Author: admin
ಇದೊಂದು ತಮಾಷೆಯೊ ಅಥವಾ ನನ್ನ ಪಾಲಿನ ದುರಂತವೋ ಗೊತ್ತಿಲ್ಲ; ಆದರೆ ಹೇಳಲೇಬೇಕಾಗಿದೆ. ನನ್ನ ಕೈ ಕಾಲುಗಳಿಗೆ ಲಾಠಿ ಪ್ರಹಾರ ಮಾಡಿ ರಕ್ತ ಚಿಮ್ಮಿಸಿದ್ದ ಕಾರಂತರ ಮಾತೃಶ್ರೀ ಅವರು ತೀರಿಕೊಂಡು ಆಗ ಹೆಚ್ಚು ಸಮಯವಾಗಿರಲಿಲ್ಲ. ನನಗೆ ಇಂದೂ ಕೂಡಾ ಸರಿಯಾಗಿ ನೆನಪಿದೆ, ಅವರ ಮಾತೃಶ್ರೀ ಅವರು ತೀರಿಕೊಂಡ ಹನ್ನೆರಡನೇ ದಿವಸ ನನಗೆ ಪವಮಾನ ಸೂಕ್ತ ಪಾಠ ಮಾಡಿದ್ದ ಕೃಷಿ ಕೆದಿಲಾಯರೆಂದೇ ಪ್ರಸಿದ್ಧರಾಗಿದ್ದ ನಾರಾಯಣ ಕೆದಿಲಾಯರೊಂದಿಗೆ ಕಾರಂತರ ಮನೆಗೆ ಹೋಗಿದ್ದೆ ಮಾತ್ರವಲ್ಲ, ಸ್ವರ್ಗ ಪ್ರಾಪ್ತಿಗಾಗಿ ಮಾಡಿದ್ದ ಪವಮಾನ ಹೋಮದಲ್ಲಿ ನಾನೂ ಸಕ್ರಿಯವಾಗಿ ಭಾಗವಹಿದ್ದೆ; ಆದರೆ ನನ್ನ ದುರಂತ ನೋಡಿ, ಅದೇ ಕಾರಂತರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಲಾಠಿ ಚಾರ್ಜ್ ಮಾಡುವ ಮೂಲಕ ನರಕ ಯಾತನೆ ಅನುಭವಿಸುವಂತೆ ಮಾಡಿದ್ದರು.ಪಾಪ ಅವರಾದರೋ ಸರಕಾರದ ಕಾನೂನಿಂತೆ ವರ್ತಿಸಿದ್ದರು. ಆದರೆ ಕಾರಂತರ ಮಾತೃಶ್ರೀಯವರಿಗೆ ಸ್ವರ್ಗಕ್ಕಾಗಿ ಪ್ರಾರ್ಥನೆ, ಪ್ರಾರ್ಥಿಸಿದ ನನಗಾದರೋ ನರಕ! ಎಂತಹ ವೈರುಧ್ಯ!! ಹೊಡೆತದ ನೋವು ವಾಸಿಯಾದ ನಂತರ ಮತ್ತೆ ಸತ್ಯಾಗ್ರಹಕ್ಕೆ ಧುಮುಕಿದೆವು. ಅದೇ ಉಪ್ಪಿನಂಗಡಿಯಲ್ಲಿ ನಮ್ಮ ಸಾರ್ವಜನಿಕ ಪ್ರತಿಭಟನಾ…
ಬಂಟ್ವಾಳ: ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು ,ಪ್ರಾಥಮಿಕ ಮತ್ತು ಪ್ರೌಢಶಾಲೆ ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಇಂದು (04.07.2025) ಬಂಟ್ವಾಳ ತಹಶಿಲ್ದಾರ್ ರಜೆ ಘೋಷಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗೆ ನಮ್ಮ ಸುತ್ತಮುತ್ತಲೇ ಹಲವಾರು ಮಂದಿ ಪ್ರತಿಭಟನಕಾರರ ಬಂಧನಕ್ಕೆ ವ್ಯೂಹ ರಚಿಸಲಾಗಿದೆ ಅನ್ನುವ ವರ್ತಮಾನಗಳು ಅಥವಾ ಗಾಳಿ ಸುದ್ದಿಗಳು ಅಲ್ಲಲ್ಲಿ ಹರಡುತ್ತಿದ್ದವು. ಈಗ ಪ್ರತಿಯೊಬ್ಬ ಪ್ರತಿಭಟನಾಕಾರರು ಕೂಡಾ ತಮ್ಮ ತಮ್ಮ ಹೆಗಲು ನೋಡಲು ಆರಂಭಿಸಿದರು, ಯಾರ ಬಂಧನ ಯಾವಾಗ ಎಲ್ಲಿ ಆಗುತ್ತದೆ ಅನ್ನುವ ಕುತೂಹಲವೋ ಅಥವಾ ಭಯ ಮಿಶ್ರಿತ ವಾತಾವರಣವೋ ಅಂತೂ ಎಲ್ಲಾ ಕಡೆಗಳಲ್ಲೂ ಪಿಸುಗುಟ್ಟುವಿಕೆ ಆರಂಭವಾಯಿತು. ಆದರೆ ಈ ಹೆಚ್ಚಿನ ಕಾಂಗ್ರೆಸಿರು ಹಾಗೂ ಕಮ್ಯುನಿಸ್ಟಿನವರು ಇದ್ದಾರಲ್ಲ ಅವರೆಲ್ಲ ಎದೆಯುಬ್ಬಿ ಹೆಮ್ಮೆಯಿಂದ ಠಳಾಯಿಸುತ್ತಿದ್ದರು. ತಮಗಾಗದವರು ಯಾರಾದರೂ ಇದ್ದರೆ ಒಂದು ತಳ್ಳಿ ಅರ್ಜಿ ಹಾಕಿ ಏನಾದರೂ ಮಾಡಿ ಬಂಧನ ಮಾಡಿಸಬಹುದಾಗಿತ್ತು. ಈಗಂತೂ ಎಲ್ಲರನ್ನೂ ಎಲ್ಲರೂ ಸಂಶಯದಿಂದಲೇ ನೋಡುವ ಪ್ರವೃತ್ತಿ ಆರಂಭವಾಯಿತು. ಈಗ ಕೇಂದ್ರ ಸರಕಾರ ಪ್ರತಿಭಟನಾಕಾರರ ಮೇಲೆ DIR(defence Indian rule)ನ್ನು ಜಾರಿ ಮಾಡಿ, ಆ ಕಾನೂನಿನ ಮೂಲಕ ಬಂಧನ ಸತ್ರ ಆರಂಭವಾಯಿತು. ಬಂಧನದಿಂದ ಯಾವಾಗ ಬಿಡುಗಡೆ ಹೊಂದುತ್ತಾರೆ ಅನ್ನುವ ಖಾತರಿ ಇಲ್ಲಿ ಇಲ್ಲ; ಆದರೆ ಎಲ್ಲಿ ಇಟ್ಟಿದ್ದಾರೆ ಹಾಗೂ ಬಂಧನದ ಉದ್ದೇಶ…
ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್ ಓ ಕೆಲಸದಿಂದ ಕೈ ಬಿಡಿ-: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘ ಆಗ್ರಹ
ಬಂಟ್ವಾಳ: ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್‌ಓ ಕೆಲಸದಿಂದ ಕೈಬಿಡುವಂತೆ ಬಂಟ್ವಾಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘ ಆಗ್ರಹಿಸಿದೆ. ಬುಧವಾರ ಬಿ.ಸಿ.ರೋಡಿನಲ್ಲಿ ಸಂಘದ ಅಧ್ಯಕ್ಷೆ ವಿಜಯವಾಣಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಬಂಟ್ವಾಳ ತಾಲೂಕಿನಲ್ಲಿ ಅನೇಕ ಮಂದಿ ಅಂಗನವಾಡಿ ಕಾಯಕರ್ತೆಯರು ಬಿಎಲ್‌ಓಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಉಳಿದ ಕಾರ್ಯಕರ್ತೆಯರಿಗೂ ಅವರ ಗಮನಕ್ಕೆ ಬಾರದೆ ಬಿಎಲ್‌ಓಗಳಾಗಿ ನೇಮಕ ಮಾಡಲಾಗಿದೆ. ಸಿ ದರ್ಜೆ ನೌಕರರನ್ನು ಬಿಎಲ್‌ಓಗಳಾಗಿ ನೇಮಿಸಬೇಕೆಂದು ಚುನಾವಣ ಆಯೋಗದಿಂದ ಸೂಚನೆ ಬಂದಿದ್ದು ಈ ಕಾರಣಕ್ಕಾಗಿ ಆಶಾ ಕಾರ್ಯಕರ್ತೆಯರು ಹಾಗೂ ಪಂಚಾಯತಿ ಸಿಬ್ಬಂದಿಗಳನ್ನು ಬಿಎಲ್‌ಓ ಕೆಲಸದಿಂದ ಮುಕ್ತಗೊಳಿಸಲಾಗಿದೆ. ಆದರೆ ಗೌರವ ಧನ ಪಡೆಯುವ ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್‌ಓ ಕೆಲಸದಿಂದ ಕೈ ಬಿಡದಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಅಂಗನವಾಡಿ ಕಾರ್ಯಕರ್ತೆಯರನ್ನು ಸಿ ದರ್ಜೆ ನೌಕರರೆಂದು ಪರಿಗಣಿಸಿದರೆ ಬಿಎಲ್‌ಓ ಕೆಲಸ ಮಾಡುವುತ್ತೇವೆ ಎಂದ ಅವರು ಈಗಾಗಲೇ ಪೋಷಣ್ ಟ್ರಾಕರ್‌ನಲ್ಲಿ ತುಂಬಾ ಕೆಲಸದ ಒತ್ತಡ ಇದ್ದು ಬೇರೆ ಇಲಾಖೆ ಕೆಲಸ ಮಾಡಲು ಕಷ್ಟ ಸಾಧ್ಯವಾಗಿದೆ. ಆದ್ದರಿಂದ ಕೂಡಲೇ ಬಿಎಲ್‌ಓ ಕೆಲಸದಿಂದ ಅಂಗನವಾಡಿ…
ಹೀಗೆ ಪೊಲೀಸ್ ಸ್ಟೇಷನಿನಲ್ಲಿ ಕೂತವರು ಮಧ್ಯಾಹ್ನವೋ ಸಂಜೆಯೋ ಹಿಂತಿರುಗಿ ಬರುತ್ತಿದ್ದೆವು. ಒಂದೆರಡು ಸಲ ಪೋಲೀಸ್ ಸ್ಟೇಷನ್ನಿನಲ್ಲೇ ಊಟವೂ ಸಿಕ್ಕಿತ್ತು. ಮುಂದಕ್ಕೆ ಅನುಕಂಪ ಪಡೆಯುವುದಕ್ಕಾಗಿ ಮಹಿಳೆಯರನ್ನೂ ಜತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದೆವು. ಪೊಲೀಸರಿಗೆ ಇಕ್ಕಟ್ಟಿನ ಸ್ಥಿತಿ; ಇವರನ್ನು ಬಂಧಿಸುವುದಾದರೂ ಹೇಗೆ ಅನ್ನುವುದೇ ಸಮಸ್ಯೆ. ನೇರವಾಗಿ ಸ್ಟೇಷನ್ನಿಗೆ ತಂದರೂ ಅವರನ್ನು ಇಟ್ಟುಕೊಳ್ಳುವ ಹಾಗೂ ಇಲ್ಲ, ಬಿಡುವ ಹಾಗೂ ಇಲ್ಲ. ಮುಂದಿನ ದಿನಗಳಲ್ಲಿ ಏನೇನೋ ಅವರನ್ನು ಪುಸಲಾಯಿಸಿ ಅವರ ಭಾಗವಹಿಸುವ ಸಂಖ್ಯೆಯನ್ನು ಕಡಿಮೆ ಮಾಡಿದರು. ಮುಂದಿನ ದಿನಗಳಲ್ಲಿ ಮಂದುವರಿಯುತ್ತಾ ಇದ್ದಂತೆ, ನಮ್ಮನ್ನೆಲ್ಲಾ ಅಲ್ಲೇ ಇರುವ ಸೆಲ್ಲಿನೊಳಗೆ ತಳ್ಳಿ, ರಾತ್ರೆ ಒಂದು ಗಂಟೆಗೆಲ್ಲ ಬಿಡುವುದರ ಮೂಲಕ ಶಿಕ್ಷೆಯ ರುಚಿ ಹತ್ತಿಸಲು ಆರಂಭಿಸಿದರು. ಸಮಸ್ಯೆ ಎಂದರೆ ಆ ಮಧ್ಯರಾತ್ರಿಯಲ್ಲಿ ವಾಹನಗಳು ಸಿಗುವುದಾದರೂ ಹೇಗೆ ನೀವೇ ಹೇಳಿ! ಆಗ ಸುಬ್ರಹ್ಮಣ್ಯದ ಕಡೆಯಿಂದ ಬಿಳಿನೆಲೆ, ನೆಟ್ಟಣ, ಕೊಂಬಾರು ಮೊದಲಾದ ಕಡೆಗಳಿಂದ ರಾತ್ರೆ ಹೊತ್ತಲ್ಲಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದರು. ಅದು ಅಧಿಕೃತವೋ ಅನಧಿಕರತವೋ ಗೊತ್ತಿಲ್ಲ, ಲಾರಿಗಳನ್ನು ನಿಲ್ಲಿಸಿಯೋ ಮಾರ್ಗಕ್ಕೆ ಅಡ್ಡ ನಿಂತೋ ಅಂತೂ ಲಾರಿ…
ಸರಕಾರಿ ಪದವಿಪೂರ್ವ ಕಾಲೇಜು ಸಜೀಪಮೂಡ ಇದರ ಪ್ರೌಢಶಾಲಾ ವಿಭಾಗದ 2025-26 ನೇ ಸಾಲಿನ ಶಾಲಾ ಸಂಸತ್ತು ಹಾಗೂ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಶಾಲೆಯ ಉಪಪ್ರಾಂಶುಪಾಲೆ ಜ್ಯೋತಿ ಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜ್ಯೋತಿಯು ಕತ್ತಲೆಯನ್ನು ಹೊಡೆದೋಡಿಸಿ ಎಲ್ಲೆಡೆ ಬೆಳಕನ್ನು ಪಸರಿಸುವಂತೆ ನಮ್ಮ ಶಾಲೆಯ ಸಂಘಗಳು ವಿದ್ಯಾರ್ಥಿಗಳಲ್ಲಿ ಜ್ಞಾನಜ್ಯೋತಿಯನ್ನು ಬೆಳಗುವಂತಾಗಲಿ ಎಂದು ಆಶಿಸಿದರು. ಶಾಲೆಯ ಹಿರಿ ವಿದ್ಯಾರ್ಥಿ ಸಂದೀಪ್ ಸಾಲ್ಯಾನ್ ವಿವಿಧ ಸಂಘಗಳನ್ನು ಉದ್ಘಾಟಿಸಿದರು. ವಿಜ್ಞಾನ ಸಹಶಿಕ್ಷಕರಾದ ವೆಂಕಟರಮಣ ಆಚಾರ್ಯ ಪ್ರಾಸ್ತವಿಕವಾಗಿ ಮಾತನಾಡಿ ಸಂಘಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಮಾನವೀಯ ಮೌಲ್ಯಗಳಾದ ಶಿಸ್ತು ಸಂಯಮ ನಾಯಕತ್ವ ಸೃಜನಶೀಲತೆ ಪ್ರಾಯೋಗಿಕ ಮನೋಭಾವನೆಗಳು ಮತ್ತು ತಾರ್ಕಿಕ ಚಿಂತನೆಗಳು ವಿದ್ಯಾರ್ಥಿಗಳಲ್ಲಿ ಬೆಳೆದುಬಂದು ಪರಿಪೂರ್ಣವಾದ ವ್ಯಕ್ತಿತ್ವವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು. ಸಹ ಶಿಕ್ಷಕಿ ಹೇಮಾವತಿ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು. ಸಹ ಶಿಕ್ಷಕರಾದ ಸುಲೋಚನಾ ನಿರೂಪಿಸಿ, ಗಣೇಶ್ ವಂದಿಸಿದರು. .
ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳದ 2025-26ನೇ ಸಾಲಿನ ಶಾಶ್ವತ ಯೋಜನೆಯಾಗಿ ಬಿ.ಸಿ.ರೋಡಿನ ಸೋಮಾಯಜಿ ಹೌಸ್ ಕಟ್ಟಡದ ಬಳಿ ನಿರ್ಮಾಣಗೊಂಡ ಲಯನ್ಸ್ ಆಶ್ರಯ ಪ್ರಯಾಣಿಕರ ತಂಗುದಾಣವನ್ನು ಮಾಜಿ ಸಚಿವ ಬಿ. ರಮಾನಾಥ ರೈ ಭಾನುವಾರ ಉದ್ಘಾಟಿಸಿದರು. ಅವರು ಮಾತನಾಡಿ ಈ ಭಾಗದ ಜನರ ಬೇಡಿಕೆಯ ಅನುಗುಣವಾಗಿ ಇಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣಗೊಂಡಿದೆ. ನಾಗರಿಕ ಸೇವಾ ಸಮಿತಿಯ ಮನವಿಯಂತೆ ಕೆಎಸ್‌ಆರ್‌ಸಿಯ ಮೂಲಕ ಇಲ್ಲಿ ಬಸ್ಸು ನಿಲುಗಡೆಗೆ ಅವಕಾಶ ದೊರಕಿಸಿಕೊಟ್ಟಿದ್ದು ಇದೀಗ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ ಲಯನ್ಸ್ ಕ್ಲಬ್ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಇಸಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಬಸ್ಸು ನಿಲುಗಡೆಗೆ ಅನುಕೂಲವಾಗುವಂತೆ ಡಾಮಾರೀಕರಣ ಹಾಗೂ ಹೈಮಾಸ್ಕ್ ದೀಪದ ಅಳವಡಿಕೆಯನ್ನು ಸಂಬಂಧಪಟ್ಟವರು ಮಾಡಲಿದ್ದಾರೆ ಎಂದು ತಿಳಿಸಿದರು. ಲಯನ್ಸ್ ಕ್ಲಬ್ ಬಂಟ್ವಾಳದ ಸ್ಥಾಪಕಾಧ್ಯಕ್ಷ ಡಾ. ವಸಂತ ಬಾಳಿಗ ವಿದ್ಯುತ್ ವ್ಯವಸ್ಥೆಯನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಪುರಸಭಾಧ್ಯಕ್ಷ ವಾಸು ಪೂಜಾರಿ, ಬೂಡ ಅಧ್ಯಕ್ಷ ಬೇಬಿ ಕುಂದರ್ ಶುಭ ಹಾರೈಸಿದರು. ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಸದಸ್ಯರಾದ…
ಬಂಟ್ವಾಳ: ಸ್ವಾತಂತ್ರ್ಯ ಯೋಧ ಡಾ. ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನ ಬಂಟ್ವಾಳ ಇದರ ವತಿಯಿಂದ ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ಪ್ರಾಯೋಜಕತ್ವದಲ್ಲಿ ಮುದ್ರಣಗೊಂಡ ಡಾ. ಅಮ್ಮೆಂಬಳ ಬಾಳಪ್ಪ ಜನ್ಮ ಶತಾಬ್ದಿ ಸಂಚಿಕೆ ಬಾಳಪಥ ಪುಸ್ತಕ ಬಿಡುಗಡೆ ಹಾಗೂ ಸಂಘದ ಮೂರು ಶಾಖೆಯ ಅಮೂಲ್ಯ ಸ್ವಸಹಾಯ ಸಂಘಗಳ ಸದಸ್ಯರ ಸಮ್ಮಿಲನ ಕಾರ್ಯಕ್ರಮ ಬಂಟ್ವಾಳ ಬೈಪಾಸ್ ಜಂಕ್ಷನ್‌ನಲ್ಲಿರುವ ಸಮಾಜ ಸೇವಾ ಸಹಕಾರಿ ಭವನದ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆಯಿತು. ಬಾಳಪಥ ಸ್ಮರಣ ಸಂಚಿಕೆಯನ್ನು ಬೆಂಗಳೂರಿನ ಸಹಕಾರಿ ಧುರೀಣ ಮೋಹನದೇವ ಆಳ್ವ ಬಿಡುಗಡೆಗೊಳಿಸಿ ಮಾತನಾಡಿ ಮೃದು ಸ್ವಭಾವದವರಾದ ತುಳುವರು ಮಾತೃ ಭಾಷೆಯನ್ನು ಪ್ರೀತಿಸುವ ಜೊತೆಗೆ ಎಲ್ಲಾ ಭಾಷೆಯನ್ನು ಗೌರವಿಸುವ ಮನೋಸ್ಥಿತಿಯನ್ನು ಹೊಂದಿದ್ದಾರೆ. ಸತ್ಯ ನಿಷ್ಠರಾಗಿದ್ದ ಅಮ್ಮೆಂಬಳ ಬಾಳಪ್ಪ ಅವರ ಸ್ಮರಣೆಯು ತುಳುವರ ಹೆಮ್ಮೆಯಾಗಿದ್ದು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಜನಸ್ನೇಹಿಗಳಾಗಬೇಕು ಎಂದರು. ಪ್ರತಿಷ್ಠಾನದ ಅಧ್ಯಕ್ಷ ಅಮ್ಮೆಂಬಳ ಆನಂದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಬಿ. ರಮಾನಾಥ ರೈ, ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ…
ಮುಂದಕ್ಕೆ ಕರಪತ್ರ ಹಂಚುವುದು, ಗೋಡೆ ಬರಹ ಇತ್ಯಾದಿಗಳ ಮೂಲಕ ಜನ ಜಾಗೃತಿಗೆ ಮುಂದಾದೆವು. ಆ ಸಂದರ್ಭದಲ್ಲಿ ಭಿತ್ತಿಪತ್ರಗಳ ಬಳಕೆ ಕಡಿಮೆಯಿತ್ತು. ಆದರೆ ನಾನು ಅದನ್ನೂ ಬಳಸಿಕೊಂಡೆ; ಹೇಗಂದ್ರೆ, ಆಗ ಈಗಿನ ಹಾಗೆ ಕ್ಸೆರಾಕ್ಸ್ ಎಲ್ಲ ಇರಲಿಲ್ಲ, ಏನಿದ್ದರೂ ಸೈಕ್ಲೋಸ್ಟೈಲ್ ಅಥವಾ ಕಾರ್ಬನ್ ಇಟ್ಟು ಬರೆಯುವುದು. ಟೈಪ್ ಕ್ಲಾಸಿನಲ್ಲಿ ಉಪಯೋಗಿಸಿ ಬಿಸಾಡಿದ ಕಾರ್ಬನ್ ಪೇಪರನ್ನು ಖಾಲಿ ಪೇಪರಿನ ಅಡಿಯಲ್ಲಿಟ್ಟು ಪ್ರತಿ ತೆಗೆಯುವುದು; ಒಮ್ಮೆಗೆ ೨-೩ ಪ್ರತಿ ತೆಗೆಯುತ್ತಿದ್ದೆ. ಹೀಗೆ ದಿವಸಕ್ಕೆ ಏಳೆಂಟು ಪ್ರತಿಗಳನ್ನು ಮಾಡಿ, ಮನೆ ಪಕ್ಕದ ರೇಶನ್ ಅಂಗಡಿಗೆ ಹೋಗುವಾಗ ಯಾರ ಕಣ್ಣಿಗೂ ಕಾಣದಂತೆ ಅಡಗಿಕೂತು, ಗೋಂಕಿನ ಮರದ ಗೋಂದಿನಲ್ಲಿ(ಗೇರು ಮರದ ಅಂಟು) ಅಲ್ಲಲ್ಲಿ ಅಂಟಿಸುತ್ತಿದ್ದೆ. ಪ್ರತಿಭಟನಾರ್ಥವಾಗಿ ಉಪಯೋಗಿಸುವ ಯಾವುದೇ ಸಾಮಗ್ರಿಗಳನ್ನು ನಾವು ಮನೆಯಲ್ಲಿ ಇಟ್ಟುಕೊಳ್ಳುವುದೂ ಆಗ ಕಷ್ಟವೇ ಆಗಿತ್ತು. ಸಂಶಯ ಇದ್ದವರ ಮೇಲೆ ಪೊಲೀಸರ ಒಂದು ದೃಷ್ಟಿ ಯಾವತ್ತೂ ಇರುತ್ತಿತ್ತು, ಸರಕಾರದ ವಿರುದ್ಧ ಅಲ್ವೆ ನಮ್ಮ ಪ್ರತಿಭಟನೆ? ಸಾಮಗ್ರಿಗಳು ದೊರೆತರೆ ಶಿಸ್ತಿನ ಕ್ರಮ ಖಂಡಿತ. ದುರವಸ್ಥೆ ನೋಡಿ! ಈ ತಳ್ಳಿ…
ಅದಾಗಲೇ ದೇಶಾದ್ಯಂತ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟಗಳು ಬೇರೆ ಬೇರೆ ರೂಪದಲ್ಲಿ ಆರಂಭವಾಗಿತ್ತು. ಸಂಬಂಧಿತ ಸರಕಾರಿ ಕಛೇರಿಗಳ ಮುಂಭಾಗದಲ್ಲಿ ಸತ್ಯಾಗ್ರಹ, ಮೆರವಣಿಗೆ, ಸಾರ್ವಜನಿಕ ಭಾಷಣ, ಕರಪತ್ರ ವಿತರಣೆ ಇತ್ಯಾದಿಗಳು ಭರದಿಂದ ಸಾಗುತ್ತಿತ್ತು. ಅಲ್ಲಲ್ಲಿ ಪೊಲೀಸರಿಂದ ಬಂಧನಗಳೂ ನಡೆಯುತ್ತಿದ್ದವು. ನನಗಾಗ ಭಾಷಣ ಮಾಡುವ ಹುಚ್ಚು, ಮೆರವಣಿಗೆಯಲ್ಲಿ ಹೋಗಬೇಕೆನ್ನುವ ಕೆಚ್ಚು. ರಾಸ್ವ ಸಂಘದ ಕೆಲಮಂದಿ ಕಾರ್ಯಕರ್ತರಲ್ಲಿ ಕೆಲವರು ಈಗಾಗಲೇ ಪ್ರತಿಭಟನಾ ಸಭೆಗಳಲ್ಲಿ ಭಾಗವಹಿಸುತ್ತಾ ಇದ್ದರು. ನಾನಾಗ ಶಾರ್ಟ್ ಹ್ಯಾಂಡ್ ಹಾಗೂ ಕನ್ನಡ ಟೈಪ್ ರೈಟಿಂಗ್ ಸ್ಕೂಲಿಗೂ ಹೋಗುತ್ತಿದ್ದೆ, ಬೆಳಗ್ಗೆ ಹತ್ತು ಘಂಟೆಗೆ ತರಗತಿ ಆರಂಭವಾದರೆ ಹನ್ನೊಂದು ಗಂಟೆಗೆಲ್ಲ ಮುಗಿಯುತ್ತಿತ್ತು. ಮನೆ ದೇವರಿಗೆ ಹಾಗೂ ಇತರ ಒಂದೆರಡು ಮನೆಗಳಲ್ಲಿ ಪೂಜೆಯನ್ನು ಪೂರೈಸಿ ಮನೆಯಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿರುವ ಉಪ್ಪಿನಂಗಡಿಗೆ ನಡೆದುಕೊಂಡು ಹೋಗಬೇಕಾಗಿತ್ತು. ಬಸ್ಸಿನಲ್ಲಿ ಹೋಗುವಷ್ಟು ಅಂದು ಪರಿಸ್ಥಿತಿ ಚೆನ್ನಾಗಿರಲಿಲ್ಲ. ದಿನನಿತ್ಯ ನನ್ನ ಪಾದ ಯಾತ್ರೆಯನ್ನು ಅರಿತುಕೊಂಡಿದ್ದ ಕೆಲಮಂದಿ ಪರಿಚಯವಿದ್ದ ಬಾಡಿಗೆ ಕಾರಿನವರು ಕೆಲವೊಂದು ಸಲ ನನ್ನನ್ನು ಕಾರಿಗೆ ಹತ್ತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು, ನನಗಾದರೋ ಸ್ವಾಭಿಮಾನದ ಪ್ರಶ್ನೆ.…








