Author: admin

ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ & ಮ್ಯಾನೇಜೆಂಟ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಮುಸ್ತಫಾ ಬಸ್ತಿಕೋಡಿ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) 9ನೇ ಅಕಾಡೆಮಿಕ್ ಸೆನೆಟ್ ಸದಸ್ಯರಾಗಿ ನೇಮಕಗೊಂಡಿದ್ದಾರೆ. VTU ಕಾಯಿದೆ 1994ರ ಸೆಕ್ಷನ್ 22ರ ಅಡಿಯಲ್ಲಿ ಈ ಕುರಿತು ರಾಜ್ಯಪಾಲರು ಅಧಿಸೂಚನೆ ಹೊರಡಿಸಿದ್ದಾರೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿಗಳು ತಿಳಿಸಿದ್ದಾರೆ. ಅಕಾಡೆಮಿಕ್ ಸೆನೆಟ್ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅತ್ಯುನ್ನತ ಶೈಕ್ಷಣಿಕ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ. ಪ್ರಮುಖ ಶೈಕ್ಷಣಿಕ ಕಾರ್ಯತಂತ್ರಗಳು ಮತ್ತು ನೀತಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಡಾ. ಮುಸ್ತಫಾ ಬಸ್ತಿಕೋಡಿ ಅವರನ್ನು ಸೆನೆಟ್‌ನಲ್ಲಿ ಸೇರಿಸಿಕೊಂಡಿರುವುದು ತಾಂತ್ರಿಕ ಶಿಕ್ಷಣ, ಸಂಶೋಧನೆ ಮತ್ತು ಶೈಕ್ಷಣಿಕ ಆಡಳಿತಕ್ಕೆ ಅವರು ನೀಡಿರುವ ಅವರ ಕೊಡುಗೆಗಳಿಗೆ ಸಂದ ಗೌರವವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ಅದೊಂದು ನನಗೆ ಭಾವುಕ ಕ್ಷಣವೂ ಹೌದು. ಅದಾಗಲೇ ನಾನು ದಕ್ಷತಾ ವರ್ಗ, ಐಟಿಸಿ, ಓಟಿಸಿ ಮುಗಿಸಿದ್ದೆ. ಆ ಶಿಬಿರಗಳಲ್ಲೆಲ್ಲ ನಂ.ಮಧ್ವ ರಾವ್, ನ.ಕೃ ಷ್ಣಪ್ಪ, ಸು.ರಾಮಣ್ಣ, ಚಂದ್ರಶೇಖರ ಭಂಡಾರಿ, ಹೂ.ವೇ.ಶೇಷಾದ್ರಿ ಮೊದಲಾದ ಘಟಾನುಘಟಿ ರಾಷ್ಟ್ರಪ್ರೇಮಿ ವ್ಯಕ್ತಿಗಳ ವಿಚಾರಪ್ರದ ಬೌದ್ಧಿಕ್ ನಮ್ಮೆಲ್ಲರನ್ನು ನಮ್ಮ ಸಂಸ್ಕ್ರತಿ ಹಾಗೂ ರಾಷ್ಟ್ರೀಯ ವಿಚಾಧಾರೆಯ ಕುರಿತು ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತಿತ್ತು. ಧಾರವಾಡದ ಆರ್ ಎಲ್ ಎಸ್ ಪ್ರೌಢಶಾಲೆಯಲ್ಲಿ ನಾನು ಭಾಗಿಯಾಗಿದ್ದ ಓಟಿಸಿ ಶಿಬಿರಕ್ಕೆ ಅಂದಿನ ರಾಷ್ಟ್ರೀಯ ನಾಯಕರಾಗಿದ್ದ ಎ.ಬಿ. ವಾಜಪೇಯಿ, ಎಲ್.ಕೆ.ಅಡ್ವಾಣಿ, ಜಗನ್ನಾಥ್ ರಾವ್ ಜೋಷಿ ಮೊದಲಾದವರು ಶಿಬಿರಾಂಗಣಕ್ಕೆ ಬಂದಿದ್ದ ನೆನಪು. ಅವರ ಭೇಟಿ ಅದೊಂದು ಆಕಸ್ಮಿಕ ಘಟನೆಯೆಂದೆ ನಾನಿಂದು ಭಾವಿಸಿದ್ದೇನೆ. ಆ ಕಾಲದಲ್ಲಿ ಹೇಳಬೇಕೆಂದರೆ, ನಮ್ಮ ಊರಿನಲ್ಲಿ ಕಮ್ಯುನಿಸ್ಟ್ ಹಾಗೂ ಕಾಂಗ್ರೆಸ್‌ನ ಏಳೆಂಟು ಮನೆಗಳನ್ನು ಬಿಟ್ಟರೆ ಉಳಿದವರೆಲ್ಲ ಹುಟ್ಟಿನಿಂದಲೇ ಎನ್ನುವ ಹಾಗೆ ಜನಸಂಘದಲ್ಲಿ ತೊಡಗಿಕೊಂಡವರು. ಇತ್ತೀಚಿನವರೆಗೂ ಮಾರ್ಗದ ಬದಿಯ ಹಳೆಯ ಕಟ್ಟಡಗಳ ಗೋಡೆಗಳಲ್ಲಿ ಸುಣ್ಣದಲ್ಲಿ ಬರೆದ ಜನಸಂಘದ ದೀಪದ ಚಿಹ್ನೆಗಳು ಕಾಣಿಸುತ್ತಿದ್ದವು. ನಮ್ಮ ಬದುಕಿಗೂ ಜನಸಂಘದ ರಾಷ್ಟ್ರೀಯ…

Read More

ಆಗ ಬೆಳ್ಳಾರೆಯಲ್ಲಿ ಪದವಿ ಪೂರ್ವ ತರಗತಿ ಮುಗಿಸಿದ್ದೇನಷ್ಟೆ. ಇನ್ನೇನು ಪದವಿ ತರಗತಿಗೆ ಸೇರಬೇಕೆನ್ನುವಷ್ಟರಲ್ಲಿ, ಆಗ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರಿಂದ ದೇಶದಾದ್ಯಂತ ತುರ್ತು ಪರಿಸ್ಥಿತಿ ಹೇರಲ್ಪಟ್ಟಿತು. ಆಗ ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಮಕುಂಜ ಶಾಖೆಯಲ್ಲಿ ಮುಖ್ಯ ಶಿಕ್ಷಕನಾಗಿ ಕೆಲಸ ಮಾಡಿದ್ದರ ಪರಿಣಾಮವಾಗಿಯೋ ಏನೋ ರಾಷ್ಟ್ರೀಯತೆ ಮತ್ತು ರಾಷ್ಟ್ರಭಕ್ತಿಯ ಕುರಿತಾಗಿನ ಪ್ರಜ್ಞೆ ನನ್ನನ್ನು ಆಂತರಿಕವಾಗಿ ಎಚ್ಚರಿಸುತ್ತಿತ್ತು; ಇದಕ್ಕೆ ನಮ್ಮ ತಾಯಿಯವರ ಮುತುವರ್ಜಿಯೂ ಕಾರಣವಾಗಿತ್ತು. ಎಷ್ಟೋ ಸಂದರ್ಭಗಳಲ್ಲಿ ನಾನು ಶಾಖೆ ನಡೆಸುತ್ತಿದ್ದಾಗ ಅವರು ನಮ್ಮ ರಕ್ಷಕರಾಗಿ ಕಾವಲು ಕಾಯುತ್ತಿದ್ದರು; ಇದಕ್ಕೆ ಕಾರಣವೂ ಇತ್ತು, ಅಲ್ಲೇ ಪಕ್ಕದಲ್ಲಿ ರಾಮಕುಂಜೇಶ್ವರನು ಉದ್ಭಸಿದನೆಂಬುದಾಗಿ ನಂಬಲಾದ ದೊಡ್ಡದಾದ ಬಿಲದ್ವಾರವೊಂದಿತ್ತು, ಅದಕ್ಕಾಗಿ ಅಮ್ಮನಿಗೆ ಭಯ, ಹೇಗಿದ್ದರೂ ನಾವು ಸಣ್ಣ ಮಕ್ಕಳು ಬೇರೆ. ಈ ರಾಷ್ಟ್ರದ ಮೇಲಿನ ಅವ್ಯಕ್ತವಾದ ಭಕ್ತಿ ಒಂದು ಕಡೆಯಾದರೆ ನಮ್ಮ ತಾಯಿಯವರ ಉತ್ಸಾಹಭರಿತ ಉತ್ತೇಜನದಿಂದಾಗಿ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಲು ನಾನಂತೂ ಅನುವು ಮಾಡಿಕೊಂಡೆ. ಆದರೆ ಸಮಸ್ಯೆ ಅಂದರೆ, ಅಮ್ಮ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರೂ ಅನ್ಯಾನ್ಯ ಕಾರಣಗಳಿಂದಾಗಿ ಸ್ವಲ್ಪಮಟ್ಟಿಗೆ…

Read More

ಬಂಟ್ವಾಳ: ಭವಿಷ್ಯತ್ ಕಾಲದ ಭಾರತದ ಆಡಳಿತ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿ ಪರ್ಯಾಯವಾಗಿ ಬೇರೊಂದು ರಾಜಕೀಯ ಪಕ್ಷದ ಅಗತ್ಯತೆ ಮತ್ತು ಅನಿರ್ವಾಯತೆಯನ್ನು ಮನಗಂಡ ಅಪ್ಪಟ್ಟ ದೇಶ ಪ್ರೇಮಿ, ಸೂಕ್ಷ್ಮ ದೃಷ್ಟಿಕೋನವುಳ್ಳ ,ದೂರದೃಷ್ಟಿಯುಳ್ಳ ರಾಜಕಾರಣಿ ಡಾI ಶ್ಯಾಮ್ ಪ್ರಸಾದ್ ಮುಖರ್ಜಿರವರು. ದೇಶದ ಮೇಲಿಟ್ಟಿರುವ ದೇಶ ಭಕ್ತಿಯ ಬಗೆಗಿನ ಹಲವಾರು ಘಟನೆಗಳನ್ನು ನೆನಪಿಸಿಕೊಂಡಾಗ ಅವರಲ್ಲಿರುವ ರಾಷ್ಟ್ರ ಪ್ರೇಮದ ಶಕ್ತಿಯು ರಾಷ್ಟ್ರ ಭಕ್ತರಾದ ನಮಗೆಲ್ಲರಿಗೂ ಪ್ರೇರಣಾ ಶಕ್ತಿಯಾಗಿ ಮೂಡಿ ಬರುತ್ತದೆ ಎಂದು ಬಿ ಜೆ ಪಿ ಪ್ರಮುಖರಾದ ಪ್ರಭಾಕರ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಪಿಲಾತಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿ ಜೆ ಪಿ ಶಕ್ತಿ ಕೇಂದ್ರದ ವತಿಯಿಂದ ಪುಂಜಾಲಕಟ್ಟೆಯ ನಂದಗೋಕುಲ ಪ್ರಕಾಶ್ ಭಟ್ ರವರ ಮನೆಯಲ್ಲಿ ಜರಗಿದ ಶ್ಯಾಮ್ ಪ್ರಸಾದ್ ಮುಖರ್ಜಿರವರ , ಪುಣ್ಯ ಸ್ಮರಣೆ ಪ್ರಯುಕ್ತ ನಡೆದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮುಖರ್ಜಿಯವರ ಭಾವ ಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ ಮಾತಾನಾಡಿದರು . ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂರವರ ಸಂಪುಟದಲ್ಲಿ ಸಂಪುಟ…

Read More

ಬಂಟ್ವಾಳ: ಸಂಘಟನೆಗಳು ಮಾಡುವ ಒಳ್ಳೆಯ ಕೆಲಸಗಳನ್ನು ಬೇರೆಯವರಿಗೆ ತಿಳಿಸುವ ಮೂಲಕ ಸಂಘಟನೆಯನ್ನು ಬಲಪಡಿಸುವ ಕಾರ್ಯ ಆಗಬೇಕು. ಮುಂದಿನ ಪೀಳಿಗೆಗೆ ಮಾದರಿಯಾಗುವಂತಹ ಕಾರ್ಯಗಳನ್ನು ಹಮ್ಮಿಕೊಂಡಾಗ ಸದೃಢ ಸಮಾಜವನ್ನು ನಿರ್ಮಿಸಲು ಸಾಧ್ಯವಿದೆ ಎಂದು ನರಿಕೊಂಬು ಶ್ರೀ ನಾಲ್ಕೈತ್ತಾಯ ಪಂಜುರ್ಲಿ ನೇಮೋತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಲ್ ಹೇಳಿದರು. ಅವರು ಯುವವಾಹಿನಿ ಬಂಟ್ವಾಳ ಘಟಕದ 2025-26 ನೇ ಸಾಲಿನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಾರಾಯಣ ಗುರುಗಳು ಬಿಲ್ಲವ ಸಮಾಜಕ್ಕೆ ಸೀಮಿತ ಅಲ್ಲ. ಅವರ ಎಲ್ಲಾ ಸಮಾಜಕ್ಕೂ, ಎಲ್ಲಾ ಕಾಲಕ್ಕೂ ಸಲ್ಲುವ ಶ್ರೇಷ್ಠ ಗುರುಗಳು ಎಂದು ತಿಳಿಸಿದರು. ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಕೂಳೂರು ನೂತನ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಪ್ರತಿಜ್ಞಾವಿಧಿ ಭೋದಿಸಿದರು. ಅವರು ಮಾತನಾಡಿ ಬಂಟ್ವಾಳ ಯುವವಾಹಿನಿ ಘಟಕ ಅತ್ಯುತ್ತಮ ವಾಗಿ ಕಾರ್ಯಕ್ರಮವನ್ನು ಸಂಘಟಿಸಿ ಮಾದರಿಯಾಗಿದೆ ಎಂದು ತಿಳಿಸಿದರು. ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಯುವ ಸಂಚಯ ವಾರ್ಷಿಕ…

Read More

ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ಸಾಯಿ ಕಿಡ್ ಝೋನ್ ವಿದ್ಯಾಸಂಸ್ಥೆಯಲ್ಲಿ ಶನಿವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಿಂದ ಪ್ರಾಣಯಾಮ ಮತ್ತು ಸರಳ ಯೋಗಾಸನಗಳನ್ನು ಶಿಕ್ಷಕಿಯರಾದ ಚೈತ್ರ , ಪುಷ್ಪಲತಾ ,ಪೂರ್ಣಿಮಾ ಮತ್ತು ರಂಜಿನಿ ಯವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.

Read More

ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳದ ವರ್ಷದ ಕೊನೆಯ ಸಭೆ “ವಂದನಾರ್ಪಣೆ” ಕಾರ್ಯಕ್ರಮವು ಇತ್ತೀಚಿಗೆ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಕ್ಲಬ್ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ರವರು ವರ್ಷದ ಒಟ್ಟು ಚಟುವಟಿಕೆಗಳ ವಿವರಗಳನ್ನು ಸಭೆಯ ಮುಂದಿಟ್ಟು, ನಂತರ ವರ್ಷದ ಪ್ರತೀ ಕಾರ್ಯಕ್ರಮಗಳಿಗೆ ಸಹಕರಿಸಿದ, ಬೆಂಬಲಿಸಿದ ಎಲ್ಲಾ ಸದಸ್ಯರಿಗೆ ಕೃತಜ್ಞತಾಪೂರ್ವಕವಾಗಿ ಮನದಾಳದ ಮಾತುಗಳೊಂದಿಗೆ ಗೌರವಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ಥಾಪಕಾಧ್ಯಕ್ಷ ಲಯನ್ ಡಾ.ಬಿ. ವಸಂತ ಬಾಳಿಗಾ ಮತ್ತು ಪೂರ್ವ ರಾಜ್ಯಪಾಲಮತ್ತು ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಲಯನ್ ವಸಂತ ಕುಮಾರ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದು, ವರ್ಷದ ಚಟುವಟಿಕೆ ಮತ್ತು ಸದಸ್ಯರೆಲ್ಲರ ಬಗೆಗಿನ ಅಧ್ಯಕ್ಷರ ಮನದಾಳದ ಮಾತುಗಳನ್ನೊಳಗೊಂಡ “ಮೆಲುಕು” ಸಂಚಿಕೆ ಬಿಡುಗಡೆ ಗೊಳಿಸಿ, ವರ್ಷದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಲಯನ್ ದೇವಿಕಾ ದಾಮೋದರ್, ಕೋಶಾಧಿಕಾರಿ ಲಯನ್ ದೇವಪ್ಪ ಪೂಜಾರಿ, ಲಿಯೋ ಅಧ್ಯಕ್ಷೆ ಖುಷಿ ಟಿ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲೆಯ ನಾಯಕರುಗಳು, ಸಂಸ್ಥೆಯ ಪೂರ್ವಾಧ್ಯಕ್ಷರುಗಳು, ಕುಟುಂಬ ಸದಸ್ಯರು, ಸಂಸ್ಥೆಯ ಹಿತೈಷಿಗಳು…

Read More

ಬಂಟ್ವಾಳ: ಗಂಡ-ಹೆಂಡತಿಯ ಮೃತದೇಹ ಪತ್ತೆಯಾಗಿದ್ದು, ಗಂಡ ನೇಣು ಬಿಗಿದ ಸ್ಥಿತಿಯಲ್ಲಿದ್ದು, ತುಂಬು ಗರ್ಭಿಣಿಯಾಗಿದ್ದ ಹೆಂಡತಿಯ ಮೃತದೇಹ ಮಲಗುವ ಕೋಣೆಯಬೆಡ್ಡಿನ ಕೆಳಗೆ ಪತ್ತೆಯಾದ ಘಟನೆ ನಾವೂರು ಗ್ರಾಮದ ಬಡಗುಂಡಿ ಎಂಬಲ್ಲಿ ಜೂ.19ರ ಗುರುವಾರ ನಡೆದಿದೆ. ಸಜೀಪಮೂಡ ಗ್ರಾಮದ ಮಿತ್ತಮಜಲು ನಿವಾಸಿ ತಿಮ್ಮಪ್ಪ ಮೂಲ್ಯ ಹಾಗೂ ಅವರ ಪತ್ನಿ ಜಯಂತಿ ಮೃತಪಟ್ಟವರು. ತಿಮ್ಮಪ್ಪಮೂಲ್ಯ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿಯ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಕುತ್ತಿಗೆ ಭಾಗದಲ್ಲಿ ಗಾಯಗಳಿವೆಎನ್ನಲಾಗಿದೆ. ತಿಮ್ಮಪ್ಪ ಅವರ ಮನೆ ಮಿತ್ತಮಜಲಿನಲ್ಲಿದ್ದು, ಪತ್ನಿಯ ಮನೆ ಬಡಗುಂಡಿಯಲ್ಲಿದೆ. ಇವರಿಗೆ ಕಳೆದ 15 ವರ್ಷಗಳ ಹಿಂದೆಮದುವೆಯಾಗಿದ್ದು, ಈವರೆಗೆ ಮಕ್ಕಳಾಗಿರಲಿಲ್ಲ. ಪ್ರಸ್ತುತ ಪತ್ನಿ ಗರ್ಭಿಣಿಯಾಗಿದ್ದು, ಸೀಮಂತದ ದಿನಾಂಕವೂ ನಿಗದಿಯಾಗಿತ್ತು ಎನ್ನಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ಬಂಟ್ವಾಳ: ಬಿ.ಸಿ.ರೋಡಿನ ಪ್ರತಿಷ್ಠಿತ ಶ್ರೀ ಸಾಯಿ ಕಿಡ್ ಝೋನ್ ವಿದ್ಯಾಸಂಸ್ಥೆಗಳ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾ ಸಭೆ ಶನಿವಾರ ಶಾಲೆಯಲ್ಲಿ ನಡೆಯಿತು.ಲೈಫ್ ಸ್ಕಿಲ್ ಟ್ರೈನರ್ ಜೆಸ್ಟಾಲಕ್ಷ್ಮಿ ಇವರು ಪೋಷಕರಿಗೆ ಉಪಯುಕ್ತ ಮಾಹಿತಿ ಗಳನ್ನು ನೀಡಿದರು. ಬಳಿಕ 2024 ರ ಸಾಲಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಅತ್ತ್ಯುತ್ತಮ ಸೇವೆ ಸಲ್ಲಿಸಿ ಮುಖ್ಯಮಂತ್ರಿಯಿಂದ ಚಿನ್ನದ ಪದಕ ಪಡೆದ ಸಂಸ್ಥೆಯ ಪೋಷಕ ಸಿಟಿ ಕ್ರೈಂ ಬ್ರಾಂಚ್ ನ ಸಿಎಚ್ ಸಿ ಸುಧೀರ್ ಕುಮಾರ್ ಜಾರಂದಗುಡ್ಡೆ ಅವರನ್ನು ರಕ್ಷಕ ಶಿಕ್ಷಕ ಸಂಘದ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಐತಪ್ಪ ಪೂಜಾರಿ ,ಸಂಘದ ಅಧ್ಯಕ್ಷ ಜ್ಞಾನೇಶ್ ರಾವ್,ಉಪಾಧ್ಯಕ್ಷೆ ಸುಪ್ರೀತ, ಕೋಶಾಧ್ಯಕ್ಷ ದೇವೇಂದ್ರಪ್ಪ ,ಆಡಳಿತ ಮಂಡಳಿ ಯ ಸದಸ್ಯರಾದ ರಾಜೇಶ್ ಅಮೀನ್, ಆರತಿ ಅಮೀನ್, ಸಮಿತಿ ಸದಸ್ಯರಾದ ಸುಂದರ್ , ಮಹೇಶ್, ಶೇಖರ್ ಮತ್ತು ಶಾಲಾ ಶಿಕ್ಷಕ ವರ್ಗ ದವರು , ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕಿ ಪೂರ್ಣಿಮಾ ವರದಿ ವಾಚಿಸಿ, ಚೈತ್ರ ವಂದಿಸಿದರು. ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.…

Read More

ಬಂಟ್ವಾಳ : ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 17ನೇ ಅಳದಂಗಡಿ ಶಾಖೆ, ಅಳದಂಗಡಿಯ ಗುರುದೇವ ಸಂಕೀರ್ಣದಲ್ಲಿ ಭಾನುವಾರ ಶುಭಾರಂಭಗೊಂಡಿತು. ನೂತನ ಶಾಖೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿ ಮಾತನಾಡಿ ದುರ್ಬಲ ವರ್ಗದವರಿಗೆ ಆರ್ಥಿಕವಾಗಿ ಶಕ್ತಿ ನೀಡುವ ಉದ್ದೇಶದಿಂದ ಈ ಸಹಕಾರಿ ಸಂಘ ಆರಂಭವಾಗಿದ್ದು ಈ ಸಂಘದ ಎಲ್ಲಾ ಶಾಖೆಗಳನ್ನು ಉದ್ಘಾಟಿಸುವ ಅವಕಾಶ ಸಿಕ್ಕಿರುವುದು ನನ್ನ ಸುಯೋಗ ಎಂದು ತಿಳಿಸಿದರು. ಸಜೀಪಮೂಡ ಗ್ರಾಮದಲ್ಲಿ ಸಂಜೀವ ಪೂಜಾರಿ ನೇತೃತ್ವದಲ್ಲಿ ನಿರ್ಮಾಣಗೊಂಡ ಬ್ರಹ್ಮಶ್ರೀ ನಾರಾಯಣ ಗುರುಗಳ ಜ್ಞಾನ ಮಂದಿರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಿ ಆರ್ಥಿಕ ಸಹಕಾರ ನೀಡಿದ್ದರು ಎಂದು ನೆನೆಪಿಸಿಕೊಂಡ ರಮಾನಾಥ ರೈ, ಅಪನಂಬಿಕೆ ಅವಿಶ್ವಾಸದ ಈ ಕಾಲಘಟ್ಟದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶ ಸಮಾಜಕ್ಕೆ ಅಗತ್ಯವಾಗಿದೆ ಎಂದರು. ಭದ್ರತಾ ಕೋಶವನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಮೂರ್ತೆದಾರ ಕುಲ ಕಸುಬುದಾರರಿಗೆ ಆರ್ಥಿಕ ಚೈತನ್ಯ ನೀಡುವ ಕಾರ್ಯ ಈ ಸಂಘದ ಮೂಲಕ ಆಗಿದೆ. ಮಹಿಳೆಯರಿಗೆ ಉದ್ಯೋಗ ಕೊಡುವ…

Read More