Author: admin
ಬಂಟ್ವಾಳ: ವಾಹನ ಮನೆಯಲ್ಲಿದ್ದರೂ ಟೋಲ್‌ಗೇಟ್‌ಗೆಂದು ಖಾತೆಯಿಂದ ಹಣ ಕಡಿತವಾಗುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಗ್ರಾಹಕರು ಈ ಹಗಲು ದರೋಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಕಳೆದ ದಿನಗಳ ಹಿಂದೆಯಷ್ಟೇ ಬಂಟ್ವಾಳದ ಉದ್ಯಮಿಯೊಬ್ಬರ ಕಾರು ಮನೆಯಲ್ಲಿಯೇ ಇದ್ದರೂ ಕೂಡ ಬ್ರಹ್ಮರಕೂಟ್ಲು ಟೋಲ್‌ಗೇಟ್‌ಗಾಗಿ ತನ್ನ ಖಾತೆಯಿಂದ ಹಣ ಕಡಿತಗೊಂಡಿರುವ ಬಗ್ಗೆ ದೂರಿಕೊಂಡಿದ್ದರು. ಕಳೆದ ಗುರುವಾರ ಬಂಟ್ವಾಳದ ವೈದ್ಯರೊಬ್ಬರ ಖಾತೆಯಿಂದಲೂ ಟೋಲ್ ಸುಂಕವೆಂದು ಹಣ ಕಡಿತಗೊಂಡಿದೆ. ಡಾ. ಬಾಲಕೃಷ್ಣ ಅಗ್ರಬೈಲು ಅವರ ಕಾರು ಮನೆಯಲ್ಲಿಯೇ ಇದ್ದರೂ ಕೂಡ ರಾತ್ರಿ 7.30ರ ವೇಳೆಗೆ ಹಣ ಕಡಿತಗೊಂಡು ಅದರ ಮೆಸೆಜ್ ಮೋಬೈಲ್‌ಗೆ ಬಂದಿದೆ. ಈ ಹಗಲು ದರೋಡೆಗೆ ಪ್ರತಿದಿನ ಗ್ರಾಹಕರು ಹಣ ಕಳೆದುಕೊಳ್ಳುತ್ತಿದ್ದು ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸಿ ಸಾರ್ವಜನಿಕರಿಗಾಗುತ್ತಿರುವ ಸಮಸ್ಯೆಯಯನ್ನು ಪರಿಹರಿಸುವಂತೆ ಆಗ್ರಹಿಸಿದ್ದಾರೆ.
ಬಂಟ್ವಾಳ: ಸಾಮಾಜಿಕ ಜಾಲಾತಾಣ ವಾಟ್ಸಪ್ ಮೂಲಕ ಬಂದ ಮೇಸ್‌ಜ್‌ನ ಮೇರೆಗೆ ಷೇರ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿ ಗ್ರಾಹಕರೊಬ್ಬರು ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿಸಿಕೊಂಡ ಘಟನೆ ಇಲ್ಲಿನ ಬಿ.ಮೂಡ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿಸುಬ್ರಾಯ ರಾಮ ಮಡಿವಾಳ 18.92 ಲಕ್ಷ ರೂಪಾಯಿ ಕಳಕೊಂಡಿದ್ದು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸುಬ್ರಾಯ ಮಡಿವಾಳರ ಮೊಬೈಲ್‌ಗೆ 2023 ರ ನವೆಂಬರ್ ತಿಂಗಳಿನಲ್ಲಿ ಷೇರ್ ಟ್ರೇಡಿಂಗ್ ಗಾಗಿ ಹೂಡಿಕೆ ಮಾಡಿ ಲಾಭ ಪಡೆಯುವಂತೆ ವಾಟ್ಸ್‌ಪ್ ಮೂಲಕ ಮೇಸೆಜ್‌ಗೆ ಬಂದಿತ್ತು. ಅದಕ್ಕೆ ಸ್ಪಂದಿಸಿ ಅಪರಿಚಿತ ಆರೋಪಿಗಳು ನೀಡಿದ ಸೂಚನೆಗಳನ್ನು ಅನುಸರಿಸಿ ಜ.9 ರಿಂದ ಈವರೆಗೆ ಹಂತ ಹಂತವಾಗಿ ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 18,92,200 ರೂ ಹಣವನ್ನು ಪಾವತಿಸಿದ್ದಾರೆ. ಆದರೆ ಆರೋಪಿಗಳು ಲಾಭಾಂಶವನ್ನು ನೀಡದೆ, ಪಾವತಿಸಿದ ಹಣವನ್ನೂ ವಾಪಾಸ್ಸು ನೀಡದೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದು ಪ್ರಕರಣ ದಾಖಲಾಗಿದೆ.
ಬಂಟ್ವಾಳ: ಅಧಿಕಾರಿ ವರ್ಗದವರ ಸಹಕಾರ, ಶ್ರಮ, ಇದ್ದಾಗ ಧಾರ್ಮಿಕ ಕೇಂದ್ರಗಳು ಪವಿತ್ರ ಹಾಗೂ ಸೌಹಾರ್ದತೆಯ ತಾಣಗಳಾಗುತ್ತವೆ ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ. 13ರಿಂದ ಫೆ. 23ರವರೆಗೆ ನಡೆಯಲಿರುವ ಪುನಃ ಪ್ರತಿಷ್ಠೆ, ಅಷ್ಟಬಂಧ, ಬ್ರಹ್ಮಕಲಶಾಭಿಷೇಕ ಮತ್ತು ಧ್ವಜಸ್ತಂಭ ಪ್ರತಿಷ್ಠೆ ಹಾಗೂ ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ತಾಲೂಕಿನ ಅಧಿಕಾರಿಗಳ ಸಭೆ ನಡೆಸಿ ಮಾರ್ಗದರ್ಶನ ಮಾಡಿದರು.ಬ್ರಹ್ಮಕಲಶೋತ್ಸವದ ಸಂದರ್ಭ ಸಾವಿರಾರು ಮಂದಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುವ ಹಿನ್ನಲೆಯಲ್ಲಿ ಸ್ವಚ್ಛತೆ, ಬಂದೋಬಸ್ತ್ ವಿಚಾರವಾಗಿ ಅಧಿಕಾರಿಗಳು ತಮ್ಮ ಇಲಾಖೆಯ ಮೂಲಕ ಸಹಕಾರ ನೀಡಿದಾಗ ಅದು ಯಶಸ್ವಿಯಾಗಲು ಸಾಧ್ಯವಿದೆ ಎಂದರು. ಅಧಿಕಾರಿಗಳ ಸಹಕಾರಕ್ಕಾಗಿ ಸಮಿತಿಯ ಒರ್ವ ಪದಾಧಿಕಾರಿಯನ್ನು ನೀಡಬೇಕು ಎಂದು ತಿಳಿಸಿದ ಖಾದರ್ ಬ್ರಹ್ಮಕಲಶೋತ್ಸವದ 10 ದಿನಗಳಲ್ಲೂ ಪವರ್ ಕಟ್ ಆಗದಂತೆ ಎಚ್ಚರ ವಹಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಸವಿರಾರು ಮಂದಿ ಅನ್ನ ಪ್ರಸಾದ ಸ್ವೀಕರಿಸುವುದರಿಂದ ಸ್ವಚ್ಛತೆಯತ್ತ ಗಮನ ಹರಿಸಬೇಕು ಸ್ಥಳೀಯ ಪಂಚಾಯತಿ ಜೊತೆಗೆ ಪುರಸಭೆಯ ಸಹಕಾರ ಪಡೆದು ಸೂಕ್ತ ವ್ಯವಸ್ಥೆ…
ಬಂಟ್ವಾಳ: ಮಂದಿರಗಳು ಪ್ರತಿಯೊಂದು ಊರಿನಲ್ಲಿಯೂ ಶ್ರದ್ಧಾಕೇಂದ್ರಗಳಾಗಿ ರೂಪುಗೊಳ್ಳಬೇಕು. ಅಯೋಧ್ಯೆಯಂತೆ ಬೆಳಗಬೇಕು. ಶ್ರೀ ರಾಮ ಎಲ್ಲರಿಗೂ ಆದರ್ಶವಾಗಬೇಕು. ಸಮಾಜದಲ್ಲಿ ಸಾಮರಸ್ಯವಾಗಿಸುಶಿಕ್ಷಿತರಾಗಬೇಕು ಎಂದು ಅವಧೂತ ಶ್ರೀ ವಿನಯ ಗುರೂಜಿ ಗೌರಿಗದ್ದೆಯವರು ನುಡಿದರು.ಅವರು ಕಲ್ಲಡ್ಕ ಶ್ರೀರಾಮ ಮಂದಿರ ರಾಮನಗರದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶ್ರೀ ವಿದ್ಯಾಗಣಪತಿ ದೇವರ ಗುಡಿಗೆ ಶಿಲಾನ್ಯಾಸ ಸಂದರ್ಭದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.ಶ್ರೀ ರಾಮ ಕಾರುಣ್ಯ ಮೂರ್ತಿ.ಸದ್ಗುಣವಂತ, ಸೂರ್ಯವಂಶಜ, ಅವನ ಆದರ್ಶವನ್ನು ಮೈಗೂಡಿಸಿಕೊಂಡಿರುವ ಕಲ್ಲಡ್ಕ ಪ್ರಭಾಕರ ಭಟ್ಟರು ವಿದ್ಯಾಕೇಂದ್ರದ ಮೂಲಕ ಮಕ್ಕಳಲ್ಲಿ ಆದರ್ಶ ಸಂಸ್ಕೃತಿಯ ನ್ನು ಬೆಳೆಸುತಿದ್ದಾರೆ ಎಂದರು. ಕರಾವಳಿಯಲ್ಲಿ ದೈವಾರಾಧನಾ ಪದ್ಧತಿ ಕೌಟುಂಬಿಕ ಜೀವನವನ್ನು ಉಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ರಾಮಾಂಜನೇಯ ಸೇವಾಟ್ರಸ್ಟ್ ಅಧ್ಯಕ್ಷ ಡಾ.ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸಿದ್ದರು.ಅತಿಥಿಗಳಾಗಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀ ನಿವಾಸ ಪೂಜಾರಿ ಬೆಂಗಳೂರಿನ ಎಂ.ಆರ್.ಜಿ.ಗ್ರೂಪ್ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ಮಾಜಿಸಚಿವ ಕೃಷ್ಣ ಜೆ.ಪಾಲೆಮಾರ್,ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಉದ್ಯಮಿ ಸಂತೋಷ ಜಿ.ಶೆಟ್ಟಿ ದಲಂಬಿಲ ಮುಂಬಯಿ,ಅನಂತ ಮೂರ್ತಿ ಸಿರ್ಸಿ ಭಾಗವಹಿಸಿದ್ದರು.ಶ್ರೀ…
ಬಂಟ್ವಾಳ: ನಾವೂರು ಗ್ರಾಮದ ಶ್ರೀ ಸುಬ್ರಾಯವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನದಲ್ಲಿ ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಕ್ಷೇತ್ರದ ತಂತ್ರಿಗಳಾದ ನಡ್ವಾಂತಾಡಿ ಶ್ರೀಪಾದ ಪಾಂಗಣ್ಣಯರ ನೇತೃತ್ವದಲ್ಲಿ ನಡೆಯಿತು. ಸಂಜೆ ಸ್ವಸ್ತಿ ಪುಣ್ಯಾಹ ವಾಚನ, ದುರ್ಗಾ ನಮಸ್ಕಾರ ಪೂಜೆ, ಮಹಾಪೂಜೆ, ಉತ್ಸವ ಬಲಿ, ವಸಂತಕಟ್ಟೆ ಪೂಜೆ ನಡೆಯಿತು. ಊರ ಪರವೂರ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾಗಿ ಸಂದೀಪ್ ಮೊಡಂಕಾಪು ಆಯ್ಕೆಯಾಗಿದ್ದಾರೆ.ಸಂಘದ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು ಗೌರವ ಅಧ್ಯಕ್ಷರಾಗಿ ಉಮೇಶ್ ಸಾಲ್ಯಾನ್ ಹಾಗು ಇಸ್ಮಾಯಿಲ್ ತುಂಬೆ, ಉಪಾಧ್ಯಕ್ಷರಾಗಿ ಇರ್ಫಾನ್ ಪಲ್ಲಮಜಲ್,ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ನೋರ್ಣಡ್ಕಜೊತೆ ಕಾರ್ಯದರ್ಶಿಯಾಗಿ ಪುರುಷೋತ್ತಮ ಬೆದ್ರಗುಡ್ಡೆಆಯ್ಕೆಯಾದರು.
ಬಂಟ್ವಾಳ: ಬಿ.ಸಿ.ರೋಡಿನ ಅಜ್ಜಿಬೆಟ್ಟಿನಲ್ಲಿರುವ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿಯ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುವಂತೆ ಬ್ಯಾಂಕ್ ಆಫ್ ಬರೋಡಾದ ಬಂಟ್ವಾಳ ಶಾಖೆ ವತಿಯಿಂದ ಕಲಿಕಾ ಆಟಿಕೆಗಳನ್ನು ಮಂಗಳವಾರ ಜ.30ರಂದು ಹಸ್ತಾಂತರಿಸಲಾಯಿತು. ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ವಾಮನ್ ನಾಯಕ್ ಮತ್ತು ಸಿಬಂದಿ ಹಾಗೂ ಹಳೆ ವಿದ್ಯಾರ್ಥಿ ಚೇತನ್ ಕುಮಾರ್ ಅವರು ಮುಖ್ಯೋಪಾಧ್ಯಾಯರಾದ ಲಕ್ಷ್ಮೀ ಕೆ. ಅವರಿಗೆ ಹಸ್ತಾಂತರ ಮಾಡಿ ಇದು ಮಕ್ಕಳಿಗೆ ಉಪಯೋಗವಾಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭ ಎಸ್.ಡಿ.ಎಂ.ಸಿ. ಅಧ್ಯಕ್ಷ ಹರೀಶ ಮಾಂಬಾಡಿ, ಸಹಶಿಕ್ಷಕರಾದ ತಾಹಿರಾ, ಸುಶೀಲಾ, ಶಿಕ್ಷಕಿಯರಾದ ಪೂರ್ಣಿಮಾ, ಲಾವಣ್ಯ ಉಪಸ್ಥಿತರಿದ್ದರು.
ಮಂಗಳೂರು: ಜೂಜಿನ ಕೋಳಿ ಅಂಕವು ಕಾನೂನುಬಾಹಿರ ಅಪರಾಧವಾಗಿದ್ದು, ಕೋಳಿ ಅಂಕವನ್ನು ನಡೆಸುವುದಕ್ಕಾಗಿ ಪೊಲೀಸ್ ಠಾಣೆಗಳಲ್ಲಿ ಅನುಮತಿ ನೀಡಲು ಕಾನೂನಿನಲ್ಲಿ ಯಾವುದೇ ಅವಕಾಶವಿರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಕೋಳಿ ಅಂಕ ನಡೆಸಲು ಅನುಮತಿಗಾಗಿ ಪೊಲೀಸ್ ಠಾಣೆಗಳಿಗೆ ಮನವಿ ಸಲ್ಲಿಸಬಾರದು. ಇಂತಹ ಅಕ್ರಮ ಚಟುವಟಿಕೆಗಳನ್ನು ನಡೆಸುವುದು ಕಂಡುಬಂದಲ್ಲಿ, ಅವರುಗಳ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳಲಾಗುವುದು. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಬಂಟ್ವಾಳ: ಸಜೀಪ ಸಮೀಪದ ಕೋಟೆಕಣಿಯಲ್ಲಿ ಫ್ಲೈವುಡ್ ಫ್ಯಾಕ್ಟರಿಗೆ ಬೆಂಕಿ ತಗಲಿ ಸುಮಾರು 2 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ.ಬಂಟ್ವಾಳ ಹಾಗೂ ಪಾಂಡೇಶ್ವರ ಅಗ್ನಿಶಾಮಕ ವಾಹನಗಳು ತೆರಳಿ ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದ್ದಾರೆ. ಶಬೀರ್ ಅವರಿಗೆ ಸೇರಿದ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮರದ ಅವಶೇಷ ರಾಶಿ ಹಾಕಿದ್ದ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.ಕಾರ್ಯಾಚರಣೆಯಲ್ಲಿ ಪಾಂಡೇಶ್ವರ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರಾಜ, ಬಂಟ್ವಾಳ ಅಗ್ನಿಶಾಮಕ ಠಾಣೆಯ ಸಿಬಂದಿ ಚಂದ್ರಕಾಂತ, ಪುರುಷೋತ್ತಮ, ರಾಜೇಶ್ ಶೆಟ್ಟಿ, ಕಿರಣ್ ಕುಮಾರ್, ರುಕ್ಕಯ್ಯ ಅಮೀನ್, ಕೆ.ಸುರೇಂದ್ರ, ನಾಗರಾಜ್, ಜಾಂಟಿ ಭಾಗವಹಿಸಿದ್ದರು.
ಬಂಟ್ವಾಳ: ಇಲ್ಲಿನ ತಾಲೂಕು ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್ ಬಿ ಕೂಡಲಗಿ ಅವರು ಭಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ತಹಶೀಲ್ದಾರರಾಗಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು. ಬಿ.ಸಿ. ರೋಡಿನಲ್ಲಿರುವ ತಾಲೂಕು ಆಡಳಿತ ಸೌಧದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ನೂತನ ತಹಶೀಲ್ದಾರ್ ಅರ್ಚನಾ ಭಟ್ ರವರು ಮಾತನಾಡಿ ಹೊಸತನ್ನು ಕಲಿಯುವ ಛಲ ಮತ್ತು ಧೈರ್ಯ ಇದ್ದರೆ ಯಾವುದೇ ಕರ್ತವ್ಯವನ್ನಾದರೂ ಸುಲಭವಾಗಿ ನಿರ್ವಹಿಸಬಹುದು. ತಾಲೂಕು ಆಡಳಿತದ ಯಶಸ್ಸಿಗೆ ಎಲ್ಲರೂ ಒಂದಾಗಿ ದುಡಿಯೋಣ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಎಸ್.ಬಿ. ಕೂಡಲಗಿ ಅವರು ಬಂಟ್ವಾಳ ತಾಲೂಕಿನ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಅತ್ಯುತ್ತಮವಾದ ಸಹಕಾರ ನೀಡಿದ್ದರಿಂದಾಗಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಯಿತು ಎಂದರು. ಬಂಟ್ವಾಳ ತಾಲೂಕು ಕಛೇರಿ ಉಪತಹಶೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಕಚೇರಿ ಸಿಬ್ಬಂದಿಗಳು, ಗ್ರಾಮ ಸಹಾಯಕರು ತಹಶೀಲ್ದಾರರಿಗೆಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ನರೇಂದ್ರನಾಥ ಮಿತ್ತೂರು, ರಾಜೇಶ್ ನಾಯ್ಕ್, ದಿವಾಕರ ಮುಗುಳಿಯ…








