
ಬಂಟ್ವಾಳ: ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಇಂಡೋರ್ ಸ್ಟೇಡಿಯಂನಲ್ಲಿ ಜರುಗಿದ 21ನೇ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ಶಿಪ್ ನಲ್ಲಿ 14 ವರ್ಷದ ಬಾಲಕಿಯರ ವಿಭಾಗದ ಆಲ್ ಇಂಡಿಯಾ ಓಪನ್ ವಿಭಾಗದ ಕರಾಟೆಯ ಕಟಾ ವಿಭಾಗದಲ್ಲಿ ಪೂರ್ವಿ ಜೆ, ಬಂಗೇರ ದಾಸಕೋಡಿ ಪ್ರಥಮ ಸ್ಥಾನ, ಹಾಗೂ ಕುಮಿತೆ ಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ಬೊಂಡಾಲ ಶ್ರೀ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆ ಯ 9ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು ಜಯ ಗಣೇಶ್ ಬಂಗೇರ ದಾಸಕೋಡಿ ಮತ್ತು ಜಯಶ್ರೀ ಜೆ ಬಂಗೇರ ಇವರ ಪುತ್ರಿ. ಸಮೀಕ್ಷಾ ಇವರಲ್ಲಿ ಕರಾಟೆ ತರಬೇತಿಯನ್ನು ಪಡೆಯುತ್ತಿದ್ದಾರೆ.
—


—
Advertisement







