
ಬಂಟ್ವಾಳ: ಕೂರಿಯಾಳ ಗ್ರಾಮದ ದುರ್ಗಾನಗರ ಶ್ರೀ ಓಂಕಾರೇಶ್ವರೀ ದೇವಿ ಭಜನಾ ಮಂದಿರದ ನೂತನ ಅಧ್ಯಕ್ಷರಾಗಿ ಶ್ರೀನಿಧಿ ಬಂಗೇರ ಪುನರಾಯ್ಕೆಯಾಗಿದ್ದಾರೆ.
ಆದಿತ್ಯವಾರ ನಡೆದ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಗೌರವ ಸಲಹೆಗಾರರಾಗಿ ತಿಮ್ಮಪ್ಪ ಆಚಾರ್ಯ , ಗೌರವ ಅಧ್ಯಕ್ಷರಾಗಿ ಶಂಕರ್ ಸುವರ್ಣ, ಉಪಾಧ್ಯಕ್ಷರಾಗಿ ಸುರೇಶ್ ಬಂಗೇರ, ಪ್ರಧಾನ ಕಾರ್ಯದರ್ಶಿಯಾಗಿ ಸಂದೇಶ್ ಪೂಜಾರಿ,ಕೋಶಾಧಿಕಾರಿಯಾಗಿ ಧರ್ಮಣ ಬಂಗೇರ, ಜೊತೆ ಕಾರ್ಯದರ್ಶಿಯಾಗಿ ಕುಶಾಲ್ ರಾಜ್ ಆಯ್ಕೆಗೊಂಡರು. ಈ ಸಂದರ್ಭ ವಾರ್ಷಿಕ ಲೆಕ್ಕಪತ್ರ ಮಂಡಿಸಲಾಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಕುಮಾರ್ ಮಣಿಹಳ್ಳ ಉಪಸ್ಥಿತರಿದ್ದರು


Advertisement







