ಬಂಟ್ವಾಳ: ಯುವ ಸಮೂಹದ ಸದ್ಬಳಕೆಯು ದೇಶದ ಅಭಿವೃದ್ದಿಗೆ ಪೂರಕವಾಗಿದೆ. ಯುವ ಸಮುದಾಯದ ಸಕಾರಾತ್ಮಕ ಚಿಂತನೆಗಳಲ್ಲಿ ತೊಡಗಿಸಿಕೊಂಡಾಗ ಸಮಾಜದ ಎಲ್ಲ ರೀತಿಯ ದುಷ್ಚಟಗಳಿಗೆ ಕಡಿವಾಣ ಬೀಳುವುದರ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅಭಿಪ್ರಾಯಪಟ್ಟರು.
ಭೂಯಾ ಸ್ಪೋಟ್ರ್ಸ್ ಕ್ಲಬ್ ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಹಾಗೂ ರಮಾನಾಥ ರೈ ಅಭಿಮಾನಿ ಬಳಗ ಬಂಟ್ವಾಳ ವಿಧಾನಸಭಾ ಕ್ಷೇತ್ರ ಇದರ ಸಹಯೋಗದಲ್ಲಿ ಆಹ್ವಾನಿತ 16 ತಂಡಗಳ ನಿಗದಿತ ಓವರ್ ಗಳ “ಕಾಂಗ್ರೆಸ್ ಟ್ರೋಫಿ-2023” ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಪ್ರಯುಕ್ತ ಭಾನುವಾರ ಆಲಡ್ಕ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಿ ಸಿ ರೋಡು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಯುವ ಘಟಕಾಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲು, ಅಲ್ಪಸಂಖ್ಯಾತ ಘಟಕಾಧ್ಯಕ್ಷ ಅರ್ಶದ್ ಸರವು, ಮುಡಿಪು ಬ್ಲಾಕ್ ಕಾಂಗ್ರೆಸ್ ವಕ್ತಾರ ಅಬ್ದುಲ್ ರಝಾಕ್ ಕುಕ್ಕಾಜೆ, ಪಾಣೆಮಂಗಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಜೆಟಿಟಿ, ಬಂಗ್ಲೆಗುಡ್ಡೆ ಕಾಂಗ್ರೆಸ್ ಬೂತ್ ಅಧ್ಯಕ್ಷ ಅಬ್ದುಲ್ ಖಾದರ್ ಪಿ ಬಿ, ಎನ್ ಎಸ್ ಯು ಐ ಪದಾಧಿಕಾರಿಗಳಾದ ನಜೀಬ್ ಮಂಚಿ, ಉದ್ಯಮಿಗಳಾದ ಸಿರಾಜ್ ಮದಕ, ಅಹ್ಮದ್ ಬಾವಾ ಯಾಸೀನ್, ಹಾಜಿ ಬಿ ಎ ಮುಹಮ್ಮದ್ ನೀಮಾ, ಅನ್ಸಾರ್ ಫಾರೆಸ್ಟ್ ಬೋಗೋಡಿ, ಶ್ರೀಮತಿ ಕುಮುದಾ ಜೆ ಕುಡ್ವ, ಪ್ರಮುಖರಾದ ಪಿ ಬಿ ಶಾಫಿ ಹಾಜಿ ಆಲಡ್ಕ, ಶರೀಫ್ ತೋಟ, ಅಬ್ದುಲ್ ಮುತ್ತಲಿಬ್ ಮೊದಲಾದವರು ಭಾಗವಹಿಸಿದ್ದರು. ಇದೇ ವೇಳೆ ಬಿ ರಮಾನಾಥ ರೈ ಅಭಿಮಾನಿ ಬಳಗದ ಟೀ ಶರ್ಟ್ ಬಿಉಡಗಡೆಗೊಳಿಸಲಾಯಿತು.
ಭೂಯಾ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರೀಫ್ ಭೂಯಾ ಸ್ವಾಗತಿಸಿ, ಶಫೀಕ್ ಯು ವಂದಿಸಿದರು, ಪತ್ರಕರ್ತ ಪಿ ಎಂ ಅಶ್ರಫ್ ಕಾರ್ಯಕ್ರಮ ನಿರೂಪಿಸಿದರು.
ಫ್ರೆಂಡ್ಸ್ ಪರ್ಲಿಯಾ ತಂಡಕ್ಕೆ ಕಾಂಗ್ರೆಸ್ ಟ್ರೋಫಿ
ಆಹ್ವಾನಿತ 16 ತಂಡಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ಫ್ರಂಡ್ಸ್ ಪರ್ಲಿಯಾ ತಂಡ ಚಾಂಪಿಯನ್ ಆಗಿ ಮೂಡಿ ಬಂದು ಕಾಂಗ್ರೆಸ್ ಟ್ರೋಫಿ-2023 ಗೆದ್ದುಕೊಂಡಿದರೆ, ಟೀಂ ಭೂಯಾ ಆಲಡ್ಕ ರನ್ನರ್ಸ್ ಆಗಿ ಮೂಡಿ ಬಂತು. ಫೆಂಡ್ಸ್ ಪರ್ಲಿಯಾ ತಂಡದ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ಉತ್ತಮ ದಾಂಡಿಗ ಪ್ರಶಸ್ತಿಯನ್ನು ಪಡೆದುಕೊಂಡರು. ಭೂಯಾ ಆಲಡ್ಕ ತಂಡದ ಉತ್ತಮ ದಾಳಿಗಾರ ಪ್ರಶಸ್ತಿಯನ್ನು ಪಡೆದುಕೊಂಡರು.
ರಫೀಕ್ ಮೆಜೆಸ್ಟಿಕ್, ರಶೀದ್ ಕತಾರ್, ಹಬೀಬ್ ಆಲಡ್ಕ ತೀರ್ಪುಗಾರರಾಗಿ ಸಹಕರಿಸಿದರೆ, ಸಲಾಲ್ ಗೂಡಿನಬಳಿ ಹಾಗೂ ಸಫಾಝ್ ಗೂಡಿನಬಳಿ ಅಂಕಪಟ್ಟಿ ನಿರ್ವಹಣೆಗೈದರು.