ಬಂಟ್ವಾಳ: ಮನೆಮಂದಿಯ ಮುಂದೆಯೇ ಯುವಕನೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಜೀಪಮೂಡ ಗ್ರಾಮದ ಮಿತ್ತಮಜಲು ಎಂಬಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಜನಾರ್ದನ ಆಚಾರ್ಯ ಶಶಿಕಲಾ ಆಚಾರ್ಯ ದಂಪತಿ ಪುತ್ರ ಸಾಗರ್ ಆಚಾರ್ಯ ಆತ್ಮಹತ್ಯೆ ಮಾಡಿಕೊಂಡ ಯುವಕ.
Advertisement
ಕಳೆದ ಹಲವು ಸಮಯಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸಾಗರ್ ಗೆ ಇತ್ತಿಚೆಗೆ ಆತನ ತಂದೆಯೇ ಒಂದು ಕಿಡ್ನಿಯನ್ನು ದಾನ ಮಾಡಿದ್ದು ಶಸ್ತ್ರ ಚಿಕಿತ್ಸೆಯ ಬಳಿಕ ಆರೋಗ್ಯವಾಗಿದ್ದ. ಸೋಮವಾರ ಬೆಳಿಗ್ಗೆ ಆತನ ಸಹೋದರ ಕೆಲಸಕ್ಕೆ ತೆರಳಿದ ಬಳಿಕ 8 ಗಂಟೆಯ ವೇಳೆಗೆ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಂದೆ ತಾಯಿಯ ಮನೆಯಲ್ಲಿರುವಾಗಲೇ ಘಟನೆ ನಡೆದಿದ್ದು ಅವರ ಆಕ್ರಂದನ ಮುಗಿಲು ಮುಟ್ಟಿದೆ. ಸಾಗರ್ ಅತ್ಯುತ್ತಮ ಚಿತ್ರಕಲಾವಿದನಾಗಿ ಗುರುತಿಸಿಕೊಂಡಿದ್ದ.
Advertisement