ಬಂಟ್ವಾಳ: ಲೋಕ ಅದಾಲತ್ ಮೂಲಕ ಬಂಟ್ವಾಳ ಪುರಸಭೆಗೆ 48,28,263ರೂಪಾಯಿ ಕಟ್ಟಡ ತೆರಿಗೆ ವಸೂಲಿಯಾಗಿದೆ. ಬಂಟ್ವಾಳ ಸಿವಿಲ್ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಭಾಗ್ಯಮ್ಮ, ಪ್ರಧಾನ ಸಿವಿಲ್ ನ್ಯಾಯಧೀಶರಾದ ಚಂದ್ರಶೇಖರ ತಳವಾರ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕೃಷ್ಣಮೂರ್ತಿ ಎನ್. ಅವರ ಉಪಸ್ಥಿತಿಯಲ್ಲಿ ನಡೆದ ಲೋಕ ಅದಾಲತ್ನಲ್ಲಿ 972 ಪ್ರಕರಣಗಳು ಇತ್ಯರ್ಥವಾಗಿ 48.28 ಲಕ್ಷ ರೂಪಾಯಿ ಕಟ್ಟಡ ತೆರಿಗೆ ವಸೂಲಿಯಾಗಿದೆ. ಈ ಸಂದರ್ಭ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
Advertisement
Advertisement