Author: admin
ಬಂಟ್ವಾಳ : ತಾಲೂಕು ಕುಲಾಲ ಸುಧಾರಕ ಸಂಘ ಬಂಟ್ವಾಳ ಇದರ ಆಶ್ರಯದಲ್ಲಿ ಕುಲಾಲ ಸಂಘಗಳ ಸಾಂಸ್ಕೃತಿಕ ಕಾರ್ಯಕ್ರಮ ಕಲಾವಳಿಗೆ ಹಿರಿಯ ರಂಗಕರ್ಮಿ ರಮಾ ಬಿ.ಸಿ.ರೋಡು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ದೀಪಪ್ರಜ್ವಲಿಸಿ ಚಾಲನೆ ನೀಡಿದರು.ಅವರು ಮಾತಮಾಡಿ ನಿಸ್ವಾರ್ಥ ಸೇವೆಗೆ ನಿದರ್ಶನ ದೀಪ. ತಾನು ಕತ್ತಲಲ್ಲಿದ್ದರೂ ದೀಪ ಇತರರಿಗೆ ಬೆಳಕು ನೀಡುತ್ತದೆ. ಅಂತೆಯೇ ಇಂದು ದೀಪಪ್ರಜ್ವಲಿಸುವ ಮೂಲಕ ಕಲಾಂಜಲಿ ಉದ್ಘಾಟನೆಗೊಂಡಿದೆ. ಕುಲಾಲರ ಮೂಲ ಕಲೆ. ಚಕ್ರ ಕುಲಾಲರ ಸಂಕೇತ, ಅಭಿವೃದ್ದಿಯ ಸಂಕೇತ. ಅನೇಕ ಮಂದಿ ಕಲಾವಿದರು ಕುಲಾಲ ಸಮಾಜದಲ್ಲಿದ್ದಾರೆ. ಕಲಾವಿದರಿಗೆ ವೇದಿಕೆ ಒದಗಿಸುವ ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ಸಂಘದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಸ್ವಾಗತಿಸಿದರು,ಕೋಶಾಧಿಕಾರಿ ರಮೇಶ್ ಸಾಲ್ಯಾನ್ ವಂದಿಸಿದರು. ಸಂದೀಪ್ ಸಾಲ್ಯಾನ್ ಉದ್ಘಾಟಕರನ್ನು ಪರಿಚಯಿಸಿದರು. ರಂಗಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು
ಬಂಟ್ವಾಳ: ಕರ್ನಾಟಕ ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘದ ವತಿಯಿಂದ ಬಿ.ಸಿ.ರೋಡ್ ನ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಮತ್ತು ಇನ್ವರ್ಟರ್, ಯುಪಿಎಸ್ ಕೊಡುಗೆ ಹಸ್ತಾಂತರ ಕಾರ್ಯಕ್ರಮ ಶುಕ್ರವಾರ ಶಾಲೆಯಲ್ಲಿ ನಡೆಯಿತು.ಸಂಘದ ಜಿಲ್ಲಾಧ್ಯಕ್ಷ ಆನಂದ ಕುಮಾರ್ ಅವರು ಶಾಲಾ ಮುಖ್ಯ ಶಿಕ್ಷಕಿ ಲಕ್ಷ್ಮೀ ಕೆ. ಅವರಿಗೆ ಕೊಡುಗೆಯನ್ನು ಹಸ್ತಾಂತರಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹರೀಶ ಮಾಂಬಾಡಿ ಮಾತನಾಡಿ, ಭೂಮಾಪನ ಕಾರ್ಯನಿರ್ವಾಹಕ ನೌಕರರ ಸಂಘ ಇತರ ಸಂಘಟನೆಗಳಿಗೆ ಮಾದರಿಯಾಗುವ ಕಾರ್ಯ ಮಾಡುತ್ತಿದ್ದು, ಬಿ.ಮೂಡ ಶಾಲೆಯಲ್ಲಿ ಕಂಪ್ಯೂಟರ್ ಉಚಿತ ತರಗತಿ ಆರಂಭಗೊಳ್ಳಲು ಪ್ರೇರಣೆಯಾಗಿದೆ. ತರಗತಿಗೆ ಬೇಕಾದ ಎಲ್ಲ ಸವಲತ್ತುಗಳನ್ನು ಒದಗಿಸುವ ಮೂಲಕ ಬಡ ವಿದ್ಯಾರ್ಥಿಗಳೂ ಆಧುನಿಕ ವ್ಯವಸ್ಥೆಯನ್ನು ಅರಿತುಕೊಳ್ಳುವ ಮೂಲಕ ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಳ್ಳಲು ಅನುಕೂಲವಾಗಿದೆ ಎಂದು ಹೇಳಿದರು. ಈಗಾಗಲೇ ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ನೆತ್ತರ ಎಂಬಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ…
ಬಂಟ್ವಾಳ: ನೇತ್ರಾವತಿ ನದಿ ತೀರದ ರಮಣೀಯ ಪರಿಸರದಲ್ಲಿ ಪಶ್ಚಿಮಾಭಿಕವಾಗಿ ನಿರ್ಮಾಣಗೊಂಡಿರುವ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ಶ್ರೀಶರಭೇಶ್ವರ ದೇವಸ್ಥಾನದಲ್ಲಿ ಸಪರಿವಾರ ಶ್ರೀಶರಭೇಶ್ವರ ದೇವರ ಪುನರ್ ಪ್ರತಿಷ್ಠಾಷ್ಠಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕವು ಜ.19 ರಿಂದ 25ರವರೆಗೆ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ದೇವಳದ ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ಜಗನ್ಮಾಥ ಶೆಟ್ಟಿ ಬದಿಗುಡ್ಡೆ ಹೇಳಿದರು.ಬುಧವಾರ ಕ್ಷೇತ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ದಿನೇಶ್ ಕೃಷ್ಣ ತಂತ್ರ ವರ್ಕಾಡಿ ಅವರ ಮಾರ್ಗದರ್ಶನದಲ್ಲಿ ನೆರವೇರಲಿದೆ ಎಂದರು. ಸುಮಾರು 7 ಕೋ.ರೂ.ವೆಚ್ಚದಲ್ಲಿ ಶಿಲಾಮಯವಾಗಿ ನಿರ್ಮಾಣಗೊಂಡಿರುವ ಈ ದೇವಾಲಯಕ್ಕೆ ಸಂಸದ ನಳಿನ್‌ಕುಮಾರ್ ಕಟೀಲ್ ಅವರು ಧ್ವಜ ಸ್ತಂಭವನ್ನು ಹರಕೆ ರೂಪದಲ್ಲಿ ಸಮರ್ಪಿಸಿದ್ದಾರೆ. ಶಾಸಕ ರಾಜೇಶ್ ನಾಕ್ ಅವರು ತಮ್ಮ ಶಾಸಕತ್ವದ ನಿಧಿಯಡಿ 2 ಕೋ.ರೂ.ವೆಚ್ಚದಲ್ಲಿ ರಥಬೀದಿ ಸುತ್ತಲು ಕಾಂಕ್ರೀಟಿಕರಣಗೊಳಿಸುವ ಕಾರ್ಯ ನಡೆದಿದೆ ಎಂದರು.7 ದಿನಗಳ ಬ್ರಹ್ಮಕಲಶೋತ್ಸವ ಸಂಭ್ರಮದ ಪ್ರಯುಕ್ತ ಪ್ರತಿದಿನ ಧಾರ್ಮಿಕ ಸಭಾ ಕಾರ್ಯ ಕ್ರಮ ಆಯೋಜಿಸಲಾಗಿದೆ.…
ಬಂಟ್ವಾಳ: ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ ಇದರ ನೂತನ ಅಧ್ಯಕ್ಷರಾಗಿ ಸುರೇಶ್ ಬಂಗೇರ ಅವಿರೋಧವಾಗಿ ಪುನರಾಯ್ಕೆಗೊಂಡರು.ಸಮಿತಿಯ ೨೮ನೇ ವಾರ್ಷಿಕ ಮಹಾಸಭೆಯು ಡಾ.ಎನ್ ನರಸಿಂಹ ಹೊಳ್ಳ ಕಲಾವೇದಿಕೆಯಲ್ಲಿ ಜರಗಿದ್ದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಕಾರ್ಯದರ್ಶಿಯಾಗಿ ಶೇಖರ್ ಕುಲಾಲ್, ಕೋಶಧಿಕಾರಿಯಾಗಿ ಎ.ದಾಮೋದರ್, ಉಪಾಧ್ಯಕ್ಷರಾಗಿ ಪ್ರಿಯಲತಾ ವಾಮನ, ಕ್ರೀಡಾಕಾರ್ಯದರ್ಶಿಯಾಗಿ ಪುರಂದರ ಶೆಟ್ಟಿ ಹಾಗೂ ಗೌರವಾಧ್ಯಕ್ಷರಾಗಿ ನರಸಿಂಹರಾಜ್ ಹೊಳ್ಳ ಆಯ್ಕೆಯಾದರು.
ಬಂಟ್ವಾಳ: ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವ, ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಮಂಗಳವಾರ ನಡೆಯಿತು. ಶಾಲಾ ಸಂಚಾಲಕ ಹಾಗೂ ಅಕ್ಕರಂಗಡಿ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್ ಬಾವುಂಞಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ ಜಿ, ನಾರ್ಶಾ ಮೈದಾನ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ರಾಮಕೃಷ್ಣರಾವ್, ಪಾಣೆಮಂಗಳೂರು ಎಸ್ ಎಲ್ ಎನ್ ಪಿ ಶಾಲಾ ಮುಖ್ಯ ಶಿಕ್ಷಕಿ ಶ್ವೇತಾ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ವೇಳೆ ಶಾಲೆಯಲ್ಲಿ ಸುಮಾರು 30 ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಜಯಲಕ್ಷ್ಮಿ ಭಟ್ ಅವರಿಗೆ ಶಾಲಾಡಳಿತ ಮಂಡಳಿ ಹಾಗೂ ಹಳೆ ವಿದ್ಯಾರ್ಥಿಗಳ ವತಿಯಿಂದ 4 ಪವನ್ ಚಿನ್ನಾಭರಣ ಉಡುಗೊರೆಯಾಗಿ ನೀಡಿ ಸನ್ಮಾನಿಸಿ, ಗೌರವಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕ ರಾಧಾಕೃಷ್ಣ, ಗೌರವ ಶಿಕ್ಷಕರಾದ ನಿಶಾಂತ್ ಮತ್ತು ಆಯಿಶಾ ಸುನೈನ, ಸಲಹಾ ಸಮಿತಿ ಸದಸ್ಯ ಅಬ್ದುಲ್ ರಹಿಮಾನ್,…
ಬಂಟ್ವಾಳ: ನದಿ ನೀರಿಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ನಾವೂರು ಗ್ರಾಮದ ಕೂಡಿಬೈಲು ಎಂಬಲ್ಲಿ ಗುರುವಾರ ಸಂಜೆ ವೇಳೆ ನಡೆದಿದೆ. ಮೃತ ಬಾಲಕನನ್ನು ಕೂಡಿಬೈಲು ನಿವಾಸಿ ಪುಟ್ಟಣ್ಣ ನಾಯ್ಕ್ ಎಂಬವರ ಮಗ ಪ್ರಜ್ವಲ್ ನಾಯ್ಕ್ (13) ಎಂದು ಗುರುತಿಸಲಾಗಿದೆ.ಕೂಡಿಬೈಲು ಜಾತ್ರೆಯ ನಿಮಿತ್ತ ಪುಟ್ಟಣ್ಣ ನಾಯ್ಕ್ ಅವರ ಮನೆಗೆ ನೆಂಟರಿಷ್ಟರು ಬಂದಿದ್ದು ಕೆಲವು ಸ್ನೇಹಿತರೊಂದಿಗೆ ಮನೆ ಸಮೀಪದ ನೇತ್ರಾವತಿ ನದಿ ಬಳಿಗೆ ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭ ಪ್ರಜ್ವಲ್ ಕೂಡ ಅವರೊಂದಿಗೆ ತೆರಳಿದ್ದು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಪುಟ್ಟಣ್ಣ ನಾಯ್ಕ್ ಅವರಿಗೆ ಇಬ್ಬರು ಮಕ್ಕಳಿದ್ದು ಪ್ರಜ್ವಲ್ ಬಂಟ್ವಾಳದ ಎಸ್‌ವಿಎಸ್ ದೇವಳ ಶಾಲೆಯಲ್ಲಿ ೮ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಊರಿನ ಜಾತ್ರೆಯ ಪ್ರಯುಕ್ತ ಬುಧವಾರ ಶಾಲೆಗೆ ಬಂದಿರಲಿಲ್ಲ. ಆಕಸ್ಮಿಕ ದುರ್ಘಟನೆಯಿಂದ ಮನೆಯಲ್ಲಿ ದುಃಖದ ವಾತವರಣ ಕಂಡು ಬಂದಿದೆ. ಮೃತದೇಹವನ್ನು ನದಿಯಿಂದ ಮೇಲೆತ್ತಲಾಗಿದ್ದು ಬಂಟ್ವಾಳದ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಬಂಟ್ವಾಳ: ಅಯೋಧ್ಯೆಯ ನೂತನ ಮಂದಿರದಲ್ಲಿ ಜ.22 ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಹಿನ್ನಲೆಯಲ್ಲಿ ಇಡೀ ದೇಶವೇ ಸಂಭ್ರಮದಲ್ಲಿದ್ದರೆ,ಅಯೋಧ್ಯೆ ಕರಸೇವೆಯಲ್ಲಿ 2 ಬಾರಿ ಪಾಲ್ಗೊಂಡರೂ, ಪ್ರಸ್ತುತ ಅಯೋಧ್ಯೆ ನೂತನ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಸಂದರ್ಭ ಪಾಲ್ಗೊಳ್ಳಲು ಸಾಧ್ಯವಾಗದ ಬಂಟ್ವಾಳ ಪುರಸಭೆಯ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಅವರು ಇದರ ನೆನಪಿಗಾಗಿ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಮುಂಭಾಗ ಜಿಲ್ಲೆಯ ಜೀವನದಿ ನೇತ್ರಾವತಿ ನದಿ ಮಧ್ಯದಲ್ಲಿ ಜ 21ರ ರಾತ್ರಿ 7ರ ಬಳಿಕ ಶ್ರೀ ಸತ್ಯನಾರಾಯಣ ಪೂಜಾ ವಿಧಿಯನ್ನು ನಡೆಸಲಿದ್ದಾರೆ. ನದಿನೀರಿನ ಮಧ್ಯೆ ತೆಪ್ಪದ ಮಾದರಿಯನ್ನು ರಚಿಸಿ ವಿದ್ಯುತ್ ಮತ್ತು ಹಣತೆ ಬೆಳಕಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲು ಮುಂದಾಗಿರುವ ಪ್ರಭು ಅವರು ಇದಕ್ಕೆ ಬೇಕಾದ ಸಕಲ ಸಿದ್ದತೆಗಳು ನೇತ್ರಾವತಿಯಲ್ಲಿ ಭರದಿಂದ ಸಾಗುತ್ತಿದೆ.ಇಂತಹ ವಿಶೇಷ ಕಾರ್ಯಕ್ರಮದ ರೂವಾರಿಯಾಗಿರುವ ಗೋವಿಂದ ಪ್ರಭು ಅವರು ಪೂಜೆ ನಡೆಯುವ ಪಕ್ಕವೇ ನದಿಯಲ್ಲಿ ಭಕ್ತರ ಗಮನಸೆಳೆಯುವ ನಿಟ್ಟಿನಲ್ಲಿ ಶ್ರೀರಾಮನ ಹಾಗೂ ಅಂಜನೇಯನ ವಿಗ್ರಹಗಳನ್ನು ರಚಿಸಲಿದ್ದಾರೆ. ಪೂಜೆಯ ಬಳಿಕ…
ಬಂಟ್ವಾಳ: ಶ್ರೀಮತೀ ಲಕ್ಷ್ಮೀ ದೇವಿ ನರಸಿಂಹ ಪೈ ವಿದ್ಯಾಲಯ,ಪಾಣೆಮಂಗಳೂರು ಇಲ್ಲಿ ಮಕ್ಕಳ ಚಿತ್ರಕಲಾ ಪ್ರದರ್ಶನ ಇತ್ತೀಚೆಗೆ ನಡೆಯಿತು. ಚಿತ್ರಕಲಾ ಶಿಕ್ಷಕ ಯಶು ಸ್ನೇಹಗಿರಿ ಅವರ ನಿರ್ದೇಶನದಲ್ಲಿ ನಡೆದ ಮಕ್ಕಳ ಚಿತ್ರಕಲಾ ಪ್ರದರ್ಶನದಲ್ಲಿ ಶಾರದಾ ಪ್ರೌಢ ಶಾಲೆಯ ಹಿರಿಯ ಕಲಾ ಶಿಕ್ಷಕಿ ಸುಮಿತ್ರಾ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಎಸ್ ಎಲ್ ಎನ್ ಪಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಶ್ವೇತಾ ಕಾಮತ್, ಶ್ರೀ ಶಾರದಾ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯ ಭೋಜ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳ ನಾನಾ ರೀತಿಯ ಕಲಾ ಪ್ರಕಾರಗೊಳನ್ನೊಳಗೊಂಡ ಪ್ರದರ್ಶನದಲ್ಲಿ 400ಕ್ಕೂ ಅಧಿಕ ಚಿತ್ರಗಳು ಪ್ರದರ್ಶನಗೊಂಡದ್ದು ವಿಶೇಷವಾಗಿತ್ತು. ವಿದ್ಯಾಲಯದ ವಿದ್ಯಾರ್ಥಿಗಳು, ಶಾರದಾ ಶಾಲೆಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು ಆಗಮಿಸಿ ಕಲಾ ಪ್ರದರ್ಶನವನ್ನು ಕಣ್ತುಂಬಿಕೊಂಡರು. ವಿದ್ಯಾರ್ಥಿಗಳ ಕಲಾಸಾಧನೆಯನ್ನು ಮೆಚ್ಚಿ ಗಣ್ಯರು ಶುಭ ಹಾರೈಸಿದರು. ವರ್ಣ ವರ್ಣದ ಕಲಾಕ್ಥತಿಗಳು ನೋಡುಗರ ಕಣ್ಮನ ಸೆಳೆಯಿತು.
ಬಂಟ್ವಾಳ: ನಾವೂರು ಗ್ರಾಮದ ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನದಲ್ಲಿ ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಕ್ಷೇತ್ರದ ತಂತ್ರಿಗಳಾದ ನಡ್ವಾಂತಾಡಿ ಶ್ರೀಪಾದ ಪಾಂಗಣ್ಣಯರ ನೇತೃತ್ವದಲ್ಲಿ ಜ.31 ಹಾಗೂ ಫೆಬ್ರವರಿ 1ರಂದು ನಡೆಯಲಿದೆ. ಜ.31 ರಂದು ಬುಧವಾರ ಸಂಜೆ 5.30 ರಿಂದ ಸ್ವಸ್ತಿ ಪುಣ್ಯಾಹ ವಾಚನ, ದುರ್ಗಾ ನಮಸ್ಕಾರಪೂಜೆ, ಮಹಾಪೂಜೆ, ಉತ್ಸವ ಬಲಿ, ವಸಂತಕಟ್ಟೆ ಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಫೆ.1ರಂದು ಬೆಳಿಗ್ಗೆ 8ರಿಂದ 12 ಕಾಯಿ ಗಣಹೋಮ, ನವಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ದರ್ಶನ ಬಲಿ ಉತ್ಸವ, ವಸಂತ ಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6.30 ರಿಂದ ಶ್ರೀದೇವರಿಗೆ ರಂಗಪೂಜೆ, ಪ್ರಸಾಧ ವಿತರಣೆ, ಶ್ರೀ ವ್ಯಾಘ್ರ ಚಾಮುಂಡಿ ಕಲ್ಲುರ್ಟಿ, ಗುಳಿಗ ದೈವಗಳಿಗೆ ನೇಮೋತ್ಸವ ಅನ್ನಸಂತರ್ಪರ್ಪಣೆ ನಡೆಯಲಿದೆ. ಫೆ. 2ರಂದು ಸಂಪ್ರೋಕ್ಷಣಾ ಕಲಶ, ಮಂತ್ರಾಕ್ಷತೆ, ಪ್ರಸಾದವಿತರಣೆ ನಡೆಯಲಿದೆ.
ಬಂಟ್ವಾಳ: 2024ರ ಸಾಲಿನ ಜೇಸಿ ಜೋಡುಮಾರ್ಗ ನೇತ್ರಾವತಿ ಅಧ್ಯಕ್ಷರಾಗಿ ಎಂ.ಸುಬ್ರಹ್ಮಣ್ಯ ಪೈ ಆಯ್ಕೆಯಾಗಿದ್ದಾರೆ.ಪದಾಧಿಕಾರಿಗಳ ಆಯ್ಕೆಯನ್ನು ಘಟಕಾಧಿಕಾರಿಗಳ ಸಭೆಯಲ್ಲಿ ಮಾಡಲಾಗಿದ್ದು, ಅದರಂತೆ ನಿಕಟಪೂರ್ವ ಅಧ್ಯಕ್ಷರಾಗಿ ಗಾಯತ್ರಿ ಲೋಕೇಶ್, ಉಪಾಧ್ಯಕ್ಷರಾಗಿ ರಮ್ಯಾ ಬಿ.ಎಸ್, ರೇಖಾ ರಾವ್, ಪ್ರಕಾಶ್ ಆಳ್ವ, ಜೀವನ್ ಕುಲಾಲ್, ಪ್ರೀತಿ ಪ್ರಕಾಶ್ ಹೆಗ್ಡೆ, ಕಾರ್ಯದರ್ಶಿಯಾಗಿ ಡಾ. ಧೀರಜ್ ಹೆಬ್ರಿ, ಜತೆಕಾರ್ಯದರ್ಶಿಯಾಗಿ ದೀಪ್ತಿ ಶ್ರೀನಿಧಿ ಭಟ್, ಕೋಶಾಧಿಕಾರಿಯಾಗಿ ಡಾ. ವಿನಾಯಕ ಕೆ.ಎಸ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರವೀಂದ್ರ ಕುಕ್ಕಾಜೆ, ಮಹಿಳಾ ಜೇಸಿ ಕೋಅರ್ಡಿನೇಟರ್ ಆಗಿ ಸೌಮ್ಯಾ ಹರಿಪ್ರಸಾದ್ ಕುಲಾಲ್, ಜ್ಯೂನಿಯರ್ ಜೇಸಿ ಕೋಅರ್ಡಿನೇಟರ್ ಆಗಿ ಸ್ಪರ್ಶ ಜೈನ್ ಹಾಗೂ ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿ ಭವಿಷ್, ನಿರ್ದೇಶಕರಾಗಿ ಹರಿಪ್ರಸಾದ್ ಕುಲಾಲ್, ಹರ್ಷರಾಜ್ ಸಿ, ಶ್ರೀನಿಧಿ ಭಟ್, ಹರಿಶ್ಚಂದ್ರ ಆಳ್ವ, ಮನ್ಮಥರಾಜ್ ಜೈನ್ ಆಯ್ಕೆಗೊಂಡಿರುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








