Author: admin
ಬಂಟ್ವಾಳ: ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಪತ್ರಕರ್ತ, ನಿವೃತ್ತ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಗಟ್ಟಿ ಅವರ ಶ್ರದ್ಧಾಂಜಲಿ ಸಭೆ, ನುಡಿನಮನ ಕಾರ್ಯಕ್ರಮ ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಸಂಜೆ ನಡೆಯಿತು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ ನುಡಿನಮನ ಸಲ್ಲಿಸಿ ತಾನು ಎಸ್.ವಿ.ಎಸ್. ಕಾಲೇಜಿನಲ್ಲಿ ಸೇರ್ಪಡೆಯಾಗಲು ಪ್ರೊ.ಗಟ್ಟಿಯವರೇ ಕಾರಣ ಎಂದು ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎನ್.ಪುಷ್ಪರಾಜ್ ಮಾತನಾಡಿ ಮಾರ್ಗದರ್ಶನ ನೀಡಿದ್ದನ್ನು ಸ್ಮರಿಸಿದರು. ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ಮಾತನಾಡಿ ತಾಲೂಕು ಪತ್ರಕರ್ತರ ಸಂಘದ ಸ್ಥಾಪನೆಯ ಕುರಿತು ಮಾತನಾಡಿದರು. ಹಿರಿಯ ಪತ್ರಕರ್ತ ವೆಂಕಟೇಶ ಬಂಟ್ವಾಳ ಅವರು ಗಟ್ಟಿಯ ರೊಂದಿಗೆ ವೃತ್ತಿಜೀವನವನ್ನು ನೆನಪಿಸಿಕೊಂಡರು. ಎಸ್.ವಿ.ಎಸ್. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಪಾಂಡುರಂಗ ನಾಯಕ್ ಮಾತನಾಡಿ, ಪ್ರೊ.ಗಟ್ಟಿಯವರು ತನ್ನ ವೃತ್ತಿಗೆ ಮಾರ್ಗದರ್ಶಕರಾಗಿ ಇದ್ದುದನ್ನು ಸ್ಮರಿಸಿ, ಕಾಲೇಜಿನಲ್ಲಿ ಶಿಸ್ತನ್ನು ತಂದವರು, ಉತ್ತಮ ಆಡಳಿತಾಧಿಕಾರಿ ಆಗಿದ್ದರು ಎಂದರು. ಬಾಲಕೃಷ್ಣ…
ಬಂಟ್ವಾಳ: ಸೆಕ್ಯೂರ್ ಇನ್ಸೂರೆನ್ಸ್ ಕನ್ಸಲ್ಟೆನ್ಸಿ ಹಾಗೂ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಕೆಎಂಸಿ ಆಸ್ಪತ್ರೆ ಸಹಯೋಗದೊಂದಿಗೆ 136 ನೇ ರಕ್ತದಾನ ಶಿಬಿರ ಬಿ.ಸಿ ರೋಡಿನ ಶ್ರೀ ರಕ್ತೇಶ್ವರೀ ಸನ್ನಿಧಿ ಸಮೀಪದ ಆರ್.ಕಾಂಪ್ಲೆಕ್ಸ್ ನ 2 ನೇ ಮಹಡಿಯಲ್ಲಿ ರವಿವಾರ ನಡೆಯಿತು. ಶಾಸಕ ರಾಜೇಶ್ ನಾಯ್ಕ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಕ್ತದಾನ ಶ್ರೇಷ್ಠ ದಾನ. ಅ ಮೂಲಕ ಜೀವ ರಕ್ಷಣೆಯ ಮಹಾನ್ ಕಾರ್ಯ ಈಡೇರಲು ಸಾಧ್ಯ ಎಂದು ಹೇಳಿದ ಅವರು ಸೆಕ್ಯೂರ್ ಇನ್ಸೂರೆನ್ಸ್ ಕನ್ಸಲ್ಟೆನ್ಸಿ ಹಾಗೂ ಸೇವಾಂಜಲಿಯ ಕಾರ್ಯ ಮಾದರಿ ಎಂದು ಶ್ಲಾಘಿಸಿದರು. ಮೊಡಂಕಾಪು ಚರ್ಚ್ ನ ಧರ್ಮಗುರು ವಂ.ಫಾ. ವಿಕ್ಟರ್ ಡಿಸೋಜ, ಅಮ್ಟಾಡಿ ಗ್ರಾ.ಪಂ. ನ ನಿಕಟಪೂರ್ವಾಧ್ಯಕ್ಷ ವಿಜಯ್ ಕುಮಾರ್, ಸೆಕ್ಯೂರ್ ಇನ್ಸೂರೆನ್ಸ್ ಕನ್ಸಲ್ಟೆನ್ಸಿ ಮಾಲಕ ಪ್ರಶಾಂತ್ ಫ್ರಾಂಕ್, ಜೆಸಿಂತ ಜ್ಯೋತಿ ಡಿಸೋಜ ಮುಂತಾದವರು ಉಪಸ್ಥಿತರಿದ್ದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ.ಕೃಷ್ಣಕುಮಾರ್ ಪೂಂಜ ಮಾತನಾಡಿ ಕಳೆದ ಕೆಲವು ವರ್ಷದಿಂದ ರಕ್ತದಾನ ದ ಮಹಾನ್ ಕಾರ್ಯ ಸಾಕಾರವಾಗುತ್ತಿದೆ. ಈ ಮೂಲಕ…
ಬಂಟ್ವಾಳ: ಸೆಕ್ಯೂರ್ ಇನ್ಸುರೆನ್ಸ್ ಕನ್ಸಲ್ಟೆನ್ಸಿ ಹಾಗೂ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ 136ನೇ ರಕ್ತದಾನ ಶಿಬಿರ ಜೂ.14ರಂದು ಭಾನುವಾರ ಬಿ.ಸಿ.ರೋಡಿನ ರಕ್ತೇಶ್ವರೀ ದೇವಸ್ಥಾನದ ಬಳಿ ಇರುವ ಆರ್. ಕಾಂಪ್ಲೆಕ್ಸ್ ನ ಎರಡನೇ ಮಹಡಿಯಲ್ಲಿ ನಡೆಯಲಿದೆ. ಶಾಸಕ ರಾಜೇಶ್ ನಾಯ್ಕ್, ತಹಶೀಲ್ದಾರ್ ಜಿ.ಮಂಜುನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಎಂದು ಸೆಕ್ಯೂರ್ ಇನ್ಸೂರೆನ್ಸ್ ಕನ್ಸಲೆನ್ಸಿಯ ಸಂಸ್ಥಾಪಕ ಪ್ರಶಾಂತ್ ಫ್ರಾಂಕ್ ಹಾಗೂ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ.ಕೃಷ್ಣ ಕುಮಾರ್ ಪೂಂಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ
ಬಂಟ್ವಾಳ: ಸನಾತನ ಹಿಂದೂ ಧರ್ಮದ ಪರಿಪಾಲನೆ, ರಾಷ್ಟೀಯ ವಿಚಾರ ಧಾರೆಯ ಮೂಲಕ, ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಮಾರ್ಗದರ್ಶನದ ಅನುಸರಣೆಯ ಮೂಲಕ ಹಿಂದೂ ರಾಷ್ಟ್ರಭಾರತದಲ್ಲಿ ಅಧಿಕಾರದ ಜವಾಬ್ದಾರಿ ಪಡೆದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದಲ್ಲಿ ಅತೀ ಸುಧೀರ್ಘ ಅವಧಿಯಲ್ಲಿ ಪ್ರಧಾನಿಯಾಗಿ ಯಶಸ್ವಿ ಆಡಳಿತ ನಡೆಸಿ, ದೇಶ ಅಲ್ಲದೇ ಪ್ರಪಂಚದಲ್ಲಿಯೇ ಅತ್ತ್ಯುನುತ ನಾಯಕರಾಗಿ ಹೊರಹೊಮ್ಮಿ ಸರ್ವರಿಗೂ ಸಮಪಾಲು ಎಂಬ ಕಲ್ಪನೆಯಂತೆ ಅಧಿಕಾರ ನಡೆಸಿ ಲೋಕ ನಾಯಕರಾಗಿರುವ ಮೋದಿಜಿ ಯವರಿಗೆ ಇನ್ನಷ್ಟು ಧೀರ್ಘವದಿ ಅಧಿಕಾರ ನಡೆಸಲು ಶಕ್ತಿನೀಡುವರೊಂದಿಗೆ ಜಗತ್ತಿನ ಮಹಾನ್ ಶಕ್ತಿಯಾಗಿ ಮೋದಿಜೀ ಬೆಳಗಳಿ ಹಾಗೂ ಹಾಗೂ ಆಯುರಾರೋಗ್ಯ ವರ್ಧನೆಗಾಗಿ, ಮೋದಿಜಿಗೆ ಬರುವ ಎಲ್ಲಾ ವಿಘ್ನಗಳಿಗೆ ಪರಿಹಾರ ಪ್ರಾಪ್ತಿಯಾಗಬೇಕು ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಬಿಜೆಪಿ ಕಾರ್ಯಕರ್ತರ ಪರವಾಗಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ದೇವಸ್ಥಾನದ ಅರ್ಚಕ ಜಗದೀಶ್ ಶೆಟ್ಟಿ ಮಾವಿನಕಟ್ಟೆ ಪೂಜೆ ನೆರೆವೇರಿಸಿ ಮೋದಿಜೀ ಯವರಿಗೆ ಶುಭ ಹಾರೈಸಿದರು. ಈ ಐತಿಹಾಸಿಕ ಪ್ರಗತಿ ಹಿನ್ನೆಲೆಯಲ್ಲಿ ಕುಕ್ಕಿಪಾಡಿ…
ಬಂಟ್ವಾಳ: ರಾತ್ರಿ ವೇಳೆ ತೀವ್ರ ಎದೆನೋವು ಹಾಗೂ ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದ ವ್ಯಕ್ತಿಯನ್ನು ರಾತ್ರಿ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ನೆರವು ಒದಗಿಸಿ ಜೀವ ಉಳಿಸಿದ ಘಟನೆ ಬಿ.ಸಿ.ರೋಡಿನ ಗೂಡಿನ ಬಳಿಯಲ್ಲಿ ಮಂಗಳವಾರ ನಡೆದಿದೆ. ಗೂಡಿನಬಳಿ ನಿವಾಸಿ ಅಶ್ರಫ್ ಅವರಿಗೆ ತೀವ್ರ ಎದೆನೋವು ಹಾಗೂ ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥತೆ ಉಂಟಾಗಿತ್ತು. ಈ ಸಂದರ್ಭ ಅವರ ಮನೆಯಿಂದ ಜೋರಾಗಿ ಬಾಗಿಲು ಬಡಿಯುವ ಹಾಗೂ ಆಕ್ರಂದನದ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಗಸ್ತು ತಿರುಗುತ್ತಿದ್ದ ಬಂಟ್ವಾಳ ನಗರ ಠಾಣೆಯ ನೈಟ್ ಬೀಟ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದರು. ಸ್ಥಳಕ್ಕೆ ತಲುಪಿದಾಗ ಅಶ್ರಫ್ ಅವರಿಗೆ ಲಘು ಹೃದಯಾಘಾತ ಸಂಭವಿಸಿರುವುದು ಗಮನಕ್ಕೆ ಬಂದಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಿಬ್ಬಂದಿ ಕೂಡಲೇ ಪ್ರಥಮ ಚಿಕಿತ್ಸೆ ನೀಡಿ ಸಿಪಿಆರ್ ನೆರವು ಒದಗಿಸಿದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಬಂಟ್ವಾಳ ನಗರ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ವಿನೋದ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಜಯಗಣೇಶ್ ಅವರ ಸಮಯಪ್ರಜ್ಞೆ, ತುರ್ತು ಸ್ಪಂದನೆ…
ಬಂಟ್ವಾಳ: 2026-27ನೇ ಸಾಲಿನ ವಿವಿಧ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರಕಾರದಿಂದ 1 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಹಾಗೂ ಮೇಲಂತಸ್ತಿನ ಕಟ್ಟಡ ನಿರ್ಮಾಣ ಸಮಿತಿ ವತಿಯಿಂದ ಬಿ.ಮೂಡ ಗ್ರಾಮದ ಬಿ.ಸಿ.ರೋಡಿನ ಪೊಸಳ್ಳಿಯಲ್ಲಿ ಸಮುದಾಯ ಭವನದ ಮೇಲ್ತಂತಸ್ತಿನ ಕಾಮಗಾರಿ ನಡೆಯುತ್ತಿದ್ದು ಮಾಜಿ ಸಚಿವ ಬಿ.ರಮಾನಾಥ ರೈಯವರ ಶಿಫಾರಸ್ಸಿನ ಮೇರೆಗೆ, ಮೇಲಂತಸ್ತಿನ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ, ಮಂಗಳೂರು ವಿವಿ ಸಿಂಡಿಕೇಟ್ ಪ್ರಾಧಿಕಾರದ ಸದಸ್ಯ ಸುರೇಶ್ ಕುಮಾರ್ ನಾವೂರು ಅವರ ವಿಶೇಷ ಪ್ರಯತ್ನ ಹಾಗೂ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಮುಖಂಡರ ಸಹಕಾರದಲ್ಲಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು ತಕ್ಷಣ ಸ್ಪಂದಿಸಿರುವ ಮುಖ್ಯಮಂತ್ರಿಗಳು ಈ ವಿಶೇಷ ಅನುದಾನ ಮಂಜೂರಾಗಿರುವುದಾಗಿ ತಿಳಿದು ಬಂದಿದೆ. ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಿದ ನಿಕಟಪೂರ್ವ ಮುಖ್ಯಮಂತ್ರಿ…
ಬಂಟ್ವಾಳ: ಲಯನ್ಸ್ ಇಂಟರ್ ನ್ಯಾಷನಲ್ ಜಿಲ್ಲೆ 317 ಡಿ ಇದರ ಎಲ್ ಸಿಐ ಎಫ್ ನಿಧಿಯಿಂದ ಅಕ್ಷಯ ಪಾತ್ರೆ ಫೌಂಡೇಷನ್ ಗೆ 25 ಲಕ್ಷ ರೂ.ವೆಚ್ಚದ ಶಾಲೆಗಳಿಗೆ ಆಹಾರ ಸಾಗಟ ಮಾಡುವ ವಾಹನವನ್ನು ಕೊಡುಗೆಯಾಗಿ ನೀಡಲಾಯಿತು. ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿರುವ ಅಕ್ಷಯ ಪಾತ್ರೆ ಸಂಸ್ಥೆಯ ಆವರಣದಲ್ಲಿ ಬುಧವಾರ ಸಂಜೆ ಲಯನ್ಸ್ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ ಶೆಣೈ ಅವರು ಮಂಗಳೂರು ಅಕ್ಷಯ ಪಾತ್ರೆಯ ಉಪಾಧ್ಯಕ್ಷ ಸನಂಧನ ಪ್ರಭು ಅವರಿಗೆ ವಾಹನದ ಕೀ ಹಸ್ತಾಂತರಿಸಿದರು. ಈ ಸಂದರ್ಭ ಬೆಂಜನಪದವಿನ ಅಕ್ಷಯಪಾತ್ರೆ ಅಡುಗೆ ಕೋಣೆಯ ಕಾರ್ಯನಿರ್ವಹಣೆಯ ಬಗ್ಗೆ ಸನಂಧನ ಪ್ರಭು ಅವರು ಲಯನ್ಸ್ ಜಿಲ್ಲಾ ಪದಾಧಿಕಾರಿಗಳಿಗೆ ಮಾಹಿತಿ ನೀಡಿದರು. ಬಳಿಕ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನಂದನ ಪ್ರಭು ಮಾತನಾಡಿ ಪ್ರತಿನಿತ್ಯ 21 ಸಾವಿರ ಮಕ್ಕಳಿಗೆ ಆರೋಗ್ಯಪೂರ್ಣ ಹಾಗೂ ಶುಚಿಯಾದ ಆಹಾರ ಪೂರೈಕೆಯಾಗುತ್ತಿದೆ. ಲಯನ್ಸ್ ಸಂಸ್ಥೆಯ ಇಂತಹ ಸೇವಾ ಕಾರ್ಯಗಳು ಅನೇಕ ಮಂದಿಗೆ ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು. ಅರವಿಂದ ಶೆಣೈ ಅವರು ಮುಂದಾಳತ್ವ…
ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ, ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಫೌಂಡೇಶನ್ ಇದರ ಸಹಯೋಗದಿಂದಿಗೆ ರೂಟ್ಯಾಗ್ ಸ್ಮಾರ್ಟ್ ವಿಲೇಜ್ ಸೆಂಟರ್ ವತಿಯಿಂದ ಮಾಹಿತಿ, ತಂತ್ರಜ್ಞಾನ ಶಿಬಿರ ಬುಧವಾರ ಫರಂಗಿಪೇಟೆಯ ಸೇವಾಂಜಲಿಯಲ್ಲಿ ನಡೆಯಿತು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಕಾರ್ಯಕ್ರಮ ಉದ್ಘಾಟಿಸಿದರು. ಸೆಕ್ಷನ್ ಇನ್ಫಿನ್ 8 ನ ಸ್ಥಾಪಕ ನಿರ್ದೇಶಕ ವಿಶ್ವಾಸ್ ವಿ.ಎಸ್. ಮಾಹಿತಿ ನೀಡಿ ಉತ್ತರ ಭಾರತದಲ್ಲಿ ರೂಟೇಜ್ ಸ್ಮಾರ್ಟ್ ವಿಲೇಜ್ ಸೆಂಟರ್ ಸಾಕಷ್ಟು ಕಾರ್ಯನಿರ್ವಹಿಸುತ್ತಿವೆ. ಆದರೆ ದಕ್ಷಿಣ ಭಾರತದಲ್ಲಿ ಕಾರ್ಕಳದ ನಿಟ್ಟೆ ಹಾಗೂ ಬಂಟ್ವಾಳದ ಫರಂಗಿಪೇಟೆಯಲ್ಲಿ ಮಾತ್ರ ಇದೆ. ಗ್ರಾಮೀಣ ಭಾಗದಲ್ಲಿ ಜನರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಅವರಿಗೆ ವೃತ್ತಿಗೆ ಪೂರಕವಾಗುವ ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸುವ ಕಾರ್ಯ ಈ ಸಂಸ್ಥೆಯ ಮೂಲಕ ನಡೆಯುತ್ತಿದೆ ಎಂದರು. ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೇತನ್, ದಂತ ಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರತೀಕ್ಷಾ ಕುಡ್ವ, ಡಾ. ರೀಮಾ, ಮೇರಮಜಲು ಗ್ರಾ.ಪಂ. ಮಾಜಿ ಅಧ್ಯಕ್ಷೆ ಬೃಂದಾ ಪೂಜಾರಿ,…
ಬಂಟ್ವಾಳ: ಇಲ್ಲಿನ ಮೂಡನಡುಗೋಡು ಗ್ರಾಮದ ದಡ್ಡಲಕಾಡು ಶ್ರೀ ಜಗದಾಂಬಿಕ ಕ್ಷೇತ್ರದ ೨೦೨೬-೨೭ನೇ ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ರಾಜೇಶ್ ಪೂಜಾರಿ ಕೇದಾಯಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಪುರುಷೋತ್ತಮ ಪೂಜಾರಿ ದಡ್ಡಲಕಾಡು, ಕೃಷ್ಣಪ್ಪ ನಾಯ್ಕ ಸೇಸಗುರಿ, ಪ್ರಧಾನ ಕಾರ್ಯದರ್ಶಿಯಾಗಿ ಯಶವಂತ ಡಿ., ಕೋಶಾಧಿಕಾರಿಯಾಗಿ ರೋಹಿತ್ ಕುಮಾರ್, ಉಪಾಧ್ಯಕ್ಷರಾಗಿ ಮನೋಹರ ಎಸ್. ನೆಕ್ಕರೆ, ಪ್ರವೀಣ್ ಡಿ., ಜೊತೆ ಕಾರ್ಯದರ್ಶಿಯಾಗಿ ಯತೀಶ್ ಎನ್., ರಾಮಕೃಷ್ಣ ಪೂಜಾರಿ, ಗೌರವ ಸಲಹೆಗಾರರಾಗಿ ವಿಶ್ವನಾಥ ಪೂಜಾರಿ ಡೆಚ್ಚಾರ್, ಪುರುಷೋತ್ತಮ ಪೂಜಾರಿ ಬನತ್ತೋಡಿ, ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್ ಡಿ. ದಡ್ಡಲಕಾಡು, ತಾರಾನಾಥ ಸಪಲ್ಯ ದಡ್ಡಲಕಾಡು, ಉಮೇಶ್ ಪೂಜಾರಿ ದಡ್ಡಲಕಾಡು ಸಹಾಯಕ ಕಾರ್ಯದರ್ಶಿಯಾಗಿ ತೀರ್ಥಕುಮಾರ್ ಬನತ್ತೋಡಿ, ಶರತ್ ನಾವೂರು, ಮಹಿಳಾ ಪ್ರತಿನಿಧಿಯಾಗಿ ಹೇಮಾವತಿ ಬನತ್ತೋಡಿ, ರೂಪಾಶ್ರೀ ಡೆಚ್ಚಾರ್, ಮೀನಾಕ್ಷಿ ಬಿ.ದಡ್ಡಲಕಾಡು ಆಯ್ಕೆಯಾದರು.
ಬಂಟ್ವಾಳ: ಜಾತಿ ಸಮುದಾಯಗಳ ಬಗ್ಗೆ ಅವಹೇಳನ ಮಾಡಿದ ಅನಿತಾ ಕಾಸರಗೋಡು ಎಂಬುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆಆಗ್ರಹಿಸಿ ತಾ.ಪಂ.ಮಾಜಿ ಸದಸ್ಯ ಪ್ರಭಾಕರ ಪ್ರಭು ರಾಜ್ಯ ಪೊಲೀಸ್ ಮಹಾ ನಿರ್ದೇಶಕರನ್ನು ಆಗ್ರಹಿಸಿದ್ದಾರೆ.ಕೇರಳ ರಾಜ್ಯದ ಕಾಸರಗೋಡು ನಿವಾಸಿ ಅನಿತಾ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಪ್ರಬಲ ಜಾತಿ ಸಮುದಾಯಗಳ ಬಗ್ಗೆ ಮನಬಂದಂತೆ ಅವಹೇಳನಕಾರಿ ಪದಗಳನ್ನು ಬಳಕೆ ಮಾಡಿ ಬಿಲ್ಲವ ಜಾತಿ ಹಾಗೂ ಬಂಟ ಜಾತಿಯ ಬಗ್ಗೆ ಕೆಟ್ಟ ಶಬ್ದಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ . ಈ ಬಗ್ಗೆ ಪ್ರಶ್ನಿಸಿದರೆ ಮತ್ತೆ ಮುಂದುವರಿದು ಯಾವುದೆ ಕಾನೂನು ,ನಿಯಮಗಳನ್ನು ಲೆಕ್ಕಿಸದೇ ಬಿಲ್ಲವ ಸಮುದಾಯದ ಬಗ್ಗೆ ಆವ್ಯಾಚ್ಚ ಪದಗಳಿಂದ ನಿಂದಿಸಿರುತ್ತಾರೆ .ಒಂದು ಧರ್ಮವನ್ನು ಓಲೈಕೆ ಮಾಡಿಕೊಂಡು ಬಿಲ್ಲವ, ಬಂಟ್ಸ್ ಜಾತಿ ಸಮುದಾಯವನ್ನು ನಿಂದಿಸುವ ಈ ಮಹಿಳೆಯ ಕುರಿತು ಸಾರ್ವಜನಿಕರಲ್ಲಿ ಅನುಮಾನ ಉಂಟಾಗಿದ್ದು ಇವರ ಬಗ್ಗೆ ಪೂರ್ವಪರ ತನಿಖೆಯಾಗಬೇಕು.ಯಾವುದೇ ಒಬ್ಬ ವ್ಯಕ್ತಿಯಿಂದ ತೊಂದರೆಗೆ ಒಳಗಾದರೆ ಆ ವ್ಯಕ್ತಿಯ ಬಗ್ಗೆ ವೈಯಕ್ತಿಕ ನಿಂದನೆ ಮಾಡಬೇಕೇ…








