ಬಂಟ್ವಾಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘ,ಕುರಿಯಾಳ ಇದರ ವತಿಯಿಂದ ಶ್ರೀ ಓಂಕಾರೇಶ್ವರಿ ದೇವಿ ಭಜನಾ ಮಂದಿರದ ವಠಾರದಲ್ಲಿ ದೀಪ ಪೂಜನಾ ಕಾರ್ಯಕ್ರಮ ಮಂಗಳವಾರ ಸಂಜೆ ನಡೆಯಿತು.
ಯೋಗಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಇವರು ದೀಪ ಮಹತ್ವದ ಬಗ್ಗೆ ಮಾರ್ಹದರ್ಶನ ಮಾಡಿ ದೀಪ ಎಂಬುವುದು ಜ್ಞಾನದ ಬೆಳಕು, ಶಕ್ತಿಯ ಸ್ವರೂಪ ನೆಮ್ಮದಿಯ ಪ್ರತೀಕ ಎಂದರು.
ಒಂದು ಹೆಣ್ಣಿಗೆ ಇರುವಂತಹ ಶಕ್ತಿಯು ತನ್ನ ಕುಟುಂಬವನ್ನು ಪ್ರೀತಿಯಿಂದ ಯಾವ ರೀತಿಯಾಗಿ ಸರಿದೂಗಿಸಿಕೊಂಡು, ಎಲ್ಲರಿಗೂ ಹೊಂದಿಕೊಂಡು, ದೇವರಿಗೆ ಶ್ರದ್ಧೆ ಭಕ್ತಿಯಿಂದ ತನ್ನನ್ನು ತಾನು ಸಮರ್ಪಿಸಿಕೊಂಡು, ಮನೆಯಲ್ಲಿರುವ ಕಷ್ಟಸುಖಗಳಲ್ಲಿ ಪತಿಯೊಂದಿಗೆ ಭಾಗಿಯಗುತ್ತಾ ಪೂರ್ಣ ಮಾತೃ ಆಗುವಂತಹ ಸುಂದರವಾದ ಕ್ಷಣಗಳನ್ನು ಪೂಜೆಯ ಮುಖಾಂತರ ಕಣ್ಣು ತೆರೆಸುವ ವಿಚಾರದ ಬಗ್ಗೆ ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಅಮ್ಟಾಡಿ ಮಂಡಲ ಕಾರ್ಯವಾಹ ಸತೀಶ್ ಶೆಟ್ಟಿ, ಅಮ್ಟಾಡಿ ಮಂಡಲ ಪ್ರಮುಖ್ ಅಶೋಕ್ ಪೂಜಾರಿ ಪಾಪುದಡ್ಕ, ಓಂಕಾರೇಶ್ವರಿ ದೇವಿ ಭಜನಾ ಮಂದಿರ ಜೀರ್ಣೊಧ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ ಪಡು,ಶ್ರೀ ಓಂಕಾರೇಶ್ವರಿ ದೇವಿ ಭಜನಾ ಮಂದಿರದ ಗೌರವಾಧ್ಯಕ್ಷ ಜಗದೀಶ್ ಭಂಡಾರಿ, ಅಧ್ಯಕ್ಷ ಶ್ರೀನಿಧಿ ವಿ.ಬಂಗೇರ, ಮಾಜಿ ಅಧ್ಯಕ್ಷ ಜಗದೀಶ್ ಸುವರ್ಣ ಹಾಗೂ ಭಜನಾ ಮಂದಿರದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.