
ಬಂಟ್ವಾಳ: ಮೈಸೂರು ವಿಭಾಗ ಮಟ್ಟದ ಜೂಡೋ ಸ್ಪರ್ಧೆ-2025ರಲ್ಲಿ ಬಂಟ್ವಾಳ ತಾಲೂಕಿನ ಗ್ರಾಮೀಣ ಪ್ರದೇಶವಾದ ನೆತ್ತರೆಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ 13 ಮಂದಿ ವಿದ್ಯಾರ್ಥಿಗಳು ಬಹುಮಾನ ಗೆಲ್ಲುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.
ಆರುಷಿ (-36), _ಗೀತೇಶ್ (-50), ಹಂಸಿಕಾ(-40) ಯಶ್ವಿನಿ (-44), ಭೂಮಿಕಾ(-28), ನಿಧಿನ್(-25), ವೇದಾಂತ್ (-30) ಯಕ್ಷಿತ್ (-30) ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡರೆ, ದೆನಿಕಾ -20), ಅನುಶ್ರೀ (-44), ಆರೋಧ್ಯ (-36), ಶೈಲೇಶ್ (-35), ದ್ವೀತಿಯ ಸ್ಥಾನದೊಂದಿಗೆ ಬೆಳ್ಳಿಯ ಪದಕ, ಭುವಿಶ್ (-25) ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಗೆದ್ದಕೊಂಡಿದ್ದಾರೆ.

ಡಾ.ಎ.ಸಿ.ಮುನಿವೆಂಕಟೇಶ ಗೌಡ ಚಾರಿಟೇಬಲ್ ಟ್ರಸ್ಟ್ ಹಾಸನ, ಆಶ್ರಯ ಸೆಂಟರ್ ಫಾರ್ ಟ್ರಾನ್ಸ್ ಫರ್ಮೇಶನ್ ಬೆಂಗಳೂರು ಮತ್ತು ಹಾಸನ ಜಿಲ್ಲಾ ಅಮೆಚೂರು ಜೂಡೋ ಸಂಸ್ಥೆ, ಹಾಸನ ಜಿಲ್ಲಾ ಅಮೆಚೂರು ಬಾಡಿಬಿಲ್ಡರ್ ಸಂಸ್ಥೆ, ಹಾಸನ ಜಿಲ್ಲಾ ಕ್ರೀಡಾ ಪರಿಷತ್ ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಎ.ಸಿ.ಎಂ.ಅವರ ಜನ್ಮದಿನದ ಪ್ರಯುಕ್ತ ಜೂಡೋ ಸ್ಫರ್ಧೆ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಮಾರ್ಷಲ್ ಆರ್ಟ್ ತರಬೇತದಾರ ಅಸ್ಮಿತಾ ರೈ ತರಬೇತಿ ನೀಡಿದ್ದರೆ. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ದಾಮೋದರ್ ನೆತ್ತರಕೆರೆ, ಸಂತೋಷ್ ನೆತ್ತರಕೆರೆ ಹಾಗೂ ನೆತ್ತರಕೆರೆ ಶಾಲೆಯ ಮುಖ್ಯೋಪಾಧ್ಯಾಯ ರು ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement







