೆಡ್ ಡ್ಯಾಂನಲ್ಲಿ ಸೋಮವಾರ ಗಂಗಾಪೂಜೆ ನೆರವೇರಿಸಿ ಬಳಿಕ ನೇತ್ರಾವತಿ ನದಿಗೆ ಭಾಗಿನ ಅರ್ಪಿಸಿ ಮಾತನಾಡಿದರು. ಕಳೆದ ಸಾಮಾನ್ಯ ಸಭೆಯಲ್ಲಿ ನೀರಿನ ಸಮಸ್ಯೆ ಬಗ್ಗೆ ಸದಸ್ಯರು ಪ್ರತಿಭಟನೆಯನ್ನು ಮಾಡಿದ್ದು ತಕ್ಷಣ ನಾಲ್ಕು ತಂಡವನ್ನು ಮಾಡಿ ಕಾರ್ಯಚರಣೆ ನಡೆಸಿ ಅನಧಿಕೃತ ನಳ್ಳಿ ನೀರಿನ ಸಂಪರ್ಕವನ್ನು ಪತ್ತೆ ಮಾಡಿ ಸಂಪರ್ಕ ಕಡಿತಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದರು. ಕೋಟ್ಯಂತರ ರೂ. ವೆಚ್ಚದಲ್ಲಿ ಡ್ಯಾಂ ಕಟ್ಟಿ, ಜನರಿಂದ ಶುಲ್ಕ ಪಡೆದು ಕುಡಿಯುವ ನೀರನ್ನು ಮಂಗಳೂರಿನ ಜನತೆಗೆ ಪೂರೈಸಲಾಗುತ್ತಿದೆ. ಆದರೆ ಕೆಲವೊಂದು ಗ್ರಾಮೀಣ…
ಬಂಟ್ವಾಳ: ರಾಜ್ಯ ಅರಣ್ಯ ಸಚಿವ ಈಶ್ವರ ಖಂಡೆ ಅವರು ಸೋಮವಾರ ರಾತ್ರಿ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿಯವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.ತನ್ನ ಇಂದಿನ ಸ್ಥಾನಮಾನಗಳಿಗೆ ಪೂಜಾರಿಯವರ ಮಾರ್ಗದರ್ಶನವೇ ಕಾರಣ ಎಂದು ಪೂಜಾರಿಯವರನ್ನು ಕೊಂಡಾಡಿದ ಈಶ್ವರ್ ಖಂಡ್ರೆಯವರು ಸಚಿವನಾದ ಬಳಿಕ ಇದೇ ಮೊದಲ ಭಾರಿಗೆ ಮಂಗಳೂರಿಗೆ ಬಂದಿದ್ದು ನಿಮ್ಮ ಆಶಿರ್ವಾದ ಪಡೆಯುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ ಎಂದರು. ಕಾಂಗ್ರೆಸ್ ನಾಯಕರನ್ನು ನೋಡಿ ಇದು ನನ್ನ ಕುಟುಂಬ ಎಂದು ನಗುಬೀರಿದ ಪೂಜಾರಿ ಉತ್ತಮ ಕೆಲಸ ಮಾಡುವಂತೆ ಆಶೀರ್ವದಿಸಿದರು. ಈ ಸಂದರ್ಭ ಮಾಜಿ ಸಚಿವ ಬಿ. ರಮಾನಾಥ ರೈಯವರ ಪರವಾಗಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಹೂಗುಚ್ಛ ನೀಡಿ ಬರಮಾಡಿಕೊಂಡರು. ಕಾಂಗ್ರೆಸ್ ನಾಯಕರಾದ ರಕ್ಷಿತ್ ಶಿವರಾಮಯ್ಯ, ವೆಂಕಪ್ಪ ಪೂಜಾರಿ, ಈಶ್ವರ್ ಖಂಡ್ರೆಯವರ ಪುತ್ರ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಂಟ್ವಾಳ: ಜಿಲ್ಲೆಯ ಅತ್ಯಂತ ಕಾರಣಿಕ ಪ್ರಸಿದ್ದ ದೈವ ಕ್ಷೇತ್ರವಾದ ಪಣೋಲಿಬೈಲು ಕಲ್ಲುರ್ಟಿ ಕ್ಷೇತ್ರದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹರಕೆ ಕೋಲವನ್ನು ಭಾನುವಾರ ರಾತ್ರಿ ಸಲ್ಲಿಸಿದ್ದಾರೆ.ಸ್ಥಳೀಯ ಕಾಂಗ್ರೆಸ್ ಮುಖಂಡರೊಂದಿಗೆ ಯು.ಟಿ. ಕಾದರ್ ಅವರು ದೈವಸ್ಥಾನಕ್ಕೆ ಭೇಟಿ ನೀಡಿ ಸಂಪ್ರದಾಯ ಬದ್ದವಾಗಿ ಕೋಲ ನೆರವೇರಿದ್ದರು. ಸ್ವತಃ ಖಾದರ್ ಅವರೇ ದೈವಗಳಿಗೆ ಹೂವಿನ ಹಾರವನ್ನು ಹಾಕಿ ಶ್ರದ್ದೆಯಿಂದ ಪಾಲ್ಗೊಂಡಿದ್ದರು. ಆಕ್ಷೇಪ:ಯು.ಟಿ. ಖಾದರ್ ಅವರು ಪಣೋಲಿಬೈಲು ಕೋಲದಲ್ಲಿ ಭಾಗಿಯಾಗಿರುವ ಬಗ್ಗೆ ಸಾಮಾಜಿಕ ಜಾಲಾತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಧಾರ್ಮಿಕ ಮುಖಂಡರೋರ್ವರು ತನ್ನ ಸಾಮಾಜಿಕ ಜಾಲಾತಾಣದಲ್ಲಿ ಖಾದರ್ ಹಿಂದೂ ಸಂಪ್ರದಾಯದ ಭೂತರಾಧನೆಯಲ್ಲಿ ಭಾಗವಹಿಸಿರುವುದಕ್ಕೆ ಕಿಡಿ ಕಾರಿದ್ದಾರೆ.
ಬಂಟ್ವಾಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬಂಟ್ವಾಳ ಇದರ ಆಶ್ರಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಯುಷ್ಮಾನ್ ಆರೋಗ್ಯ ಮಂದಿರ ಜಕ್ರಿಬೆಟ್ಟುವಿನಲ್ಲಿ ಉದ್ಘಾಟನೆಗೊಂಡಿತು.ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಮೀನಾಕ್ಷಿ ಜೆ. ಗೌಡ, ಜನಾರ್ದನ, ಜಯಂತ್ ಕುಲಾಲ್ ಸಮುದಾಯ ಆರೋಗ್ಯ ಅಧಿಕಾರಿ ಜಯಂತಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.








