Author: admin

ಬಂಟ್ವಾಳ: ಬಿ.ಸಿ.ರೋಡಿನ ನಗರ ಭಾಗದಲ್ಲಿರುವ ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ವರ್ಷಾವಧಿ ಉತ್ಸವ ವಿಜ್ರಂಭಣೆಯಿಂದ ನಡೆಯಿತು. ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಂತೆ ಮಾ. 16ರಂದು ಉತ್ಸವ ಆರಂಭಗೊಂಡಿದ್ದು ಕೊನೆಯ ದಿನವಾದ ಸೋಮವಾರ ಬೆಳಿಗ್ಗೆ ಗಣಹೋಮ, ಪ್ರಧಾನ ಹೋಮ, ಕಲಶಾಭಿಷೇಕ, ನಾಗಾರಾಧನೆ, ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು. ಸಂಜೆ ಸಪ್ತಶತಿ ಪಾರಾಯಣ ಸಹಿತ ವಿಶೇಷ ದುರ್ಗಾ ನಮಸ್ಕಾರ ಪೂಜೆ, ರಂಗಪೂಜೆ, ಅಲಂಕಾರ ಪೂಜೆ ಹಾಗೂ ಮಹಾಪೂಜೆ ನಡೆದು ಪ್ರಸಾದ ವಿತರಿಸಲಾಯಿತು.ಈ ಸಂದರ್ಭ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಬಿ. ವಿಶ್ವನಾಥ, ಬೂಡ ಅಧ್ಯಕ್ಷ ಬಿ. ಬೇಬಿ ಕುಂದರ್, ಶ್ರೀ ಅನ್ನಪೂರ್ಣೆಶ್ವರೀ ನಾಗದೇವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೆಶ್ ಪಚ್ಚಿನಡ್ಕ, ಶ್ರೀ ಚಂಡಿಕಾ ಪರಮೇಶ್ವರೀ ದೇವಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಲೋಕನಾಥ ಶೆಟ್ಟಿ , ದೇವಸ್ಥಾನದ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷ ಬಿ. ಸಂಜೀವ ಪೂಜಾರಿ, ಕಾರ್ಯದರ್ಶಿ ಎನ್. ಶಿವಶಂಕರ್, ಜೊತೆ ಕಾರ್ಯದರ್ಶಿ ರಮೇಶ್ ಸಾಲ್ಯಾನ್, ಕೋಶಾಧಿಕಾರಿ ಬಿ.…

Read More

ಬಂಟ್ವಾಳ: ಮುಂಬರುವ ಲೋಕಸಭಾ ಚುನಾವಣೆ ನಿಕ್ಷ್ಪಕ್ಷಪಾತವಾಗಿ, ಶಾಂತಿಯುತವಾಗಿ ಹಾಗೂ ಪಾರದರ್ಶಕವಾಗಿ ನಡೆಯಬೇಕೆನ್ನುವ ಉದ್ದೇಶದಿಂದ ಮಾ.16ರಿಂದ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದ್ದು ವಿವಿಧ ತಂಡಗಳನ್ನು ರಚಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಡಾ. ಉದಯ ಶೆಟ್ಟಿ ತಿಳಿಸಿದರು.ಭಾನುವಾರ ಬಿ.ಸಿ.ರೋಡಿನ ಆಡಳಿತ ಸೌಧದ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು. ಮಾ. 28 ಚುನಾವಣೆ ನೋಟಿಸು ಹೊರಡಿಸುವುದು, ಎ.4 ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ, ಎ.೫ ನಾಮ ಪತ್ರ ಪರಿಶೀಲನೆಯ ದಿನಾಂಕ, ಎ.8 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ, ಎ.26 ಚುನಾವಣೆ ನಡೆಯುವ ದಿನಾಂಕ, ಜೂ.4 ಮತ ಎಣಿಕೆ ದಿನಾಂಕ, ಜೂ.6 ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುವ ದಿನಾಂಕ ಎಂದು ತಿಳಿಸಿದರು. ಮಾ. 28 ರಿಂದ ಎ.8ರವರೆಗೆ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ದ.ಕ. ಜಿಲ್ಲಾ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಮುಲ್ಲೈ ಮುಹಿಲನ್ ಅವರಿಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಚುನಾವಣೆಗೆ ಸಂಬಮಧಿಸಿದಂತೆ ಡಿಯುಡಿಸಿ ಯೋಜನಾ ನಿರ್ದೇಶಕ ಡಾ. ಉದಯ ಶೆಟ್ಟಿ…

Read More

ಬಂಟ್ವಾಳ: ಇಲ್ಲಿನ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ಬಳಿಕ ಭಾನುವಾರ ಅವಭೃತೋತ್ಸವ ವಿಜ್ರಂಭಣೆಯಿಂದ ನಡೆಯಿತು.ಬೆಳಿಗ್ಗೆ ದ್ವಾರಪೂಜೆ, ಚೂರ್ಣೊತ್ಸವ ನಡೆದು ಮಧ್ಯಾಹ್ನ ಅವಭೃತೋತ್ಸವ ಹಾಗೂ ನದೀಸ್ನಾನ ನಡೆಯಿತು. ಸಂಜೆ ಧ್ವಜಾವರೋಹಣ, ಯಜ್ಞವಿಸರ್ಜನೆ, ಮಹಾಪೂಜೆ, ಸಂಪ್ರೋಕ್ಷಣೆ, ರಾತ್ರಿ ಮಹಾ ನೈವೇದ್ಯ, ಮಂಗಳಾರತಿ, ಸಮಾರಾಧನೆ ನಡೆದು ಸಣ್ಣ ರಥೋತ್ಸವ, ವಸಂತಪೂಜೆ, ಕಲಶದಾನ, ಅಂಕುರಪ್ರಸಾದ ವಿತರಣೆ ನಡೆಯಿತು.

Read More

ಬಂಟ್ವಾಳ: ತಾಲೂಕಿನ ಎಲಿಯನಡುಗೋಡು ಗ್ರಾಮದ ಹೊಕ್ಕಾಡಿಗೋಳಿಯಲ್ಲಿ ಶನಿವಾರ ನಡೆದ ಎರಡು ವೀರ ವಿಕ್ರಮ ಜೋಡುಕರೆ ಬಯಲು ಕಂಬಳ ಸಮಾಪನಗೊಂಡಿದೆ. ವೀರ ವಿಕ್ರಮ ಕಂಬಳ ಸಮಿತಿ ವತಿಯಿಂದ ನಡೆದ ಪ್ರಥಮ ವರ್ಷದ ಹೊಕ್ಕಾಡಿಗೋಳಿ ಕೋಡಂಗೆ ವೀರ – ವಿಕ್ರಮ” ಜೋಡುಕರೆ ಕಂಬಳ ಕೂಟದ ಫಲಿತಾಂಶ: ಕೂಟದಲ್ಲಿ ಕನೆಹಲಗೆ: 1 ಜೊತೆ, ಅಡ್ಡಹಲಗೆ: ೩ ಜೊತೆ, ಹಗ್ಗ ಹಿರಿಯ: ೬ ಜೊತೆ , ನೇಗಿಲು ಹಿರಿಯ: 11 ಜೊತೆ, ಹಗ್ಗ ಕಿರಿಯ: 12 ಜೊತೆ, ನೇಗಿಲು ಕಿರಿಯ: 26 ಜೊತೆ ನೇಗಿಲು ಸಬ್ ಜೂನಿಯರ್: 39 ಒಟ್ಟು 99 ಜೊತೆ ಕೋಣಗಳು ಭಾಗಿಯಾಗಿದ್ದವು.ಕನೆಹಲಗೆಯಲ್ಲಿ ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವಹಲಗೆ ಮುಟ್ಟಿದವರು: ಬೈಂದೂರು ಬಾಸ್ಕರ ದೇವಾಡಿಗಅಡ್ಡ ಹಲಗೆಯಲ್ಲಿ ಪ್ರಥಮ ಹೊಸ್ಮಾರ್ ಸೂರ್ಯಶ್ರೀ ಜ್ಯೋತಿ ಸುರೇಶ್ ಕುಮಾರ್ ಶೆಟ್ಟಿಹಲಗೆ ಮುಟ್ಟಿದವರು ತೆಕ್ಕಟ್ಟೆ ಸುಧೀರ್ ದೇವಾಡಿಗದ್ವಿತೀಯ ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿಹಲಗೆ ಮುಟ್ಟಿದವರು ಮುಳಿಕಾರು ಕೆವುಡೇಲು ಅಣ್ಣಿ ದೇವಾಡಿಗಹಗ್ಗ ಹಿರಿಯ ವಿಭಾಗದಲ್ಲಿಪ್ರಥಮ ಮೂಡಬಿದ್ರಿ ಕರಿಂಜೆ ವಿನು ವಿಶ್ವನಾಥ ಶೆಟ್ಟಿ…

Read More

ಬಂಟ್ವಾಳ: ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ ವತಿಯಿಂದ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಮಾ.24ರಂದು ನಡೆಯಲಿರುವ 16ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭಕ್ಕೆ ಪೂರ್ವಭಾವಿಯಾಗಿ ವಿವಾಹದ ಸಾಮೂಹಿಕ ನಿಶ್ಚಿತಾರ್ಥ ಕಾರ್ಯಕ್ರಮ ಪುಂಜಾಲಕಟ್ಟೆ ಬಂಗ್ಲೆಮೈದಾನದ ಸಭಾಂಗಣದಲ್ಲಿ ರವಿವಾರ ನಡೆಯಿತು.ನಯನಾಡು ಶಶಾಂಕ್ ಕ್ಯಾಶ್ಯೂ ಇಂಡಸ್ಟ್ರೀಸ್‌ನ ಮಾಲಕ ಟಿ.ಹರೀಂದ್ರ ಪೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದುಂದು ವೆಚ್ಚದ ವಿವಾಹಗಳ ಬದಲಾಗಿ ಸಾಮೂಹಿಕ ವಿವಾಹ ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು. ಮೂರ್ಜೆ ನಾರಾಯಣ ಗುರು ವಸತಿ ಶಾಲೆ ಪ್ರಾಂಶುಪಾಲ ಸಂತೋಷ್ ಸನಿಲ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,ಭಾರತೀಯ ವಿವಾಹ ಪದ್ಧತಿ ಕುಟುಂಬ ಜೀವನದ ಭದ್ರ ಬುನಾದಿಯಾಗಿದೆ. ಇದು ಕುಟುಂಬದ ಹಾಗೂ ಸಮಾಜದ ನೆಮ್ಮದಿಯ ಸುವ್ಯವಸ್ಥೆಯಾಗಿದೆ ಎಂದರು.ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿ, ಬಡ, ಹಿಂದುಳಿದ ವರ್ಗದ ಜನತೆ ಅದ್ಧೂರಿಯ ವಿವಾಹ ನಡೆಸಲು ಅಸಾಧ್ಯವಾದ ಕಾರಣ ಸಾಮೂಹಿಕ ವಿವಾಹದ ಮೂಲಕ ವಿಜೃಂಭಣೆಯಲ್ಲಿ ವಿವಾಹ ಕಾರ್ಯಕ್ರಮ ನಡೆಸಲಾಗುವುದು ಎಂದರು. ಉದ್ಯಮಿ ನಾಗೇಶ್…

Read More

ಬಂಟ್ವಾಳ: ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ವಿಸ್ತಾರವಾಗಿ ಬೆಳೆದಿದ್ದು ಸಹಕಾರಿ ಸಂಘಗಳ ಮೂಲಕ ಸಮಾಜದ ಕೆಲಸವನ್ನು ಮಾಡಲು ಸುಲಭ ಸಾಧ್ಯವಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.ಅವರು ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ ಮಾರ್ನಬೈಲು ಸ್ಥಳಾಂತರಿತ ಶಾಖೆಯನ್ನು ಭಾನುವಾರ ಮಾರ್ನಬೈಲಿನ ಸಿರಿಮುಡಿ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಇದ್ದ ಕಚೇರಿಯಿಂದ ಸುಸಜ್ಜಿತವಾದ ಹಾಗೂ ವಿಶಾಲವಾದ ಕಚೇರಿಗೆ ಸ್ಥಳಾಂತರಿಸುವ ಮೂಲಕ ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯನ್ನು ನೀಡುವ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಬದ್ದತೆ ಕಾಣಿಸುತ್ತಿದೆ, ಸಹಕಾರಿ ಸಂಘಗಳ ಪೈಕಿ ತನ್ನದೇ ಆದ ಛಾಪನ್ನು ಮೂಡಿಸಿ ಅತ್ಯುತ್ತಮವಾದ ಸಹಕಾರಿ ಸಂಘ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಮಾಜದ ದುರ್ಬಲ ವರ್ಗದವರಿಗೆ ಆರ್ಥಿಕ ಸಹಕಾರ ನೀಡುವ ಉದ್ದೇಶದಿಂದ ಆರಮಭಗೊಂಡ ಈ ಸಂಘ ಇನ್ನಷ್ಟು ಶಾಖೆಗಳನ್ನು ತೆರೆಯುವ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು. ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಭದ್ರತಾ ಕೊಠಡಿ…

Read More

ಬಂಟ್ವಾಳ: ಸೇವಾಂಜಲಿ ಪ್ರತಿಷ್ಟಾನ ಫರಂಗಿಪೇಟೆ ಇದರ ವತಿಯಿಂದ ಎ.ಜೆ.ಆಸ್ಪತ್ರೆ ಮಂಗಳೂರು ಇವರ ಸಹಕಾರದಲ್ಲಿ 126ನೇ ರಕ್ತದಾನ ಶಿಬಿರ ಭಾನುವಾರ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು.ಮಂಗಳೂರಿನ ಜೆಪ್ಪು ಶ್ರೀ ಅಂಬಾಮಹೇಶ್ವರೀ ಭಜನಾ ಮಂದಿರದ ಅಧ್ಯಕ್ಷ ಸೀತರಾಮ ಎ. ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ಒಂದೆರಡು ರಕ್ತದಾನ ಶಿಬಿರಗಳನ್ನು ಆಯೋಸಜಿಸುವುದು ಸಾಮಾನ್ಯ . ಆದರೆ ಸೇವಾಂಜಲಿ ಪ್ರತಿಷ್ಠಾನ 126 ಶಿಬಿರಗಳನ್ನು ಸಂಘಟಿಸಿ ರೋಗಿಗಳಿಗೆ ರಕ್ತ ಒದಗಿಸುವ ಕಾರ್ಯ ಮಾಡಿರುವುದು ಅಭಿನಂದನೀಯ ಎಂದರು. ಸೇವಾಂಜಲಿ ಸಂಸ್ಥೆಯ ಕೃಷ್ಣಕುಮಾರ್ ಪೂಂಜ ಹಾಗೂ ಅದರ ಎಲ್ಲಾ ಕಾರ್ಯಕರ್ತರ ಸೇವಾ ಮನೋಭಾವನೆಯಿಂದ ಇಂತಹ ಮಹತ್ಕಾರ್ಯಗಳನ್ನು ನಡೆಸಿಕೊಂಡು ಬರಲು ಸಾಧ್ಯವಿದೆ. ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಕ್ಷಯರೋಗಿಗಳಿಗೆ ಆಹಾರದ ಕಿಟ್ ವಿತರಣೆಯಂತಹ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಸೇವಾಂಜಲಿಯ ಎಲ್ಲಾ ಕಾರ್ಯಗಳಿಗೂ ಸಹಕಾರ ನೀಡುವುದಾಗಿ ತಿಳಿಸಿದರು. ಮೆಸ್ಕಾಂನ ಹಿರಿಯ ಎಂಜಿನಿಯರ್ ದಿನೇಶ್ ಕೆ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ತುರ್ತ ಸಂದರ್ಭದಲ್ಲಿ ರಕ್ತ ಪಡೆಯಲು ಅನೇಕ ರೋಗಿಗಳು ಪರದಾಡುತ್ತಾರೆ. ಆದರೆ ಸೇವಾಂಜಲಿ ಸಂಸ್ಥೆಯ…

Read More

ಬಂಟ್ವಾಳ: ಲೋಕ ಅದಾಲತ್ ಮೂಲಕ ಬಂಟ್ವಾಳ ಪುರಸಭೆಗೆ 48,28,263ರೂಪಾಯಿ ಕಟ್ಟಡ ತೆರಿಗೆ ವಸೂಲಿಯಾಗಿದೆ. ಬಂಟ್ವಾಳ ಸಿವಿಲ್ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಭಾಗ್ಯಮ್ಮ, ಪ್ರಧಾನ ಸಿವಿಲ್ ನ್ಯಾಯಧೀಶರಾದ ಚಂದ್ರಶೇಖರ ತಳವಾರ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕೃಷ್ಣಮೂರ್ತಿ ಎನ್. ಅವರ ಉಪಸ್ಥಿತಿಯಲ್ಲಿ ನಡೆದ ಲೋಕ ಅದಾಲತ್‌ನಲ್ಲಿ 972 ಪ್ರಕರಣಗಳು ಇತ್ಯರ್ಥವಾಗಿ 48.28 ಲಕ್ಷ ರೂಪಾಯಿ ಕಟ್ಟಡ ತೆರಿಗೆ ವಸೂಲಿಯಾಗಿದೆ. ಈ ಸಂದರ್ಭ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Read More

ಬಂಟ್ವಾಳ: ಜಿಲ್ಲೆಯ ಕಂಬಳ ಇತಿಹಾಸದಲ್ಲಿಯೇ ಪ್ರಥಮ ಎನ್ನುವಂತೆ ಒಂದೇ ದಿನ, ಒಂದೇ ಗ್ರಾಮದಲ್ಲಿ, ಒಂದೇ ಹೆಸರಿನ ಎರಡು ಕಂಬಳ ಕೂಟಗಳು ಶನಿವಾರ ನಡೆದು ಕಂಬಳ ಕೋಣಗಳ ಯಜಮಾನರು ಹಾಗೂ ಕಂಬಳಾಭಿಮಾನಿಗಳಲ್ಲಿ ಅಚ್ಚರಿ ಹಾಗೂ ಗೊಂದಲ ಮೂಡಿಸಿದೆ.ಕಂಬಳ ಇತಿಹಾಸದಲ್ಲಿ ತನ್ನದೇ ಆದ ಪರಂಪರೆಯನ್ನು ಹೊಂದಿರುವ ಹೊಕ್ಕಾಡಿ ಗೋಳಿ ವೀರ ವಿಕ್ರಮ ಕಂಬಳವು ಈ ಬಾರಿ ಮಹಿಷಮರ್ಧಿನಿ ಕಂಬಳ ಸಮಿತಿ ಹಾಗೂ ವೀರ ವಿಕ್ರಮ ಕಂಬಳ ಸಮಿತಿ ಎನ್ನುವ ಎರಡು ಪ್ರತ್ಯೇಕ ಸಮಿತಿಗಳ ಮೂಲಕ ಪ್ರತ್ಯೇಕ ಕಡೆಗಳಲ್ಲಿ ಆಯೋಜನೆಗೊಂಡಿತು. ಇದು ಜಿಲ್ಲಾ ಕಂಬಳ ಸಮಿತಿಯ ಪ್ರಮುಖರಿಗೆ ಉಭಯ ಸಂಕಟವನ್ನು ನೀಡಿದರೆ ಕಂಬಳಕ್ಕೆ ಬರುವ ಕೋಣಗಳ ಯಜಮಾನರು ಕಂಬಳಾಭಿಮಾನಿಗಳು ಗೊಂದಲಕ್ಕೀಡು ಮಾಡಿ ಎರಡು ಕಂಬಳಗಳಲ್ಲಿ ಕೋಣಗಳ ಭಾಗವಹಿಸುವಿಕೆ ಕಡಿಮೆಯಾಗಿತ್ತು. ಮಹಿಷಮರ್ಧಿನಿ ಕಂಬಳ ಸಮಿತಿ ಮೂಲಕ ನಡೆಯುವ ಕಂಬಳಕ್ಕೆ ತಡೆಯಾಜ್ಞೆಕೋರಿ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಉಚ್ಛನಾಯ್ಯಾಲಯ ತಡೆಹಿಡಿದ ಕಾರಣ ಯಾವುದೇ ಅಡ್ಡಿ ಇಲ್ಲದೆ ಎರಡೂ ಕಡೆ ಕಂಬಳ ನಡೆದಿದೆ. .॒ರಶ್ಮಿತ್ ಶೆಟ್ಟಿ ನೇತೃತ್ವದಲ್ಲಿ ಹೊಕ್ಕಾಡಿಗೋಳಿಯಲ್ಲಿ ನಡೆದ ಕಂಬಳ:ಬಂಟ್ವಾಳ…

Read More

ಬಂಟ್ವಾಳ: ಬೊಳ್ಳಾಯಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ ಸ್ಥಳಾಂತರಗೊಂಡ ಮಾರ್ನಬೈಲು ಶಾಖೆಯ ಶುಭಾರಂಭ ಕಾರ್ಯಕ್ರಮ ಮಾರ್ಚ್ 17 ರಂದು ಆದಿತ್ಯವಾರ ಬೆಳಿಗ್ಗೆ 10.30 ಗಂಟೆಗೆ ಮಾರ್ನಬೈಲಿನ ಸಿರಿಮುಡಿ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಪ್ರಕಟಣೆಯಲ್ಲಿ ತಿಳಸಿದ್ದಾರೆ.ಗ್ರಾಮೀಣ ಭಾಗವಾದ ಸಜೀಪಮೂಡದಲ್ಲಿ ಆರಂಭಗೊಂಡ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇಂದು 13 ಶಾಖೆಗಳನ್ನೊಳಗೊಂಡು ಗ್ರಾಹಕರಿಗೆ ಅತ್ಯುತ್ತವಾದ ಸೇವೆಯನ್ನು ನೀಡುತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ಹೊಸತನದ ಛಾಪನ್ನು ಮೂಡಿಸಿಕೊಂಡು ಮುನ್ನಡೆಯುತ್ತಿರುವ ಸಂಘ ಸಹಕಾರಿ ಕ್ಷೇತ್ರದಲ್ಲಿ ಕಡಿಮೆಯ ಅವಧಿಯಲ್ಲಿ ಸಾಧಿಸಿದ ಸಾಧನೆಗೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಖೆಗಳನ್ನು ವಿಸ್ತರಿಸಿಕೊಂಡು ಗ್ರಾಹಕ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಅವರು ತಿಳಿಸಿದ್ದಾರೆ.

Read More