Author: admin

ಬಂಟ್ವಾಳ: ಲೋಕ ಅದಾಲತ್ ಮೂಲಕ ಬಂಟ್ವಾಳ ಪುರಸಭೆಗೆ 48,28,263ರೂಪಾಯಿ ಕಟ್ಟಡ ತೆರಿಗೆ ವಸೂಲಿಯಾಗಿದೆ. ಬಂಟ್ವಾಳ ಸಿವಿಲ್ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಭಾಗ್ಯಮ್ಮ, ಪ್ರಧಾನ ಸಿವಿಲ್ ನ್ಯಾಯಧೀಶರಾದ ಚಂದ್ರಶೇಖರ ತಳವಾರ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕೃಷ್ಣಮೂರ್ತಿ ಎನ್. ಅವರ ಉಪಸ್ಥಿತಿಯಲ್ಲಿ ನಡೆದ ಲೋಕ ಅದಾಲತ್‌ನಲ್ಲಿ 972 ಪ್ರಕರಣಗಳು ಇತ್ಯರ್ಥವಾಗಿ 48.28 ಲಕ್ಷ ರೂಪಾಯಿ ಕಟ್ಟಡ ತೆರಿಗೆ ವಸೂಲಿಯಾಗಿದೆ. ಈ ಸಂದರ್ಭ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Read More

ಬಂಟ್ವಾಳ: ಜಿಲ್ಲೆಯ ಕಂಬಳ ಇತಿಹಾಸದಲ್ಲಿಯೇ ಪ್ರಥಮ ಎನ್ನುವಂತೆ ಒಂದೇ ದಿನ, ಒಂದೇ ಗ್ರಾಮದಲ್ಲಿ, ಒಂದೇ ಹೆಸರಿನ ಎರಡು ಕಂಬಳ ಕೂಟಗಳು ಶನಿವಾರ ನಡೆದು ಕಂಬಳ ಕೋಣಗಳ ಯಜಮಾನರು ಹಾಗೂ ಕಂಬಳಾಭಿಮಾನಿಗಳಲ್ಲಿ ಅಚ್ಚರಿ ಹಾಗೂ ಗೊಂದಲ ಮೂಡಿಸಿದೆ.ಕಂಬಳ ಇತಿಹಾಸದಲ್ಲಿ ತನ್ನದೇ ಆದ ಪರಂಪರೆಯನ್ನು ಹೊಂದಿರುವ ಹೊಕ್ಕಾಡಿ ಗೋಳಿ ವೀರ ವಿಕ್ರಮ ಕಂಬಳವು ಈ ಬಾರಿ ಮಹಿಷಮರ್ಧಿನಿ ಕಂಬಳ ಸಮಿತಿ ಹಾಗೂ ವೀರ ವಿಕ್ರಮ ಕಂಬಳ ಸಮಿತಿ ಎನ್ನುವ ಎರಡು ಪ್ರತ್ಯೇಕ ಸಮಿತಿಗಳ ಮೂಲಕ ಪ್ರತ್ಯೇಕ ಕಡೆಗಳಲ್ಲಿ ಆಯೋಜನೆಗೊಂಡಿತು. ಇದು ಜಿಲ್ಲಾ ಕಂಬಳ ಸಮಿತಿಯ ಪ್ರಮುಖರಿಗೆ ಉಭಯ ಸಂಕಟವನ್ನು ನೀಡಿದರೆ ಕಂಬಳಕ್ಕೆ ಬರುವ ಕೋಣಗಳ ಯಜಮಾನರು ಕಂಬಳಾಭಿಮಾನಿಗಳು ಗೊಂದಲಕ್ಕೀಡು ಮಾಡಿ ಎರಡು ಕಂಬಳಗಳಲ್ಲಿ ಕೋಣಗಳ ಭಾಗವಹಿಸುವಿಕೆ ಕಡಿಮೆಯಾಗಿತ್ತು. ಮಹಿಷಮರ್ಧಿನಿ ಕಂಬಳ ಸಮಿತಿ ಮೂಲಕ ನಡೆಯುವ ಕಂಬಳಕ್ಕೆ ತಡೆಯಾಜ್ಞೆಕೋರಿ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಉಚ್ಛನಾಯ್ಯಾಲಯ ತಡೆಹಿಡಿದ ಕಾರಣ ಯಾವುದೇ ಅಡ್ಡಿ ಇಲ್ಲದೆ ಎರಡೂ ಕಡೆ ಕಂಬಳ ನಡೆದಿದೆ. .॒ರಶ್ಮಿತ್ ಶೆಟ್ಟಿ ನೇತೃತ್ವದಲ್ಲಿ ಹೊಕ್ಕಾಡಿಗೋಳಿಯಲ್ಲಿ ನಡೆದ ಕಂಬಳ:ಬಂಟ್ವಾಳ…

Read More

ಬಂಟ್ವಾಳ: ಬೊಳ್ಳಾಯಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ ಸ್ಥಳಾಂತರಗೊಂಡ ಮಾರ್ನಬೈಲು ಶಾಖೆಯ ಶುಭಾರಂಭ ಕಾರ್ಯಕ್ರಮ ಮಾರ್ಚ್ 17 ರಂದು ಆದಿತ್ಯವಾರ ಬೆಳಿಗ್ಗೆ 10.30 ಗಂಟೆಗೆ ಮಾರ್ನಬೈಲಿನ ಸಿರಿಮುಡಿ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಪ್ರಕಟಣೆಯಲ್ಲಿ ತಿಳಸಿದ್ದಾರೆ.ಗ್ರಾಮೀಣ ಭಾಗವಾದ ಸಜೀಪಮೂಡದಲ್ಲಿ ಆರಂಭಗೊಂಡ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇಂದು 13 ಶಾಖೆಗಳನ್ನೊಳಗೊಂಡು ಗ್ರಾಹಕರಿಗೆ ಅತ್ಯುತ್ತವಾದ ಸೇವೆಯನ್ನು ನೀಡುತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ಹೊಸತನದ ಛಾಪನ್ನು ಮೂಡಿಸಿಕೊಂಡು ಮುನ್ನಡೆಯುತ್ತಿರುವ ಸಂಘ ಸಹಕಾರಿ ಕ್ಷೇತ್ರದಲ್ಲಿ ಕಡಿಮೆಯ ಅವಧಿಯಲ್ಲಿ ಸಾಧಿಸಿದ ಸಾಧನೆಗೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಖೆಗಳನ್ನು ವಿಸ್ತರಿಸಿಕೊಂಡು ಗ್ರಾಹಕ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಅವರು ತಿಳಿಸಿದ್ದಾರೆ.

Read More

ಬಂಟ್ವಾಳ: ಇಲ್ಲಿನ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಬೇಬಿ ಕುಂದರ್ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಸದಸ್ಯರಾಗಿ ಮನೋಹರ ಕುಲಾಲ್ ನೇರಂಬೋಳು, ಹರೀಶ್ ಹಾಗೂ ಅಬ್ದುಲ್ ರಝಾಕ್ ಅವರು ನೇಮಕಗೊಂಡಿದ್ದಾರೆ.

Read More

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಎ.ಜೆ. ಆಸ್ಪತ್ರೆ ಮಂಗಳೂರು ಇವರ ಸಹಕಾರದೊಂದಿಗೆ 126ನೇ ರಕ್ತದಾನ ಶಿಬಿರ ಮಾ.17ರಂದು ಭಾನುವಾರ ಬೆಳಿಗ್ಗೆ 9 ರಿಂದ 1 ಗಂಟೆಯವರೆಗೆ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆಯಲಿದೆ. ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್. ವಿಜಯಪ್ರಸಾದ್ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಮಂಗಳೂರಿನ ಜಪ್ಪು ಶ್ರೀ ಅಂಬಾಮಹೇಶ್ವರೀ ಭಜನಾ ಮಂದಿರದ ಶ್ರೀ ಸೀತಾರಾಮ ಎ ಭಾಗವಹಿಸುವರು. ಶಿಬಿರದಲ್ಲಿ ಹೆಚ್ಚಿನ ಸಮಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವಂತೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬಂಟ್ವಾಳ: ತುಳುನಾಡ ದೈವಾರಾಧನೆ ಸಂರಕ್ಷಣೆ ವೇದಿಕೆ (ರಿ)ಯು ಜಿಲ್ಲೆಯ ಎಲ್ಲಾ ದೈವಸ್ಥಾನಗಳಿಗೆ ಹಾಗೂ ದೇವಸ್ಥಾನಗಳಿಗೆ ದೈವ ನರ್ತನದ ಫೋಟೋ, ವಿಡಿಯೋ ಚಿತ್ರೀಕರಣ ಮಾಡದಂತೆ ಸೂಚನಾ ಫಲಕವನ್ನು ನೀಡುತ್ತಿದೆ. ತುಳುನಾಡ ದೈವಾರಾಧನೆ ಸಂರಕ್ಷಣೆ ವೇದಿಕೆ (ರಿ) ಇದರ ಸದಸ್ಯರು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೋಲ, ನೇಮೋತ್ಸವದಲ್ಲಿ ದೈವ ನರ್ತನದ ಫೋಟೋ, ವಿಡಿಯೋ ಚಿತ್ರೀಕರಣ ಮಾಡದಂತೆ ಇದುವರೆಗೂ ಸುಮಾರು 25ಕ್ಕೂ ಅಧಿಕ ದೈವಸ್ಥಾನದಲ್ಲಿ ಆಡಳಿತ ಮಂಡಳಿಗೆ ಮನವಿ ಮಾಡಿ ಬಳಿಕ ನಿಷೇಧ ಬರಹದ ಬೋರ್ಡನ್ನು ನೀಡುತ್ತಿದ್ದಾರೆ. ಈ ಮೂಲಕ ತುಳುನಾಡಿನ ಸಮಸ್ತ ದೈವಾರದಕರಲ್ಲಿ ದೈವದ ಹಾಗೂ ದೈವ ನರ್ತನದ ಫೋಟೋ/ಲ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಾಕಬಾರದಾಗಿ ವಿನಂತಿ ಮಾಡುತ್ತಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ತುಳುನಾಡ ದೈವಾರಾಧನೆ ಸಂರಕ್ಷಣೆ ವೇದಿಕೆ ಸದಸ್ಯರ ಈ ನಂಬಿಕೆಯ ಕಾರ್ಯಕ್ಕೆ ದೈವಾರದಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read More

ಬಂಟ್ವಾಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘ,ಕುರಿಯಾಳ ಇದರ ವತಿಯಿಂದ ಶ್ರೀ ಓಂಕಾರೇಶ್ವರಿ ದೇವಿ ಭಜನಾ ಮಂದಿರದ ವಠಾರದಲ್ಲಿ ದೀಪ ಪೂಜನಾ ಕಾರ್ಯಕ್ರಮ ಮಂಗಳವಾರ ಸಂಜೆ ನಡೆಯಿತು.ಯೋಗಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಇವರು ದೀಪ ಮಹತ್ವದ ಬಗ್ಗೆ ಮಾರ್ಹದರ್ಶನ ಮಾಡಿ ದೀಪ ಎಂಬುವುದು ಜ್ಞಾನದ ಬೆಳಕು, ಶಕ್ತಿಯ ಸ್ವರೂಪ ನೆಮ್ಮದಿಯ ಪ್ರತೀಕ ಎಂದರು. ಒಂದು ಹೆಣ್ಣಿಗೆ ಇರುವಂತಹ ಶಕ್ತಿಯು ತನ್ನ ಕುಟುಂಬವನ್ನು ಪ್ರೀತಿಯಿಂದ ಯಾವ ರೀತಿಯಾಗಿ ಸರಿದೂಗಿಸಿಕೊಂಡು, ಎಲ್ಲರಿಗೂ ಹೊಂದಿಕೊಂಡು, ದೇವರಿಗೆ ಶ್ರದ್ಧೆ ಭಕ್ತಿಯಿಂದ ತನ್ನನ್ನು ತಾನು ಸಮರ್ಪಿಸಿಕೊಂಡು, ಮನೆಯಲ್ಲಿರುವ ಕಷ್ಟಸುಖಗಳಲ್ಲಿ ಪತಿಯೊಂದಿಗೆ ಭಾಗಿಯಗುತ್ತಾ ಪೂರ್ಣ ಮಾತೃ ಆಗುವಂತಹ ಸುಂದರವಾದ ಕ್ಷಣಗಳನ್ನು ಪೂಜೆಯ ಮುಖಾಂತರ ಕಣ್ಣು ತೆರೆಸುವ ವಿಚಾರದ ಬಗ್ಗೆ ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಅಮ್ಟಾಡಿ ಮಂಡಲ ಕಾರ್ಯವಾಹ ಸತೀಶ್ ಶೆಟ್ಟಿ, ಅಮ್ಟಾಡಿ ಮಂಡಲ ಪ್ರಮುಖ್ ಅಶೋಕ್ ಪೂಜಾರಿ ಪಾಪುದಡ್ಕ, ಓಂಕಾರೇಶ್ವರಿ ದೇವಿ ಭಜನಾ ಮಂದಿರ ಜೀರ್ಣೊಧ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ ಪಡು,ಶ್ರೀ…

Read More

ಬಂಟ್ವಾಳ: ರಾಜ್ಯ ಸರ್ಕಾರ ಜಾರಿ ಮಾಡಿದ ಪಂಚ ಗ್ಯಾರಂಟಿ ಯೋಜನೆಗಳ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾಗಿ ಹಾಗೂ ಬಂಟ್ವಾಳ ತಾಲೂಕಿನ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಜಯಂತಿ ವಿ. ಪೂಜಾರಿ ನೇಮಕಗೊಂಡಿದ್ದಾರೆ. ಮಾಜಿ ಸಚಿವ ಬಿ.ರಮಾನಾಥ ರೈ ಅವರ ಶಿಫಾರಸ್ಸಿನ ಮೇರೆಗೆ ಜಯಂತಿ ವಿ.ಪೂಜಾರಿ ಅವರನ್ನು ಕರ್ನಾಟಕ ಸರ್ಕಾರ ನೇಮಕ ಮಾಡಿದೆ‌. ಜಯಂತಿ ಪೂಜಾರಿ ಅವರು ದ.ಕ.ಜಿಲ್ಲಾ ಕೆಡಿಪಿಯ ಮಾಜಿ ಸದಸ್ಯರಾಗಿದ್ದು ಪ್ರಸ್ತುತ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ, ದ.ಕ. ಜಿಲ್ಲಾ ಕಾಂಗ್ರೆಸ್ ಸದಸ್ಯರಾಗಿ, ಶಿವಗಿರಿ ಮಹಿಳಾ ಸಹಕಾರಿ ಬ್ಯಾಂಕ್ ನ ಸ್ಥಾಪಕಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನಜಾಗೃತಿ ವೇದಿಕೆ ಕಲ್ಲಡ್ಕ ವಲಯದ ಮಾಜಿ ಅಧ್ಯಕ್ಷರಾಗಿ, ಪ್ರಸ್ತುತ ಮಾಣಿ ವಲಯ ಜನಜಾಗೃತಿ ವೇದಿಕೆಯ ಸದಸ್ಯರಾಗಿರುವ ಜಯಂತಿ ಅವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ

Read More

ಬಂಟ್ವಾಳ: 2023 ರಾಜ್ಯ ವಿಧಾನಸಭಾ ಚುನಾವಣಾ ಕರ್ತವ್ಯ ನಿರ್ವಹಿಸಿದ ವಾಹನಗಳ ನಿಗದಿತ ಬಾಡಿಗೆಯನ್ನು ನೀಡದೆ ಅನ್ಯಾಯವೆಸಗಿರುವ ಬಗ್ಗೆ ದ.ಕ. ಜಿಲ್ಲಾ ಟೂರಿಸ್ಟ್ ಕಾರು ವ್ಯಾನು ಚಾಲಕರ ಮಾಲಕರ ಸಂಘ ಬಿ.ಸಿ.ರೋಡು ಇದರ ವತಿಯಿಂದ ಬಿ.ಸಿ.ರೋಡಿನ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ದ.ಕ. ಜಿಲ್ಲಾ ಟೂರಿಸ್ಟ್ ಕಾರು ವ್ಯಾನು ಚಾಲಕರ ಮಾಲಕರ ಸಂಘದ ಅಧ್ಯಕ್ಷ ಸದಾನಂದ ಗೌಡ ನಾವೂರು ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಚುನಾವಣ ಆಯೋಗ ವಾಹನಗಳಿಗೆ ದಿನ ಬಾಡಿಗೆಯನ್ನು ನಿಗದಿ ಪಡಿಸಿ ಆದೇಶ ಹೊರಡಿಸಿತ್ತು. ಅದರಂತೆಯೇ ನಾವು ಚುನಾವಣ ಕರ್ತವ್ಯಕ್ಕೆ ವಾಹನವನ್ನು ಒದಗಿಸಿಕೊಟ್ಟಿದ್ದೇವೆ. ಆದರೆ ಬಾಡಿಗೆ ನೀಡುವಾಗ ಕಡಿತ ಮಾಡಿ ಅನ್ಯಾಯವೆಸಗಲಾಗಿದೆ. ಮುಂದಿನ ಚುನಾವಣೆಯಲ್ಲಿ ಇಂತಹ ಅನ್ಯಾಯ ಮರುಕಳಿಸಬಾರದು ಹಾಗೂ ಬಾಕಿ ಉಳಿಸಿರುವ ಬಾಡಿಗೆ ಹಣವನ್ನು ನೀಡಬೇಕೆಂದು ಆಗ್ರಹಿಸಿದರು. ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು ಸರಿಯಾದ ಸ್ಪಂದನೆ ಸಿಗದೇ ಇದ್ದಲ್ಲಿ ಚುನಾವಣೆಯ ದಿನದಂದು ನಾವು ವಾಹನಗಳನ್ನು ಇಟ್ಟು ಸಾಮೂಹಿಕ ಪ್ರತಿಭಟನೆ ಮಾಡಲಿದ್ದೇವೆ. ವಾಹನಕ್ಕೆ ಅಧಿಕೃತ ಬಾಡಿಗೆ ನಿಗದಿ ಪಡಿಸುವವರೆಗೆ…

Read More

ಬಂಟ್ವಾಳ: ತಾಲೂಕಿನ ಕಳ್ಳಿಗೆ ಗ್ರಾಮದ ಶ್ರೀ ಮೂಕಾಂಬಿಕಾ ಕೃಪಾ ಶ್ರೀರಾಮ ಭಜನಾ ಮಂದಿರ ಬ್ರಹ್ಮರಕೂಟ್ಲು ಇದರ 2024-2025 ನೇ ಸಾಲಿನ ಅಧ್ಯಕ್ಷರಾಗಿ ನವೀನ್ ಬಂಗೇರ ಪಲ್ಲ ಎರಡನೇ ಬಾರಿಗೆ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.ಗೌರವಾಧ್ಯಕ್ಷರಾಗಿ ದಯಾನಂದ ಸುವರ್ಣ ಪಲ್ಲ, ಗೌರವ ಸಲಹೆಗಾರರಾಗಿ ಶಶಿಧರ್ ಬ್ರಹ್ಮರಕೂಟ್ಲು, ಸಲಹೆಗಾರರಾಗಿ ಪುರುಷ ಎನ್. ಸಾಲಿಯನ್ , ನಾಗೇಶ್ ಶೆಟ್ಟಿ ಪೆರಿಯೋಡಿ ಬೀಡು, ಉದಯ್ ತುಂಬೆ, ದಿನಕರ ಬ್ರಹ್ಮರಕೂಟ್ಲು,ಜಗದೀಶ್ ಕಂಜತ್ತೂರು, ಮನೋಹರ ಪುಡಿಕೆಲ್ಲಾಯ ಕೋಡಿ, ಕವಿರಾಜ್ ಚಂದ್ರಿಗೆ,ಪ್ರಧಾನ ಕಾರ್ಯದರ್ಶಿಯಾಗಿ ಹೇಮಂತ್ ಸನಿಲ್ ದರಿಬಾಗಿಲು, ಹರೀಶ್ ದರಿಬಾಗಿಲು, ಕೋಶಾಧಿಕಾರಿ ಶಿವಪ್ರಸಾದ್ ಬ್ರಹ್ಮರಕೂಟ್ಲು, ಉಪಾಧ್ಯಕ್ಷರಾಗಿ ಧೂಮಪ್ಪ ಪೂಜಾರಿ ದರಿಬಾಗಿಲು, ಮಾಧವ ಪೂಜಾರಿ ದರಿಬಾಗಿಲು, ಸಂಜೀವ ದರಿಬಾಗಿಲು, ಮನೋಹರ ದರಿಬಾಗಿಲು, ಯೋಗೀಶ್ ವಿ‌.ಕೆ. ದರಿಬಾಗಿಲು, ನಾಗೇಶ್ ಜಾರಂದಗುಡ್ಡೆ, ನವೀನ್ ಪೆರಿಯೋಡಿ ಬೀಡು, ಹರೀಶ್ ಚಂದ್ರಿಗೆ, ಸತೀಶ್ ವಳವೂರು. ಜತೆ ಕಾರ್ಯದರ್ಶಿಯಾಗಿ ದೀಕ್ಷಿತ್ ಗುಂಡಿ, ರಂಜನ್ ದರಿಬಾಗಿಲು, ಸಚಿನ್ ಪಂಬದಬೆಟ್ಟು, ಸಂದೇಶ್ ದರಿಬಾಗಿಲು, ಅರ್ಚಕ ವೃಂದ ಕೋಟ್ಯಪ್ಪ ಶಾಂತಿ ಕಂಜತ್ತೂರ್, ಪ್ರಕಾಶ್ ಪಲ್ಲ, ವಿಶ್ವನಾಥ್ ಪೆತ್ತ…

Read More