ಬಂಟ್ವಾಳ: ಬಿ.ಸಿ.ರೋಡಿನ ಚಂಡಿಕಾನಗರದ ಶ್ರೀ ಚಂಡಿಕಾ ಪರಮೇಶ್ವರೀ ಅಮ್ಮನವರಿಗೆ ಸೋಮವಾರ ವಿಜ್ರಂಭ್ರಣೆಯಿಂದ ಬ್ರಹ್ಮ ಕುಂಭಾಭಿಷೇಕ ನಡೆಯಿತು. ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ ಗಣಹೋಮ, 7.43ರ ಮೀನ ಲಗ್ನದಲ್ಲಿ ಅಷ್ಟಬಂಧ ಲೇಪನ, ಬಳಿಕ ಪರಿಕಲಶಾಭಿಷೇಕ ನಡೆದು ಶ್ರೀ ದೇವಿಗೆ ಬ್ರಹ್ಮಕುಂಭಾಭಿಷೇಕ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಈ ಸಂದರ್ಭ ಉಪಸ್ಥಿತರಿದ್ದು ಪುಣ್ಯದಾಯಕ ದೃಶ್ಯವನ್ನು ಕಣ್ತುಂಬಿಕೊಂಡು ಪುನೀತರಾದರು. ಬಳಿಕ ಅಲಂಕಾರ ನಡೆದು ಮಹಾಪೂಜೆ ಜರುಗಿ ಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.
ಈ ಸಂದರ್ಭ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಮಹೋತ್ಸವ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ, ಗೌರವಾಧ್ಯಕ್ಷ ತಿಮ್ಮಪ್ಪ ರೈ ಏರಿಮಾರ್, ಉಪಾಧ್ಯಕ್ಷ ಸದಾಶಿವ ನಾಯಕ್, ಕಾರ್ಯದರ್ಶಿ ಇಂದಿರೇಶ್, ಜತೆ ಕಾರ್ಯದರ್ಶಿ ಮಂಜುನಾಥ ಪೈ, ಕೋಶಾಧಿಕಾರಿ ಐತಪ್ಪ ಆಳ್ವ, ಬ್ರಹ್ಮಕಲಶ ಮಹೋತ್ಸವ ಸಮಿತಿ ಗೌರವಾಧ್ಯಕ್ಷರಾದ ಸದಾನಂದ ಶೆಟ್ಟಿ, ಸಂಜೀವ ಪೂಜಾರಿ, ಅಶ್ವನಿ ಕುಮಾರ್ ರೈ, ಚರಣ್ ಜುಮಾದಿಗುಡ್ಡೆ, ಪ್ರಮೋದ್ ಅಜ್ಜಿಬೆಟ್ಟು, ಪ್ರದೀಪ್ ರಾವ್ ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ಬಿ.ರಾಮಚಂದ್ರ ರಾವ್, ಜೊತೆ ಕಾರ್ಯದರ್ಶಿ ಐತಪ್ಪ ಪೂಜಾರಿ, ಶಂಕರ್ ಶೆಟ್ಟಿ ನಡ್ಯೋಡಿಗುತ್ತು, ಕೋಶಾಧಿಕಾರಿ ಎಚ್. ಸಂಕಪ್ಪ ಶೆಟ್ಟಿ, ಮಹಿಳಾ ವೇದಿಕೆ ಸಂಚಾಲಕಿ ಆಶಾಪಿ. ರೈ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಶ್ರೀಧರ ಮಲ್ಲಿ, ಜಯರಾಮ ಶೆಟ್ಟಿ, ಸದಾನಂದ ಶೆಟ್ಟಿ, ಗೋಪಾಲ ಸುವರ್ಣ, ಸೋಮನಾಥ ನಾಯ್ಡು, ರಮೇಶ್ ಶೆಣೈ, ಬಿ. ಮೋಹನ್, ನೇಮಿರಾಜ ಶೆಟ್ಟಿ, ರಾಜೇಶ್ ಎಲ್. ನಾಯಕ್, ದಾಸಪ್ಪ ಶೆಟ್ಟಿ, ಪ್ರಶಾಂತ್ ಭಟ್ ವಿವಿಧ ಸಮಿತಿ ಪ್ರಮುಖರಾದ ಸತೀಶ್ ಭಂಡಾರಿ, ಬಿ. ವಿಶ್ವನಾಥ್ , ಸುಷ್ಮ ಚರಣ್, ರಾಘವೇಂದ್ರ ಬನ್ನಿಂತಾಯ, ಕೃಷ್ಣಪ್ಪ ಬಿ., ಹೇಮಾವತಿ, ಲಕ್ಷ್ಣ್ ರಾಜ್, ಗಂಗಾಧರ ಕುಲಾಲ ಮಠ, ವ್ಯವಸ್ಥಾಪಕ ಪ್ರಶಾಂತ್ ಬಿ.ಸಿ.ರೋಡು ಮೊದಲಾದವರು ಉಪಸ್ಥಿತರಿದ್ದರು. ಮಾಜಿ ಸಚಿವ ಬಿ. ರಮಾನಾಥ ರೈ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಉಚಿತ ಕಬ್ಬಿನ ಹಾಲು ಸೇವೆ:
ಶ್ರೀ ಚಂಡಿಕಾಪರಮೇಶ್ವರ ದೇವಸ್ಥಾನದ ಬ್ರಹ್ಮಕಲಶ ಮಹೋತ್ಸವದ ಪ್ರಯುಕ್ತ ಶ್ರೀ ದುರ್ಗಾ ಜ್ಯೂಸ್ನ ಅನಿಲ್ ಹಾಗೂ ಶ್ರೀರಾಮ ಗೆಳೆಯರ ಬಳಗ , ಶ್ರೀ ಅಯ್ಯಪ್ಪ ಭಕ್ತ ವೃಂದ ಇವರಿಂದ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರೆಲ್ಲರಿಗೂ ಉಚಿತ ಕಬ್ಬಿನ ಹಾಲನ್ನು ಒದಗಿಸಲಾಯಿತು.