Author: admin

ವಾಮದಪದವು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಬಂಟ್ವಾಳ: ಎಪ್ಪತ್ತೇಳನೆಯ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಾಮದಪದವಿನಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ವಿಶೇಷ ಆಹ್ವಾನಿತ ಖಾಯಂ ಸದಸ್ಯ ಅಜೇಯ ಕುಮಾರ್ ಕೊಂಬರಬೈಲು ರಾಷ್ಟ್ರ ಧ್ವಜಾರೋಹಣಗೈದು ಗೌರವ ವಂದನೆ ಸ್ವೀಕರಿಸಿದರು. Advertisement Advertisement ಸ್ವಾತಂತ್ರ್ಯ ದಿನದ ಮಹತ್ವದ ಕುರಿತು ಆಂಗ್ಲ ಭಾಷಾ ಉಪನ್ಯಾಸಕ ರಾಧೇಶ ತೋಳ್ಪಾಡಿ ಎಸ್ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ, ಸದಸ್ಯರಾದ ನಾಗರಾಜ ಶೆಟ್ಟಿ, ಹಂಝ ಬಸ್ತಿಕೋಡಿ, ಪ್ರಭಾಕರ ಶೆಟ್ಟಿ, ರಮೇಶ್ ಶೆಟ್ಟಿ, ಗೋಪಾಲಕೃಷ್ಣ ಚೌಟ, ಪ್ರಾಂಶುಪಾಲ ಶ್ರೀಧರ್ ಎಚ್ ಜಿ, ಉಪಪ್ರಾಂಶುಪಾಲೆ ವಿದ್ಯಾ ಕುಮಾರಿ, ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. Advertisement ಕಾಲೇಜು ವಿಭಾಗದಲ್ಲಿ ನಡೆದ ಆಟಿಡೊಂಜಿ ದಿನ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೋತ್ಸವ ಪ್ರಯುಕ್ತ ನಡೆಸಲಾದ ಚಿತ್ರ ಕಲಾ ಸ್ಪರ್ಧಾ ವಿಜೇತರಿಗೆ ಅಜೇಯ ಕುಮಾರ್…

Read More

ತುಂಬೆಯ ದಿವಿಶ್ ಪ್ರೀಪ್ರೈಮರಿ ಸ್ಕೂಲ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ Advertisement ಬಂಟ್ವಾಳ: ತುಂಬೆಯ ದಿವಿಶ್ ಪ್ರೀಪ್ರೈಮರಿ ಸ್ಕೂಲ್‌ನಲ್ಲಿ ೭೭ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಶಾಲಾ ಸಂಚಾಲಕಿ ಉಷಾಲತಾ ಧ್ವಜಾರೋಹಣಗೈದರು. ಶಿಕ್ಷಕಿಯರಾದ ಸ್ವಾತಿಶ್ರೀ, ರುಬಿನಾ, ಉಷಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. Advertisement Advertisement

Read More

ಬಂಟ್ವಾಳ: ನೂರುಲ್ ಇಸ್ಲಾಂ ಮದರಸ ಮತ್ತು ಅಲ್ ಮಸ್ಜಿದುಲ್ ಬದ್ರಿಯಾ ಆಲದ ಪದವು ವಾಮದಪದವು ಇಲ್ಲಿ ಸ್ವಾತಂತ್ರೋತ್ಸವ ನಡೆಯಿತು. ಅಧ್ಯಕ್ಷ ಹಂಝ ಬಸ್ತಿಕೋಡಿ ಧ್ವಜರೋಹಣ ಗ್ಯೆದು ಶುಭ ಹಾರೈಸಿದರು. ಮಸೀದಿ ಇಮಾಮರಾದ ಹುಸ್ಯೆನ್ ಸಹದಿ ದುವಾಗ್ಯೆದರು. ಕಾರ್ಯದರ್ಶಿ ಅಬ್ಬು ನಡಾಯಿ, ಕೋಶಾಧಿಕಾರಿ ಇಮ್ರಾನ್ ಹಿರಿಯರಾದ ಅಬ್ದುಲ್ ರಹಿಮಾನ್, ಅಬ್ಬಾಸ್, ಹಸನ್ಬಾವ, ಹುಸ್ಯೆನ್ ಸದಸ್ಯರಾದ ಹನೀಫ್ ರಿಯಾಝ್ ನಡಾಯಿ ಜಲೀಲ್, ಇಕ್ಬಲ್, ಸಿಕಂದರ್ ಹಸನಬ್ಬ ಹಾಗೂ ಜಮಾತಿನ ನಿವಾಸಿಗಳು ಮದರಸ ವಿದ್ಯಾಥಿಗಳು ಉಪಸ್ಥಿತರಿದ್ದರು. Advertisement Advertisement

Read More

ಕುರಿಯಾಳ ದುರ್ಗಾನಗರದಲ್ಲಿ ಸ್ವಾತಂತ್ರ್ಯ ಸಂಭ್ರಮ Advertisement ಕುರಿಯಾಳ: ಶ್ರೀ ಓಂಕಾರೇಶ್ವರಿ ದೇವಿ ಭಜನಾ ಮಂದಿರ, ದುರ್ಗಾನಗರ,ಅಂಗನವಾಡಿ ಕೇಂದ್ರ, ದುರ್ಗಾನಗರ ,ಓಂ ಶಕ್ತಿ ಹಾಗೂ ಶ್ರೀದೇವಿ ಸ್ತ್ರೀ ಶಕ್ತಿ ಸಂಘ, ದುರ್ಗಾನಗರ , ಶ್ರೀ ದುರ್ಗಾ ಫ್ರೆಂಡ್ಸ್ ದುರ್ಗಾನಗರ ,ಓಂಕಾರ ಸೇವಾ ಬಳಗ, ದುರ್ಗಾನಗರ ಇವುಗಳ ಸಂಯುಕ್ತ ಆಶ್ರಯದಲ್ಲಿದುರ್ಗಾನಗರ ವಠಾರದಲ್ಲಿ 76ನೇ ವರ್ಷದ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸಲಾಯಿತು. Advertisement ಕುರಿಯಾಳ ದುರ್ಗಾನಗರದಲ್ಲಿ ಸ್ವಾತಂತ್ರ್ಯ ಸಂಭ್ರಮ ಪಂಚಾಯತ್ ಸದಸ್ಯೆ ಯಶೋಧ ಧ್ವಜರೋಹಣ ಮಾಡಿ ಶುಭಾಶಂಸನೆಗೈದರು. ವೇದಿಕೆಯಲ್ಲಿ ಶ್ರೀ ಓಂಕಾರೇಶ್ವರಿ ದೇವಿ ಭಜನಾ ಮಂದಿರದ ಗೌರವಾಧ್ಯಕ್ಷ ತಿಮ್ಮಪ್ಪ ಆಚಾರಿ, ಓಂಕಾರೇಶ್ವರಿ ದೇವಿ ಭಜನಾ ಮಂದಿರದ ಅರ್ಚಕ ಹೊನ್ನಪ್ಪ ಪೂಜಾರಿ, ಧ್ವಜಸ್ಥಂಭದ ದಾನಿ ಶಂಕರ ಸುವರ್ಣ,ಓಂಕಾರೇಶ್ವರಿ ದೇವಿ ಭಜನಾ ಮಂದಿರದ ಉಪಾಧ್ಯಾಕ್ಷ ನಾಗೇಶ್,ಬಾಲವಿಕಾಸ ಸಮಿತಿ ಅಧ್ಯಕ್ಷೆ ಪ್ರೇಮ, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಸೀತಾ, ಶ್ರೀ ದುರ್ಗಾ ಫ್ರೆಂಡ್ ಅಧ್ಯಕ್ಷ ಹರೀಶ್ ಬಂಜನ್,ಓಂಕಾರ ಸೇವಾ ಬಳಗದ ಅಧ್ಯಕ್ಷ ಸಂತೋಷ್ ಸುವರ್ಣ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ವಸಂತಿ ಸ್ವಾಗತಿಸಿ…

Read More

ಸಂಚಯಗಿರಿ: ನಾಗರಿಕ ಕ್ರಿಯಾ ಸಮಿತಿಯಿಂದ ಸ್ವಾತಂತ್ರ್ಯ ದಿನಾಚರಣೆ, ಬಟ್ಟೆ ಚೀಲ ಬಿಡುಗಡೆ ಕಾರ್ಯಕ್ರಮ ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿಯೇ ಅತ್ಯಂತ ಸ್ವಚ್ಛ ಬಡಾವಣೆ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಸಂಚಯಗಿರಿಯಲ್ಲಿ ನಾಗರಿಕ ಕ್ರಿಯಾ ಸಮಿತಿಯ ವತಿಯಿಂದ ೭೭ನೇ ಸ್ವಾತಂತ್ರ್ಯ ಸಂಭ್ರಮವನ್ನು ವಿಜ್ರಂಭಣೆಯಿಂದ ಆಚರಿಸಯಿತು. Advertisement Advertisement ನಾಗರಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಸುರೇಶ್ ಬಂಗೇರ ಸಂಚಯಗಿರಿ ಧ್ವಜಾರೋಹಣ ನೆರವೇರಿಸಿದರು. ನಿವೃತ್ತ ಪ್ರಾಂಶುಪಾಲ ಸಿ.ವಿ. ಶಂಕರ್ ಅವರು ಸ್ವಾತಂತ್ರ್ಯೋತ್ಸವದ ಬಗ್ಗೆ ಶುಭ ಸಂದೇಶ ನೀಡಿ ನಮ್ಮ ಹಿರಿಯರು ದೇಶದ ಸ್ವಾತಂತ್ರ್ಯಕ್ಕಾಗಿ ರಕ್ತವನ್ನೇ ಹರಿಸಿದ್ದಾರೆ. ಅವರ ಬಲಿದಾನದ ಸಲುವಾಗಿ ಇಂದು ದೇಶ ಸ್ವತಂತ್ರ್ಯಗೊಂಡಿದೆ ಎಂದರು. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಮೊದಲ್ಗೊಂಡು ೧೯೪೭ರವರೆಗೂ ನಿರಂತರ ಹೋರಾಟದ ಪರಿಣಾಮ ದೇಶ ಸ್ವತಂತ್ರ ಪಡೆಯಲು ಸಾಧ್ಯವಾಯಿತು. ಝಾನ್ಸಿರಾಣಿ ಲಕ್ಷ್ಮೀ ಬಾಯಿ, ತಾತ್ಯ ಟೋಪಿಯಂತಹ ಹೋರಾಟಗಾರರನ್ನು ದೇಶದ್ರೋಹಿಗಳು ಎಂಬಂತೆ ಬಿಂಬಿಸಲಾಯಿತು, ವೀರ ಸಾವರ್ಕರ್, ಭಗತ್‌ಸಿಂಗ್, ಮಹಾತ್ಮಗಾಂಧಿ, ಸುಭಾಷ್‌ಚಂದ್ರ ಭೋಷ್‌ರಂತಹ ಅಪ್ಪಟ ವೀರಯೋಧರ ಹೋರಾಟ ಹಾಗೂ ದೂರದೃಷ್ಟಿಯ ಚಿಂತನೆಯ ಫಲ ಇಂದು…

Read More

ಗದ್ದೆಯಲ್ಲಿ ಸೇರೋಣ-ವ್ಯವಸಾಯ ಮಾಡೋಣ, ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ ನಿಂದ ಮಾದರಿ ಕಾರ್ಯಕ್ರಮ ಬಂಟ್ವಾಳ: ಬಿಲ್ಲವ ಸಮಾಜದಲ್ಲಿರುವ ದೀನರು, ದುರ್ಬಲರಿಗೆ ನೆರವಾಗಲು, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರ ನೀಡಲು, ಆರ್ಥಿಕವಾಗಿ ದುರ್ಬಲರಾದ ಸ್ವಸಮಾಜದ ಬಂಧುಗಳಿಗೆ ಸಹಾಯಹಸ್ತ ಚಾಚಲು ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ ಸಂಸ್ಥೆ ಕಳೆದ ಮೂರು ವರ್ಷಗಳಿಂದ ಗದ್ದೆಯಲ್ಲಿ ಸೇರೋಣ-ವ್ಯವಸಾಯ ಮಾಡೋಣ ಎನ್ನುವ ಮಾದರಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಗದ್ದೆಯಲ್ಲಿ ಸೇರೋಣ-ವ್ಯವಸಾಯ ಮಾಡೋಣ, ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ ನಿಂದ ಮಾದರಿ ಕಾರ್ಯಕ್ರಮ Advertisement ಕಡೇಶಿವಾಲಯ ಗ್ರಾಮದ ನಡ್ಯೇಲು ಎಂಬಲ್ಲಿನ ಸುಮಾರು 2 ಎಕರೆ ವಿಸ್ತೀರ್ಣದ ಭೂಮಿಯಲ್ಲಿ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು, ಸದಸ್ಯರು ಹಾಗೂ ಬಿಲ್ಲವ ಸಮಾಜದ ಬಂಧುಗಳು ಸೇರಿಕೊಂಡು ಬತ್ತದ ಸಾಗುವಳಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಬೇಸಾಯದ ಮೂಲಕ ಬಂದ ಇಳುವರಿ ಹಾಗೂ ಬೈ ಹುಲನ್ನು ಮಾರಿ ಆ ಮೂಲಕ ಗಳಿಸಿದ ಆದಾಯವನ್ನು ಮತ್ತೆ ಸಮಾಜದ ಬಡ ಜನರಿಗೆ, ಸೇವಾ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದಾರೆ. ಯುವ…

Read More

ಜೈ ಶ್ರೀರಾಮ್ ತರುಣ ವೃಂದ ಹಾಗೂ ರಕ್ತೇಶ್ವರಿ ಕ್ರಿಕೆಟರ್ಸ್ ಅಧ್ಯಕ್ಷರಾಗಿ ಕಿರಣ್ ಕುಮಾರ್ ಆಯ್ಕೆ ಬಂಟ್ವಾಳ: ಜೈ ಶ್ರೀರಾಮ್ ತರುಣ ವೃಂದ ಹಾಗೂ ರಕ್ತೇಶ್ವರಿ ಕ್ರಿಕೆಟರ್ಸ್ ಬಿ.ಸಿ.ರೋಡ್ ಇದರ2023-24ನೇ ಸಾಲಿನ ನೂತನ ಪದಾಧಿಕಾರಿಗಳನು ಆಯ್ಕೆ ಮಾಡಲಾಯಿತು. Advertisement Advertisement ಗೌರವ ಅಧ್ಯಕ್ಷರಾಗಿ ಶರತ್ ನಾಯಕ್, ಅಧ್ಯಕ್ಷರಾಗಿ ಕಿರಣ್ ಕುಮಾರ್, ಉಪಾಧ್ಯಕ್ಷರಾಗಿ ನವೀನ್ ಕೈಕುಂಜೆ, ಸಚಿನ್, ರಂಜಿತ್ ಪೂಜಾರಿ, ಕಾರ್ಯದರ್ಶಿಯಾಗಿ ಶಿವಾನಂದ, ಕೋಶಾಧಿಕಾರಿ ತಿಲಕ್ ರಾಜ್, ಜತೆ ಕಾರ್ಯದರ್ಶಿಯಾಗಿ ಸಮರ್ಥ್, ಹಿಮಾಂಶು ಆಯ್ಕೆಯಾದರು. Advertisement

Read More

ಬಾವಿಗೆ ಹಾರಿ ಯುವಕ ಆತ್ಮಹತ್ಯೆ Advertisement ಬಂಟ್ವಾಳ: ಮನೆಮಂದಿಯ ಮುಂದೆಯೇ ಯುವಕನೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಜೀಪಮೂಡ ಗ್ರಾಮದ ಮಿತ್ತಮಜಲು ಎಂಬಲ್ಲಿ ನಡೆದಿದೆ.ಇಲ್ಲಿನ ನಿವಾಸಿ ಜನಾರ್ದನ ಆಚಾರ್ಯ ಶಶಿಕಲಾ ಆಚಾರ್ಯ ದಂಪತಿ ಪುತ್ರ ಸಾಗರ್ ಆಚಾರ್ಯ ಆತ್ಮಹತ್ಯೆ ಮಾಡಿಕೊಂಡ ಯುವಕ. Advertisement Advertisement ಕಳೆದ ಹಲವು ಸಮಯಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸಾಗರ್ ಗೆ ಇತ್ತಿಚೆಗೆ ಆತನ ತಂದೆಯೇ ಒಂದು ಕಿಡ್ನಿಯನ್ನು ದಾನ ಮಾಡಿದ್ದು ಶಸ್ತ್ರ ಚಿಕಿತ್ಸೆಯ ಬಳಿಕ ಆರೋಗ್ಯವಾಗಿದ್ದ. ಸೋಮವಾರ ಬೆಳಿಗ್ಗೆ ಆತನ ಸಹೋದರ ಕೆಲಸಕ್ಕೆ ತೆರಳಿದ ಬಳಿಕ 8 ಗಂಟೆಯ ವೇಳೆಗೆ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಂದೆ ತಾಯಿಯ ಮನೆಯಲ್ಲಿರುವಾಗಲೇ ಘಟನೆ ನಡೆದಿದ್ದು ಅವರ ಆಕ್ರಂದನ ಮುಗಿಲು ಮುಟ್ಟಿದೆ. ಸಾಗರ್ ಅತ್ಯುತ್ತಮ ಚಿತ್ರಕಲಾವಿದನಾಗಿ ಗುರುತಿಸಿಕೊಂಡಿದ್ದ.

Read More

ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ಬಂಟ್ವಾಳದ ವತಿಯಿಂದ ಧ್ವನಿ ಬೆಳಕು ಕುಟುಂಬ ಸಂಗಮ ಕಾರ್ಯಕ್ರಮ Advertisement ಬಂಟ್ವಾಳ: ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ಬಂಟ್ವಾಳ ಇದರ ವತಿಯಿಂದ ಧ್ವನಿ ಬೆಳಕು ಕುಟುಂಬ ಸಂಗಮ ಕಾರ್ಯಕ್ರಮ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಭಾನುವಾರ ನಡೆಯಿತು.ಕಾರ್ಯಕ್ರಮವನ್ನು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಿದರು. ಅವರು ಮಾತನಾಡಿ ಧ್ವನಿ ಮತ್ತು ಬೆಳಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿ ವೃತ್ತಿಯಾಗಿದೆ. ಇಂದು ಈ ಒಕ್ಕೂಟದಲ್ಲಿ ಇನ್ನೂರು ಮಂದಿ ಸದಸ್ಯರಿದ್ದು ಅವರ ಮೂಲಕ ಸುಮಾರು ೨ ಸಾವಿರ ಕುಟುಂಬಗಳಿಗೆ ಈ ವೃತ್ತಿ ವರದಾನವಾಗಿದೆ, ನಾವು ಎಷ್ಟು ಹಣ ಸಂಪಾದಿಸಿದ್ದೇವೆ ಎನ್ನುವದಕ್ಕಿಂತಲೂ ನಾವು ಎಷ್ಟು ಮಂದಿಗೆ ಕೆಲಸ ನೀಡುತ್ತೇವೆಯೋ ಆ ಮೂಲಕ ನಮ್ಮ ಬೆಲೆ ಹೆಚ್ಚಾಗುತ್ತದೆ ಎಂದು ತಿಳಿಸಿದರು. ದ.ಕ. ವಿಶೇಷವಾದಂತಹ ಜಿಲ್ಲೆಯಾಗಿದೆ. ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಉತ್ಸವಗಳು, ನಿರಂತರವಾಗಿ ನಡೆಯುತ್ತಿರುತ್ತದೆ. ಇಂತಹ ಕಾರ್ಯಕ್ರಮಗಳಿಗೆ ಧ್ವನಿ ಮತ್ತು ಬೆಳಕು ಅತ್ಯಗತ್ಯ ಎಂದರು. ಹಿಂದಿನ ಕಾಲದಲ್ಲಿ ಆಟಿ ಎಂದರೆ ಕಷ್ಟದ ದಿನ,…

Read More

ಬಂಟ್ವಾಳ: ಬೆಂಗಳೂರಿನ ದೇವನಹಳ್ಳಿಯ ವಿಜಯಪುರದ ಅನ್ನಪೂರ್ಣ ಕನ್ವೇನ್ಶನ್ ಸಭಾಂಗಣದಲ್ಲಿ ಆ.12 ಮತ್ತು 13 ರಂದು ನಡೆಯುತ್ತಿರುವ ಪ್ರಥಮ ಮುಕ್ತ ರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್‌ಶಿಪ್ ವಾರಿಯರ್‍ಸ್ ಕಪ್-2023 ಸ್ಪರ್ಧೆಯ ಕಟಾ ವಿಭಾಗದಲ್ಲಿ ದ.ಕ. ಜಿಲ್ಲೆಯ ಇಬ್ಬರು ಪ್ರತಿಭೆಗಳು ಚಿನ್ನದ ಪದಕ ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ಮಂಗಳೂರಿನ ನಂದಾದೀಪಾ ಅಪಾರ್ಟ್‌ಮೆಂಟ್‌ನ ನಿವಾಸಿಗಳಾದ ನಕುಲ್ ತಿಲಕ್ ಹಾಗೂ ಸುರಶ್ರೀ ಅವರ ಪುತ್ರ, ಮಂಗಳೂರಿನ ಸಂತ ಅಲೋಷಿಯಸ್ ಗೋನ್ಞಾಗ ವಿದ್ಯಾಸಂಸ್ಥೆಯ ಯುಕೆಜಿ ವಿದ್ಯಾರ್ಥಿ ಶ್ರೀಹಾನ್ ಕಟಾ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಫೈಟ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾನೆ. ಈತ ನಂದಾದೀಪಾ ಅಪಾರ್ಟ್‌ಮೆಂಟ್‌ನಲ್ಲಿ ಮಾರ್ಷಲ್‌ಆರ್ಟ್ ತರಬೇತುದಾರರಾದ ರಾಜೇಶ್ ಬ್ರಹ್ಮರಕೂಟ್ಲು ಹಾಗೂ ವೆನ್ನಿಲ್ಲಾ ಮಣಿಕಂಠ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾನೆ. Advertisement Advertisement ನೆತ್ತರಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಹಂಸಿಕಾ ವೈಯಕ್ತಿಕ ವಿಭಾಗದ ಕಟಾದಲ್ಲಿ ಚಿನ್ನದ ಪದಕ ಹಾಗೂ ಫೈಟ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಈಕೆ ರಾಜೇಶ್ ಹಾಗೂ ಶೋಭಾ ದಂಪತಿಯ ಪುತ್ರಿಯಾಗಿದ್ದು ಪೊಳಲಿ…

Read More