Author: admin

ಫರಂಗಿಪೇಟೆ ಸೇವಾಂಜಲಿಯಲ್ಲಿ ಕ್ಷಯ ರೋಗಿಗಳಿಗೆ ಆಹಾರ-ದವಸಧಾನ್ಯ ವಿತರಣಾ ಕಾರ್ಯಕ್ರಮ ಬಂಟ್ವಾಳ: ಕೇಂದ್ರ ಸರ್ಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ಹಾಗೂ ದವಸಧಾನ್ಯ ವಿತರಣಾ ಕಾರ್ಯಕ್ರಮ ಶನಿವಾರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು. Advertisement ಉದ್ಯಮಿ ಜಗನ್ನಾಥ ಚೌಟ ಬದಿಗುಡ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ 2025ರ ವೇಳೆಗೆ ಭಾರತವನ್ನು ಕ್ಷಯರೋಗ ಮುಕ್ತಗೊಳಿಸುವ ಕಾರ್ಯಕ್ರಮದಂಗವಾಗಿ ಪ್ರಧಾನಮಂತ್ರಿಯವರ ಕರೆಯಂತೆ ನಿಕ್ಷಯ ಮಿತ್ರ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು ವೈದ್ಯರು, ಸಮಾಜಸೇವಾ ಕಾರ್ಯಕರ್ತರು, ಆಶಾಕಾರ್ಯಕರ್ತೆಯರು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಹುಟ್ಟುವಾಗ ಯಾರಿಗೂ ರೋಗಗಳಿರುವುದಿಲ್ಲ. ಬಳಿಕ ನಮ್ನ ಆಹಾರ, ಪರಿಸರದಲ್ಲಿನ ಅಸ್ವಚ್ಚತೆಯಿಂದಾಗಿ ರೋಗಕ್ಕೆ ತುತ್ತಾಗಿ ಸಮಸ್ಯೆಗಳನ್ನು ಎದುರಿಸುತ್ತೇವೆ. ಉತ್ತಮ ಆಹಾರ ಪದ್ದತಿ, ಸರಿಯಾದ ಔಷಧಿ ಸೇವನೆ, ಒತ್ತಡಗಳನ್ನು ನಿವಾರಿಸಿ ಮನಸ್ಸನ್ನು ಕೇಂದ್ರೀಕರಿಸಿದರೆ ನಮ್ಮ ಆರೋಗ್ಯ ಉತ್ತಮವಾಗಲು ಸಾಧ್ಯವಿದೆ. ಇಲ್ಲಿ ನೀಡುವ ಪೌಷ್ಠಿಕ ಆಹಾರವನ್ನು ಸದ್ಬಳಕೆ ಮಾಡಿಕೊಂಡಾಗ ರೋಗ ನಿವಾರಿಸಿಕೊಂಡು ಸಮಾಜದಲ್ಲಿ ಆರೋಗ್ಯಯುತ ಜೀವನ ನಡೆಸಲು ಸಾಧ್ಯವಿದೆ ಎಂದು ತಿಳಿಸಿದರು.ಸೇವಾಂಜಲಿ…

Read More

Advertisement ಪರಬೇರ್ ಪೊಸ ತೆಗ್‌ಲ್’ ಜಿಲ್ಲಾ ಮಟ್ಟದ ಪೋಟೊ ಸ್ಪರ್ಧೆ ಬಂಟ್ವಾಳ: ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಇದರ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಆಶ್ರಯದಲ್ಲಿ ಸೆ. 3ರಂದು ಆದಿತ್ಯವಾರ ಮರಿಯಲದ ನೆಂಪು ಹಿರಿಯರ ಸಮ್ಮಿಲನ ಕಾರ್ಯಕ್ರಮ ನಡೆಯಲಿದ್ದು ಈ ಪ್ರಯುಕ್ತ ಪರಬೇರ್ ಪೊಸ ತೆಗ್‌ಲ್ ಎನ್ನುವ ಜಿಲ್ಲಾ ಮಟ್ಟದ ಪೋಟೊ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ವಜಾತಿ ಸಮಾಜ ಬಾಂಧವರು ವೃದ್ದರೊಂದಿಗೆ ತೆಗೆದ ಪೊಟೋಗಳನ್ನು ಆ. 27ರಂದು ಸಂಜೆ 4 ಗಂಟೆಯ ಒಳಗಾಗಿ ಕಳಹಿಸತಕ್ಕದ್ದು. Advertisement ಹಳ್ಳಿ ಸೊಗಡಿನ, ಮಳೆಗಾಲದ ನಮ್ಮ ಹಿರಿಯರ ಜೀವನ ಶೈಲಿಯ ಮಾದರಿ ಪೋಟೋಗಳಿರಬೇಕು. ಒಬ್ಬ ಸ್ಪರ್ಧಿಗೆ ಒಂದು ಪೊಟೋ ಮಾತ್ರ ಕಳುಹಿಸಲು ಅವಕಾಶವಿದ್ದು, 9964280079 ದೂರವಾಣಿಯ ವಾಟ್ಸಪ್‌ಗೆ ಕಳುಹಿಸಬೇಕು. ತೀರ್ಪುಗಾರರ ನಿರ್ಣಯವೇ ಅಂತೀಮ ತೀರ್ಮಾನವಾಗಿದ್ದು ವಿಜೇತರಿಗೆ ಸೆ. 3 ರಂದು ನಡೆಯುವ ಮರಿಯಾಲದ ನೆಂಪು ಹಿರಿಯರ ಸಮ್ಮಿಲನ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ನಿತೀಶ್ ಪಲ್ಲಿಕಂಡ (…

Read More

Advertisement ಒಡ್ಡೂರು ಫಾರ್ಮ್ ನಲ್ಲಿ ತ್ಯಾಜ್ಯದಿಂದ ಸಿ ಎನ್ ಜಿ ಉತ್ಪಾದನೆ ಬಂಟ್ವಾಳ: ನಾವು ಎಲ್ಲೆಂದರಲ್ಲಿ ಎಸೆದ ತ್ಯಾಜ್ಯ ಕೊಳೆತು ದುರ್ವಾಸನೆ ಬೀರಿದರೆ ಪರಿಸರಕ್ಕೂ ಹಾನಿ, ಆರೋಗ್ಯಕ್ಕೂ ತೊಂದರೆ. ಒಣ ಕಸಗಳನ್ನು ಹೇಗಾದರೂ ವಿಲೇವಾರಿ ಮಾಡಬಹುದು ಆದರೆ ನಿತ್ಯ ಸಂಗ್ರಹವಾಗುವ ಹಸಿ ಕಸವನ್ನು ವಿಲೇವಾರಿ ಮಾಡುವುದೇ ಪ್ರತೀ ಆಡಳಿತ ವ್ಯವಸ್ಥೆಯ ಮುಂದಿರುವ ಸವಾಲು. ಈ ಸಮಸ್ಯೆಗೆ ಪರಿಹಾರ ಎನ್ನುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಮಗ ಉನ್ನತ್ ನಾಯ್ಕ್ ಕೊಳೆಯುವ ಹಸಿ ಕಸಗಳು ಹಾಗೂ ದ್ರವ ತ್ಯಾಜ್ಯವನ್ನು ಬಳಸಿ ಅನಿಲ ಉತ್ಪಾದಿಸುವ ಸಿಎನ್‌ಜಿ (ಕಂಪ್ರೆಸ್ಡ್ ನ್ಯಾಚ್ಯರಲ್ ಗ್ಯಾಸ್) ಘಟಕವನ್ನು ಗುರುಪುರದ ಒಡ್ಡೂರು ಫಾರ್ಮ್‌ನಲ್ಲಿ ಅನುಷ್ಠಾನಗೊಳಿಸಿದ್ದಾರೆ.ಒಡ್ಡೂರು ಎನರ್ಜಿ ರಿನಿವೇಬಲ್ ನ್ಯಾಚುರಲ್ ಗ್ಯಾಸ್ ಪ್ಲಾಂಟ್ ಎನ್ನುವ ಹೆಸರನಲ್ಲಿ ಸಿಎನ್‌ಜಿ ಘಟಕ ಸ್ಥಾಪಿಸಲಾಗಿದ್ದು ರೀಟ್ಯಾಪ್ ಸೋಲ್ಯೂಷನ್ಸ್ ಎನ್ನುವ ಕಂಪನಿ ಇದರ ನಿರ್ವಹಣೆ ಹಾಗೂ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ. ನಗರ ಹಾಗೂ ಪಂಚಾಯತಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಹಸಿ ಕಸ, ಸ್ಥಳೀಯ ಭಾರತ್ ಆಗ್ರೋ ಹಾಗೂ ಪುಡ್…

Read More

Advertisement ಸಮಾಜ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ದಯಾನಂದ ಬೆಳ್ಳೂರು ಇನ್ನಿಲ್ಲ ಬಂಟ್ವಾಳ: ಇಲ್ಲಿನ ಬೆಳ್ಳೂರು ನಿವಾಸಿ, ಸಮಾಜ ಸೇವಾ ಸಹಕಾರಿ ಸಂಘ ಬಂಟ್ವಾಳ ಇದರ ಮಾಜಿ ಅಧ್ಯಕ್ಷ ದಯಾನಂದ ಬೆಳ್ಳೂರು(62) ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ರಾತ್ರಿ ನಿಧನರಾದರು. ಬಿ.ಸಿ.ರೋಡಿನಿಂದ ಕಟೀಲು ಮಾರ್ಗದಲ್ಲಿ ಸಂಚರಿಸುತ್ತಿದ್ದ ಶ್ರೀ ಶಾರದ ಬಸ್ಸಿನ ಮಾಲಕರಾಗಿದ್ದ ಅವರು ಮೂಲತಃ ಬೆಳ್ಳೂರಿನವರಾಗಿದ್ದರೂ ಇತ್ತೀಚಿನ ಕೆಲ ವರ್ಷಗಳಿಂದ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲುವಿನಲ್ಲಿ ವಾಸವಾಗಿದ್ದರು. ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. Advertisement Advertisement

Read More

Advertisement ಬಂಟ್ವಾಳ: ಸಮಾಜದ ರಕ್ಷಣೆ ಮಾಡುತ್ತೇವೆಂದು ನೈತಿಕ ಗೂಡಂಗಿರಿ ಮಾಡುವ ಪ್ರವೃತ್ತಿ ಬಿಜೆಪಿ ಹಾಗೂ ಸಂಘಪರಿವಾರಕ್ಕೆ ಸೇರಿದ ವ್ಯಕ್ತಿಗಳಿಂದ ನಡೆಯುತಿದ್ದು ಇದನ್ನು ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಖಂಡಿಸುವುದಾಗಿ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ. ರಮನಾಥ ರೈ ಹೇಳಿದರು. ಸಮಾಜದ ರಕ್ಷಣೆಯ ಹೆಸರಿನಲ್ಲಿ ನೈತಿಕ ಗೂಂಡಗಿರಿ ಖಂಡನೀಯ: ಬಿ. ರಮಾನಾಥ ರೈ ಬುಧವಾರ ಬಿ.ಸಿ.ರೋಡಿನಲ್ಲಿರುವ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಇಂತಹ ಕೃತ್ಯ ಎಸಗುವವರ ವಿರುದ್ದ ಪೊಲೀಸರು ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ತಾಲೂಕಿನ ವಿಟ್ಲದಲ್ಲಿ ದಲಿತ ಬಾಲಕಿಯ ಮೇಲೆ ನಡೆದ ಸರಣಿ ಸಾಮೂಹಿಕ ಅತ್ಯಾಚಾರ, ಪುತ್ತೂರಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಯನ್ನು ಅದೇ ಕಾಲೇಜಿನ ಎಬಿವಿಪಿ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳು ವಾಹನದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿ ಉದ್ದೇಶಪೂರ್ವಕವಾಗಿ ವೀಡಿಯೋ ಚಿತ್ರೀಕರಣ ನಡೆಸಿ ವೈರಲ್ ಮಾಡಿದ ಘಟನೆ, ಬಂಟ್ವಾಳದಲ್ಲಿ ಪೊಲೀಸ್ ಸಿಬ್ಬಂದಿಯ ಕುಟುಂಬದ ಮೇಲೆ ನೈತಿಕ ಗೂಂಡಾಗಿರಿ, ಮಂಗಳೂರಿನಲ್ಲಿ ಪತ್ರಕರ್ತರ ಮೇಲೆ ಗೂಂಡಾಗಿರಿ…

Read More

ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷರಾಗಿ ರಾಧಾಕೃಷ್ಣ ಬಂಟ್ವಾಳ್ ಆಯ್ಕೆ ಬಂಟ್ವಾಳ :ತಾಲೂಕು ಕುಲಾಲ ಸುಧಾರಕ ಸಂಘ ಇದರ ಪ್ರಸ್ತುತ ಸಾಲಿನ ಅಧ್ಯಕ್ಷರಾಗಿ ಯುವ ನಾಯಕ ರಾಧಾಕೃಷ್ಣ ಬಂಟ್ವಾಳ್ ಆಯ್ಕೆಯಾಗಿದ್ದಾರೆ.ಇತ್ತೀಚೆಗೆ ಸಂಘದ ಸಭಾಭವನದಲ್ಲಿ ನೂತನ ಆಡಳಿತ ಮಂಡಳಿ ರಚನೆಯಾಗಿದ್ದು ಭಾನುವಾರ ನಡೆದ ಮೊದಲ ಸಭೆಯಲ್ಲಿ 2023-24 ನೇ ಸಾಲಿಗೆ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು. ಉಪಾಧ್ಯಕ್ಷರಾಗಿ ಸುಕುಮಾರ್ ಬಂಟ್ವಾಳ್, ಕಾರ್ಯದರ್ಶಿಯಾಗಿ ಕೇಶವ ಮಾಸ್ಟರ್ ಮಾರ್ನಬೈಲ್ ಉಪಾಧ್ಯಕ್ಷರಾಗಿ ಸುಕುಮಾರ್ ಬಂಟ್ವಾಳ್, ಕಾರ್ಯದರ್ಶಿಯಾಗಿ ಕೇಶವ ಮಾಸ್ಟರ್ ಮಾರ್ನಬೈಲ್ ಕೋಶಾಧಿಕಾರಿ ರಮೇಶ್ ಸಾಲಿಯಾನ್ ಗುರುಕೃಪಾ, ಜೊತೆಕಾರ್ಯದರ್ಶಿಯಾಗಿ ಮಾಧವ ಕುಲಾಲ್ ಹಾಗೂ ಜಲಜಾಕ್ಷಿ ಕುಲಾಲ್ ಸಂಘಟನಾ ಕಾರ್ಯದರ್ಶಿಯಾಗಿ ಮೀನಾಕ್ಷಿ ಪದ್ಮನಾಭ, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಮಾಲತಿ ಮಚೇಂದ್ರನಾಥ್, ಸೇವಾದಳಪತಿ ರಾಜೇಶ್ ಕುಲಾಲ್ ಆಯ್ಕೆಯಾದರು. ಕೋಶಾಧಿಕಾರಿ ರಮೇಶ್ ಸಾಲಿಯಾನ್ ಗುರುಕೃಪಾ Advertisement ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಧಕೃಷ್ಣ ಬಂಟ್ವಾಳ್ ಅವರು ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದು ಬಂಟ್ವಾಳ ತಾಲೂಕು ಕುಲಾಲ ಸಂಘದ ಸಕ್ರಿಯ ಸದಸ್ಯರಾಗಿ ಹಲವು ವರ್ಷಗಳಿಂದ ಸೇವೆ…

Read More

ಪತ್ರಿಕಾ ರಂಗದಿಂದಾಗಿ ಸಮಾಜ ಸಮತೋಲನದಿಂದ ಸಾಗುತ್ತಿದೆ : ಶಾಸಕ ಅಶೋಕ್ ಕುಮಾರ್ ರೈ ವಿಟ್ಲ: ದೇಶದ ಸದ್ಯದ ಸ್ಥಿತಿಯಲ್ಲಿ ಎಲ್ಲಾ ಅಂಗಗಳೂ ಅಂಟಿಕೊಂಡು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಂಥಾಲಯಗಳ ಬಳಕೆಯನ್ನು ವಿದ್ಯಾರ್ಥಿಗಳು ಹೆಚ್ಚುವ ಮಾಡುವ ಮೂಲಕ ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳಬೇಕು. ಒಳ್ಳೆಯ ವಿಚಾರಗಳನ್ನು ಸಮಾಜ ಸ್ವೀಕರಿಸುವ ರೀತಿ ಬದಲಾಗುತ್ತಿದೆ. ಪತ್ರಕರ್ತರು ಸಮಾಜವನ್ನು ತಿದ್ದುವ ರೀತಿಗಳು ವಿದ್ಯಾರ್ಥಿಗಳಿಗೆ ತಿಳಿಯಬೇಕಾಗಿದೆ. ಪತ್ರಿಕಾ ರಂಗದಿಂದಾಗಿ ಸಮಾಜ ಸಮತೋಲನದಿಂದ ಸಾಗುತ್ತಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. Advertisement ಅವರು ಸೋಮವಾರ ಬಸವನಗುಡಿ ವಿಠಲ ಜೇಸೀಸ್ ಆಂಗ್ಲ ಮಾಧ್ಯಮಶಾಲೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ತಾಲೂಕು, ಬಿಸಿರೋಡ್ ಪ್ರೆಸ್ ಕ್ಲಬ್ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಸಂಘದ ಸದಸ್ಯರಿಗೆ ಮಣಿಪಾಲ್‌ ಆರೋಗ್ಯ ಕಾರ್ಡ್ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪುತ್ತೂರು ಪತ್ರಕರ್ತ ಸುಧಾಕರ ಸುವರ್ಣ ಮಾತನಾಡಿ ತುಳುನಾಡಿ ಪ್ರಧಾನ ಸೀಮೆಗಳಲ್ಲಿ ಒಂದಾದ ವಿಟ್ಲ ರಾಜರ ಕಾಲದಿಂದಲೂ ವಿಶೇಷ ಸ್ಥಾನಮಾನವನ್ನು…

Read More

ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಂಟ್ವಾಳ: ತಾಲೂಕು ಬಿಲ್ಲವ ಮಹಿಳಾ ಸಮಿತಿ ಇದರ ನೂತನ ಅಧ್ಯಕ್ಷೆ ಶೈಲಜಾ ರಾಜೇಶ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಗಾಣದಪಡ್ಪುವಿನ ಬ್ರಹ್ಮಶ್ರೀ ನಾರಾಯಣ ಸಭಾಂಗಣದಲ್ಲಿ ಭಾನುವಾರ ನಡೆಯಿತು. Advertisement ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಂಶುಪಾಲೆ ಡಾ. ಆಶಾಲತಾ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಿಲ್ಲವ ಮಹಿಳೆಯರು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮುಂದೆ ಇದ್ದಾರೆ ಇದರ ಜೊತೆಗೆ ಸಾಹಿತ್ಯ ಕ್ಷೇತ್ರಗಳಲ್ಲೂ ಮುಂದೆ ಬರಬೇಕು ಇದಕ್ಕೆ ಪೂರಕವಾಗುವಂತಹ ಕಾರ್ಯಕ್ರಮಗಳನ್ನು ಮಹಿಳಾ ಸಮಿತಿಯ ಮೂಲಕ ಹಮ್ಮಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು. ಪ್ರತಿಯೊಬ್ಬ ವ್ಯಕ್ತಿಗೂ ತಾಯಿ ಪ್ರೇರಣಾಶಕ್ತಿ. ಮಕ್ಕಳಿಗೆ ಸಂಸ್ಕಾರ ನೀಡುವ ಕಾರ್ಯ ತಾಯಂದಿರದ್ದು ಎಂದು ತಿಳಿಸಿದರು. ನೂತನ ಅಧ್ಯಕ್ಷೆ ಶೈಲಜಾ ರಾಜೇಶ್ ಮಾತನಾಡಿ ಹಿಂದೆ ಪ್ರೋತ್ಸಾಹದ ಕೊರತೆಯಿಂದ ಮಹಿಳೆಯರಿಗೆ ಅವಕಾಶಗಳು ಕಡಿಮೆ ಇತ್ತು. ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮಿಂಚುತ್ತಿದ್ದಾರೆ. ನಮ್ಮ ಪ್ರತಿಭೆಯ ಮೂಲಕ ಯಾವ ಕ್ಷೇತ್ರದಲ್ಲೂ ಸಾಧನೆ ಮಾಡಬಹುದು. Advertisement ಸಮಾಜಮುಖಿ ಸೇವೆಯಲ್ಲೂ…

Read More

ಕಲಾವಿದನ ಕೈ ಚಳಕ,ತೆಂಗಿನ ಗೆರಟೆಯಲ್ಲಿ ಅರಳಿದ ಕಲಾ ಕುಸುಮ ಬಂಟ್ವಾಳ: ಉಪಯೋಗದ ಬಳಿಕ ವ್ಯರ್ಥವಾಗಿ ಹೋಗುವ, ಉರುವಲಾಗಿ ಬಳಸಲ್ಪಡುವ ತೆಂಗಿನ ಗೆರಟೆ ಕಲಾವಿದನ ಕೈ ಚಳಕದಲ್ಲಿ ಸುಂದರ ಕಲಾಕೃತಿಗಳಾಗಿ ಮೂಡಿಬಂದಿದೆ. ತೆಂಗಿನ ಗೆರಟೆಯಿಂದ ಇಂತಹ ಕಲಾಕೃತಿಗಳನ್ನು ರಚಿಸಬಹುದೇ ಎಂದು ಅಚ್ಚರಿ ಪಡುವಂತೆ ಬಗೆಬಗೆಯ ಕಲಾಕೃತಿಗಳು ರಚನೆಯಾಗಿದೆ. ದಿನ ಬಳಕೆಯ ವಸ್ತುಗಳಾಗಿ, ಮನೆಯ ಅಂದ ಹೆಚ್ಚಿಸುವ ಕಲಾಕುಸಮಗಳಾಗಿ ತೆಂಗಿನ ಚಿಪ್ಪು ಆಕರ್ಷಕ ರೂಪ ಪಡೆದುಕೊಂಡಿದೆ. ಇರಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಪನೆ ಎಂಬಲ್ಲಿನ ನಿವಾಸಿ ಸಚ್ಚೀಂದ್ರ ತೆಂಗಿನ ಗೆರಟೆಯಲ್ಲಿ ಕಲಾಕೃತಿಯನ್ನು ರಚಿಸುವ ಕಲಾವಿದ. ಇವರು ಮೂಲತಃ ಕಲಾಕಾರರಲ್ಲ. ಕಲಾವಿದರ ಕುಟುಂಬದ ಹಿನ್ನಲೆಯೂ ಇವರಿಗಿಲ್ಲ. ಕೋವಿಡ್ ಲಾಕ್‌ಡೌನ್ ಬಿಡುವಿನ ವೇಳೆಯಲ್ಲಿ ಯೂಟ್ಯೂಬ್ ವೀಕ್ಷಿಸುತ್ತಿದ್ದ ಸಂದರ್ಭ ತೆಂಗಿನ ಗೆರಟೆಯಲ್ಲಿ ಮಾಡಿದ್ದ ಚಹಾ ಕಪ್ ನೋಡಿ ಅದರಂತೆ ತಾನು ಮಾಡಬೇಕೆಂದು ಪ್ರಯತ್ನಿಸಿ ಯಶಸ್ಸು ಪಡೆದಾಗ ಇಂತಹ ಬಗೆಬಗೆಯ ಕಲಾಕೃತಿಗಳನ್ನು ರಚಿಸಲು ತೀರ್ಮಾನಿಸಿದರು. ಕಟ್ಟಡ ನಿರ್ಮಾಣದ ಮೇಸ್ತ್ರೀ ಕೆಲಸ ನಿರ್ವಹಿಸುವ ಸಚ್ಚೀಂದ್ರ ಅವರು ಬಳಿಕ ತನ್ನ ಬಿಡುವಿನ ವೇಳೆಯಲ್ಲಿ…

Read More

ಪುದು: ಉಪಚುನಾವಣೆ ಫಲಿತಾಂಶ ಪ್ರಕಟ ಬಂಟ್ವಾಳ: ಪುದು ಗ್ರಾಮ ಪಂಚಾಯಿತಿನ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆದಿದ್ದು ಅಭ್ಯರ್ಥಿ ಮಹಮ್ಮದ್ ಇಕ್ಬಾಲ್ ಪಾಡಿ ಗೆಲುವು ಸಾಧಿಸಿದ್ದಾರೆ. ಒಟ್ಟು 572 ಮತ ಚಲಾವಣೆಯಾಗಿದ್ದು ಅಬ್ದುಲ್ ಲತೀಫ್ 39,ಮುಹಮ್ಮದ್ ಅಶ್ರಫ್ ಮಾರಿಪಳ್ಳ 140, ಮೊಹಮ್ಮದ್ ಇಕ್ಬಾಲ್ ಪಾಡಿ 385 ಮತಗಳನ್ನು ಪಡೆದಿದ್ದಾರೆ. 8 ಮತಗಳು ತಿರಸ್ಕೃತಗೊಂಡಿದೆ. Advertisement Advertisement ಬಂಟ್ವಾಳ ತಹಶೀಲ್ದಾರ್ ಎಸ್.ಬಿ.ಕೂಡಲಗಿ ನೇತೃತ್ವದಲ್ಲಿಚುನಾವಣೆ ಅಧಿಕಾರಿತಾ.ಪಂ. ಇಒ ರಾಜಣ್ಣ,ಸಹಾಯಕ ಚುನಾವಣಾಧಿಕಾರಿ ಪಂಚಾಯತಿ ಪಿಡಿಓ ಹರೀಶ್ ಕೆ.ಎ , ಎಣಿಕೆ ಮೇಲ್ವಿಚಾರಕ, ಉಪತಹಶೀಲ್ದಾರ್ ನವೀನ್ ಬೆಂಜನಪದವು, ಎಣಿಕೆ ಸಹಾಯಕರಾದ ಕಂದಾಯ ನಿರೀಕ್ಷಕರು ಸೀತಾರಾಮ ಕಮ್ಮಾಜೆ, ಜೆ.ಜನಾರ್ದನ, ಶ್ರೀ ಕಲಾ, ಹಾಗೂ ಸುಂದರ, ಕಿರಣ್, ಚಂದು ಮತ ಎಣಿಕೆ ಪ್ರಕ್ರಿಯೆ ನಡೆಸಿಕೊಟ್ಟರು

Read More