ಕುರಿಯಾಳ: ಶ್ರೀ ಓಂಕಾರೇಶ್ವರಿ ದೇವಿ ಭಜನಾ ಮಂದಿರ, ದುರ್ಗಾನಗರ,ಅಂಗನವಾಡಿ ಕೇಂದ್ರ, ದುರ್ಗಾನಗರ ,ಓಂ ಶಕ್ತಿ ಹಾಗೂ ಶ್ರೀದೇವಿ ಸ್ತ್ರೀ ಶಕ್ತಿ ಸಂಘ, ದುರ್ಗಾನಗರ , ಶ್ರೀ ದುರ್ಗಾ ಫ್ರೆಂಡ್ಸ್ ದುರ್ಗಾನಗರ ,ಓಂಕಾರ ಸೇವಾ ಬಳಗ, ದುರ್ಗಾನಗರ ಇವುಗಳ ಸಂಯುಕ್ತ ಆಶ್ರಯದಲ್ಲಿ
ದುರ್ಗಾನಗರ ವಠಾರದಲ್ಲಿ 76ನೇ ವರ್ಷದ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸಲಾಯಿತು.
ಪಂಚಾಯತ್ ಸದಸ್ಯೆ ಯಶೋಧ ಧ್ವಜರೋಹಣ ಮಾಡಿ ಶುಭಾಶಂಸನೆಗೈದರು. ವೇದಿಕೆಯಲ್ಲಿ ಶ್ರೀ ಓಂಕಾರೇಶ್ವರಿ ದೇವಿ ಭಜನಾ ಮಂದಿರದ ಗೌರವಾಧ್ಯಕ್ಷ ತಿಮ್ಮಪ್ಪ ಆಚಾರಿ, ಓಂಕಾರೇಶ್ವರಿ ದೇವಿ ಭಜನಾ ಮಂದಿರದ ಅರ್ಚಕ ಹೊನ್ನಪ್ಪ ಪೂಜಾರಿ, ಧ್ವಜಸ್ಥಂಭದ ದಾನಿ ಶಂಕರ ಸುವರ್ಣ,ಓಂಕಾರೇಶ್ವರಿ ದೇವಿ ಭಜನಾ ಮಂದಿರದ ಉಪಾಧ್ಯಾಕ್ಷ ನಾಗೇಶ್,
ಬಾಲವಿಕಾಸ ಸಮಿತಿ ಅಧ್ಯಕ್ಷೆ ಪ್ರೇಮ, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಸೀತಾ, ಶ್ರೀ ದುರ್ಗಾ ಫ್ರೆಂಡ್ ಅಧ್ಯಕ್ಷ ಹರೀಶ್ ಬಂಜನ್,ಓಂಕಾರ ಸೇವಾ ಬಳಗದ ಅಧ್ಯಕ್ಷ ಸಂತೋಷ್ ಸುವರ್ಣ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ವಸಂತಿ ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿದರು.