Author: admin

ಅರಳ ಗ್ರಾಮದಲ್ಲಿ ಗುಡ್ಡ ಕುಸಿತ ಬಂಟ್ವಾಳ: ಅರಳ ಗ್ರಾಮದ ದೇಂಬುಡೆ ಎಂಬಲ್ಲಿ ಗುಡ್ಡ ಕುಸಿದು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ನಿವಾಸಿ ರುಡಾಲ್ಫ್ ಮರ್ಕ್ ಲೋಬೋ ಅವರ ಮನೆ ಬಳಿ ಈ ಘಟನೆ ನಡೆದಿದೆ. ಕಳೆದ ವರ್ಷ ಇದೇ ಸ್ಥಳದಲ್ಲಿ ಗುಡ್ಡ ಕುಸಿದು ಮನೆಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಬಳಿಕ ಮಣ್ಣು ಕುಸಿಯದಂತೆ ಕಾಂಕ್ರೀಟ್ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಆದರೆ ಈ ಭಾರಿ ಮತ್ತೆ ಮೇಲ್ಭಾದ ಗುಡ್ಡ ಕುಸಿದು ಆತಂಕದ ಸ್ಥಿತಿ ನಿರ್ಮಾಣಗೊಂಡಿದೆ. ಗುಡ್ಡದಲ್ಲಿದ್ದ ಬಂಡೆಕಲ್ಲುಗಳು ಮಣ್ಣಿನೊಂದಿಗೆ ಉದುರಿ ಬೀಳುತ್ತಿದೆ. ಅರಳ ಗ್ರಾಮದಲ್ಲಿ ಗುಡ್ಡ ಕುಸಿತ Advertisement Advertisement

Read More

ಅಮ್ಟಾಡಿ: ಮಹಲ್ತೋಟ ಬಳಿ ರಸ್ತೆಗೆ ಉರುಳಿದ ಬೃಹತ್ ಕಲ್ಲು ಬಂಟ್ಚಾಳ: ಭಾರಿ ಮಳೆಗೆ ಅಮ್ಟಾಡಿ ಗ್ರಾಮದ ಮಹಲ್ ತೋಟ ರಸ್ತೆ ಬಳಿ ಬೃಹತ್ ಗಾತ್ರದ ಕಲ್ಲೊಂದು ರಸ್ತೆಗೆ ಉರುಳಿ ಬಿದ್ದಿದೆ. ಲೊರಟ್ಟೊ ಪದವಿನಿಂದ ಮಹಲ್ ತೋಟ ಸಂಪರ್ಕಿಸುವ ರಸ್ತೆ ಇದಾಗಿದ್ದು ಬೆಳಿಗ್ಗೆ 8.30 ರ ವೇಳೆಗೆ ಈ ಘಟನೆ ನಡೆದಿದೆ. ಪ್ರತಿದಿನ ಈ ರಸ್ತೆಯ ಮೂಲಕ ಶಾಲಾ ವಿದ್ಯಾರ್ಥಿಗಳು ತೆರಳುತ್ತಿದ್ದು ಶಾಲೆಗೆ ರಜೆ ಇದ್ದುದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಅಮ್ಟಾಡಿ ಪಂಚಾಯತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಸ್ಥಳೀಯರ ಸಹಕಾರದೊಂದಿಗೆ ಕಲ್ಲು ತೆರವು ಕಾರ್ಯ ಕೈ ಗೊಂಡಿದ್ದಾರೆ. ಅಮ್ಟಾಡಿ: ಮಹಲ್ತೋಟ ಬಳಿ ರಸ್ತೆಗೆ ಉರುಳಿದ ಬೃಹತ್ ಕಲ್ಲು Advertisement Advertisement

Read More

ಬಂಟ್ವಾಳ: ಜೆಸಿಐ ಶಂಕರನಾರಾಯಣದ ಆತಿಥ್ಯದಲ್ಲಿ ನಡೆದ ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆ, ವ್ಯವಹಾರ ಸಮ್ಮೇಳನದಲ್ಲಿ ಜೆಸಿಐ ಬಂಟ್ವಾಳದ ಉಪಾಧ್ಯಕ್ಷ ವಚನ್ ಶೆಟ್ಟಿ ಯವರಿಗೆ ಉದ್ಯಮ ಕ್ಷೇತ್ರದ ಸಾಧನೆಗಾಗಿ ಪಂಚರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ವಲಯ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿ, ನಾಗರಾಜ್ ಪೂಜಾರಿ, ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ., ನಿಕಟಪೂರ್ವಾಧ್ಯಕ್ಷ ರೋಷನ್ ರೈ, ಉಪಾಧ್ಯಕ್ಷ ಕಿಶೋರ್ ಆಚಾರ್ಯ, ಕಾರ್ಯದರ್ಶಿ ರಶ್ಮಿ ಶೆಟ್ಟಿ, ಸದಸ್ಯರಾದ ಸಂತೋಷ್ ಜೈನ್, ಉಮೇಶ್ ಪೂಜಾರಿ ಉಪಸ್ಥಿತರಿದ್ದರು. Advertisement

Read More

ರೇಶ್ಮಾ ಭಟ್ ಅವರಿಗೆ ನುಗ್ಗೆಹಳ್ಳಿ ಪಂಕಜ ಪ್ರಶಸ್ತಿ ಬಂಟ್ವಾಳ: ಅತ್ತುತ್ತಮ ಹಾಸ್ಯಕೃತಿಗಾಗಿ ಕರ್ನಾಟಕ ಲೇಖಕಿಯರ ಸಂಘವು ಪ್ರತಿ ವರ್ಷ ನೀಡುವ ಪ್ರತಿಷ್ಠಿತ ‘ನುಗ್ಗೆಹಳ್ಳಿ ಪಂಕಜ ಪ್ರಶಸ್ತಿ’ಗೆ ಬಿ.ಸಿ.ರೋಡ್ ನಿವಾಸಿ ಹಾಗೂ ಉಪನ್ಯಾಸಕಿ ರೇಶ್ಮಾ ಭಟ್ ಅವರ ‘ಲಘುಬಗೆ’ ಕೃತಿ ಆಯ್ಕೆಯಾಗಿದೆ. ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ಅವರು ವಿವಿಧ ಪ್ರಶಸ್ತಿಗಳನ್ನು ಪಡೆದವರ ಪಟ್ಡಿಯನ್ನು ಬಿಡುಗಡೆ ಮಾಡಿದರು. 2021 ರಲ್ಲಿ ಪ್ರಕಟವಾದ ಅತ್ಯುತ್ತಮ ಹಾಸ್ಯಕೃತಿ ಎನ್ನುವ ನೆಲೆಯಲ್ಲಿ ಈ ಪ್ರಶಸ್ತಿಯು ಸಂದಿದೆ. ಇದೆ ಜುಲೈ 23 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. Advertisement Advertisement

Read More

ಎಸ್‌ಕೆಪಿಎ ಬಂಟ್ವಾಳ ವಲಯದ ಅಧ್ಯಕ್ಷರಾಗಿ ಕಿಶೋರ್ ಯಸ್. ಕುಮಾರ್ ಆಯ್ಕೆ ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಇದರ ಬಂಟ್ವಾಳ ವಲಯದ ಅಧ್ಯಕ್ಷರಾಗಿ ಪ್ರೀತಿ ಸ್ಟುಡಿಯೋದ ಮಾಲಕ ಕಿಶೋರ್ ಯಸ್. ಕುಮಾರ್ ಆಯ್ಕೆಯಾಗಿದ್ದಾರೆ.ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ. ಕ. ಮತ್ತು ಉಡುಪಿ ಜಿಲ್ಲೆ ಇದರ ಬಂಟ್ವಾಳ ವಲಯದ ಮಹಾಸಭೆ ಮಂಗಳವಾರ ಬಿ.ಸಿ.ರೋಡಿನ ಲಯನ್ಸ್ ಸಭಾಂಗಣದಲ್ಲಿ ಜರಗಿತು. ಈ ಸಭೆಯಲ್ಲಿ 2023-25 ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಎಸ್‌ಕೆಪಿಎ ಬಂಟ್ವಾಳ ವಲಯದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕಲ್ಲಡ್ಕ, Advertisement ಎಸ್‌ಕೆಪಿಎ ಬಂಟ್ವಾಳ ವಲಯದ ಕೋಶಾಧಿಕಾರಿ ವರುಣ್ ಕಲ್ಲಡ್ಕ ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್ ಕಲ್ಲಡ್ಕ, ಗೌರವ ಅಧ್ಯಕ್ಷರಾಗಿ ಹರೀಶ್ ಕುಂದರ್ ಉಪಾದ್ಯಕ್ಷರುಗಳಾಗಿ ಲಕ್ಷ್ಮಣ್ ಮೆಲ್ಕಾರ್ ಹಾಗೂ ವಿಕೇಶ್ ಬಂಟ್ವಾಳ ಕೋಶಾಧಿಕಾರಿಯಾಗಿ ವರುಣ್ ಕಲ್ಲಡ್ಕ, ಜತೆ ಕಾರ್ಯದರ್ಶಿಯಾಗಿ ರಿಚರ್ಡ್ ಹಾಗೂ ವಿವೇಕ್ ಅಮ್ಟಾಡಿ , ಸಂಘಟನಾ ಕಾರ್ಯದರ್ಶಿಯಾಗಿ ಶರತ್ ಕಲ್ಲಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ಮೋಹನ್ ಏಕದಂತ ಹಾಗೂ ಹರೀಶ್ ಕನ್ಯಾನ, ಸಾಂಸ್ಕೃತಿಕ…

Read More

ಬಂಟ್ವಾಳ: ಅಲ್ಲಿ ಪ್ರಾರ್ಥನೆ ಇತ್ತು. ಅರ್ಚಕರಿರಲಿಲ್ಲ. ಮಹಾಸಭೆ ನಡೆಯಿತು, ಅಧಿಕಾರಿಗಳಾರೂ ಇರಲ್ಲಿಲ್ಲ. ತಾಯಂದಿರ ಪ್ರೀತಿ ಇತ್ತು, ಅವರೆಲ್ಲಾ ಒಂದೇ ಮನೆಯವರಾಗಿರಲ್ಲಿಲ್ಲ… ನಾನು ಎಲ್ಲರಿಗಾಗಿ, ಎಲ್ಲರೂ ನನಗಾಗಿ ಎಂಬ ನಿಷ್ಕಲ್ಮಶ ಅಂತ:ಕರಣದ ಜನರು, ಮನೊಲ್ಲಾಸದ ವಾತಾವರಣ. ಮನೋರಂಜನೆಯ ಆಟಗಳು! ಮಕ್ಕಳ ಜೊತೆ ಮಕ್ಕಳಾಗಿ ಕುಣಿದ ಹಿರಿಯರು, ಎಲ್ಲಕ್ಕಿಂತ ಮಿಗಿಲಾಗಿ ತಮ್ಮ ತಮ್ಮ ಮನೆಗಳಿಂದ ತಂದ ಅಪರೂಪದ ತಿಂಡಿಗಳಿದ್ದವು ಜೊತೆಗೆ ತನ್ನವರಿಗೆ ಹಂಚುವ ಮಧುರ ಭಾವನೆಗಳು ಅಲ್ಲಿ ತುಂಬಿದ್ದವು…ಇದು ಪೊಯಿಲೋಡಿ ಕುಟುಂಬಿಕರ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳು. ಕುಟುಂಬ ಪದ್ದತಿ ದೂರವಾಗಿ ವಿಭಕ್ತ ಕುಟುಂಬಗಳೇ ತುಂಬಿಕೊಂಡಿರುವ ಈ ಕಾಲಘಟ್ಟದಲ್ಲಿ ಕುಟುಂಬಿಕರನ್ನು ಜೊತೆ ಸೇರಿಸಲು ಹೀಗೂ ಕಾರ್ಯಕ್ರಮ ಆಯೋಜಿಸಬಹುದು ಎನ್ನುವುದಕ್ಕೆ ಕುಟುಂಬ ಸಮ್ಮಿಲನ ಕಾರ್ಯಕ್ರಮ ಸಾಕ್ಷಿಯಾಯಯಿತು. Advertisement Advertisement ಪೊಯಿಲೋಡಿ ಬಂಜನ್ ಕುಟುಂಬಸ್ಥರ ದೈವಗಳ ಸೇವಾ ಟ್ರಸ್ಟ್ ವತಿಯಿಂದ ವಾರ್ಷಿಕ ಸಭೆ ಮತ್ತು ಕುಟುಂಬ ಸಮ್ಮಿಲನ-23 ಕಾರ್ಯಕ್ರಮ ಭಾನುವಾರ ಬಂಟ್ವಾಳ ನಾವೂರಿನ ಪೊಯಿಲೋಡಿ ಮನೆಯಲ್ಲಿ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಬಹಳ ಅರ್ಥಪೂರ್ಣವಾಗಿ…

Read More

ಬಂಟ್ವಾಳ: ಜೆಸಿಐ ಬಂಟ್ವಾಳ ಮತ್ತು ಸಾಯಿ ಕಿಡ್ಝೋನ್ ಸ್ಕೂಲ್ ನ ಆಶ್ರಯದಲ್ಲಿ ವನಮಹೋತ್ಸವ ಆಚರಿಸಲಾಯಿತು. ಶಾಲಾ ವಠರದಲ್ಲಿ ಗಿಡ ಗಳನ್ನು ನೆಟ್ಟು ಸುಮಾರು 40 ಮಂದಿ ಪೋಷಕರಿಗೆ ವಿವಿಧ ತಳಿಯ ಗಿಡಗಳನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಜೆಸಿಐ ಬಂಟ್ವಾಳದ ಉಪಾಧ್ಯಕ್ಷ ಕಿಶೋರ್ ಆಚಾರ್ಯ, ಸದಸ್ಯ ಉಮೇಶ್ ಪೂಜಾರಿ ಶಾಲಾ ಸಂಚಾಲ ಐತಪ್ಪ ಪೂಜಾರಿ, ಪಿಟಿಎ ಅಧ್ಯಕ್ಷ ಅಭಿಲಾಷ್ ಭಟ್, ಉಪಾಧ್ಯಕ್ಷೆ ಶಿಲ್ಪಾ ತೇಜಸ್ , ಜ್ಞಾನೇಶ್ ರಾವ್, ಉಪಸ್ಥಿತರಿದ್ದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು

Read More

ನರಹರಿ ಪರ್ವತದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ತೀರ್ಥಸ್ನಾನ ಬಂಟ್ವಾಳ: ಪುರಾಣ ಪ್ರಸಿದ್ದ ಪರ್ವತ ಕ್ಷೇತ್ರ ಬಂಟ್ವಾಳ ತಾಲೂಕಿನ ನರಹರಿ ಪರ್ವತದ ಮೇಲಿರುವ ಶ್ರೀ ಸದಾಶಿವ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ವಿಶೇಷ ತೀರ್ಥ ಸೋಮವಾರ ಸ್ನಾನ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬೆಟ್ಟ ಹತ್ತಿ ದೇವಸ್ಥಾನದ ತೀರ್ಥ ಬಾವಿಗಳಾದ ಶಂಖ, ಚಕ್ರ, ಗಧಾ, ಪದ್ಮ ಕೆರೆಗಳಲ್ಲಿ ತೀರ್ಥಸ್ನಾನ ಮಾಡಿ ಪುನೀತರಾದರು. ದೇವರ ದರ್ಶನ ಪಡೆದು ಉರಿ ಹಗ್ಗ ಸೇವೆ ಸಹಿತ ವಿವಿಧ ವಿಶೇಷ ಸೇವೆಗಳನ್ನು ಸಲ್ಲಿಸಿದರು. ನರಹರಿ ಪರ್ವತದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ತೀರ್ಥಸ್ನಾನ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ಕಲ್ಲಡ್ಕ ಮದ್ಯ ಭಾಗದಲ್ಲಿ ಅಮ್ಟೂರು, ಗೋಳ್ತಮಜಲು ಪಾಣೆಮಂಗಳೂರು ಈ ಮೂರು ಗ್ರಾಮಗಳ ತ್ರಿವೇಣಿ ಸಂಗಮದಂತೆ ದಟ್ಟವಾದ ಕಾಡಿನ ಮಧ್ಯದಲ್ಲಿ ಮಹಾಶಿವಲಿಂಗದಂತೆ ಕಂಗೊಳಿಸುತ್ತಿರುವ ಪುಣ್ಯ ಕ್ಷೇತ್ರವೇ ಶ್ರೀ ನರಹರಿ ಪರ್ವತ. ದ್ವಾಪರ ಯುಗದಲ್ಲಿ ಕುರುಕ್ಷೇತ್ರ ಯುದ್ಧದ ಬಳಿಕ ಪಾಂಡವರು ತಮ್ಮ ಪಾಪ ವಿಮೋಚನೆಗಾಗಿ ಎಲ್ಲಾ ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸುತ್ತ ದಕ್ಷಿಣ…

Read More

ತುಳುಕೂಟದ ವತಿಯಿಂದ ಪಾಲೆ ಕೆತ್ತೆ ಕಷಾಯ ವಿತರಣೆ ಬಂಟ್ವಾಳ: ತುಳುನಾಡಿನ‌‌ ಸಂಪ್ರದಾಯದ ಆಚರಣೆಯಲ್ಲಿ ಆರೋಗ್ಯದ ಭಾಗ್ಯವೂ ಇದೆ ಎಂದು ತುಳುಕೂಟ ಬಂಟ್ವಾಳ ಇದರ ಅಧ್ಯಕ್ಷ ಸುದರ್ಶನ್ ಜೈನ್ ಹೇಳಿದರು‌‌. Advertisement ಅವರು ತುಳುಕೂಟ ಬಂಟ್ವಾಳದ ಆಶ್ರಯದಲ್ಲಿ ಶ್ರೀ ರಕ್ತೇಶ್ವರಿ ದೇವಸ್ಥಾನ ಬಿ.ಸಿ.ರೋಡ್ ಇದರ ಆಡಳಿತ ಮಂಡಳಿಯ ಸಹಕಾರದಲ್ಲಿ ಶ್ರೀ ರಕ್ತೇಶ್ವರೀ ದೇವಸ್ಥಾನದಲ್ಲಿ ಆಟಿ ಅಮವಾಸ್ಯೆಯ ಪ್ರಯುಕ್ತ ನಡೆದ ಸಾರ್ವಜನಿಕ ಪಾಲೆಯ ಕೆತ್ತೆ ಕಷಾಯ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಸಾರ್ವಜನಿಕರಿಗೆ ಕಷಾಯ ನೀಡಿ ಆಟಿ ಅಮಾವಾಸ್ಯೆಯ ಶುಭಾಶಯ ಕೋರಿದರು. ತುಳುಕೂಟದ ವತಿಯಿಂದ ಪಾಲೆ ಕೆತ್ತೆ ಕಷಾಯ ವಿತರಣೆ Advertisement ಈ ಸಂಧರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಎನ್. ಶಿವಶಂಕರ್, ಮಾಜಿ ಅಧ್ಯಕ್ಷ ರಾಜೇಶ್.ಎಲ್.ನಾಯಕ್, ತುಳುಕೂಟದ ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್, ಹಿರಿಯರಾದ ಕಾಂತಾಡಿ ಸೀತಾರಾಮ ಶೆಟ್ಟಿ, ಪರಮೇಶ್ವರ ಮೂಲ್ಯ, ನಾರಾಯಣ ಸಿ. ಪೆರ್ನೆ, ಸದಾಶಿವ ಪುತ್ರನ್, ಟಿ. ಶೇಷಪ್ಪ ಮಾಸ್ಟರ್, ಸುಕುಮಾರ್ ಬಂಟ್ವಾಳ್, ದಾಮೋದರ ಮಾಸ್ಟರ್ ಏರ್ಯ, ನಿತೇಶ್…

Read More

ಸಜೀಪಮೂಡದಲ್ಲಿ ಪಿಎಂ ಕೃಷಿ ಸಿಂಚಯಿ ಯೋಜನೆಯಡಿ ಅಮೃತ ಮಾರಾಟ ಮಳಿಗೆ ಉದ್ಘಾಟನೆ ಬಂಟ್ವಾಳ: ಸಜಿಪಮೂಡ ಗ್ರಾಮದ ಸುಭಾಷ್ ನಗರದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕೃಷಿ ಉತ್ಪನ್ನಗಳ ಮಾರಾಟ, ರೈತ ಮಹಿಳೆಯರ ಸ್ವ ಉದ್ಯೋಗಕ್ಕಾಗಿ ಅಮೃತ ಮಾರಾಟ ಮಳಿಗೆಯನ್ನು ಶಾಸಕ ರಾಜೇಶ್ ನಾಯ್ಕ್ ಶನುವಾರ ಉದ್ಘಾಟಿಸಿದರು.ಅಮೃತ್ ಸ್ಟಾಲ್ ಮಾರಾಟ ಮಳಿಗೆಯನ್ನು ಸಜಿಪಮೂಡ ಜಲಾನಯನ ಸಮಿತಿಯ ಅಕ್ಷಯ ಸ್ವಸಹಾಯ ಸಂಘದ ಸದಸ್ಯರಿಗೆ ಜೀವನೋಪಾಯ ಚಟುವಟಿಕೆ ಘಟಕದಡಿ ಜಲಾನಯನ ವ್ಯಾಪ್ತಿಯಲ್ಲಿ ವ್ಯಾಪಾರ ವಹಿವಾಟು ನಡೆಸಿ ಸ್ವಾವಲಂಬನೆ ಹೊಂದಲು ಕೃಷಿ ಇಲಾಖೆ ಜಲಾನಯನ ವಿಭಾಗದಿಂದ ನೀಡಿದ ಸೌಲಭ್ಯವಾಗಿರುತ್ತದೆ. ಸಜೀಪಮೂಡದಲ್ಲಿ ಪಿಎಂ ಕೃಷಿ ಸಿಂಚಯಿ ಯೋಜನೆಯಡಿ ಅಮೃತ ಮಾರಾಟ ಮಳಿಗೆ ಉದ್ಘಾಟನೆ ಸಜೀಪಮೂಡದಲ್ಲಿ ಪಿಎಂ ಕೃಷಿ ಸಿಂಚಯಿ ಯೋಜನೆಯಡಿ ಅಮೃತ ಮಾರಾಟ ಮಳಿಗೆ ಉದ್ಘಾಟನೆ Advertisement ಬೇಕರಿ ಉತ್ಪನ್ನಗಳ ಮಾರಾಟಕ್ಕೆಂದು ಸ್ವಸಹಾಯ ಸಂಘಕ್ಕೆ ನೀಡಿದ ಅಮೃತ್‌ ಮಳಿಗೆಗೆ ಇಲಾಖೆಯಿಂದ ರೂ. 56 ಸಾವಿರ ರೂಪಾಯಿ ಸಹಾಯಧನ ನೀಡಲಾಗಿದೆ. ಈ ಸಂದಭದಲ್ಲಿ ದ.ಕ. ಜಿಲ್ಲೆ ಜಂಟಿ ಕೃಷಿ…

Read More