![](https://aksharanews.in/wp-content/uploads/2024/03/C857A01E-8A96-4E60-8CB2-342E3504D93E-1024x1024.jpeg)
ಬಂಟ್ವಾಳ: ಬೊಳ್ಳಾಯಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ ಸ್ಥಳಾಂತರಗೊಂಡ ಮಾರ್ನಬೈಲು ಶಾಖೆಯ ಶುಭಾರಂಭ ಕಾರ್ಯಕ್ರಮ ಮಾರ್ಚ್ 17 ರಂದು ಆದಿತ್ಯವಾರ ಬೆಳಿಗ್ಗೆ 10.30 ಗಂಟೆಗೆ ಮಾರ್ನಬೈಲಿನ ಸಿರಿಮುಡಿ ಕಾಂಪ್ಲೆಕ್ಸ್ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಪ್ರಕಟಣೆಯಲ್ಲಿ ತಿಳಸಿದ್ದಾರೆ.
ಗ್ರಾಮೀಣ ಭಾಗವಾದ ಸಜೀಪಮೂಡದಲ್ಲಿ ಆರಂಭಗೊಂಡ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇಂದು 13 ಶಾಖೆಗಳನ್ನೊಳಗೊಂಡು ಗ್ರಾಹಕರಿಗೆ ಅತ್ಯುತ್ತವಾದ ಸೇವೆಯನ್ನು ನೀಡುತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ಹೊಸತನದ ಛಾಪನ್ನು ಮೂಡಿಸಿಕೊಂಡು ಮುನ್ನಡೆಯುತ್ತಿರುವ ಸಂಘ ಸಹಕಾರಿ ಕ್ಷೇತ್ರದಲ್ಲಿ ಕಡಿಮೆಯ ಅವಧಿಯಲ್ಲಿ ಸಾಧಿಸಿದ ಸಾಧನೆಗೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಖೆಗಳನ್ನು ವಿಸ್ತರಿಸಿಕೊಂಡು ಗ್ರಾಹಕ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಅವರು ತಿಳಿಸಿದ್ದಾರೆ.
![](https://aksharanews.in/wp-content/uploads/2023/04/WhatsApp-Image-2023-02-08-at-9.24.55-AM-1024x362-1.jpeg)
![](https://aksharanews.in/wp-content/uploads/2023/02/F4D88BC3-69F8-4A07-A227-5EEB8E2DD1DE-1024x1024.jpeg)
![](https://aksharanews.in/wp-content/uploads/2024/01/aksharanews-ad.jpg)