ಮಹಿಳೆಯರು ಸಂಘಟಿತರಾದಾಗ ಸಮಾಜಕ್ಕೆ ಒಳಿತು . ಬಂಟ ಮಹಿಳೆಯರು , ಯುವತಿಯರು ವಿವಿಧ ಕ್ಷೇತ್ರ ಗಳಲ್ಲಿ ವಿಶ್ವ ದಲ್ಲೇ ಗಣನೀಯ ಸಾಧನೆ ಮಾಡಿರುತ್ತಾರೆ . ಎಂದು ಬಂಟ್ವಾಳ ತಾಲೂಕು ಬಂಟರ ಸಂಘ ದ ಅಧ್ಯಕ್ಷರಾದ ಚಂದ್ರಹಾಸ್ ಶೆಟ್ಟಿ ಯವರು ಫರಂಗಿಪೇಟೆ ವಲಯ ಬಂಟರ ಸಂಘ ಮಹಿಳಾ ವಿಭಾಗದ ದಶ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡಿದರು .
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಬಂಟ ಸಮಾಜದ ಯುವತಿಯರನ್ನು ವೇದಿಕೆಯಲ್ಲಿ ಗೌರವಿಸಲಾಯಿತು
ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಬಂಟರ ಸಂಘ ಮಹಿಳಾ ವಿಭಾಗದ ಅಧ್ಯಕ್ಷೆ ರಮಾ ಎಸ್ ಭಂಡಾರಿ , ಫರಂಗಿಪೇಟೆ ವಲಯ ಬಂಟರ ಸಂಘ ದ ಮಾಜಿ ಅಧ್ಯಕ್ಷರಾದ ಸದಾನಂದ ಆಳ್ವ ಕಂಪ , ಫರಂಗಿಪೇಟೆ ವಲಯ ಬಂಟರ ಸಂಘ ಅಧ್ಯಕ್ಷ ದೇವದಾಸ್ ಶೆಟ್ಟಿ ಕೊಡ್ಮಾಣ್ , ಕಾರ್ಯದರ್ಶಿ ಗಿರೀಶ್ ಶೆಟ್ಟಿ ಮಹಿಳಾ ವಿಭಾಗದ ಅಧ್ಯಕ್ಷೆ ವೀಣಾ ಎಂ ಶೆಟ್ಟಿ , ಕಾರ್ಯದರ್ಶಿ ಸರೋಜಿನಿ ಆಳ್ವ , ಸಂಚಾಲಕಿ ನಾಗರತ್ನ ಯು ರೈ , ಹಿರಿಯರಾದ ಹರಿಣಾಕ್ಷಿ ಆರ್ ಶೆಟ್ಟಿ ಕೊಳಂಬೆ ಯುವ ವಿಭಾಗದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು .
ಫರಂಗಿಪೇಟೆ ವಲಯ ಬಂಟರ ಸಂಘ ಮಹಿಳಾ ವಿಭಾಗದ ದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗು ಭಸ್ಮಾಸುರ ಮೋಹಿನಿ ಯಕ್ಷಗಾನ ನಡೆಯಿತು
ಸುಮಾ ಎನ್ ಶೆಟ್ಟಿ ಮತ್ತು ಭುವನೇಶ್ವರಿ ಶೆಟ್ಟಿ ಯವರು ಕಾರ್ಯಕ್ರಮ ನಿರೂಪಿಸಿದರು