
ಬಂಟ್ವಾಳ: ಸಜೀಪಮೂಡ ಗ್ರಾಮದ ಸುಭಾಷ್ ನಗರ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಮಿತಿ ಇದರ 2025/26-2027ನೇ ಸಾಲಿನ ನೂತನ ಅಧ್ಯಕ್ಷರಾಗಿ ಮೋಹನ್ ದಾಸ್ ಪೂಜಾರಿ ಬೊಳ್ಳಾಯಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಮಿತಿಯ ಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಗೌರವಧ್ಯಕ್ಷರಾಗಿ ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ಉಪಾಧ್ಯಕ್ಷರಾಗಿ ದಾಮೋದರ್ ಪೂಜಾರಿ ಮಾರ್ನಬೈಲ್, ಕಾರ್ಯದರ್ಶಿಯಾಗಿ ಜಗದೀಶ್ ಪೂಜಾರಿ ಕಾರಾಜೆ, ಜತೆ ಕಾರ್ಯದರ್ಶಿಯಾಗಿ ವಿಜಯ್ ಗುರುಮಂದಿರ, ಕೋಶಾಧಿಕಾರಿಯಾಗಿ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಮೋದ್ ಅಂಚನ್ ಸಾನದಮನೆ, ಸಂಘಟನಾ ಕಾರ್ಯದರ್ಶಿಯಾಗಿ ನಾಗೇಶ್ ಪೂಜಾರಿ ಪಂಬೈಲ್ ಮತ್ತು ನವೀನ್ ಕಾರಾಜೆ.
ಲೆಕ್ಕ ಪರಿಶೋಧಕರಾಗಿ ರಾಮಕೃಷ್ಣ ಮಿತ್ತಮಜಲು, ಸಾಂಸ್ಕೃತಿಕ ನಿರ್ದೇಶಕರಾಗಿ ಲೋಕೇಶ್ ಪೂಜಾರಿ ಸುಭಾಷ್ ನಗರ, ಆರೋಗ್ಯ ನಿರ್ದೇಶಕರಾಗಿ ಮಹೇಶ್ ಪೂಜಾರಿ ಬೊಳ್ಳಾಯಿ, ಭಜನಾ ಅಧ್ಯಕ್ಷರಾಗಿ ಪ್ರವೀಣ್ ಮುತ್ತುಕೃಷ್ಣ, ಭಜನಾ ಉಪಾಧ್ಯಕ್ಷರಾಗಿ ಸಂತೋಷ್ ಕೋಟ್ಯಾನ್ ದಾಸರಗುಡ್ಡೆ, ಭಜನಾ ಕಾರ್ಯದರ್ಶಿಯಾಗಿ ರಾಕೇಶ್ ಗುರುಮಂದಿರ, ಭಜನಾ ಜತೆ ಕಾರ್ಯದರ್ಶಿ ಲಕ್ಷ್ಮೀಶ ಅಗರಿ ಆಯ್ಕೆಯಾದರು.


Advertisement







