Author: admin

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಇದರ ನೂತನ ಅಧ್ಯಕ್ಷ ರವಿಚಂದ್ರ ಬಂಟ್ವಾಳ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ರೋಟರಿ ಬಿ.ಎ. ಸೋಮಯಾಜಿ ಮೆಮೋರಿಯಲ್ ಹಾಲ್ ನಲ್ಲಿ ನಡೆಯಿತು.‌ 2026-27 ಸಾಲಿನ ಅಧ್ಯಕ್ಷರಾಗಿ ರವಿಚಂದ್ರ ಬಂಟ್ವಾಳ, ಕಾರ್ಯದರ್ಶಿಯಾಗಿ ರವಿರಾಜ್ ಶೆಟ್ಟಿ, ಕೋಶಾಧಿಕಾರಿಯಾಗಿ ಐತಪ್ಪ ಪೂಜಾರಿ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಪೂರ್ವ ರಾಜ್ಯಪಾಲ ವಿಕ್ರಂ ದತ್ತ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿ ಎಲ್ಲಾ ರೋಟರಿ ಸದಸ್ಯರು ಜೊತೆಯಾಗಿ ಕಾರ್ಯನಿರ್ವಹಿಸಿದಾಗ ರೋಟರಿ ಸಂಸ್ಥೆ ಔನತ್ಯಕ್ಕೆ ಹೋಗಲು ಸಾಧ್ಯವಿದೆ.ಮುಂದಿನ ವರ್ಷ ರೋಟರಿ ಕ್ಲಬ್ ಬಂಟ್ವಾಳಕ್ಕೆ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಹಾಯಕ ಗವರ್ನರ್ ಶಶಿಧರ್ ಡೋಂಗ್ರೆ ಕ್ಲಬ್ ಬುಲೆಟಿನ್ ರೋಟ್ವಾಲ್ ಬಿಡುಗಡೆಗೊಳಿಸಿ ಮಾತನಾಡಿ ನೂತನ ಅಧ್ಯಕ್ಷರ ಅವಧಿಯ ವರ್ಷ ಸುಗಮವಾಗಿ ನಡೆಯಲಿ, ಉತ್ತಮ ಕಾರ್ಯಕ್ರಮಗಳು ಮೂಡಿಬರಲಿ ಎಂದು ಶುಭ ಹಾರೈಸಿದರು.ಝೋನಲ್ ಲೆಪ್ಟಿನೆಂಟ್ ಬೇಬಿ ಕುಂದರ್ ಮಾತನಾಡಿ ಪ್ರಶಸ್ತಿಗಾಗಿ ಕೆಲಸ ಮಾಡುವುದು ಬೇಡ ಕೆಲಸಕ್ಕಾಗಿ ಪ್ರಶಸ್ತಿಗಳು ಬರಲಿ ಎಂದರು. ನೂತನ…

Read More

ಬಂಟ್ವಾಳ: ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕಿನಲ್ಲಿ ಮಂಗಳವಾರ ಪ್ರಾರಂಭಿಸಲಾಯಿತು . ಬಂಟ್ವಾಳ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 130 ರಲ್ಲಿಯ ಬಿ.ಮೂಡ ಗ್ರಾಮದ ಬಸ್ತಿಪಡ್ಪು ಚೆನ್ನಮ್ಮ ಕುಟೀರ ನಿವಾಸದಲ್ಲಿ ವಾಸ್ತವ್ಯ ಇರುವ ಕೇಂದ್ರ ಸರಕಾರದ ಮಾಜಿ ಹಣಕಾಸು ಸಚಿವ ಬಿ.ಜನಾರ್ಧನ ಪೂಜಾರಿಯವರಿಗೆ ಮೊದಲನೇ ಎನಿಮೇಷನ್ ಫಾರ್ಮ್ ವಿತರಿಸಲಾಯಿತು. ಈ ಸಮೀಕ್ಷೆ ಯ ಬಗ್ಗೆ ಜನಾರ್ದನ ಪೂಜಾರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಬಂಟ್ವಾಳ ತಹಶೀಲ್ದಾರರಾದ ಮಂಜುನಾಥ್, ಚುನಾವಣೆ ಶಾಖೆಯ ಉಪತಹಸೀಲ್ದಾರ್ ನವೀನ್ ಕುಮಾರ್ ಬೆಂಜನಪದವು, ಬಿ ಎಲ್ ಎ ಸುನೀಲ್ ಕುಮಾರ್ ಭಂಡಾರಿಬೆಟ್ಟು , ಮೇಲ್ವಿಚಾರಕಿ, ಗ್ರಾಮ ಆಡಳಿತ ಅಧಿಕಾರಿ ಯಶ್ವಿತಾ, ಮತಗಟ್ಟೆ ಅಧಿಕಾರಿ ದಾಮೋದರ ಪಡಿಯಾರ್, ಕಚೇರಿ ಸಿಬ್ಬಂದಿ ಸದಾಶಿವ ಕೈಕಂಬ, ಅಕ್ಷತ್ ವಿಟ್ಲ ಉಪಸ್ಥಿತರಿದ್ದರು.

Read More

ಬಂಟ್ವಾಳ: ಇತ್ತೀಚಿಗೆ ನಿಧನರಾದ ಕುರ್ನಾಡು ಮಿತ್ತಕೋಡಿ ನಿವಾಸಿ ಭೋಜ ಬಿ ಯವರ ಶ್ರದ್ದಾಂಜಲಿ ಕಾರ್ಯಕ್ರಮವು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ , ಬಂಟ್ವಾಳ ತಾಲೂಕು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ರಾರಾಸಂ ಬಂಟ್ವಾಳ ಮತ್ತು ಮುಡಿಪು ಕುಲಾಲ ಸಂಘ ಗಳ ಸಂಯೋಜನೆಯೊಂದಿಗೆ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು. ಬಂಟ್ವಾಳ ಕುಲಾಲ ಸಂಘದ ಅಧ್ಯಕ್ಷ ರಮೇಶ್ ಸಂಚಯಗಿರಿ, ಹಿರಿಯ ನಾಗರಿಕರ ಸಂಘದ ಸೇಸಪ್ಪ ಮಾಸ್ಟರ್ , ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಸಂಘದ ಮಾಜಿ ಅಧ್ಯಕ್ಷ ಮಚೇಂದ್ರ ಸಾಲಿಯಾನ್ , ಸಂಘದ ಮಾಜಿ ಕಾರ್ಯದರ್ಶಿ ಲಕ್ಷಣ್ ಅಗ್ರಬೈಲ್ , ಮಾಜಿ ಉಪಾಧ್ಯಕ್ಷೆ ಜಲಜಾಕ್ಷಿ ಕುಲಾಲ್ ನುಡಿ ನಮನ ಸಲ್ಲಿಸಿದರು. ನೂರಾರು ಹಿತೈಷಿಗಳು ಕಾರ್ಯಕ್ರಮದಲ್ಲಿದ್ದು, ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ದಾಂಜಲಿ ಸಲ್ಲಿಸಿದರು. ಸಂಘದ ಮಾಜಿ ಅಧ್ಯಕ್ಷರಾದ ಕೇಶವ ಮಾಸ್ಟರ್ ನಿರೂಪಿಸಿ, ರಾರಾಸಂ ಫೌಂಡೇಷನ್ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ವಂದಿಸಿದರು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಹಿರಿಯ…

Read More

ಬಂಟ್ವಾಳ: ಫರಂಗಿಪೇಟೆ ಬಳಿಯ ಕುಂಪಣಮಜಲುವಿನ ಶ್ರೀ ದುರ್ಗಾಪರಮೇಶ್ವರಿ ವಾರಾಹಿ ಅಮ್ಮನವರ ಕ್ಷೇತ್ರದ ಜೀರ್ಣೋದ್ಧಾರ ಪ್ರಯುಕ್ತ ನಡೆಯುತ್ತಿರುವ ಸಂಧ್ಯಾ ಭಜನೆಯ 108 ನೇ ವಿಶೇಷ ಸಂಧ್ಯಾ ಭಜನೆಯಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರನಂದ ಸ್ವಾಮೀಜಿ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಭಾಗವಹಿಸಿದರು. ಅಂಬುರುಹ ಮಕ್ಕಳ ಕುಣಿತ ಭಜನಾ ತಂಡ ಹಾಗೂ ಶ್ರೀ ಲಕ್ಷ್ಮೀ ನರಸಿಂಹ ಹವ್ಯಾಸಿ ಭಜಕ ವೃಂದ ಅಂಬ್ಲ ಮೊಗರು ಇವರಿಂದ ಭಜನೆ ನಡೆಯಿತು. ಕುಮಾರ್ ಮಲೆಮಾರ್ ಕಾರ್ಯಕ್ರಮ ನಡೆಸಿಕೊಟ್ಟರು.

Read More

ಬಂಟ್ವಾಳ: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ಇದರ ಬಂಟ್ವಾಳ ವಲಯದ ವತಿಯಿಂದ ಜಿಲ್ಲಾ ಮಟ್ಟದ ಎ ಐ ಕಾರ್ಯಾಗಾರ ಬಿ.ಸಿ.ರೋಡಿನ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ವಲಯಧ್ಯಕ್ಷ ರಾಜೇಂದ್ರ ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್ ಕೆ ಪಿ ಎ ಜಿಲ್ಲಾ ಧ್ಯಕ್ಷ ನವೀನ್ ರೈ ಪಂಜಲ ಉದ್ಘಾಟಿಸಿದರು. ವೇದಿಕೆ ಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಯ್ ಮಂಗಳೂರು, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ್ ಯನ್. ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಹರೀಶ್ ಕುಂದರ್, ಗೌರವಾಧ್ಯಕ್ಷ ಕಿಶೋರ್, ಛಾಯಾ ಕಾರ್ಯದರ್ಶಿ ಪ್ರಶಾಂತ್ ಉಪಸ್ಥಿತರಿದ್ದರು. ಕಾರ್ಯದರ್ಶಿ ರವಿ ಕಲ್ಪನೆ ಸ್ವಾಗತಿಸಿ, ಕೋಶಾಧಿಕಾರಿ ಕೃಷ್ಣ ರಾಜ್ ರಾವ್ ವಂದಿಸಿದರು. ದಯಾನಂದ್ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಂಪನ್ಮೂಲ ವ್ಯಕ್ತಿ ಸಂದೀಪ್ ಶ್ಯಾಡೋ ರವರು ಸದಸ್ಯ ರಿಗೆ ಎಐ ಕಾರ್ಯಾಗಾರ ನಡೆಸಿ ಕೊಟ್ಟರು.

Read More

ಬಂಟ್ವಾಳ: ಮದ್ಯ ವ್ಯಸನಿಗಳ ಮನ ಪರಿವರ್ತನೆಯ ಕಾರ್ಯ ಮದ್ಯವರ್ಜನ ಶಿಬಿರದ ಮೂಲಕ ಆಗುತ್ತಿದೆ. ಸಮಾಜಮುಖಿಯಾಗಿ ಸುಧಾರಣೆಯಾಗಲು ಇದು ಮೊದಲ ಹೆಜ್ಜೆ ಎಂದು ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ಶ್ರೀಪಾದ ಪಾಂಗಣ್ಣಾಯ ಹೇಳಿದರು. ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ವಾಮದಪದವು ಇದರ ಆಶ್ರಯದಲ್ಲಿ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 8 ದಿನಗಳ ಕಾಲ ವಾಮದಪದವು ಬಸ್ತಿಕೋಡಿಯ ಪದ್ಮಾವತಿ ಸಭಾಭವನದಲ್ಲಿ ನಡೆಯಲಿರುವ 2076ನೇ ಮದ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಶಿಬಿರದ ವ್ಯವಸ್ಥಾಪನ ಸಮಿತಿಯ ಗೌರವಾಧ್ಯಕ್ಷ, ಉದ್ಯಮಿ ಹರೀಂದ್ರ ಪೈ ನೈನಾಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ವ್ಯಸನ ಮುಕ್ತ ಜೀವನ ನಡೆಸುವ ನಿಟ್ಟಿನಲ್ಲಿ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ‌ ಗ್ರಾಮಾಭಿವೃದ್ದಿ ಯೋಜನೆ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ. ದುಶ್ಚಟವನ್ನು ದೂರ ಮಾಡಿ ಉತ್ತಮ ಜೀವನ ನಡೆಸಲು ಈ ಶಿಬಿರ ಪ್ರೇರಣೆಯಾಗಲಿದೆ ಎಂದರು. ಬಂಟ್ವಾಳ ತಾಲೂಕು ಅಖಿಲ ಕರ್ನಾಟಕ…

Read More

ಬಂಟ್ವಾಳ: 2025-26 ನೇ ರೋಟರಿ ವರ್ಷದಲ್ಲಿ ಅಧ್ಯಕ್ಷ ರೊ. ಬಸ್ತಿ ಮಾಧವ ಶೆಣೈ ಅವರ ನೇತೃತ್ವದಲ್ಲಿ ದೊಡ್ಡ ಕ್ಲಬ್ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಕ್ಕಾಗಿ ರೋಟರಿ ಕ್ಲಬ್ ಬಂಟ್ವಾಳಕ್ಕೆ ರೋಟರಿ ಜಿಲ್ಲೆಯ ಅತ್ಯುನ್ನತ “ಡೈಮಂಡ್ ಪ್ಲಸ್” ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ರೋಟರಿ ಪ್ರಭಾವವನ್ನು ಹೆಚ್ಚಿಸಿದ್ದಕ್ಕಾಗಿ, ವ್ಯಾಪ್ತಿಯನ್ನು ವಿಸ್ತರಿಸಿದ್ದಕ್ಕಾಗಿ, ಸದಸ್ಯರ ಪಾಲ್ಗೊಳ್ಳುವಿಕೆಯನ್ನು ಉತ್ತಮಗೊಳಿಸಿದ್ದಕ್ಕಾಗಿ ಮತ್ತು ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿದ್ದಕ್ಕಾಗಿ ಈ ಪ್ರಶಸ್ತಿಯನ್ನು ಪರಿಗಣಿಸಲಾಗಿದೆ. ಜಿಲ್ಲಾ ಗವರ್ನರ್ ರೊ. ರಾಮಕೃಷ್ಣ ಪಿ.ಕೆ. ನಿಯೋಜಿತ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್, 2027 -28 ರ ನಾಮ ನಿರ್ದೇಶಿತ ಜಿಲ್ಲಾ ಗವರ್ನರ್ ಯಶಸ್ವಿ ಸೋಮಶೇಖರ್, ಪೂರ್ವ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಮತ್ತು ಅಸಿಸ್ಟೆಂಟ್ ಜಿಲ್ಲಾ ಗವರ್ನರ್ ಜಯಕುಮಾರ್ ಶೆಟ್ಟಿ ಉಪಸ್ಥಿತಿಯಲ್ಲಿ ಕ್ಲಬ್ ಅಧ್ಯಕ್ಷ ರೊ. ಬಸ್ತಿ ಮಾಧವ ಶೆಣೈ ಪ್ರಶಸ್ತಿಯನ್ನು ಹಸ್ಥಾತರಿಸಿದರು. ಈ ಸಂಧರ್ಭದಲ್ಲಿ ಕಾರ್ಯದರ್ಶಿ ರೊ. ಮೊಹಮ್ಮದ್ ಯಾಸೀರ್*, ಖಜಾಂಚಿ ರೊ.…

Read More

ಬಂಟ್ವಾಳ: ಕುರ್ನಾಡು ಮಿತ್ತಕೋಡಿ ನಿವಾಸಿ ಭೋಜ ಬಿ. ರವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ದೈವಾಧೀನರಾದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಸಂಘದ ಹಿರಿಯ ಸದಸ್ಯರು ಹಾಗೂ ಮಾಜಿ ಪದಾಧಿಕಾರಿ. ಮುಡಿಪು ಕುಲಾಲ ಸಂಘದ ಮಾಜಿ ಅಧ್ಯಕ್ಷರು, ಬಂಟ್ವಾಳ ಯುವಜನ  ವ್ಯಾಯಾಮ ಶಾಲೆಯ ಪದಾಧಿಕಾರಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮೃತರ ಅಂತಿಮ ದರ್ಶನವು ಕುರ್ನಾಡು ಮೃತರ ಸ್ವಗ್ರಹದಲ್ಲಿ ಸಂಜೆ 5.30 ಗೆ ಗಂಟೆಗೆ ಮತ್ತು ಬಡ್ದಕಟ್ಟೆ ಸ್ಮಶಾನದಲ್ಲಿ ಮೃತರ ಅಂತ್ಯ ಕ್ರಿಯೆಯು ಸುಮಾರು 7.00 ಗಂಟೆಗೆ ನಡೆಯಲಿದೆ. ಎಂದು ಕುಟುಂಬ ಮೂಲಗಳು ತಿಳಿಸಿದೆ.

Read More

ಬಂಟ್ವಾಳ: ಕಳೆದ 2001ನೇ ಇಸವಿಯಿಂದ ವಿದ್ಯುತನ್ನು ಖಾಸಗಿಕರಣಗೊಳಿಸಲು ಸರಕಾರ ಹೊರಟಿದೆ.ಆಗ ಕ.ರಾ ರೈತ ಸಂಘ ಹಸಿರುಸೇನೆ ತೀವ್ರವಾಗಿ ಪ್ರತಿಭಟಿಸಿ ಸರಕಾರದ ಈ ಷಡ್ಯಂತ್ರವನ್ನು ವಿಫಲಗೊಳಿಸಿದೆ. ರಾಜ್ಯದಾದ್ಯಂತ ಪಂಪ್ ಸೆಟ್ ಮೀಟರ್ ಗಳನ್ನು ಕಿತ್ತು ಇಲಾಖೆ ಕಛೇರಿಗಳ ಮುಂದೆ ಪ್ರತಿಭಟಿಸಿದ ಕಾರಣ ಅಂದು ಸರಕಾರ ಕಾರ್ಯವನ್ನು ಕೈಬಿಟ್ಟಿತ್ತು. ಈಗ ರಾಜ್ಯ ಸರಕಾರ ಟಾಟಾ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡು ವಿದ್ಯುತ್ ಸಂಸ್ಥೆಯನ್ನು ಖಾಸಗಿ ಕಂಪೆನಿಗೆ ನೀಡಿ ಕೃಷಿ ಪಂಪ್ ಸೆಟ್ಗೆ ಸ್ಮಾರ್ಟ್ ಮೀಟರ್ ಅಳವಡಿಸಿ ದುಬಾರಿ ಹಣ ವಸೂಲಿ ಮಾಡಲು ಮುಂದಾಗಿದೆ. ರಾಜ್ಯಾದ್ಯಂತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಹೊರತುಪಡಿಸಿ ಕ.ರಾ ರೈತ ಸಂಘ ಹಸಿರುಸೇನೆಯ ರಾಜ್ಯಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಇವರ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆಯುತ್ತಿದೆ. ಈ ಹೋರಾಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ರೈತರು ಈ ಯೋಜನೆಯನ್ನು ಉಗ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸುವುದಲ್ಲದೆ ಉಭಯ ಜಿಲ್ಲೆಯ ಶಾಸಕರು ರಾಜಕೀಯ ರಹಿತವಾಗಿ ಈ ಹೋರಾಟದಲ್ಲಿ ಸಕ್ರೀಯವಾಗಿ ಭಾಗವಹಿಸಿ ಈ ಪ್ರಯತ್ನವನ್ನು ತಡೆಯಲು ಮುಂದೆ…

Read More

ಬಂಟ್ವಾಳ: ಮದುವೆ ಸೀರೆ ಸಹಿತ ವೈವಿಧ್ಯಮಯ ವಸ್ತ್ರಗಳ ಮೂಲಕ ಮನೆಮಾತಾದ ಹೆಸರಾಂತ ಮಳಿಗೆ ಬಂಟ್ವಾಳದ ಬೈಪಾಸ್‌ನಲ್ಲಿರುವ ಪ್ರತಿಷ್ಠಿತ ಅಂಚನ್‌ ಸಿಲ್ಕ್ಸ್ ವಸ್ತ್ರ ಮಳಿಗೆಯಲ್ಲಿ ಬಹು ಸಂಭ್ರಮದ ಅಂಚನೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ಕೈಮಗ್ಗ ಸೀರೆಗಳ ಬೃಹತ್ ಮಾರಾಟ ಮೇಳಕ್ಕೆ ಯೋಗ ದಿನವಾದ ರವಿವಾರ ಚಾಲನೆ ನೀಡಲಾಯಿತು. ಸಂಸದ ಕ್ಯಾ|ಬ್ರಿಜೇಶ್ ಚೌಟ ಅವರು ಚಾಲನೆ ನೀಡಿ ಮಾತನಾಡಿ “ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದಂತೆ ವೋಕಲ್ ಫಾರ್ ಲೋಕಲ್ ಎಂಬ ಪರಿಕಲ್ಪನೆಯಲ್ಲಿ ಖಾದಿ ಉದ್ಯಮಕ್ಕೆ ವಿಶೇಷ ಪ್ರೋತ್ಸಾಹ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಕಾಶ್ ಅಂಚನ್, ಶೇಖರ್ ಅಂಚನ್ ಹಾಗೂ ಪುರುಷೋತ್ತಮ ಅಂಚನ್ ಅವರ ಸಮರ್ಥ ನೇತೃತ್ವದ ಅಂಚನ್ ಸಿಲ್ಕ್ಸ್ ಕೈಮಗ್ಗ ಸೀರೆಗಳ ಅಭೂತಪೂರ್ವ ಮಾರಾಟಕ್ಕೆ ಮುನ್ನುಡಿ ಬರೆದಿರುವುದು ಶ್ಲಾಘನೀಯ” ಎಂದರು. ಅಂಚನ್‌ ಸಿಲ್ಕ್ಸ್ ವಸ್ತ್ರ ಮಳಿಗೆಯಲ್ಲಿ ನೂತನವಾಗಿ ತೆರೆಯಲಾಗಿರುವ ವೋಲ್ ಸೇಲ್ ಕೌಂಟರ್ ಅನ್ನು ಶಾಸಕ ರಾಜೇಶ್ ನಾಯ್ಕ್ ಅವರು ಉದ್ಘಾಟಿಸಿದರು. “ಅಂಚನ್‌ ಸಿಲ್ಕ್ಸ್ ವಸ್ತ್ರ ಮಳಿಗೆ ಬಂಟ್ವಾಳಕ್ಕೆ ಹೆಮ್ಮೆಯ ಮಳಿಗೆಯಾಗಿದೆ. ಕೈಮಗ್ಗಕ್ಕೆ ಪ್ರೋತ್ಸಾಹ…

Read More