ಬಂಟ್ವಾಳ: ತುಳುನಾಡ ದೈವಾರಾಧನೆ ಸಂರಕ್ಷಣೆ ವೇದಿಕೆ (ರಿ)ಯು ಜಿಲ್ಲೆಯ ಎಲ್ಲಾ ದೈವಸ್ಥಾನಗಳಿಗೆ ಹಾಗೂ ದೇವಸ್ಥಾನಗಳಿಗೆ ದೈವ ನರ್ತನದ ಫೋಟೋ, ವಿಡಿಯೋ ಚಿತ್ರೀಕರಣ ಮಾಡದಂತೆ ಸೂಚನಾ ಫಲಕವನ್ನು ನೀಡುತ್ತಿದೆ.
Advertisement
ತುಳುನಾಡ ದೈವಾರಾಧನೆ ಸಂರಕ್ಷಣೆ ವೇದಿಕೆ (ರಿ) ಇದರ ಸದಸ್ಯರು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೋಲ, ನೇಮೋತ್ಸವದಲ್ಲಿ ದೈವ ನರ್ತನದ ಫೋಟೋ, ವಿಡಿಯೋ ಚಿತ್ರೀಕರಣ ಮಾಡದಂತೆ ಇದುವರೆಗೂ ಸುಮಾರು 25ಕ್ಕೂ ಅಧಿಕ ದೈವಸ್ಥಾನದಲ್ಲಿ ಆಡಳಿತ ಮಂಡಳಿಗೆ ಮನವಿ ಮಾಡಿ ಬಳಿಕ ನಿಷೇಧ ಬರಹದ ಬೋರ್ಡನ್ನು ನೀಡುತ್ತಿದ್ದಾರೆ. ಈ ಮೂಲಕ ತುಳುನಾಡಿನ ಸಮಸ್ತ ದೈವಾರದಕರಲ್ಲಿ ದೈವದ ಹಾಗೂ ದೈವ ನರ್ತನದ ಫೋಟೋ/ಲ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಾಕಬಾರದಾಗಿ ವಿನಂತಿ ಮಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತುಳುನಾಡ ದೈವಾರಾಧನೆ ಸಂರಕ್ಷಣೆ ವೇದಿಕೆ ಸದಸ್ಯರ ಈ ನಂಬಿಕೆಯ ಕಾರ್ಯಕ್ಕೆ ದೈವಾರದಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement