
ಬಂಟ್ವಾಳ: ಮಗುವಿನ ವ್ಯಕ್ತಿತ್ವವನ್ನು ಅರಳಿಸುವ ಕೆಲಸವನ್ನು ತಾಯಿ ಮಾಡಿದರೆ ಮಗುವಿನ ಮನದಲ್ಲಿ ಧಾರ್ಮಿಕ ಭಾವ ಉದ್ದೀಪನವಾಗುತ್ತದೆ ಆ ಮೂಲಕ ಹಿಂದೂ ಸಮಾಜ ಉತ್ಕರ್ಷವಾಗುತ್ತದೆ. ಮಕ್ಕಳಿಗೆ ಸಂಸ್ಕಾರ ಕೊಡುವ ಕೆಲಸ ತಾಯಿಯಂದಿರಿಂದ ಆಗಬೇಕಾಗಿದ್ದು ಸಂಸ್ಕಾರದ ಪಾಠ ಮಾಡುವ ಪ್ರಯತ್ನ ಸಾಕಾರವಾದರೆ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗುತ್ತದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜರಾಂ ಭಟ್ ಹೇಳಿದರು.
ಶ್ರೀ ಶಾರದಾ ಸೇವಾ ಪ್ರತಿಷ್ಠಾನ ತುಂಬೆ ಇದರ ಆಶ್ರಯದಲ್ಲಿ ನಡೆದ 24ನೇ ವರ್ಷದ ತುಂಬೆ ಶ್ರೀ ಶಾರದಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಮುಖ್ಯ ಅತಿಥಿ, ನ್ಯಾಯವಾದಿ ಆಶಾಮಣಿ ಡಿ. ರೈ ಮಾತನಾಡಿ ಶಾರದೆ ಜ್ಞಾನ ಮಾತೆ. ಶಾರದೆಯನ್ನು ಆರಾಧಿಸಿದರೆ ಲಕ್ಷ್ಮಿ ಒಲಿಯುತ್ತಾಳೆ. ಹಣದ ಆಸೆಯ ಹಿಂದೆ ಬಿದ್ದು ಪ್ರಕೃತಿಯನ್ನು ಹಾಳು ಮಾಡುವುದು ಸರಿಯಲ್ಲ, ನಾವು ಸಂಸ್ಕಾರವಂತರಾಗಿ ಇನ್ನೊಬ್ಬರಿಗೆ ತಿಳಿಸಿಕೊಡಬೇಕು. ಉಪದೇಶಕ್ಕಿಂತ ಅನುಸರಿಸಿ ತೋರುವುದೇ ಶ್ರೇಷ್ಠ ಎಂದು ತಿಳಿಸಿದರು. ಮುಂಬೈ ಉದ್ಯಮಿ ಮುರಳೀಧರ ಮಾತನಾಡಿದರು. ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಅನಿಲ್ ಪಂಡಿತ್ ಅಧ್ಯಕ್ಷತೆ ವಹಿಸಿದ್ದರು.


ವಾಣಿಜ್ಯ ತೆರಿಗೆ ಅಧಿಕಾರಿ ನವೀನ್ ಚಂದ್ರ ಕೆ. ,ಬಂಟ್ವಾಳ ವಲಯ ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ಸುಧೀರ್ ಪೂಜಾರಿ,ಪಿಡಬ್ಲ್ಯುಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ತುಂಬೆ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶಕುಂತಳ ಎಸ್. ಉಳ್ಳಾಲ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತುಂಬೆ ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಉಪಾಧ್ಯಕ್ಷೆ
ಶೋಭಾ ಗೋಪಾಲ ಮೈಂದನ್, ಕೋಶಾಧಿಕಾರಿ ಸೋಮಪ್ಪ ಕೋಟ್ಯಾನ್, ಶಾರದೋತ್ಸವ ಸಮಿತಿಯ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಶ್ರೀ ಶೈಲ ವೇದಿಕೆಯಲ್ಲಿದ್ದರು.ಜಿ.ಪಂ. ಮಾಜಿ ಸದಸ್ಯ
ರವೀಂದ್ರ ಕಂಬಳಿ, ಪ್ರಮುಖರಾದ ನವಿನ್ ಪಾದಲ್ಪಾಡಿ, ಎಂ.ಆರ್. ನಾಯರ್, ತಾರನಾಥ ಕೊಟ್ಟಾರಿ ತೇವು, ಕೃಷ್ಣ ಕುಮಾರ್ ಪೂಂಜ ಮೊದಲಾದವರಿದ್ದರು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಿ. ತುಂಬೆ ಸ್ವಾಗತಿಸಿದರು, ಜಗದೀಶ್ ಕಡೆಗೋಳಿ ಕಾರ್ಯಕ್ರಮ ನಿರೂಪಿಸಿದರು. ಶಾರದೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮಾನಂದ ಅಮೀನ್ ತುಂಬೆ ವಂದಿಸಿದರು.


